Site icon Vistara News

Jet Suit Race: ವಿಶ್ವದ ಮೊದಲ ಜೆಟ್‌ ಸೂಟ್‌ ರೇಸ್‌ಗೆ ದುಬೈ ಸಾಕ್ಷಿ; ಏನಿದು ಅದ್ಭುತ ರೇಸ್?‌

Jet Suit Race

Watch: World's First Jet Suit Race In Dubai Featuring 'Iron Man' Pilots

ಅಬುಧಾಬಿ: ಗಗನಚುಂಬಿ ಕಟ್ಟಡಗಳು, ಮೈನವಿರೇಳಿಸುವ ಪ್ರವಾಸಿ ತಾಣಗಳು, ಐಷಾರಾಮಿ ಮೂಲ ಸೌಕರ್ಯಗಳಿಗೆ ಹೆಸರಾಗಿರುವ ದುಬೈನಲ್ಲಿ (Dubai) ವಿಶ್ವದ ಮೊದಲ ಜೆಟ್‌ ಸೂಟ್‌ ರೇಸ್‌ (Jet Suit Race) ಕೂಡ ಅದ್ಭುತವಾಗಿ ನಡೆದಿದೆ. ದುಬೈ ಸ್ಪೋರ್ಟ್ಸ್‌ ಕೌನ್ಸಿಲ್‌ ಸಹಯೋಗದಲ್ಲಿ ಗ್ರ್ಯಾವಿಟಿ ಇಂಡಸ್ಟ್ರೀಸ್‌ ಸಂಸ್ಥೆ (Gravity Industries) ಆಯೋಜಿಸಿದ್ದ ರೇಸ್‌ ಈಗ ಜಾಗತಿಕವಾಗಿ ಗಮನ ಸೆಳೆದಿದೆ. ಅಷ್ಟರಮಟ್ಟಿಗೆ ದುಬೈ ಈ ರೇಸ್‌ಅನ್ನು ಅದ್ಭುತವಾಗಿ ಆಯೋಜಿಸಿದೆ.

ಏನಿದು ಜೆಟ್‌ ಸೂಟ್‌ ರೇಸ್?‌

ವಿಮಾನಗಳ ಪೈಲಟ್‌ಗಳು ಧರಿಸುವ ಸೂಟ್‌ ಧರಿಸಿ, ವಿಮಾನದ ಎಂಜಿನ್‌ಗಳನ್ನು ಬೆನ್ನಿಗೆ ಕಟ್ಟಿಕೊಂಡು, ಸೂಪರ್‌ ಮ್ಯಾನ್‌ಗಳ ರೀತಿ ಹಾರಾಡುವುದೇ ಜೆಟ್‌ ಸೂಟ್‌ ರೇಸ್‌ ಆಗಿದೆ. ಗಗನಚುಂಬಿ ಕಟ್ಟಡಗಳ ಮಧ್ಯೆ ಹಕ್ಕಿಗಳಂತೆ ಹಾರಾಡುವ ದೃಶ್ಯಗಳಿರುವ, ಜಾಗತಿಕ ಖ್ಯಾತಿಯ ಐರನ್‌ ಮ್ಯಾನ್‌ ಸಿನಿಮಾದಿಂದ ಸ್ಫೂರ್ತಿಗೊಂಡು ಜೆಟ್‌ ಸೂಟ್‌ ರೇಸ್‌ ಆಯೋಜಿಸಲಾಗಿದೆ. ದುಬೈ ಅರಸ ಹಮ್ದಾನ್‌ ಬಿನ್‌ ಮೊಹಮ್ಮದ್‌ ಅಲ್‌ ಮಕ್ತೌಮ್‌ ಅವರ ಕಂಪನಿಯಾದ ಸ್ಕೈಡೈವ್‌ ದುಬೈ ರನ್‌ವೇ ಬಳಸುವ ಮೂಲಕ ರೇಸ್‌ಅನ್ನು ಆಯೋಜಿಸಲಾಗಿದೆ.

ಜೆಟ್‌ ಸೂಟ್‌ಗಳು ಸುಮಾರು 1,500 ಹಾರ್ಸ್‌ಪವರ್‌ (HP) ಸಾಮರ್ಥ್ಯದ ಎಂಜಿನ್‌ಗಳನ್ನು ಕಟ್ಟಿಕೊಂಡು ಹಾರುವ ಪ್ರಕ್ರಿಯೆಯು ಮೈನವಿರೇಳಿಸುವಂತಿದೆ. ಈ ಜೆಟ್‌ ಸೂಟ್‌ಗಳನ್ನು ಧರಿಸಿಕೊಂಡು ಗಂಟೆಗೆ ಸುಮಾರು 128 ಕಿಲೋಮೀಟರ್‌ ವೇಗದಲ್ಲಿ ಸಂಚರಿಸುತ್ತವೆ. ನುರಿತ ಪೈಲಟ್‌ಗಳು 12 ದಿನ ತರಬೇತಿ ಪಡೆದು ರೇಸ್‌ನಲ್ಲಿ ಪಾಲ್ಗೊಂಡಿದ್ದಾರೆ.

ಇದನ್ನೂ ಓದಿ: Varthur Santhosh: ಹಳ್ಳಿಕಾರ್ ರೇಸ್‌ಗೆ ಸಕಲ ಸಿದ್ಧತೆ; ಸುದೀಪಣ್ಣ ಬಂದಾಗ ಇದೇ ಜಾಕೆಟ್‌ ಎಂದ ವರ್ತೂರ್‌!

ಗೆದ್ದಿದ್ದು ಯಾರು?

ಬ್ರಿಟನ್‌ನ ಇಸ್ಸಾ ಕಾಲ್ಫೋನ್‌ ಅವರು ಜೆಟ್‌ ಸೂಟ್‌ ರೇಸ್‌ನಲ್ಲಿ ಗೆಲುವು ಸಾಧಿಸಿದ್ದಾರೆ. “ಜೆಟ್‌ ಸೂಟ್‌ ಧರಿಸಿ ಟೇಕಾಫ್‌ ಆಗುವಾಗ ಸ್ವಲ್ಪ ಭಯವಾಯಿತು. ಇದಾದ ಬಳಿಕ ಆತ್ಮವಿಶ್ವಾಸದಲ್ಲಿ ಮುನ್ನುಗ್ಗಿ ಗೆಲುವು ಸಾಧಿಸಿದೆ” ಎಂದು ಇಸ್ಸಾ ಕಾಲ್ಫೋನ್‌ ಮಾಹಿತಿ ನೀಡಿದ್ದಾರೆ. ಹಾರಾಟದ ಅನುಭವದ ಕುರಿತು ಗ್ರ್ಯಾವಿಟಿ ಇಂಡಸ್ಟ್ರೀಸ್‌ನ ಚೀಫ್‌ ಟೆಸ್ಟ್‌ ಪೈಲಟ್‌ ಆಗಿರುವ ರಿಚರ್ಡ್‌ ಬ್ರೌನಿಂಗ್‌ ಅವರು ಮಾಹಿತಿ ನೀಡಿದ್ದಾರೆ. “ನಾನು ತುಂಬ ವರ್ಷಗಳಿಂದ ಹಾರುವ ಕನಸು ಕಂಡಿದ್ದೆ. ಅದು ಈಗ ನನಸಾಗಿದೆ. ಇದೊಂದು ಅದ್ಭುತ ಅನುಭವ” ಎಂದಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version