Site icon Vistara News

Werewolf Syndrome: ಮೈತುಂಬ ಕೂದಲಿರುವ ಮಗು ಜನನ; ಮಹಿಳೆ ಈ ಮಾಂಸ ತಿಂದಿದ್ದೇ ಕಾರಣ?

werewolf syndrome

ಫಿಲಿಪ್ಪೀನ್ಸ್: ಮುಖ (face), ಮೈತುಂಬಾ (full body) ಕೂದಲು (hair) ಬೆಳೆದ ಎರಡು ವರ್ಷದ ಮಗು ಕರಡಿಯಂತೆ ಕಾಣುತ್ತಿದೆ. ಇದನ್ನು ನೋಡಿ ಕಣ್ಣೀರು ಹಾಕುತ್ತಿರುವ ತಾಯಿ, ಇದಕ್ಕೆ ತಾನೇ ಕಾರಣ ಎಂದು ತನ್ನನ್ನು ತಾನೇ ದೂಷಿಸಿಕೊಳ್ಳುತ್ತಿದ್ದಾಳೆ. ಗರ್ಭಿಣಿಯಾಗಿದ್ದಾಗ (pragnecy) ಕಡು ಬಯಕೆಯನ್ನು ನಿಯಂತ್ರಿಸಲಾಗದೆ ಕಾಡು ಬೆಕ್ಕಿನ (Cat Meat) ಮಾಂಸ ತಿಂದುದರಿಂದ ತನ್ನ ಮಗುವಿಗೆ ವೇರ್‌ವುಲ್ಫ್ ಸಿಂಡ್ರೋಮ್ (werewolf syndrome) ಉಂಟಾಗಿದೆ ಎನ್ನುತ್ತಿದ್ದಾಳೆ.

ಹಾರ್ಮೋನ್ ತೊಂದರೆಯಿಂದ ಸಾಮಾನ್ಯವಾಗಿ ಮನುಷ್ಯನಲ್ಲಿ ಅಸಹಜ ಕೂದಲು ಬೆಳೆಯುವುದು ಸಾಮಾನ್ಯ. ಆದರೆ ಫಿಲಿಪ್ಪೀನ್ಸ್ ನ ( Philippines) ಮನಿಲಾದಲ್ಲಿ (manila) ಜನಿಸಿದ ಮಗು ಜರೆನ್ ಗಮೊಂಗನ್ ಗೆ (Jaren Gamongan) ದೇಹ ಹಾಗೂ ಮುಖದ ತುಂಬಾ ದಟ್ಟ ಕೂದಲು ಬೆಳೆದಿದೆ. ಈಗ ಮಗುವಿಗೆ ಎರಡು ವರ್ಷವಾಗಿದ್ದು, ಇದಕ್ಕೆ ತಾವು ಗರ್ಭಿಣಿಯಾಗಿದ್ದಾಗ ಕಾಡು ಬೆಕ್ಕಿನ ಮಾಂಸವನ್ನು ತಿಂದಿದ್ದೇ ಕಾರಣ ಎನ್ನುತ್ತಾರೆ ಮಗುವಿನ ತಾಯಿ ಅಲ್ಮಾ ಗಮೊಂಗನ್.


