Site icon Vistara News

Viral News: 100ಕ್ಕೂ ಹೆಚ್ಚು ಮಹಿಳೆಯರನ್ನು ಮದುವೆಯಾದ! ಹೆಂಡತಿಯರಿಗೆ ಗೊತ್ತೇ ಇರಲಿಲ್ಲಈ ವಂಚನೆ, ಕೊನೆಗೆ ಆತ ಏನಾದ?

Viral News: a Person from America married more than 105 women

ನವದೆಹಲಿ: ಜೀವನದಲ್ಲಿ ಒಂದೇ ಮದುವೆಯಾಗಿ ಏಗುವುದು ಕಷ್ಟ ಎಂಬುದು ಬಹುತೇಕ ವಿವಾಹಿತರ ಗೊಣಗು. ಮತ್ತೆ ಕೆಲವರಿಗೆ ಮದುವೆಯಾಗಲು ಒಂದೂ ಹೆಣ್ಣು ಸಿಗುವುದಿಲ್ಲ. ಅಂಥದ್ದರಲ್ಲಿ ಅಮೆರಿಕದ ವ್ಯಕ್ತಿಯೊಬ್ಬ 100ಕ್ಕೂ ಹೆಚ್ಚು ಮದುವೆಯಾಗಿದ್ದಾನೆ! ಆತನ ಈ ಸಾಹಸ ಗಿನ್ನಿಸ್ ವರ್ಲ್ಡ್ ರೆಕಾರ್ಡ್‌ನಲ್ಲಿ (Guinness World Records) ದಾಖಲಾಗಿದೆ. ಈ ಕುರಿತು ಗಿನ್ನಿಸ್ ವರ್ಲ್ಡ್ ರೆಕಾರ್ಡ್‌ ಟ್ವಿಟರ್‌ನಲ್ಲಿ ಮಾಹಿತಿ ಸಹಿತ ವಿಡಿಯೋ ಷೇರ್ ಮಾಡಿದೆ. ವಿಶೇಷ ಎಂದರೆ, ಈತ ಯಾರಿಗೂ ಡೈವೋರ್ಸ್ ನೀಡದೆ 1949ರಿಂದ 1981ರ ನಡುವೆ 100ಕ್ಕೂ ಅಧಿಕ ಮಹಿಳೆಯರನ್ನು ಮದುವೆಯಾಗಿದ್ದಾನೆ(Viral News).

ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ಟ್ವಿಟರ್‌ನಲ್ಲಿ, ಬಹು ಮದುವೆಯಾದ ಜಿಯೋವಾನಿ ವಿಗ್ಲಿಯೊಟ್ಟೊ(Giovanni Vigliotto) ಮಾಹಿತ ಷೇರ್ ಮಾಡಿದೆ. ಜಿಯೋವಾನಿ ವಿಗ್ಲಿಯೊಟ್ಟೊ ಆತನ ನಿಜವಾದ ಹೆಸರಾಗಿರಲಿಲ್ಲ. ತಾನು ಕೊನೆಯ ಮದುವೆಯಾಗುವಾಗ ಈ ಹೆಸರನ್ನು ಆ ವ್ಯಕ್ತಿ ಬಳಸುತ್ತಿದ್ದನಂತೆ.

ಗಿನ್ನಿಸ್ ವರ್ಲ್ಡ್ ರೆಕಾರ್ಡ್‌ ಟ್ವೀಟ್

ಹೀಗೆ ಒಂದರ ನಂತರ ಒಂದು ಮದುವೆಯಾಗುತ್ತಿದ್ದ ವ್ಯಕ್ತಿ ತನ್ನ 54ನೇ ವಯಸ್ಸಿನಲ್ಲಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. 1929 ಏಪ್ರಿಲ್ 3ರಂದು ಇಟಲಿಯ ಸಿಸಿಲಿಯ ಸಿರಾಕುಸಾದಲ್ಲಿ ಜನಿಸಿರುವುದಾಗಿ ವ್ಯಕ್ತಿ ವಿಚಾರಣೆ ಹೇಳಿಕೊಂಡಿದ್ದ. ನಿಕೊಲಾಯ್ ಪೆರುಸ್ಕೋವ್ ತನ್ನ ನಿಜವಾದ ನಾಮಧೇಯ ಎಂದು ತಿಳಿಸಿದ್ದ. ಆದರೆ, ಪ್ರಾಸಿಕ್ಯೂಟರ್, ಆತನ ನಿಜವಾದ ಹೆಸರು ಫ್ರೆಡ್ ಜಿಪ್ ಹಾಗೂ 1936 ಏಪ್ರಿಲ್ 3ರಂದು ನ್ಯೂಯಾರ್ಕ್‌ನಲ್ಲಿ ಜನಿಸಿದ್ದಾನೆಂದು ಕೋರ್ಟ್‌ನಲ್ಲಿ ವಾದಿಸಿದ್ದರು.

