Site icon Vistara News

Viral News: ಇಸ್ರೇಲ್ ಮಹಿಳಾ ಸೈನಿಕರಿಂದ ನಿರಂತರ ಅತ್ಯಾಚಾರ; ಕ್ರೂರ ಅನುಭವ ಬಿಚ್ಚಿಟ್ಟ ಪ್ಯಾಲೇಸ್ಟಿನಿಯನ್ ಬಂಧಿತ

Viral News

ಪ್ಯಾಲೇಸ್ಟಿನಿಯನ್ ಬಂಧಿತರನ್ನು (Palestinian prisoners) ಇಸ್ರೇಲ್ (Israeli army) ಎಷ್ಟು ಕ್ರೂರವಾಗಿ ನಡೆಸಿಕೊಳ್ಳುತ್ತಿದೆ ಎಂಬುದನ್ನು ಎಂಟು ತಿಂಗಳ ಕಾಲ ಇಸ್ರೇಲ್ ಸೈನಿಕರ ಬಂಧನ ಅನುಭವಿಸಿ ಬಿಡುಗಡೆಯಾದ ಇಬ್ರಾಹಿಂ ಸಲೇಂ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಸುದ್ದಿ ಈಗ ಭಾರಿ ವೈರಲ್ (Viral News) ಆಗಿದೆ.

ಪ್ರಸ್ತುತ ಕೇಂದ್ರ ಗಾಜಾದ (central gaza) ದೇರ್ ಅಲ್-ಬಾಲಾಹ್‌ನಲ್ಲಿರುವ ಅವರು, ಕುಖ್ಯಾತ ಎಸ್ ಡಿ ಇ ತೇಮಾನ್ ಬಂಧನ ಶಿಬಿರದಲ್ಲಿ ತಮ್ಮ ಮೇಲೆ ಅತ್ಯಾಚಾರವಾಗಿದೆ, ವಿದ್ಯುದಾಘಾತ ನೀಡಲಾಗಿದೆ ಮತ್ತು ಸಾಕಷ್ಟು ಏಟು ಕೂಡ ಬಿದ್ದಿದೆ ಎಂಬುದಾಗಿ ತಮ್ಮ ಭಯಾನಕ ನಿಂದನೆಯ ಅನುಭವವನ್ನು ಹೇಳಿಕೊಂಡಿದ್ದಾರೆ. ಅವರು ಹಂಚಿಕೊಂಡಿರುವ ಮುಳ್ಳುತಂತಿಯ ಬೇಲಿಯ ಹಿಂದೆ ನಿಂತಿರುವ ಸೇಲಂ ಅವರ ಚಿತ್ರವು ಅನೇಕ ಪ್ಯಾಲೇಸ್ಟಿನಿಯನ್ ಕೈದಿಗಳು ಅನುಭವಿಸುತ್ತಿರುವ ದೌರ್ಜನ್ಯದ ಚಿತ್ರವಾಗಿದೆ ಎಂದು ಹೇಳಿಕೊಂಡಿದ್ದಾರೆ.

ಇವರ ಅಪಹರಣವಾಗಿದ್ದು ಹೇಗೆ?

2023ರ ಡಿಸೆಂಬರ್ ನಲ್ಲಿ ಇಸ್ರೇಲ್ ಪಡೆಗಳು ಉತ್ತರ ಗಾಜಾದ ಕಮಲ್ ಅಡ್ವಾನ್ ಆಸ್ಪತ್ರೆಯ ಮೇಲೆ ದಾಳಿ ಮಾಡಿದಾಗ ಸೇಲಂ ಅವರಿಗೆ ಅಗ್ನಿಪರೀಕ್ಷೆ ಎದುರಾಯಿತು. ಅಲ್ಲಿ ತೀವ್ರವಾಗಿ ಗಾಯಗೊಂಡ ಮಕ್ಕಳ ಪಕ್ಕದಲ್ಲಿ ಅವರೂ ಇದ್ದರು. ಇಸ್ರೇಲ್ ದಾಳಿಯಲ್ಲಿ ಸೇಲಂನ ಅನೇಕ ಮಕ್ಕಳು ತೀವ್ರವಾಗಿ ಗಾಯಗೊಂಡಿದ್ದರು. ಅದು ಅವರ ಒಡಹುಟ್ಟಿದವರು ಮತ್ತು ಅವರ ಹಲವಾರು ಮಕ್ಕಳನ್ನು ಬಲಿ ತೆಗೆದುಕೊಂಡಿತು. ಅವರ ಮನವಿ ಮತ್ತು ಆಸ್ಪತ್ರೆಯ ವರದಿಗಳ ಹೊರತಾಗಿಯೂ ಇಸ್ರೇಲ್ ಸೈನಿಕರು ಅವರನ್ನು ಬಲವಂತವಾಗಿ ಐಸಿಯುನಿಂದ ಕರೆದುಕೊಂಡು ಹೋಗಿ ಬಂಧಿಸಿದರು.