ಅಲ್ಮಾ ಗಮೊಂಗನ್ ಅವರಿಗೆ ಗರ್ಭಿಣಿಯಾಗಿದ್ದಾಗ ಸಾಮಾನ್ಯವಾಗಿ ಪರ್ವತ ಪ್ರದೇಶದಲ್ಲಿ ಕಾಣಸಿಗುವ ಕಾಡು ಬೆಕ್ಕಿನ ಮಾಂಸ ತಿನ್ನಬೇಕು ಎನ್ನುವ ತೀವ್ರ ಬಯಕೆಯಾಗುತ್ತದೆ. ಅದಕ್ಕಾಗಿ ಅವರು ಹಳ್ಳಿಯವರಿಗೆ ಹೇಳಿ ಕಾಡು ಬೆಕ್ಕಿನ ಮಾಂಸವನ್ನು ತರಿಸಿ ಅದನ್ನು ಪದಾರ್ಥ ಮಾಡಿ ತಿಂದಿದ್ದರು. ಈ ಮೂಲಕ ತಮ್ಮ ಬಯಕೆಯನ್ನು ಈಡೇರಿಸಿಕೊಂಡಿದ್ದಾರೆ. ಈ ಕಾಡು ಬೆಕ್ಕಿನ ಮಾಂಸವನ್ನು ತಿಂದ ಕಾರಣ ತಮ್ಮ ಮಗವಿಗೆ ಶಾಪ ತಟ್ಟಿದೆ. ಹೀಗಾಗಿ ಮಗುವಿನ ಮೈ ತುಂಬಾ ಕೂದಲು ಬೆಳೆದಿದೆ ಎಂದು ಸ್ಥಳೀಯರು ಹೇಳಿದ್ದನ್ನು ಗಂಭೀರವಾಗಿ ತೆಗೆದುಕೊಂಡಿರುವ ಅಲ್ಮಾ ಮಗುವಿಗೆ ಹೀಗಾಗಲು ತಾವೇ ಕಾರಣ ಎಂದು ದುಃಖಿಸಿಕೊಂಡಿದ್ದರು.

ಇದನ್ನೂ ಓದಿ: Motherhood Myths: ತಾಯ್ತನದ ವೇಳೆ ಎದುರಾಗುವ ತಪ್ಪು ಕಲ್ಪನೆಗಳಿಗೆ ಇಲ್ಲಿವೆ ಉತ್ತರ

ಏನಾಗಿದೆ ಮಗುವಿಗೆ?

ಜರೆನ್ ಗಮೊಂಗನ್ ನ ತಲೆ ಕೂದಲಿನಂತೆ ಮುಖ, ಕುತ್ತಿಗೆ, ಬೆನ್ನು ಮತ್ತು ತೋಳುಗಳಲ್ಲೂ ಕೂದಲು ಬೆಳೆದಿದೆ. ಇದಕ್ಕಾಗಿ ಅವರು ವೈದ್ಯರನ್ನು ಸಂಪರ್ಕಿಸಿದ್ದಾರೆ. ಆದರೆ ಇದಕ್ಕೆ ಯಾವುದೇ ಚಿಕಿತ್ಸೆ ಇಲ್ಲ. ಲೇಸರ್ ಚಿಕಿತ್ಸೆ ಮೂಲಕ ಕೂದಲನ್ನು ತೆಗೆಯಲು ಪ್ರಯತ್ನಿಸಬಹುದು ಎಂದು ಹೇಳಿದ್ದಾರೆ.


ಕಾರಣ ಏನು ?

ಮಗುವಿನಲ್ಲಿ ಈ ರೀತಿ ಅಸಹಜ ಕೂದಲು ಬೆಳೆಯಲು ʼವೇರ್‌ವುಲ್ಫ್‌ ಸಿಂಡ್ರೋಮ್ʼ ಎಂಬ ಕಾಯಿಲೆಯೇ ಕಾರಣ. ಇದಕ್ಕೂ ಕಾಡಿನ ಬೆಕ್ಕಿನ ಮಾಂಸಕ್ಕೂ ಯಾವುದೇ ಸಂಬಂಧವಿಲ್ಲ. ಜರೆನ್ ವೇರ್‌ವುಲ್ಫ್‌ ಅಥವಾ ಹೈಪರ್ಟೀಕೋಸಿಕ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದು, ಈ ಕಾರಣದಿಂದಲೇ ಆತನ ಮುಖದಲ್ಲಿ ದಟ್ಟವಾದ ಕೂದಲು ಬೆಳೆಯುತ್ತಿದೆ ಎನ್ನುತ್ತಾರೆ ವೈದ್ಯರು.

