ಟೆಕ್ಸಾಸ್: ಜೇನು ತುಪ್ಪ ಸವಿಯಲು ಚಂದ. ಆದರೆ ಅದೇ ಜೇನಿನಿಂದ ಕಚ್ಚಿಸಿಕೊಂಡರೆ ಅದರ ನೋವನ್ನು ತಡೆಯಲಾರದೆ ಒದ್ದಾಡಬೇಕಾಗುತ್ತದೆ. ಹೆಚ್ಚು ಜೇನುಗಳು ಕಚ್ಚಿ ಮನುಷ್ಯರೇ ಸಾವನ್ನಪ್ಪಿದ ಹಲವು ಘಟನೆಗಳು ವರದಿಯಾಗಿವೆ. ಇದೀಗ ಅಮೆರಿಕದ ಟೆಕ್ಸಾಸ್‌ನಲ್ಲಿ ಕಿಲ್ಲರ್ ಬೀ ಹೆಸರಿನ ಜೇನು ನೊಣಗಳು ಎರಡು ನಾಯಿಗಳಿಗೇ ಕಚ್ಚಿದ್ದು, ಎರಡೂ ನಾಯಿಗಳು ಸಾವನ್ನಪ್ಪಿವೆ.
ಇದನ್ನೂ ಓದಿ: Viral News: ಕೇರಳಕ್ಕೀಗ ಮೊದಲನೇ ತೃತೀಯ ಲಿಂಗಿ ನ್ಯಾಯವಾದಿ; ಮಾಹಿತಿ ಹಂಚಿಕೊಂಡ ಸಚಿವರು
ಟೆಕ್ಸಾಸ್‌ನ ಮನೆಯೊಂದರಲ್ಲಿ ಈ ಎರಡು ನಾಯಿಗಳನ್ನು ಸಾಕಲಾಗಿತ್ತು. ತಂತಿಯ ಮನೆಗಳನ್ನು ನಿರ್ಮಿಸಿ, ಅದರೊಳಗೆ ನಾಯಿಗಳನ್ನು ಬಿಡಲಾಗಿತ್ತು. ಇತ್ತೀಚೆಗೆ ಕಿಲ್ಲರ್ ಜೇನು ನೊಣಗಳು ಆ ನಾಯಿಗಳ ಮೇಲೆ ದಾಳಿ ನಡೆಸಿವೆ. ನೂರಾರು ಜೇನು ನೊಣಗಳು ಒಟ್ಟಿಗೆ ದಾಳಿ ನಡೆಸಿದ್ದು, ನಾಯಿಗಳನ್ನು ಕಚ್ಚಲಾರಂಭಿಸಿವೆ. ನಾಯಿಗಳನ್ನು ಕೂಡಿ ಹಾಕಲಾಗಿತ್ತಾದ್ದರಿಂದ ಅವುಗಳು ಜೇನು ನೊಣಗಳಿಂದ ತಪ್ಪಿಸಿಕೊಳ್ಳಲೂ ಆಗದೆ ಒದ್ದಾಡಿ ಪ್ರಾಣ ಬಿಟ್ಟಿವೆ.
ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ನಾಯಿಗಳಿದ್ದ ಮನೆಗೆ ತೆರಳಿ ಪರಿಶೀಲನೆ ನಡೆಸಿ ಬಂದಿದ್ದಾರೆ.
ಈ ಕಿಲ್ಲರ್ ಜೇನುನೊಣಕ್ಕೆ ಆಫ್ರಿಕನೈಸಡ್ ಬೀ ಎನ್ನುವ ಹೆಸರೂ ಇದೆ. ಇದು ಅಮೆರಿಕನ್ ಜೇನು ನೊಣ ಮತ್ತು ಆಫ್ರಿಕನ್ ಜೇನು ನೊಣವನ್ನು ಸೇರಿಸಿದಾಗ ಹುಟ್ಟಿದಂತಹ ಜೇನು ನೊಣ. ದಶಕಗಳ ಹಿಂದೆ ಅಮೆರಿಕದಲ್ಲಿ ಪ್ರಾಯೋಗಿಕವಾಗಿ ಈ ಜೇನು ನೊಣವನ್ನು ತಯಾರಿಸಿ, ಬಿಡಲಾಗಿತ್ತು ಎಂದು ಹೇಳಲಾಗಿದೆ. ಸಾಮಾನ್ಯವಾಗಿ ಈ ಕಿಲ್ಲರ್ ಜೇನು ನೊಣಕ್ಕೆ ಮೂರು ದಿನಗಳ ಕಾಲ ನೆನಪಿನಲ್ಲಿಟ್ಟುಕೊಳ್ಳಬಲ್ಲಷ್ಟು ಜ್ಞಾಪಕ ಶಕ್ತಿ ಇರುತ್ತದೆ. ಸುಮ್ಮನೆ ದಾಳಿ ಮಾಡುವುದಿಲ್ಲವಾದರೆ ಯಾರಾದರೂ ಹಾನಿ ಮಾಡಿದರೆ ಅಥವಾ ಜೋರಾದ ಸದ್ದು ಹಾಕಿದರೆ ಈ ಜೇನು ನೊಣ ದಾಳಿ ಮಾಡುತ್ತವೆ. ಈ ರೀತಿ ಹಾನಿಯಾಗಿ ಮೂರು ದಿನಗಳಲ್ಲಿ ಎಂದಾದರೂ ಅವು ದಾಳಿ ಮಾಡಬಹುದು ಎನ್ನಲಾಗಿದೆ.