105 ಮಹಿಳೆಯರನ್ನು ಮದುವೆಯಾಗಿದ್ದ ವಿಗ್ಲಿಯೊಟ್ಟೊ

ವಿಗ್ಲಿಯೊಟ್ಟೊ 1949 ಮತ್ತು 1981 ರ ನಡುವೆ 104 ಅಥವಾ 105 ಮಹಿಳೆಯರನ್ನು ವಿವಾಹವಾಗಿದ್ದಾನೆ. ಆದರೆ, ಪತ್ನಿಯರಿಗೆ ಈ ವ್ಯಕ್ತಿಯ ಬಹು ವಿವಾಹದ ಬಗ್ಗೆ ಮಾಹಿತಿಯೇ ಇರಲಿಲ್ಲ! ಅಷ್ಟೇ ಯಾಕೆ, ವಿಗ್ಲಿಯೊಟ್ಟೊ ಕುರಿತೇ ಅವರಿಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಪ್ರತಿ ಬಾರಿಯೂ ಫೇಕ್ ಐಡೆಟಿಂಟಿ ಬಳಸಿಕೊಂಡು ಅಮೆರಿಕದ 27 ರಾಜ್ಯ ಹಾಗೂ 14 ದೇಶಗಳಲ್ಲಿ ಆತ ಮಹಿಳೆಯರನ್ನು ಮದುವೆಯಾಗಿದ್ದ. ಈತ ತಾನು ಮದುವೆಯಾಗಬೇಕು ಎಂದು ಕೊಳ್ಳುವವರನ್ನು ಮಾರುಕಟ್ಟೆಯಲ್ಲಿ ಭೇಟಿಯಾಗುತ್ತಿದ್ದ ಮತ್ತು ಮೊದಲ ಡೇಟ್‌ನಲ್ಲಿ ಅವರಿಗೆ ಪ್ರಪೋಸ್ ಮಾಡುತ್ತಿದ್ದ ಎನ್ನಲಾಗಿದೆ.

ಮಹಿಳೆಯು ಒಪ್ಪಿಗೆ ನೀಡುತ್ತಿದ್ದಂತೆ ಕೂಡಲೇ ಮದುವೆಯಾಗುತ್ತಿದ್ದ. ಬಳಿಕ ಹೊಸ ಹೆಂಡತಿಯ ಹಣ ಮತ್ತು ಆಭರಣ, ಇನ್ನಿತರ ಮೌಲ್ಯದ ವಸ್ತುಗಳಿಂದ ಪರಾರಿಯಾಗುತ್ತಿದ್ದ ಎಂದು ಜಿಡಬ್ಲ್ಯೂಆರ್ ಜಾಲತಾಣ ವರದಿ ಮಾಡಿದೆ.

ತಾನು ದೂರದ ದೇಶದಲ್ಲಿ ವಾಸಿಸುತ್ತಿದ್ದೇನೆ. ತನ್ನೊಂದಿಗೆ ಬರಲು ಎಲ್ಲಾ ವಸ್ತುಗಳು, ಹಣ, ಆಭರಣಗಳನ್ನು ಪ್ಯಾಕ್ ಮಾಡುವಂತೆ ಹೊಸ ಹೆಂಡತಿಗೆ ಹೇಳುತ್ತಿದ್ದ. ಹೆಂಡತಿಯನ್ನು ಕರೆದುಕೊಂಡು ಟ್ರಕ್ ಏರಿದ ಬಳಿಕ, ಹೆಂಡತಿಯ ಹಣ ಮತ್ತಿತರ ವಸ್ತುಗಳನ್ನು ಪಡೆದುಕೊಂಡು ಪರಾರಿಯಾಗುತ್ತಿದ್ದ. ಮತ್ತೆ ಎಂದಿಗೂ ಆತ ಆ ಮಹಿಳೆಗೆ ಸಿಗುತ್ತಿರಲಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ. ಹೆಂಡತಿಯರಿಂದ ಹೀಗೆ ಕದ್ದ ವಸ್ತುಗಳನ್ನು ಮಾರುಕಟ್ಟೆಗಳಲ್ಲಿ ಮಾರಾಟ ಮಾಡುತ್ತಲೇ, ಮತ್ತೊಂದು ಮದುವೆಗಾಗಿ ಅದೇ ಮಾರುಕಟ್ಟೆಯಲ್ಲಿ ಮಹಿಳೆಗಾಗಿ ಹೊಂಚು ಹಾಕುತ್ತಿದ್ದ!

ಇದನ್ನೂ ಓದಿ: Rupert Murdoch: ಆಕೆಯ ಅತಿಯಾದ ಧಾರ್ಮಿಕತೆ ಸಹಿಸಲಾಗುತ್ತಿಲ್ಲ; 5ನೇ ಮದುವೆ ಇಲ್ಲ ಎಂದ ರೂಪರ್ಟ್ ಮುರ್ಡೋಕ್

54ನೇ ವಯಸ್ಸಿನಲ್ಲಿ ಪೊಲೀಸರಿಗೆ ಸಿಕ್ಕಿ ಬಿದ್ದ ಈ ವಂಚಕನ ವಿಚಾರಣೆ 1983ರಲ್ಲಿ ಆರಂಭವಾಯಿತು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯವು ಆತನಿಗೆ ಒಟ್ಟು 34 ವರ್ಷ ಜೈಲು ಶಿಕ್ಷೆ ವಿಧಿಸಿತು. 336,000 ದಂಡ ವಿಧಿಸಿತು. 1991ರಲ್ಲಿ ಅಂದರೆ ತನ್ನ 61ನೇ ವಯಸ್ಸಿನಲ್ಲಿ ಸಾಯುವ ಮುಂಚೆ ತನ್ನ ಉಳಿದ ಸಮಯವನ್ನು ಅರಿಝೋನಾ ಸ್ಟೇಟ್ ಸೆರೆಮನೆಯಲ್ಲಿ ಕಳೆದ. ಕೊನೆಗೆ ಆತ ಮಿದುಳು ರಕ್ತಸ್ರಾವದಿಂದಾಗಿ ಮೃತನಾದ.

Exit mobile version