Site icon Vistara News

ಮಕ್ಕಳನ್ನು ನೋಡಿಕೊಳ್ಳುವ ಆಯಾ ಕೆಲಸಕ್ಕೆ 80 ಲಕ್ಷ ರೂ. ಸ್ಯಾಲರಿ ಆಫರ್!

Vivek Ramaswamy offering rs 80 lakh to nanny Says media report

ನವದೆಹಲಿ: ಅಮೆರಿಕ ಅಧ್ಯಕ್ಷ (US President Election) ಚುನಾವಣೆಗೆ ರಿಪಬ್ಲಿಕ್ ಪಕ್ಷದ (Republic Party) ಅಭ್ಯರ್ಥಿಯಾಗಲು ಹೊರಟಿರುವ ಭಾರತೀಯ ಮೂಲದ ವಿವೇಕ್ ರಾಮಸ್ವಾಮಿ (Vivek Ramaswamy) ಅವರು ತಮ್ಮ ಮಕ್ಕಳನ್ನು ನೋಡಿಕೊಳ್ಳಲು ದಾದಿಯರನ್ನು (Nanny) ಹುಡುಕುತ್ತಿದ್ದಾರೆ. ಈ ಕೆಲಸಕ್ಕಾಗಿ ಅವರು ಆಫರ್ ಮಾಡುತ್ತಿರುವ ಸಂಬಳದ ಮೊತ್ತ ಕೇಳಿದ್ರೆ ನೀವು ಬೆಚ್ಚಿ ಬೀಳುತ್ತೀರಿ. ವಿವೇಕ್ ರಾಮಸ್ವಾಮಿ ದಾದಿ(ಆಯಾ) ಕೆಲಸಕ್ಕೆ 80 ಲಕ್ಷ ರೂ. ಸಂಬಳ ನೀಡಲು ಮುಂದಾಗಿದ್ದಾರೆ. ಅವರು ಭಾರತೀಯ ಕೋಟ್ಯಧಿಪತಿ ಅಪೂರ್ವ ಅವರನ್ನು ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ.

ತಮ್ಮ ಮಕ್ಕಳನ್ನು ನೋಡಿಕೊಳ್ಳಲು ನ್ಯಾನಿ(ದಾದಿ) ಬೇಕಾಗಿದ್ದಾರೆ ಎಂದು ರಾಮಸ್ವಾಮಿ ಅವರು ಎಸ್ಟೇಟ್‌ಜಾಬ್ಸ್ ವೆಬ್‌ಸೈಟ್‌ನಲ್ಲಿ ಜಾಹೀರಾತು ನೀಡಿದ್ದಾರೆ. ಕುತೂಹಲ, ಸಾಹಸ ಮತ್ತು ನಿರಂತರ ಚಲನೆಯು ಕುಟುಂಬದ ಜೀವನಶೈಲಿಯನ್ನು ವ್ಯಾಖ್ಯಾನಿಸುತ್ತದೆ. ಇದು ಉನ್ನತ-ಪ್ರೊಫೈಲ್ ಕುಟುಂಬವನ್ನು ಸೇರಲು ಒಂದು ಅಸಾಧಾರಣ ಅವಕಾಶವಾಗಿದೆ, ಅನನ್ಯ ಕೌಟುಂಬಿಕ ಸಾಹಸಗಳಲ್ಲಿ ಭಾಗವಹಿಸುವಾಗ ಅವರ ಮಕ್ಕಳ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ ಎಂದು ಎಸ್ಟೇಟ್‌ಜಾಬ್ಸ್ ಡಾಟ್ ಕಾಮ್ ಈ ಜಾಹೀರಾತಿನಲ್ಲಿ ಬರೆದುಕೊಂಡಿದೆ.