ವೆರ್ವುಲ್ಫ್ ಸಿಂಡ್ರೋಮ್ ಎಂದರೇನು ?

ಇದು ಅತ್ಯಂತ ಅಪರೂಪದ ಸಿಂಡ್ರೋಮ್. ಮಧ್ಯ ಯುಗದಿಂದ ವಿಶ್ವದಾದ್ಯಂತ ಕೇವಲ 50 ರಿಂದ 100 ಪ್ರಕರಣಗಳಷ್ಟೇ ವರದಿಯಾಗಿದೆ. ಸಾಮಾನ್ಯವಾಗಿ ಒಂದು ಬಿಲಿಯನ್ ಜನರಲ್ಲಿ ಒಬ್ಬರಿಗೆ ಕಾಣಿಸಿಕೊಳ್ಳುತ್ತದೆ. ಈ ಸಿಂಡ್ರೋಮ್ ಗೆ ಯಾವುದೇ ಚಿಕಿತ್ಸೆ ಇಲ್ಲದಿದ್ದರೂ ಲೇಸರ್ ಹೇರ್ ರಿಮೂವಲ್ ಟ್ರೀಟ್ಮೆಂಟ್ ಮೂಲಕ ಮುಖದ ಮೇಲಿನ ಈ ಕೂದಲನ್ನು ತೆಗೆಯಬಹುದಾಗಿದೆ ಎಂದು ಡಾ. ರಾವೆಲಿಂಡಾ ಸೊರಿಯಾನೊ ಪೆರೆಜ್ ಹೇಳಿದ್ದಾರೆ.


ತಾಯಿಗೆ ಆತಂಕ

ಜರೆನ್ ಈಗ ಸಣ್ಣವನು. ಇನ್ನು ಅವನು ಶಾಲೆಗೆ ಹೋಗಬೇಕು. ಅಲ್ಲಿ ಅವನು ವಿಚಿತ್ರ ಸನ್ನಿವೇಶವನ್ನು ಎದುರಿಸಬೇಕಾಗುತ್ತದೆ. ಇದರಿಂದ ಆತ ಹಿಂಸೆಗೆ ಒಳಗಬಹುದು ಎಂದು ಅಲ್ಮಾ ಆತಂಕ ವ್ಯಕ್ತಪಡಿಸುತ್ತಾರೆ.
ನನಗಿದ್ದ ಕಡು ಬಯಕೆಯನ್ನು ನಿಯಂತ್ರಿಸಲಾಗದೆ ಅವನು ಹುಟ್ಟಿದಾಗ ತನ್ನನ್ನು ತಾನೇ ದೂಷಿಸಿಕೊಂಡೆ. ತುಂಬಾ ಅಪರಾಧಿ ಭಾವ ಕಾಡಿತ್ತು. ಆದರೆ ಇತ್ತೀಚೆಗಷ್ಟೇ ವೈದ್ಯರು ಇದಕ್ಕೆ ಸ್ಪಷ್ಟ ಕಾರಣ ಕೊಟ್ಟ ಮೇಲೆ ನಿಧಾನವಾಗಿ ದುಃಖದಿಂದ ಹೊರಬರುತ್ತಿದ್ದೇನೆ. ನನ್ನ ತಪ್ಪಿನಿಂದ ಹೀಗಾಗಿಲ್ಲ ಎನ್ನುವ ಕೊಂಚ ನೆಮ್ಮದಿ ಸಿಕ್ಕಿದರೂ ಮಗುವಿನ ಪರಿಸ್ಥಿತಿ ನೋಡುವಾಗ ದುಃಖವಾಗುತ್ತದೆ ಎನ್ನುತ್ತಾರೆ.

ಹೇಗಿದೆ ಮಗು ?

