ನವದೆಹಲಿ: ಯಾವುದೇ ಕಂಪನಿ ಇರಲಿ, ಕೆಲಸಗಾರರನ್ನು (employees) ಯಾವಾಗ ಕೆಲಸದಿಂದ ಕಿತ್ತು ಹಾಕುತ್ತಾರೆ? ಸರಿಯಾಗಿ ಕೆಲಸ ಮಾಡದಿದ್ದರೆ, ಕರ್ತವ್ಯ ಲೋಪ ಎಸಗಿದರೆ, ಭ್ರಷ್ಟಾಚಾರ ಮಾಡಿದ್ರೆ, ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡರೆ ಕೆಲಸದಿಂದ ಕಿತ್ತು ಹಾಕುವುದು ಸಾಮಾನ್ಯ. ಆದರೆ, ಚೀನಾದ (China) ಕಾರ್ಪೊರೇಟ್ (Corporate) ಕಂಪನಿಯೊಂದು ವಿಚಿತ್ರ ಕಾರಣಕ್ಕೆ ಕೆಲಸಗಾರರನ್ನು ವಜಾ ಮಾಡುವುದಾಗಿ ಹೇಳಿದೆ. ಝೆಜಿಯಾಂಗ್ ಮೂಲಕ ಕಂಪನಿಯು, ತನ್ನ ಕೆಲಸಗಾರರು ಯಾವುದೇ ಅಕ್ರಮ ಸಂಬಂಧವನ್ನು (extramarital affairs) ಹೊಂದುವಂತಿಲ್ಲ ಎಂದು ಹೇಳಿದೆ. ಅಂಥದ್ದೇನಾದರೂ ಕಂಡು ಬಂದರೆ ಅವನು/ಅವಳನ್ನು ಕೂಡಲೇ ಕೆಲಸದಿಂದ ವಜಾ ಮಾಡುವುದಾಗಿ ಹೇಳಿದೆ. ಈ ಕ್ರಮದ ಮೂಲಕ, ಸಂಸ್ಥೆಯು “ಕುಟುಂಬಕ್ಕೆ ನಿಷ್ಠರಾಗಿರುವ ಸಾಂಸ್ಥಿಕ ಸಂಸ್ಕೃತಿಯನ್ನು ಪ್ರತಿಪಾದಿಸಲು ಮತ್ತು ಗಂಡ ಮತ್ತು ಹೆಂಡತಿಯ ನಡುವಿನ ಪ್ರೀತಿಯನ್ನು ಪ್ರತಿಪಾದಿಸಲು” ಮುಂದಾಗಿದೆ(Viral News).
ಚೀನಾದ ಕಂಪನಿಯು ಜೂನ್ 9 ರಂದು ವಿವಾಹಬಾಹಿರ ಸಂಬಂಧಗಳ ನಿಷೇಧ ಆದೇಶವನ್ನು ಹೊರಡಿಸಿದೆ. ಎಲ್ಲಾ ವಿವಾಹಿತ ಸಿಬ್ಬಂದಿಗೆ ನಿಯಮ ಅನ್ವಯಿಸುತ್ತದೆ. ವಿವಾಹೇತರ ಸಂಬಂಧಗಳನ್ನು ಹೊಂದಿರುವ ಉದ್ಯೋಗಿಗಳ ಮೇಲಿನ ನಿಷೇಧವು ಚೀನಾದಲ್ಲಿ ಭಾರೀ ಚರ್ಚೆಗೆ ದಾರಿ ಮಾಡಿಕೊಟ್ಟಿದೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.
ಕಂಪನಿಯ ಆಂತರಿಕ ನಿರ್ವಹಣೆಯನ್ನು ಬಲಪಡಿಸಲು, ಕುಟುಂಬಕ್ಕೆ ನಿಷ್ಠರಾಗಿರುವ ಸಾಂಸ್ಥಿಕ ಸಂಸ್ಕೃತಿಯನ್ನು ಪ್ರತಿಪಾದಿಸಲು ಮತ್ತು ಗಂಡ ಮತ್ತು ಹೆಂಡತಿಯ ನಡುವೆ ಪ್ರೀತಿ, ಕುಟುಂಬವನ್ನು ಉತ್ತಮವಾಗಿ ರಕ್ಷಿಸಲು ಮತ್ತು ಕೆಲಸದ ಮೇಲೆ ಕೇಂದ್ರೀಕರಿಸಲು, ವಿವಾಹಿತ ಎಲ್ಲಾ ಉದ್ಯೋಗಿಗಳನ್ನು ವಿವಾಹೇತರ ಸಂಬಂಧ ಅಥವಾ ಪ್ರೇಯಸಿಯನ್ನು ಇಟ್ಟುಕೊಳ್ಳುವಂತಹ ಕೆಟ್ಟ ನಡವಳಿಕೆಗಳಿಂದ ನಿರ್ಬಂಧಿಸಲಾಗಿದೆ ಎಂದು ತಾನು ನೀಡಿದ ಆದೇಶದಲ್ಲಿ ತಿಳಿಸಿದೆ.
ಈ ಸುದ್ದಿಯನ್ನೂ ಓದಿ: Viral News: ರೈಟ್ ರೈಟ್..! ಅಯ್ಯೋ ಇಲ್ಲಿ ಬಸ್ ನಿಲ್ಸೋದೆ ಇಲ್ಲ; ಬಸ್‌ಗೆ ಅಡ್ಡ ಬಂದು ಬುಸ್‌ಗುಟ್ಟಿದ ರೇಣುಕಾಚಾರ್ಯ!
ಈ ನಿಮಯವನ್ನು ಯಾವುದೇ ಉದ್ಯೋಗಿ ಉಲ್ಲಂಘಿಸಿರುವುದು ಕಂಡು ಬಂದರೆ ಅಂಥವರನ್ನು ಕೆಲಸದಿಂದ ವಜಾ ಮಾಡಲಾಗುವುದು. ಎಲ್ಲಾ ಸಿಬ್ಬಂದಿ ಸರಿಯಾದ ಪ್ರೀತಿಯ ಮೌಲ್ಯಗಳನ್ನು ಪ್ರತಿಪಾದಿಸಬೇಕು. ಅಕ್ರಮ ಸಂಬಂಧ ಬೇಡ, ಉಪಪತ್ನಿ ಬೇಡ, ವಿವಾಹೇತರ ಸಂಬಂಧ ಬೇಡ ಮತ್ತು ಡೈವೋರ್ಸ್ ಬೇಡ ಎಂಬ ಈ ನಾಲ್ಕು ಬೇಡಗಳ ನಿಯಮಗಳನ್ನು ಎಲ್ಲರೂ ಅನುಸರಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇನ್ನಷ್ಟು ಕುತೂಹಲಕರ ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.