Site icon Vistara News

Viral Video | ಮನುಷ್ಯನಂತೆಯೇ ಇತ್ತು ಆದರೆ ಮನುಷ್ಯನಲ್ಲ, ವಿಚಿತ್ರ ಅನುಭವ ಹಂಚಿಕೊಂಡ ದಂಪತಿ, ಇಲ್ಲಿದೆ ವಿಡಿಯೊ

ಲಂಡನ್: ಮನುಷ್ಯರು ಎರಡು ಕಾಲಿನಲ್ಲಿ ನಡೆದಾಡುತ್ತಾರೆ. ಆದರೆ ಇಲ್ಲಿ ನಾಲ್ಕು ಕಾಲಿನ ಪ್ರಾಣಿಯೊಂದು ಎರಡೇ ಕಾಲಿನಲ್ಲಿ ನಡೆದು ಆಶ್ಚರ್ಯ ಹುಟ್ಟಿಸಿದೆ. ಈ ರೀತಿ ಎರಡೇ ಕಾಲಿನಲ್ಲಿ ನಡೆದ ನರಿಯೊಂದರ ವಿಡಿಯೋ ಇದೀಗ ಬ್ರಿಟನ್‌ನಲ್ಲಿ ವೈರಲ್ (Viral Video) ಆಗಿದೆ.

ಇದನ್ನೂ ಓದಿ: Viral Video | ‘ಕಮರ್ ತೇರಿ ಲೆಫ್ಟ್, ರೈಟ್’ ಎನ್ನುತ್ತ ಕುಣಿದ ಬಾಲಕಿಗೆ ಎಲ್ಲರೂ ಫಿದಾ!

ಫಿಲ್ ಕಾರ್ಟರ್ ಹೆಸರಿನ ವ್ಯಕ್ತಿ ಹಾಗೂ ಅವರ ಪತ್ನಿ ಕ್ರಿಸ್ಮಸ್ ದಿನದಂದು ತಮ್ಮ ಮನೆಯ ಉದ್ಯಾನದಲ್ಲಿ ನಡೆದಾಡುವಾಗ ಈ ನರಿ ಕಣ್ಣಿಗೆ ಬಿದ್ದಿದ್ದಂತೆ. ವಿಶೇಷವೆಂದರೆ ಆ ನರಿಗೆ ಮುಂದಿನ ಎರಡು ಕಾಲಿದ್ದವು ಬಿಟ್ಟರೆ ಹಿಂದಿನ ಎರಡು ಕಾಲುಗಳೇ ಇರಲಿಲ್ಲ. ಆದರೂ, ನರಿ ಅವೇ ಕಾಲುಗಳಲ್ಲಿ ಮನುಷ್ಯರಂತೆ ನಡೆದಾಡಿಕೊಂಡು, ಕುಣಿದಾಡಿಕೊಂಡು ಉದ್ಯಾನವನ್ನೆಲ್ಲ ಸುತ್ತಿದೆ. ಈ ದೃಶ್ಯವನ್ನೆಲ್ಲ ದಂಪತಿ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

“ಯಾವುದೋ ಮನುಷ್ಯರೇ ಬಂದಿದ್ದಾರೆ ಎಂದು ನೋಡಿದರೆ ಅಲ್ಲಿದ್ದದ್ದು ನರಿ. ನಿಜಕ್ಕೂ ಇಂತಹ ದೃಶ್ಯವನ್ನು ಹಿಂದೆಂದೂ ಕಂಡಿರಲಿಲ್ಲ. ಬಹುಶಃ ಮುಂದೆ ಕಾಣುವುದಕ್ಕೂ ಸಾಧ್ಯವಿಲ್ಲ. ಇಂತಹ ಅದ್ಭುತವನ್ನು ಕಂಡಿರುವ ನಾವೇ ಅದೃಷ್ಟವಂತರು.” ಎಂದು ಫಿಲ್ ದಂಪತಿ ಹೇಳಿಕೊಂಡಿದ್ದಾರೆ.

ಈ ವಿಡಿಯೋ ರೆಡ್ಡಿಟ್ ಸೇರಿ ಅನೇಕ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಲಕ್ಷಾಂತರ ಮಂದಿಯ ಮೆಚ್ಚುಗೆ ಪಡೆದುಕೊಂಡಿದೆ.

ಇದನ್ನೂ ಓದಿ | Nora Fatehi | 30ರ ನಟಿ ನೋರಾ ಫತೇಹಿ ಜತೆ 25ರ ಆರ್ಯನ್ ಖಾನ್ ಡೇಟಿಂಗ್? ಫೋಟೊ ವೈರಲ್‌!

Exit mobile version