ಬೆಂಗಳೂರು: ನಮ್ಮ ದೇಶದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರನ್ನು ಅವರನ್ನು ಅವರ ರಕ್ಷಣೆಗೆ ನಿಯೋಜನೆಗೊಂಡಿದ್ದವರೇ ಕೊಂದ ವಿಚಾರ ಎಲ್ಲರಿಗೂ ತಿಳಿದಿರುವುದು. ಆ ದಿನದಂದು ಪೂರ್ತಿ ದೇಶ ಕಣ್ಣೀರು ಹಾಕಿತ್ತು. ಆದರೆ ಆ ಕೃತ್ಯವನ್ನು ಕೆಲವರು ಮಾತ್ರ ಸಂಭ್ರಮಿಸಿದ್ದರು. ಇದೀಗ ಆ ಕೊಲೆಯನ್ನೇ ತಮ್ಮ ಹೆಮ್ಮೆ ಎನ್ನುವಂತೆ ಕೆನಡಾದಲ್ಲಿರುವ ಖಲಿಸ್ತಾನಿಗಳು (Viral News) ಪ್ರದರ್ಶಿಸಿದ್ದಾರೆ.
ಹೌದು. ಕೆನಡಾದಲ್ಲಿ ಇತ್ತೀಚೆಗೆ ಖಲಿಸ್ತಾನಿಗಳು ಪರೇಡ್ ನಡೆಸಿದ್ದಾರೆ. ಬರೋಬ್ಬರಿ ಐದು ಕಿ.ಮೀಗಳಷ್ಟು ದೂರ ಪರೇಡ್ ಅನ್ನು ನಡೆಸಲಾಗಿದೆ. ಅದರಲ್ಲಿ ನಮ್ಮ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರನ್ನು ಹತ್ಯೆ ಮಾಡಿದ ದೃಶ್ಯವನ್ನು ಸಹ ಗೊಂಬೆಗಳಂತೆ ಪ್ರದರ್ಶಿಸಲಾಗಿದೆ. ಅದರ ವಿಡಿಯೊ ಕೂಡ ಎಲ್ಲೆಡೆ ಹರಿದಾಡಿದೆ. ಈ ವಿಚಾರ ಅನೇಕ ಚರ್ಚೆಗಳಿಗೆ ಕಾರಣವಾಗಿದೆ.
ಇದನ್ನೂ ಓದಿ: Viral Video: ಟೆರೇಸ್ಸೇ ಡ್ಯಾನ್ಸ್ ಫ್ಲೋರ್ ಆಯ್ತು, ಯುವತಿ ಸಖತ್ ಸ್ಟೆಪ್ಸ್! ವಿಡಿಯೋ ವೈರಲ್
ಈ ವಿಚಾರದಲ್ಲಿ ಕೆನಡಾದ ಆಡಳಿತ ವರ್ಗ ಕೂಡ ಪ್ರತಿಕ್ರಿಯೆ ನೀಡಿದೆ. “ಈ ರೀತಿಯಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಹತ್ಯೆಯನ್ನು ಸಂಭ್ರಮಿಸಿರುವುದನ್ನು ಕಂಡು ದಿಗ್ಭ್ರಮೆಗೊಂಡಿದ್ದೇವೆ. ದ್ವೇಷ ಅಥವಾ ಹಿಂಸಾಚಾರದ ವೈಭವೀಕರಣಕ್ಕೆ ನಮ್ಮ ದೇಶದಲ್ಲಿ ಜಾಗವಿಲ್ಲ” ಎಂದು ಕೆನಡಾದ ಹೈಕಮಿಷನರ್ ಕ್ಯಾಮರೂನ್ ಮ್ಯಾಕೆ ತಿಳಿಸಿದ್ದಾರೆ.
Does it help Canada's 'Indo-Pacific strategy'? A float depicting murder of late Indian PM by her Sikh bodyguards being part of about 5 KM long parade in city of Brampton on June 4th. Jody Thomas may reflect on it! pic.twitter.com/rBFn7vMKyz
— Balraj Deol (@BalrajDeol4) June 6, 2023
ಆಪರೇಷನ್ ಬ್ಲೂ ಸ್ಟಾರ್‌ನ 39ನೇ ವಾರ್ಷಿಕೋತ್ಸವದ ಎರಡು ದಿನಗಳ ಮೊದಲು ಅಂದರೆ ಜೂನ್ 4ರಂದು ಫ್ಲೋಟ್ ಕೆನಡಾದ ಬ್ರಾಂಪ್ಟನ್‌ನಲ್ಲಿ ಈ ಪರೇಡ್ ನಡೆಸಲಾಯಿತು ಎಂದು ವರದಿಗಳು ತಿಳಿಸಿವೆ. ಈ ಪರೇಡ್‌ನ ಹಲವಾರು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ. “ಇದು ಪಾಕಿಸ್ತಾನಿ ಸಿಖ್ ಅಜೆಂಡಾದ ಪ್ರತಿಬಿಂಬ”, “ಈ ರೀತಿಯ ಘಟನೆಗಳು ನಿಜಕ್ಕೂ ಆತಂಕಕಾರಿ” ಎಂದು ಅನೇಕರು ಕಳವಳವನ್ನು ವ್ಯಕ್ತಪಡಿಸಿದ್ದಾರೆ.