Site icon Vistara News

India Canada Row: ಥಂಡಾ ಹೊಡೆದ ಕೆನಡಾ ಪಿಎಂ! ಭಾರತದೊಂದಿಗೆ ಇನ್ನು ಜಗಳ ಮಾಡಲ್ಲ ಎಂದ ಟ್ರೂಡೋ

Justin Trudeau

ಟೊರೊಂಟೊ, ಕೆನಡಾ: ಸದ್ಯ ಕೆನಡಾವು ಭಾರತದೊಂದಿಗೆ (Canada and India Relations) ಅತ್ಯಂತ ಸವಾಲಿನ ಸಮಯವನ್ನು ಎದುರಿಸುತ್ತಿದೆ. ಹಾಗಿದ್ದೂ, ರಚನಾತ್ಮಕ ಸಂಬಂಧವನ್ನು (Constructive Relations) ಮುಂದುರಿಸುತ್ತಿರುವುದಾಗಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ (Canada PM Justin Trudeau) ಅವರು ಮಂಗಳವಾರ ಹೇಳಿದ್ದಾರೆ. ಖಲಿಸ್ತಾನಿ ಪ್ರತ್ಯೇಕತಾವಾದಿಯ ಹತ್ಯೆಗೆ ಸಂಬಂಧಿಸಿದಂತೆ ಭಾರತ ಮತ್ತು ಕೆನಡಾ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಟ್ರೂಡೊ ಅವರ ಈ ಹೇಳಿಕೆಯು ಮಹತ್ವ ಪಡೆದುಕೊಂಡಿದೆ(India Canada Row).

ಒಟ್ಟಾವಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ ಅವರು, ಭಾರತದಲ್ಲಿ ಕೆನಾಡ ರಾಜತಾಂತ್ರಿಕರನ್ನು ಹೊಂದಿರುವುದು ಮಹತ್ವದ್ದಾಗಿದೆ ಎಂದು ಹೇಳಿದರು. ದಿಲ್ಲಿಯ ಕೆನಡಾ ರಾಜತಾಂತ್ರಿಕ ಕಚೇರಿಯಲ್ಲಿರುವ 62 ಸಿಬ್ಬಂದಿಯ ಪೈಕಿ 41 ಜನರನ್ನು ವಾಪಸ್ ಕೆನಡಾಗೆ ಕರೆಯಿಸಿಕೊಳ್ಳುವಂತೆ ಭಾರತ ಸರ್ಕಾರವು ಹೇಳಿದೆ ಎಂಬ ವರದಿಯ ಹಿನ್ನೆಲೆಯಲ್ಲಿ ಟ್ರೂಡೋ ಅವರು ಹೇಳಿಕೆಯನ್ನು ನೀಡಿದ್ದಾರೆ.

ನಿಸ್ಸಂಶಯವಾಗಿ, ನಾವು ಇದೀಗ ಭಾರತದೊಂದಿಗೆ ಅತ್ಯಂತ ಸವಾಲಿನ ಸಮಯವನ್ನು ಎದುರಿಸುತ್ತಿದ್ದೇವೆ ಎಂದು ಹೇಳಿದ ಪ್ರಧಾನಿ ಟ್ರೂಡೋ ಅವರು, ರಾಜತಾಂತ್ರಿಕ ಸಿಬ್ಬಂದಿಯನ್ನು ಕಡಿಮೆ ಮಾಡುವಂತೆ ದಿಲ್ಲಿ ಹೇಳಿದೆ ಎಂಬ ಮಾಧ್ಯಮ ವರದಿಯ ಬಗ್ಗೆ ಯಾವುದೇ ಟಿಪ್ಪಣಿಯನ್ನು ಅವರು ಮಾಡಲಿಲ್ಲ.

ಈ ಸುದ್ದಿಯನ್ನೂ ಓದಿ: India Canada Row: ʼಇಷ್ಟು ರಾಜತಾಂತ್ರಿಕರು ಇಲ್ಲಿ ಬೇಕಿಲ್ಲ, ವಾಪಸ್‌ ಕರೆಸಿಕೊಳ್ಳಿ!ʼ ಕೆನಡಾಕ್ಕೆ ಮತ್ತೆ ಭಾರತ ತಪರಾಕಿ

ದಿಲ್ಲಿಯ ಕ್ರಮಕ್ಕೆ ಪ್ರತಿಯಾಗಿ ಕೆನಡಾ ಸರ್ಕಾರವು, ಭಾರತೀಯ ರಾಜತಾಂತ್ರಿಕರನ್ನು ಕಿತ್ತು ಹಾಕಲಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಈಗಾಗಲೇ ಹೇಳಿದಂತೆ ನಾವು ಸಮಸ್ಯೆಯನ್ನು ಹೆಚ್ಚಿಸಲು ಹೋಗುವುದಿಲ್ಲ. ಈ ಅತ್ಯಂತ ಕಷ್ಟದ ಸಮಯದಲ್ಲಿ ಭಾರತದೊಂದಿಗೆ ರಚನಾತ್ಮಕ ಸಂಬಂಧವನ್ನು ಮುಂದುವರಿಸುವಲ್ಲಿ ನಾವು ಮುಖ್ಯವಾದ ಕೆಲಸವನ್ನು ಮಾಡಲಿದ್ದೇವೆ ಎಂದು ಹೇಳಿದರು.

ಜೂನ್ 18ರಂದು ನಡೆದ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆನ್ಸಿಗಳ ಕೈವಾಡ ಇರುವ ಸಾಧ್ಯತೆ ಇದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ ಅವರು ಕಳೆದ ತಿಂಗಳು ಹೇಳಿಕೆ ನೀಡಿದ್ದರು. ಇದಾದ ಬೆನ್ನಲ್ಲೇ ಭಾರತ ಮತ್ತು ಕೆನಡಾ ಮಧ್ಯೆ ರಾಜತಾಂತ್ರಿಕ ಸಂಘರ್ಷ ಏರ್ಪಟ್ಟಿತ್ತು. ಭಾರತವು ಟ್ರೂಡೋ ಆರೋಪಕ್ಕೆ ಪ್ರತಿಕ್ರಿಯಿಸಿ, ಇದೊಂದು ಆಧಾರ ರಹಿತ ಆರೋಪ ಎಂದು ಹೇಳಿತ್ತು. ಅಲ್ಲದೇ ಉಭಯ ರಾಷ್ಟ್ರಗಳು ರಾಜತಾಂತ್ರಿಕ ಅಧಿಕಾರಿಗಳನ್ನು ವಜಾ ಮಾಡುವ ಮೂಲಕ ಸ್ಪರ್ಧೆಗೆ ಇಳಿದಿದ್ದವು.

ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version