ಮೆಕ್ಸಿಕೋ ಸಿಟಿ: ಅದು ಯಾವುದೇ ದೇಶ ಇರಲಿ, ರಾಜಕಾರಣಿಗಳು ಇರುವುದೇ ಹಾಗೆ. ಅವರು ಜನರ ಹೆಸರಿನಲ್ಲಿ, ಜನ ಸೇವೆಯ ಹೆಸರಿನಲ್ಲಿ ಜನರದ್ದೇ ಹಣ ಲಪಟಾಯಿಸುತ್ತಾರೆ. ಜನರಿಗೆ ಸುಳ್ಳುಗಳನ್ನು ಹೇಳಿ, ಚಿತ್ರ-ವಿಚಿತ್ರ ಭರವಸೆಗಳನ್ನು ನೀಡಿ ಮತಗಳನ್ನು ಪಡೆಯುತ್ತಾರೆ. ಗೆದ್ದ ಬಳಿಕ ಜನರನ್ನೇ ಮರೆತು ಹಾಯಾಗಿರುತ್ತಾರೆ. ಆದರೆ, ಮೆಕ್ಸಿಕೋದಲ್ಲಿ ಮೇಯರ್ ಒಬ್ಬರು ಜನರ ಹಿತಕ್ಕಾಗಿ ಹೆಣ್ಣು ಮೊಸಳೆಯೊಂದನ್ನು ಮದುವೆಯಾಗುವ ಮೂಲಕ ಮೆಕ್ಸಿಕೋ ಸೇರಿ ಜಗತ್ತಿನಾದ್ಯಂತ (Viral News) ಸುದ್ದಿಯಾಗಿದ್ದಾರೆ.
ಹೌದು, ಮೆಕ್ಸಿಕೋದ ಸ್ಯಾನ್ ಪೆಡ್ರೋ ಹುವಾಮೆಲುವಾ ನಗರದ ಮೇಯರ್ ಆಗಿರುವ ವಿಕ್ಟರ್ ಹುಗೋ ಸೋಸಾ ಅವರು ಸಾಂಪ್ರದಾಯಿಕವಾಗಿ ಹೆಣ್ಣು ಮೊಸಳೆಯೊಂದನ್ನು ಮದುವೆಯಾಗಿದ್ದಾರೆ. ತಮಗೆ ಮತ ಹಾಕಿ ಗೆಲ್ಲಿಸಿರುವ ಜನ ಜೀವನ ಸುಗಮವಾಗಿರಲಿ, ಎಲ್ಲರೂ ಶಾಂತಿ-ನೆಮ್ಮದಿಯಿಂದ ಬದುಕುವಂತಾಗಲಿ ಎಂಬುದಾಗಿ ಪ್ರಾರ್ಥಿಸಿ ಮೊಸಳೆಯನ್ನು ಮದುವೆಯಾಗಿದ್ದಾರೆ.
ವೈರಲ್ ಆದ ಫೋಟೊಗಳು ಇಲ್ಲಿವೆ
“We love each other,” Mexican mayor says, as he weds a reptile
— Instablog9ja (@instablog9ja) July 2, 2023
Victor Hugo Sosa, the mayor of San Pedro Huamelula, a town in southern Mexico, has married a female crocodile in a traditional rite to bring good fortune to his people.
📸: AFP pic.twitter.com/hvRsCrovuu
ಕಿಸ್ ಕೊಟ್ಟ ಮೇಯರ್
ಜನರ ಏಳಿಗೆಗೆ ಪ್ರಾರ್ಥಿಸಿ ಮೊಸಳೆಯನ್ನು ಮದುವೆಯಾಗಿರುವ ವಿಕ್ಟರ್ ಹುಗೋ ಸೋಸಾ ಅವರು ಅಷ್ಟಕ್ಕೇ ಸುಮ್ಮನಾಗಿಲ್ಲ, ಆ ಮೊಸಳೆಗೆ ಕಿಸ್ ಕೊಟ್ಟಿದ್ದಾರೆ. ವಿಕ್ಟರ್ ಹುಗೋ ಸೋಸಾ ಅವರು ಕಿಸ್ ಕೊಟ್ಟಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ. ಇನ್ನು ಜಾಲತಾಣಗಳಲ್ಲಿ ಒಂದಷ್ಟು ಕಿಡಿಗೇಡಿಗಳು ವಿಕ್ಟರ್ ಹುಗೋ ಸೋಸಾ ಅವರ ಕಾಲೆಳೆದಿದ್ದಾರೆ. ಮೊಸಳೆಯನ್ನು ಮದುವೆಯಾಗಿ, ಅದಕ್ಕೆ ಕಿಸ್ ಕೊಟ್ಟಿದ್ದು ಆಯ್ತು, ಫಸ್ಟ್ ನೈಟ್ ಯಾವಾಗ ಎಂದೆಲ್ಲ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: Viral Video: ಕೇದಾರನಾಥ ದೇಗುಲದಲ್ಲಿ ಗೆಳೆಯನಿಗೆ ಪ್ರಪೋಸ್ ಮಾಡಿದ ಯುವತಿ; ಕ್ಯೂಟ್ ವಿಡಿಯೊ ನೋಡಿ
ನಮ್ಮದು ಪರಸ್ಪರ ಪ್ರೀತಿ ಎಂದ ವಿಕ್ಟರ್
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದರೂ, ಇದೆಲ್ಲ ಮೂಢನಂಬಿಕೆ ಎಂದು ಜರಿದರೂ, ವ್ಯಂಗ್ಯ ಮಾಡಿದರೂ ವಿಕ್ಟರ್ ಹುಗೋ ಸೋಸಾ ಅವರು ಯಾವುದಕ್ಕೂ ಜಗ್ಗಿಲ್ಲ. “ನನ್ನದು ಹಾಗೂ ಮೊಸಳೆಯದ್ದು ಪರಸ್ಪರ ಪ್ರೀತಿ ಇದೆ” ಎಂದು ಮದುವೆ ಬಳಿಕ ಅವರು ಸುದ್ದಿಗಾರರಿಗೆ ಹೆಮ್ಮೆಯಿಂದ ಹೇಳಿದ್ದಾರೆ. “ನಾನು ಮೊಸಳೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತೇನೆ. ಜನರ ಒಳಿತಿಗಾಗಿ ಇದನ್ನು ಮದುವೆಯಾಗಿದ್ದೇನೆ. ನಮ್ಮಿಬ್ಬರ ಮಧ್ಯೆ ಪ್ರೀತಿ ಇದೆ. ಪ್ರೀತಿ ಇಲ್ಲದೆ ಯಾರನ್ನೂ ಮದುವೆಯಾಗಲು ಸಾಧ್ಯವಿಲ್ಲ” ಎಂದೂ ಹೇಳಿದ್ದಾರೆ.