ವಾಷಿಂಗ್ಟನ್: ವೀಕೆಂಡ್ ಎಂದೋ, ಮನೆಗೆ ಗೆಳೆಯರು ಬಂದಿದ್ದಾರೆ ಎಂದೋ, ಆಫೀಸ್ ಕೆಲಸದ ಒತ್ತಡದ ಮಧ್ಯೆ ಅಡುಗೆ ಮಾಡಲು ಆಗುವುದಿಲ್ಲ ಎಂದೋ, ರೆಸ್ಟೋರೆಂಟ್ ಇಷ್ಟವಾಯಿತು ಎಂದೋ ಆನ್‌ಲೈನ್‌ನಲ್ಲಿ ಊಟ, ತಿಂಡಿ, ಪಾನೀಯ ಆರ್ಡರ್ ಮಾಡುತ್ತೇವೆ. ಹೆಚ್ಚಿನ ಹಣ ಪಾವತಿಸಿ ಆರ್ಡರ್ ಮಾಡಿ, 40-45 ನಿಮಿಷ ಕಾಯುತ್ತೇವೆ. ಹೀಗೆ, ಅಮೆರಿಕದಲ್ಲೊಬ್ಬ ವ್ಯಕ್ತಿಯು ಆನ್‌ಲೈನ್‌ನಲ್ಲಿ ಮಿಲ್ಕ್‌ಶೇಕ್ ಆರ್ಡರ್ (Online Food) ಮಾಡಿದ್ದಾನೆ. ಆದರೆ, ಮಿಲ್ಕ್‌ಶೇಕ್ ಬದಲು ಒಂದು ಗ್ಲಾಸ್ ಮೂತ್ರ ಸಿಕ್ಕಿರುವುದು ಆತನಿಗೆ ಶಾಕ್ ಆಗಿದೆ. ಈ ವಿಷಯವನ್ನು ಆತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಜನರೂ (Viral News) ಶಾಕ್ ಆಗಿದ್ದಾರೆ.
ಹೌದು, ಸಾರಾಟೋಗ ಸ್ಪ್ರಿಂಗ್ಸ್ ನಿವಾಸಿಯಾದ ಕ್ಯಾಲೆಬ್ ವುಡ್ಸ್ ಎಂಬುವರು ಗ್ರಬ್‌ಹಬ್ (GrubHub) ಎಂಬ ಆ್ಯಪ್ ಮೂಲಕ ಚಿಕ್-ಫಿಲ್-ಎ ಎಂಬ ಹೋಟೆಲ್‌ನಿಂದ ಫ್ರೈಸ್ (ಫಿಂಗರ್ ಚಿಪ್ಸ್), ಮಿಲ್ಕ್ ಶೇಕ್ ಆರ್ಡರ್ ಮಾಡಿದ್ದಾರೆ. ಇದಾದ ಬಳಿಕ ಗ್ರಬ್‌ಹಬ್ ಫುಡ್ ಡೆಲಿವರಿ ಬಾಯ್ ಇವರ ಮನೆಗೆ ತಂದು ಪಾರ್ಸೆಲ್ ಕೊಟ್ಟಿದ್ದಾನೆ. ಅಷ್ಟೊತ್ತಿಗಾಗಲೇ ಹಸಿದು ಕೂತಿದ್ದ ಕ್ಯಾಲೆಬ್ ವುಡ್ ಫ್ರೈಸ್ ತಿಂದಿದ್ದಾರೆ. ಇದಾದ ಬಳಿಕ ಅವರಿಗೆ ಗ್ಲಾಸ್‌ನಲ್ಲಿರುವುದು ಮಿಲ್ಕ್ ಶೇಕ್ ಅಲ್ಲ, ಮೂತ್ರ ಎಂಬುದು ಗೊತ್ತಾಗಿದೆ.
