ಅಮೆರಿಕ: ಹಾಗೆ ತುಂಬ ಜನ ಇರುತ್ತಾರೆ. ಸುಖಾಸುಮ್ಮನೆ ಬೇರೆಯವರೊಂದಿಗೆ ಸಣ್ಣ ವಿಷಯಕ್ಕೆ ಜಗಳವಾಡುತ್ತಾರೆ. ತಮ್ಮ ಸ್ವಾರ್ಥವೇ ಮೇಲು, ತಮಗೇ ಎಲ್ಲವೂ ದಕ್ಕಬೇಕು ಎಂಬ ಮನೋಭಾವ ಹೊಂದಿರುತ್ತಾರೆ. ಹೀಗೆ, ಸ್ವಾರ್ಥಕ್ಕಾಗಿ ಇವರು ಕೆಲವೊಮ್ಮೆ ಇರಲಾರದೆ ಇರುವೆ ಬಿಟ್ಟುಕೊಳ್ಳುತ್ತಾರೆ. ಹೀಗೆ, ತನ್ನ ಸ್ವಾರ್ಥಕ್ಕಾಗಿ ಅಮೆರಿಕದಲ್ಲಿ ವ್ಯಕ್ತಿಯೊಬ್ಬ ಪಕ್ಕದ ಮನೆಯವರ 32 ಮರಗಳನ್ನು ಕಡಿಸಿದ್ದಾನೆ. ಇಂತಹ ಮಹಾಪರಾಧಕ್ಕಾಗಿ ಆತನಿಗೆ ಸುಮಾರು 12 ಕೋಟಿ ರೂಪಾಯಿ (Viral News) ದಂಡ ಬಿದ್ದಿದೆ.
ಅಮೆರಿಕದ ನ್ಯೂಜೆರ್ಸಿಯ ನಿವಾಸಿಯಾದ ಗ್ರ್ಯಾಂಟ್ ಹೇಬರ್ ಎಂಬಾತನು ತನ್ನ ಪಕ್ಕದ ಮನೆಯವರ ಮೇಲಿನ ಸೇಡು ಹಾಗೂ ಮರಗಳು ಇಲ್ಲದಿದ್ದರೆ ಆಕಾಶ ಇನ್ನಷ್ಟು ಸ್ವಚ್ಛಂದವಾಗಿ ಕಾಣಿಸುತ್ತದೆ ಎಂದು ಆಳುಗಳನ್ನು ಕಳುಹಿಸಿ ಸಮಿಹ್ ಶಿನ್‌ವೇ ಎಂಬುವರ ಮರಗಳನ್ನು ಕಡಿಸಿದ್ದಾನೆ. ಇದಕ್ಕಾಗಿ ಗ್ರ್ಯಾಂಟ್ ಹೇದರ್‌ಗೆ ನ್ಯಾಯಾಲಯವು 1.5 ದಶಲಕ್ಷ ಡಾಲರ್ ದಂಡ ವಿಧಿಸಿದೆ.
“ನನ್ನ ಜಮೀನಿನಲ್ಲಿ ಬೆಳೆಯಲಾದ ಓಕ್, ಬಿರ್ಚ್ ಹಾಗೂ ಮಾಪಲ್ಸ್ ಮರಗಳನ್ನು ಗ್ರ್ಯಾಂಡ್ ಹೇಬರ್‌ನು ಕಡಿಸಿದ್ದಾನೆ. ನನ್ನ ಜಮೀನಿನಲ್ಲಿ ಗರಗಸಗಳ ಶಬ್ದ ಕೇಳಿಸಿದ ಕಾರಣ ಓಡಿಹೋಗಿ ನೋಡಿದೆ. ಸುಮಾರು ಜನ ಮರಗಳನ್ನು ಕತ್ತರಿಸುತ್ತಿದ್ದನ್ನು ಕಂಡು ಆಕಾಶವೇ ಕುಸಿದು ಬಿದ್ದಂತಾಯಿತು. ತುಂಬ ವರ್ಷಗಳಿಂದ ಮುತುವರ್ಜಿ ವಹಿಸಿ ಮರಗಳನ್ನು ಬೆಳೆಸಿದ್ದೆ. ಗ್ರ್ಯಾಂಟ್ ಹೇಬರ್ ಇಂತಹ ಹೇಯ ಕೆಲಸ ಮಾಡಿಸಿದ್ದಾನೆ” ಎಂದು ಸಮಿಹ್ ಶಿನ್‌ವೇ ತಿಳಿಸಿದ್ದಾರೆ.
ಇದನ್ನೂ ಓದಿ: Viral News: 30 ವರ್ಷದ ಹಳೆಯ ಏರ್ ಪಾಸ್ ಮೂಲಕ ಒಂದೇ ವರ್ಷದಲ್ಲಿ 373 ವಿಮಾನ ಪ್ರಯಾಣ ಮಾಡಿದ!
ಮರಗಳನ್ನು ಕಡಿಸಿದ ಅಪರಾಧ, ಸಮಿಹ್ ಶಿನ್‌ವೇ ಅವರು ಮತ್ತೆ ಜಮೀನನ್ನು ಹದಗೊಳಿಸಿ, ಮರಗಳ ಬೇರುಗಳನ್ನು ತೆಗೆಸಿ, ಬೇರೆ ತಳಿಯ ಸಸಿಗಳನ್ನು ನೆಟ್ಟು, ಅವುಗಳು ಮರವಾಗುವತನಕ ಕಾಯಬೇಕಾದದ್ದನ್ನು ಪರಿಗಣಿಸಿ ನ್ಯಾಯಾಲಯವು ಒಂದು 12 ಕೋಟಿ ರೂಪಾಯಿ ದಂಡ ವಿಧಿಸಿದೆ. ಹಾಗೆ ನೋಡಿದರೆ, ಉಗ್ರರ ನಿಗ್ರಹ ಕಂಪನಿಯೊಂದಕ್ಕೆ ಗ್ರ್ಯಾಂಟ್ ಹೇಬರ್ ಸಿಇಒ ಆಗಿದ್ದಾನೆ. ಶಿಕ್ಷಣ, ಕಂಪನಿ, ಸ್ಟೇಟಸ್ ಎಲ್ಲವೂ ಇದೆ. ಆದರೆ, ಒಂದು ವರ್ಷದಿಂದ ಸಮಿಹ್ ಶಿನ್‌ವೇ ಜತೆ ಜಗಳವಾಡುತ್ತಿದ್ದ ಹೇಬರ್, ಕೊನೆಗೆ ಇಂತಹ ಹೀನ ಕೃತ್ಯ ಎಸಗಿದ್ದಾನೆ.