ವಾರಕ್ಕೆ 84 ರಿಂದ 96 ಗಂಟೆಗಳ ಕೆಲಸದ ಅಗತ್ಯವಿದೆ, ನಂತರ ಇಡೀ ವಾರದ ರಜೆ ಇರುತ್ತದೆ. ಮಕ್ಕಳಿಗೆ ತಡೆರಹಿತ ದೈನಂದಿನ ದಿನಚರಿಯನ್ನು ಒದಗಿಸುವ ಸಲುವಾಗಿ ದಾದಿಯು, ಒಬ್ಬ ಬಾಣಸಿಗ, ಸಹಾಯಕಿಯರು, ಹೌಸ್‌ಕೀಪರ್ ಮತ್ತು ಖಾಸಗಿ ಭದ್ರತೆಯನ್ನು ಒಳಗೊಂಡಂತೆ ಮೀಸಲಾದ ತಂಡದೊಂದಿಗೆ ವ್ಯವಹರಿಸಬೇಕಾಗುತ್ತದೆ. ಈ ತಂಡದೊಂದಿಗೆ ಸಮನ್ವಯತೆಯನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಜತೆಗೆ, ಹುಡುಗರ ಆಟದ ಪ್ರದೇಶಗಳು, ಆಟಿಕೆಗಳು ಮತ್ತು ಬಟ್ಟೆಗಳನ್ನು ಉತ್ತೇಜಿಸುವ ಮತ್ತು ಸಂಘಟಿತ ವಾತಾವರಣವನ್ನು ಬೆಳೆಸಲು ಕ್ಯುರೇಟ್ ಮಾಡುವುದೂ ಕೂಡ ಜವಾಬ್ದಾರಿಯಾಗಿರುತ್ತದೆ ಎಂದು ಜಾಹೀರಾತಿನಲ್ಲಿ ತಿಳಿಸಲಾಗಿದೆ.

ಹಾಗೆ ನೋಡಿದರೆ, ಎಸ್ಟೇಟ್‌ಜಾಬ್ಸ್ ಡಾಟ್ ಕಾಮ್‍‌ನಲ್ಲಿ ನೀಡಿರುವ ಜಾಹೀರಾತಿನಲ್ಲಿ ಕ್ಲೈಂಟ್ ಹೆಸರು ಎಲ್ಲೂ ನಮೂದಿಸಿಲ್ಲ. ಆದರೂ, ವಿವರಗಳನ್ನು ವಿಶ್ಲೇಷಿಸಿದರೆ ಖಂಡಿತವಾಗಿಯೂ ಅದು ವಿವೇಕ ರಾಮಸ್ವಾಮಿ ಅವರ ಕುಟುಂಬದತ್ತ ಬೆರಳು ಮಾಡುತ್ತದೆ ಎಂದು ಬಿಸಿನೆಸ್‌ ಇನ್‌ಸೈಡರ್ ವರದಿ ಮಾಡಿದೆ.

ಈ ಸುದ್ದಿಯನ್ನೂ ಓದಿ: Vivek Ramaswamy: ಅಮೆರಿಕ ಚುನಾವಣೆ ಮೊದಲೇ ಭಾರತ ಮೂಲದ ವಿವೇಕ್‌ ರಾಮಸ್ವಾಮಿಯನ್ನು ಹೊಗಳಿದ ಎಲಾನ್‌ ಮಸ್ಕ್

ರಾಮಸ್ವಾಮಿ ಅವರ ಪ್ರಚಾರದ ವಕ್ತಾರರಾದ ಟ್ರಿಸಿಯಾ ಮೆಕ್‌ಲಾಫ್ಲಿನ್ ಅವರು ಈ ಹಿಂದೆ ಸುದ್ದಿ ಪೋರ್ಟಲ್‌ ಮಾಹಿತಿ ನೀಡಿ, ಲಿವ್-ಇನ್ ದಾದಿಯರ ಕಲ್ಪನೆಯೊಂದಿಗೆ ಕುಟುಂಬವು ಹೊಂದಾಣಿಕೆಯಾಗುವುದಿಲ್ಲ ಎಂದು ಹೇಳಿದ್ದರು. 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕ್ ಪಕ್ಷದ ಅಭ್ಯರ್ಥಿಯಾಗುವುದಕ್ಕೆ ವಿವೇಕ್ ರಾಮಸ್ವಾಮಿ ಅವರು ತಯಾರಿ ನಡೆಸಿದ್ದಾರೆ.

ಭಾರತೀಯ ಮೂಲದ ರಿಪಬ್ಲಿಕನ್ ಅಭ್ಯರ್ಥಿಯನ್ನು(ವಿವೇಕ್ ರಾಮಸ್ವಾಮಿ) ಒಮ್ಮೆ ಟೈಮ್ ಮ್ಯಾಗಜೀನ್ “ಟ್ರಂಪ್ ಅವರ ಸ್ಪಷ್ಟ ಉತ್ತರಾಧಿಕಾರಿ” ಎಂದು ಕರೆದಿತ್ತು. ಆಗಸ್ಟ್ 23 ರಂದು ನಡೆದ ಅವರ ಮೊದಲ ರಿಪಬ್ಲಿಕನ್ ಅಧ್ಯಕ್ಷೀಯ ಪ್ರಾಥಮಿಕ ಚರ್ಚೆಯ ನಂತರ ಅವರು ಅಮೆರಿಕದಲ್ಲಿ ಸಾಕಷ್ಟು ಗಮನ ಸೆಳೆದಿದ್ದಾರೆ.

ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version