Site icon Vistara News

France Riots: ಫ್ರಾನ್ಸ್ ದಂಗೆಗೆ ವಿಡಿಯೋ ಗೇಮ್ಸ್ ಕಾರಣ! ಮಕ್ಕಳನ್ನು ಬೀದಿಗೆ ಬೀಡಬೇಡಿ ಅಂದ್ರು ಫ್ರೆಂಚ್ ಅಧ್ಯಕ್ಷರು

France President Macron

ಪ್ಯಾರಿಸ್, ಫ್ರಾನ್ಸ್‌: ಫ್ರಾನ್ಸ್‌ನಲ್ಲಿ(France) ನಡೆಯುತ್ತಿರುವ ದಂಗೆಗೆ ಹಿಂಸಾತ್ಮಕ ವಿಡಿಯೋ ಗೇಮ್‌ಗಳು (Video Games) ಕಾರಣವಾಗುತ್ತಿವೆಯೇ? ಹೌದು, ಇದು ನಿಜ. ”ಹಿಂಸಾತ್ಮಕ ವಿಡಿಯೋ ಗೇಮ್‌ ನೋಡುವ ಮಕ್ಕಳಿಂದ ದಂಗೆಗಳಾಗುತ್ತಿವೆ” ಎಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ (France President Emmanuel Macron) ಅವರು ಹೇಳಿದ್ದಾರೆ. ದಂಗೆಕೋರ ಮಕ್ಕಳು ರಸ್ತೆಗೆ ಬರದಂತೆ ಪೋಷಕರು ನೋಡಿಕೊಳ್ಳಬೇಕೆಂದು ಮ್ಯಾಕ್ರನ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಫ್ರಾನ್ಸ್ ಕಳೆದ ಕೆಲವು ದಿನಗಳಿಂದ ಹಿಂಸಾಚಾರ, ಪ್ರತಿಭಟನೆ ಮತ್ತು ದಂಗೆಗಳಿಂದ ಹೊತ್ತಿ ಉರಿಯುತ್ತಿದೆ(France Riots).

ದೇಶದ ಭದ್ರತೆಯ ಕುರಿತು ಸಭೆ ನಡೆಸಿದ ಫ್ರೆಂಚ್ ಅಧ್ಯಕ್ಷ ಮಾಕ್ರನ್ ಅವರು, ಕಳೆದ ಮೂರು ದಿನಗಳಲ್ಲಿ ಬಂಧಿಸಲಾಗಿರುವವರ ಪೈಕಿ ಮೂರನೇ ಒಂದು ಭಾಗದಷ್ಟು ತರುಣರಾಗಿದ್ದಾರೆ. ಅವರು ತುಂಬಾ ತರುಣರು ಅಥವಾ ಮಕ್ಕಳು ಎಂದು ಹೇಳಬಹುದು ಎಂದು ಅವರು ತಿಳಿಸಿದ್ದಾರೆ. ಈ ಮಕ್ಕಳನ್ನು ಮನೆಯಲ್ಲೇ ಇರುವಂತೆ ನೋಡಿಕೊಳ್ಳುವುದು ಪೋಷಕರ ಜವಾಬ್ದಾರಿಯಾಗಿದೆ. ಇದು ಸರ್ಕಾರದ ಕೆಲಸವಲ್ಲ ಎಂದು ಮ್ಯಾಕ್ರನ್ ಅವರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Protest in France: ಹೊಸ ಪಿಂಚಣಿ ವ್ಯವಸ್ಥೆ ವಿರೋಧಿಸಿ ಫ್ರಾನ್ಸ್‌ನಲ್ಲಿ ಭಾರೀ ಪ್ರತಿಭಟನೆ, ಏನು ಕಾರಣ?

ಮಂಗಳವಾರ ನಡೆದ ಪ್ರತಿಭಟನೆ ವೇಳೆ ಪೊಲೀಸರು ಗುಂಡಿಗೆ ಯುವಕರು ಬಲಿಯಾಗಿದ್ದರು. ಇದರಿಂದಾಗಿ ಫ್ರಾನ್ಸ್‌ನಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಈ ಹಿಂಸಾಚಾರದಲ್ಲಿ ವಿಡಿಯೋ ಗೇಮ್‌ಗಳು ಪ್ರಮುಖ ಪಾತ್ರವಹಿಸಿವೆ ಎಂದು ಅಭಿಪ್ರಾಯಪಟ್ಟಿರುವ ಫ್ರಾನ್ಸ್ ಸರ್ಕಾರವು, ಅತ್ಯಂತ ಸೂಕ್ಷ್ಮ ಗಲಭೆಯ ಮಾಹಿತಿಯನ್ನು ಅಳಿಸಿ ಹಾಕುವಂತೆ ಸೋಷಿಯಲ್ ಮೀಡಿಯಾಗಳಿಗೆ ಮನವಿ ಮಾಡಿಕೊಂಡಿದೆ. ಪೊಲೀಸರು ಅರೆಸ್ಟ್ ಮಾಡಿದವರ ಪೈಕಿ ಹೆಚ್ಚಿನರು 14 ಮತ್ತು 15 ವರ್ಷದೊಳಗಿನ ಮಕ್ಕಳಿದ್ದಾರೆ ಎನ್ನಲಾಗಿದೆ.

ವಿದೇಶ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version