ಮೂವರು ಮಕ್ಕಳ ತಾಯಿಯಾಗಿರುವ ಅಲ್ಮಾ ಅವರ ಮಧ್ಯದ ಮಗು ಜರೆನ್ ಗೆ ಮಾತ್ರ ಈ ಸಮಸ್ಯೆ ಕಾಡಿದೆ. ಆತ ಅಕ್ಕ ಮತ್ತು ಕಿರಿಯ ಸಹೋದರನೊಂದಿಗೆ ಚೆನ್ನಾಗಿ ಹೊಂದಿಕೊಂಡಿದ್ದಾನೆ. ಜರೆನ್ ಸಂತೋಷ ಮತ್ತು ತಮಾಷೆಯ ಹುಡುಗ.

ಕಾಡುವ ಸಮಸ್ಯೆ ಏನು ?

ಹವಾಮಾನವು ಬಿಸಿಯಾದಾಗ ಜರೆನ್ ಗೆ ತುರಿಕೆ, ದದ್ದುಗಳು ಕಾಣಿಸುತ್ತವೆ. ಈ ಸಂದರ್ಭದಲ್ಲಿ ಆತನಿಗೆ ಸ್ನಾನ ಮಾಡಿಸುವಾಗ ಕೂದಲನ್ನು ಕತ್ತರಿಸಲು ಪ್ರಯತ್ನಿಸಿದ್ದೇವೆ. ಆದರೆ ಅದು ಮತ್ತೆ ಉದ್ದವಾಗಿ ಮತ್ತು ಹೆಚ್ಚು ದಪ್ಪವಾಗಿ ಬೆಳೆಯಲು ಪ್ರಾರಂಭವಾಯಿತು. ಆದ್ದರಿಂದ ನಾವು ಅದನ್ನು ಮಾಡುವುದನ್ನು ನಿಲ್ಲಿಸಿದ್ದೇವೆ ಎನ್ನುತ್ತಾರೆ ತಾಯಿ ಅಲ್ಮಾ.

ವೈದ್ಯರು ಏನು ಹೇಳುತ್ತಾರೆ ?

ಜರೆನ್ ಅವರನ್ನು ಪರೀಕ್ಷಿಸಿರುವ ಡಾ. ರಾವೆಲಿಂಡಾ ಸೊರಿಯಾನೊ ಪೆರೆಜ್, ಇದು ಆನುವಂಶಿಕ ಕಾಯಿಲೆ ಎಂದು ನಾವು ನಂಬುತ್ತೇವೆ. ಆದರೆ ಇದು ಬಹಳ ಅಪರೂಪ. ಕೇವಲ ಒಂದು ಶತಕೋಟಿ ಜನರಲ್ಲಿ ಒಬ್ಬರಿಗೆ ಮಾತ್ರ ಇದು ಬರುತ್ತದೆ. ಇದಕ್ಕೆ ಚಿಕಿತ್ಸೆ ಇಲ್ಲದಿದ್ದರೂ ಲೇಸರ್ ಚಿಕಿತ್ಸೆಯಿಂದ ಕೂದಲು ತೆಗೆಯಬಹುದು. ನಾಲ್ಕರಿಂದ ಆರು ವಾರಗಳಲ್ಲಿ ಹತ್ತು ಸೆಷನ್‌ಗಳನ್ನು ಮಾಡಲು ಪ್ರಯತ್ನಿಸುತ್ತೇವೆ ಮತ್ತು ಬಳಿಕ ಗಮನಿಸಲಾಗುತ್ತದೆ. ಪ್ರತಿ ಸೆಷನ್ ಗೆ ಸುಮಾರು 2,500 ಫಿಲಿಪೈನ್ ಪೆಸೊಸ್ ಅಂದರೆ ಭಾರತದ ಕರೆನ್ಸಿ ಪ್ರಕಾರ ಸುಮಾರು 3,700 ರೂಪಾಯಿ ಖರ್ಚಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ ಎಂದು ಅಲ್ಮಾ ತಿಳಿಸಿದ್ದಾರೆ.

Exit mobile version