ವಾಷಿಂಗ್ಟನ್: ಕೇವಲ 24 ವರ್ಷದ ಭಾರತೀಯ ಮೂಲದ ಜೆನ್ ಜಿ(ಜನರೇಷನ್ ಜೆಡ್ Gen Z) ಅಶ್ವಿನ್ ರಾಮಸ್ವಾಮಿ (Aswhin Ramaswami)ಅವರು ಅಮೆರಿಕದ ಸಂಸತ್ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಮೂಲಕ ಜಾರ್ಜಿಯಾದಿಂದ ಸೆನೆಟರ್ (Senator From Georgia) ಆಗುವ ಪ್ರಯತ್ನದಲ್ಲಿದ್ದಾರೆ. 1997ರಿಂದ 2012 ನಡುವೆ ಜನಿಸಿದವರನ್ನು ಜನರೇಷನ್ ಜೆಡ್ (Generation Z) ಕರೆಯಲಾಗುತ್ತದೆ. ಇವರನ್ನು ಝೂಮರ್ಸ್ (Zoomers) ಎಂದೂ ಕರೆಯಲಾಗುತ್ತದೆ.
ಸಮುದಾಯಕ್ಕೆ ಸೇವೆ ಸಲ್ಲಿಸುವ ಗುರಿಯಯೊಂದಿಗೆ ಜಾನ್ಸ್ ಕ್ರೀಕ್, ಸುವಾನೀ, ಆಲ್ಫರೆಟ್ಟಾ, ಕಮ್ಮಿಂಗ್, ಶುಗರ್ ಹಿಲ್ ಮತ್ತು ಬುಫೋರ್ಡ್‌ನ ಭಾಗಗಳನ್ನು ಒಳಗೊಂಡಿರುವ ಜಾರ್ಜಿಯಾದ 48ನೇ ಜಿಲ್ಲೆಯಲ್ಲಿ ಸೆನೆಟ್‌ಗೆ ಡೆಮಾಕ್ರಟಿಕ್ ಪಕ್ಷದಿಂದ ರಾಮಸ್ವಾಮಿ ಸ್ಪರ್ಧಿಸುತ್ತಿದ್ದಾರೆ. ಸದ್ಯಕ್ಕೆ ಈ ಕ್ಷೇತ್ರವನ್ನು ರಿಪಬ್ಲಿಕ್ ಪಕ್ಷದ ಶಾವನ್ ಸ್ಟಿಲ್ ಅವರು ಪ್ರತಿನಿಧಿಸುತ್ತಿದ್ದಾರೆ. 2020 ಚುನಾವಣೆ ಫಲಿತಾಂಶಗಳನ್ನು ಬುಡಮೇಲು ಆರೋಪವನ್ನು ಡೋನಾಲ್ಡ್ ಟ್ರಂಪ್ ಅವರೊಂದಿಗೆ ಇವರು ಎದುರಿಸುತ್ತಿದ್ದಾರೆ.
1990ರಲ್ಲಿ ತಮಿಳುನಾಡಿನಿಂದ ಅಮೆರಿಕಕ್ಕೆ ವಲಸೆ ಬಂದ ಪೋಷಕರಿಗೆ ಜನಿಸಿದ ರಾಮಸ್ವಾಮಿ ಅವರು 2021ರಲ್ಲಿ ಸ್ಟ್ಯಾನ್‌ಫೋರ್ಡ್‌ನಿಂದ ಪದವಿ ಪಡೆದರು, ಅಲ್ಲಿ ಅವರು ಕಂಪ್ಯೂಟರ್ ವಿಜ್ಞಾನವನ್ನು ಅಧ್ಯಯನ ಮಾಡಿದರು.
ನಾನು ವಲಸಿಗರ ಮಗು. ಆದರೆ, ನಾನು ಜಾನ್ಸ್ ಕ್ರೀಕ್‌ನಲ್ಲಿ ಹುಟ್ಟಿ ಬೆಳೆದೆ. ದೀರ್ಘಕಾಲದವರೆಗೆ, ನನ್ನ ಸಮುದಾಯಕ್ಕೆ ನಾನು ಹೇಗೆ ಸೇವೆ ಸಲ್ಲಿಸಬಹುದು ಎಂದು ಯೋಚಿಸುತ್ತಿದ್ದೆ. ನಾನು ಸಂಕುಚಿತವಾಗಿ ಉಳಿಯಲು ಬಯಸುವುದಿಲ್ಲ. ಸಮಾಜಕ್ಕೆ ನಾನು ಏನಾದರೂ ವಾಪಸ್ ನೀಡಲು ಬಯಸುತ್ತೇನೆ ಎನ್ನುತ್ತಾರೆ 24 ವರ್ಷದ ರಾಮಸ್ವಾಮಿ ಅವರು. ನನಗೆ ಬಲವಾದ ಬದ್ಧತೆ ಇದೆ. ಜಾರ್ಜಿಯಾ ಸ್ಟೇಟ್ ಸೆನೆಟ್‌ನ ಮೊದಲ ಭಾರತೀಯ ಅಮೆರಿಕನ್ ಮತ್ತು ಜನರಲ್ ಜೆಡ್ ಎಂಬ ವಿಷಯದಲ್ಲಿ ನಾನು ಅಡೆತಡೆಗಳನ್ನು ಮೀರುತ್ತೇನೆ. ಹಾಗಾಗಿ ನಾನು ರಾಜಕೀಯಕ್ಕೆ ಹೊಸ ಧ್ವನಿಯನ್ನು ತರುತ್ತೇನೆ ಎಂದು ಅವರು ಹೇಳಿದರು.