Caleb Wood, of Saratoga Springs, says he ordered a Chick-fil-A meal of fries and a milkshake earlier this week. But when he took a sip from the delivered Styrofoam cup, he found that inside was warm urine.https://t.co/Au8yLSGrXg
— ABC4 News (@abc4utah) October 28, 2023
ಕುಡಿದು ನೋಡಿದ ಬಳಿಕ ಗೊತ್ತಾಯ್ತು
ದುರದೃಷ್ಟ ಎಂದರೆ, ಕ್ಯಾಲೆಬ್ ವುಡ್ಸ್ ಅವರು ಗ್ಲಾಸ್‌ನಲ್ಲಿರುವ ಪಾನೀಯವನ್ನು ಕುಡಿದ ಬಳಿಕವೇ ಅದು ಮಿಲ್ಕ್‌ಶೇಕ್ ಅಲ್ಲ ಮೂತ್ರ ಎಂಬುದು ಗೊತ್ತಾಗಿದೆ. “ನಾನು ಗ್ಲಾಸ್‌ಗೆ ಸ್ಟ್ರಾ ಹಾಕಿ ಕುಡಿಯಲು ಮುಂದಾದೆ. ಒಂದೆರಡು ಸಿಪ್ ಕುಡಿದ ಬಳಿಕ ಅದು ಮಿಲ್ಕ್‌ಶೇಕ್ ಅಲ್ಲ, ಮೂತ್ರ ಎಂಬುದು ಗೊತ್ತಾಯಿತು. ನಂತರ ಗ್ರಬ್‌ಹಬ್ ಡ್ರೈವರ್‌ಗೆ ಕರೆ ಮಾಡಿ ವಿಷಯ ತಿಳಿಸಿದೆ” ಎಂದು ಕ್ಯಾಲೆಬ್ ವುಡ್ಸ್ ತಿಳಿಸಿದ್ದಾರೆ. ಇವರಿಗೆ ಆದ ಭಯಾನಕ ಅನುಭವದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮರುಕ ವ್ಯಕ್ತವಾಗಿದೆ. ಒಂದಷ್ಟು ಜನ ಆನ್‌ಲೈನ್ ಡೆಲಿವರಿ ಸಂಸ್ಥೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಇದನ್ನೂ ಓದಿ: Viral Video: ಟ್ರಾಫಿಕ್ ಸಿಗ್ನಲ್ ವೇಳೆ ಬ್ಯಾಗ್‌ಗೆ ಕೈಹಾಕಿ ತಿಂಡಿ ತಿಂದ ಡೆಲಿವರಿ ಬಾಯ್; ಆರ್ಡರ್ ಮಾಡಿದವನ ಬಗ್ಗೆ ಮರುಕ
ಕೆಲ ದಿನಗಳ ಹಿಂದಷ್ಟೇ ಭಾರತದಲ್ಲಿ ಕೂಡ ಗ್ರಾಹಕರೊಬ್ಬರಿಗೆ ಹೀಗೆಯೇ ಆಗಿತ್ತು. ಗ್ರಾಹಕರೊಬ್ಬರು 1 ಲಕ್ಷ ರೂ. ಮೌಲ್ಯ ಸೋನಿ ಟಿವಿಯನ್ನು (Sony TV) ಪ್ಲಿಫ್‌ಕಾರ್ಟ್ (Flipkart) ಮೂಲಕ ಆರ್ಡರ್ ಮಾಡಿದ್ದರು. ಆದರೆ, ಅವರಿಗೆ ಬೇರೆ ಬ್ರ್ಯಾಂಡಿನ ಕಳಪೆ ಟಿವಿಯನ್ನು ನೀಡಲಾಗಿತ್ತು! ಆದರೆ, ಈ ವಿಷಯ ಗ್ರಾಹಕನಿಗೆ ಮೊದಲಿಗೆ ಗೊತ್ತಾಗಿಲ್ಲ. ಯಾವಾಗ, ಟಿವಿ ಇನ್‌ಸ್ಟಾಲ್ ಮಾಡಲು ಕೆಲಸಗಾರ ಮನೆಗೆ ಬಂದು ಬಾಕ್ಸ್ ಓಪನ್ ಮಾಡಿದಾಗಲೇ ಸೋನಿ ಟಿವಿಯ ಬದಲಿಗೆ ಥಾಮ್ಸನ್ ಟಿವಿಯನ್ನು(Thomson TV) ನೀಡಿರುವುದು ಗೊತ್ತಾಗಿದೆ. ಈ ಕುರಿತಾದ ಮಾಹಿತಿಯನ್ನು ಎಕ್ಸ್ ವೇದಿಕೆಯಲ್ಲಿ ದಿಟ್ರೂಇಂಡಿಯನ್ ಖಾತೆಯಿಂದ ಹಂಚಿಕೊಳ್ಳಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