ಮಳೆಯಲ್ಲಿ ಎರಡು ದಿನ

ಸೇಲಂ ಇತರ ಪುರುಷರೊಂದಿಗೆ ಸೈನಿಕರಿಂದ ವಿವಸ್ತ್ರಗೊಳ್ಳಲ್ಪಟ್ಟರು, ಥಳಿಸಲ್ಪಟ್ಟರು ಮತ್ತು ನಿಂದಿಸಲ್ಪಟ್ಟರು. ಸಾಕಷ್ಟು ಅವಮಾನ ಮಾಡಲಾಯಿತು. ಬಳಿಕ ಸೇಲಂ ಅವರನ್ನು ನೆಗೆವ್ ಮರುಭೂಮಿಯಲ್ಲಿನ ಬಂಧನ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಬಂಧಿತರನ್ನು ಎರಡು ರಾತ್ರಿಗಳ ಕಾಲ ಮಳೆಯಲ್ಲಿ ಕಟ್ಟಿಹಾಕಲಾಯಿತು ಮತ್ತು ಕನಿಷ್ಠ ಬಟ್ಟೆ ಮತ್ತು ಆಹಾರವನ್ನು ನೀಡುವ ಮೊದಲು ಬಹುತೇಕ ಅವರು ಬೆತ್ತಲೆಯಾಗಿದ್ದರು.

ಅಲ್ಲಿಂದ ಎಸ್ ಡಿ ಇ ತೇಮಾನ್ ಸೇನಾ ನೆಲೆಗೆ ವರ್ಗಾಯಿಸಲಾಯಿತು. ಇದು ಅತ್ಯಂತ ಕೆಟ್ಟ ಅನುಭವ ಎಂದು ಅವರು ಹೇಳಿದ್ದಾರೆ. 52 ದಿನಗಳವರೆಗೆ ಅವರು ಮಾನಸಿಕವಾಗಿ ಜರ್ಜರಿತದರು. ಅವರಿಗೆ ನಿಯಮಿತ ಶಿಕ್ಷೆ ಮತ್ತು ನಿರಂತರ ಅವಮಾನ ಮಾಡಲಾಯಿತು. ಅತ್ಯಾಚಾರ ನಡೆಸಿದ್ದರಿಂದ ಅನೇಕ ಕೈದಿಗಳು ಗುದನಾಳದ ಗಾಯಗಳನ್ನು ಅನುಭವಿಸಿದರು. ಇಲ್ಲಿ ಕೈದಿಗಳ ಮೇಲೆ ಲೈಂಗಿಕ ದೌರ್ಜನ್ಯಗಳು ಅತಿರೇಕವಾಗಿವೆ. ಇಸ್ರೇಲ್ ಮಹಿಳಾ ಸೈನಿಕರೂ ಅತ್ಯಾಚಾರ ನಡೆಸುತ್ತಾರೆ ಎಂದು ಸೇಲಂ ಹೇಳಿದ್ದಾರೆ.


ಆಗಾಗ್ಗೆ ಮಹಿಳಾ ಸೈನಿಕರಿಂದ ಆಘಾತವು ಎಷ್ಟು ತೀವ್ರವಾಗಿತ್ತು ಎಂದರೆ ಖೈದಿಗಳು ತಮ್ಮ ಗಾಯಗಳಿಗೆ ಮೂಲವ್ಯಾಧಿ ಕಾರಣ ಎಂದು ತಪ್ಪಾಗಿ ಭಾವಿಸುತ್ತಿದ್ದರು ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Israel-Hamas War: ಪುತ್ರರ ವೀರ್ಯವನ್ನು ಸಂಗ್ರಹಿಸಿಡುತ್ತಿರುವ ಇಸ್ರೇಲ್ ಪೋಷಕರು! ಯಾಕೆ ಹೀಗೆ?

ಸೇಲಂ ಅವರ ಈ ಸಾಕ್ಷ್ಯವು ಇಸ್ರೇಲ್ ವಶದಲ್ಲಿರುವ ಪ್ಯಾಲೇಸ್ಟಿನಿಯನ್ ಬಂಧಿತರನ್ನು ಎಷ್ಟು ಕ್ರೂರವಾಗಿ ನಡೆಸಿಕೊಲ್ಲಲಾಗುತ್ತಿದೆ ಎಂಬುದನ್ನು ಎತ್ತಿ ತೋರಿಸುತ್ತದೆ. ಅವರ ಅನುಭವಗಳು ಬಂಧನ ಶಿಬಿರಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯನ್ನು ತಡೆಗಟ್ಟಲು ಅಂತಾರಾಷ್ಟ್ರೀಯ ಗಮನ ಮತ್ತು ಹಸ್ತಕ್ಷೇಪದ ಅಗತ್ಯದ ಮೇಲೆ ಬೆಳಕು ಚೆಲ್ಲಿದೆ.

Exit mobile version