ರಾಮಸ್ವಾಮಿ ಅವರ ತಂದೆ ತಾಯಿ ಇಬ್ಬರೂ ಐಟಿ ವಲಯದಿಂದ ಬಂದಿದ್ದಾರೆ. ಭಾರತೀಯ ಸಂಸ್ಕೃತಿ ತತ್ವಶಾಸ್ತ್ರದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದಾರೆ. ರಾಮಸ್ವಾಮಿ ಅವರಿಗೂ ರಾಮಾಯಣ, ಮಹಾಭಾರತ ಮತ್ತು ಭಗವದ್ಗೀತೆಯಂತಹ ಮಹಾಕಾವ್ಯಗಳ ಬಗ್ಗೆ ಹೆಚ್ಚು ಆಸಕ್ತಿಯೂ ಇದೆ.
ನನ್ನ ತಂದೆ-ತಾಯಿ ಇಬ್ಬರೂ 1990ರ ದಶಕದಲ್ಲಿ ತಮಿಳುನಾಡಿನಿಂದ ಅಮೆರಿಕಕ್ಕೆ ಬಂದರು. ನನ್ನ ತಾಯಿ ಚೆನ್ನೈನವರು, ನನ್ನ ತಂದೆ ಕೊಯಮತ್ತೂರಿನವರು. ನಾನು ಯಾವಾಗಲೂ ಭಾರತೀಯ ಸಂಸ್ಕೃತಿಯೊಂದಿಗೆ ಬೆಳೆದಿದ್ದೇನೆ ಮತ್ತು ಅಮೆರಿಕನ್ ಸಂಸ್ಕೃತಿಯೊಂದಿಗೂ ಬೆಳೆಯುತ್ತಿದ್ದೇನೆ. ನಾನೊಬ್ಬ ಹಿಂದೂ. ನನ್ನ ಇಡೀ ಜೀವನದಲ್ಲಿ ನಾನು ಭಾರತೀಯ ಸಂಸ್ಕೃತಿಯ ತತ್ವಶಾಸ್ತ್ರದಲ್ಲಿ ಬಹಳ ಆಸಕ್ತಿ ಹೊಂದಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ನಾನು ಸ್ಪರ್ಧಿಸುತ್ತಿರುವುದು ಉಂಟಾಗಿರುವ ಗ್ಯಾಪ್ ತುಂಬಲು. ಆದ್ದರಿಂದ, ಸಹಜವಾಗಿಉತ್ಸುಕರಾಗಿರುವ ನನ್ನ ವಯಸ್ಸಿನ ಜನರೊಂದಿಗೆ ಮಾತನಾಡುತ್ತಿದ್ದೇನೆ. ಅವರನನ್ನು ಅವರಂಥವರೇ ಯಾರಾದರೂ ಪ್ರತಿನಿಧಿಸುತ್ತಿದ್ದಾರೆ ಎಂಬ ನಿರೀಕ್ಷೆ ಇತ್ತು. ನಾನು ಯಶಸ್ವಿಯಾಗಲು ಅಗತ್ಯವಿರುವ ಸಂಪನ್ಮೂಲಗಳನ್ನು ಹೊಂದಿರುವ ಇತರ ಪೀಳಿಗೆಯ ಜನರೊಂದಿಗೆ ಸಾಕಷ್ಟು ಮಾತನಾಡುತ್ತಿದ್ದೇನೆ ಎಂದು ಅವರು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Vivek Ramaswamy: ಅಮೆರಿಕ ಚುನಾವಣೆ ಮೊದಲೇ ಭಾರತ ಮೂಲದ ವಿವೇಕ್ ರಾಮಸ್ವಾಮಿಯನ್ನು ಹೊಗಳಿದ ಎಲಾನ್ ಮಸ್ಕ್