Site icon Vistara News

Queen Elizabeth Death | ಪ್ರಿನ್ಸ್ ಹ್ಯಾರಿಗೆ ಸೇನಾ ಸಮವಸ್ತ್ರ ಧರಿಸುವ ಭಾಗ್ಯವಿಲ್ಲ ಏಕೆ?

Prince Harry

ಲಂಡನ್: ಎರಡನೇ ಕ್ವೀನ್ ಎಲಿಜಬೆತ್ (Queen Elizabeth Death) ನಿಧನದ ಹಿನ್ನೆಲೆಯಲ್ಲಿ ಬ್ರಿಟನ್ ರಾಜಮನೆತನದ ಹಲವು ಪದ್ಧತಿಗಳು ಗಮನ ಸೆಳೆಯುತ್ತಿವೆ. ಸೂತಕದ ದಿನಗಳಲ್ಲಿ ಬ್ರಿಟನ್ ರಾಯಲ್ ಫ್ಯಾಮಿಲಿಯ ಪುರುಷ ಸದಸ್ಯರು ಸಾಮಾನ್ಯವಾಗಿ ಸೇನಾ ಸಮವಸ್ತ್ರದಲ್ಲಿರುತ್ತಾರೆ. ಆದರೆ, ಕ್ವೀನ್ ಅವರ ಮೊಮ್ಮಗ ಹ್ಯಾರಿ ಅವರಿಗೆ ಸೇನಾ ಸಮವಸ್ತ್ರ ಧರಿಸಲು ಅವಕಾಶ ನೀಡಿಲ್ಲ. ಅಪ್ರಾಪ್ತ ಬಾಲಕಿಯ ಅತ್ಯಾಚಾರ ಆರೋಪ ಹೊತ್ತು ರಾಜತ್ವ ಪದವಿಗೇರುವ ಹಕ್ಕನ್ನು ಕಳೆದುಕೊಂಡಿರುವ ಮೂರನೇ ಚಾರ್ಲ್ಸ್ ಅವರ ಸಹೋದರ ಆಂಡ್ರೋ ಅವರಿಗೆ ಸೇನಾ ಸಮವಸ್ತ್ರ ಧರಿಸಲು ಅವಕಾಶ ನೀಡಿರುವುದು ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆಯಾಗುತ್ತಿದೆ.

ಪ್ರಿನ್ಸ್ ಹ್ಯಾರಿ ಅವರು 2020ರಲ್ಲಿ ರಾಯಲ್ ಫ್ಯಾಮಿಲಿಯ ಕಾರ್ಯನಿರತ ಸದಸ್ಯ ಸ್ಥಾನದಿಂದ ಕೆಳಗಿಳಿದಿದ್ದಾರೆ. ಅವರು ಬ್ರಿಟನ್ ತೊರೆದು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನೆಲೆಸುವ ನಿರ್ಧಾರವನ್ನು ಕೈಗೊಂಡರು. ಅದರಂತೆ, ತಮ್ಮ ಪತ್ನಿ ಮೇಘನ್ ಮಾರ್ಕೆಲ್ ಮತ್ತು ಮಕ್ಕಳೊಂದಿಗೆ ತಮ್ಮ ವಾಸ್ತವ್ಯವನ್ನು ಅಮೆರಿಕದ ಕ್ಯಾಲಿಫೋರ್ನಿಯಾ ನಗರಕ್ಕೆ ಸ್ಥಳಾಂತರಿಸಿದರು. ಜತೆಗೇ, ರಾಯಲ್ ಫ್ಯಾಮಿಲಿಯ ಅನೇಕ ಹಕ್ಕುಗಳ್ನು ಬಿಟ್ಟುಕೊಟ್ಟಿದ್ದಾರೆ. ಹಾಗಾಗಿ, ಅವರಿಗೆ ಸೂತಕದ ವಿಶೇಷ ದಿನಗಳಲ್ಲಿ ಸೇನಾ ಸಮವಸ್ತ್ರ ಧರಿಸಲು ಅವಕಾಶ ನೀಡಿಲ್ಲ ಎನ್ನಲಾಗುತ್ತಿದೆ.

ಮತ್ತೊಂದೆಡೆ, ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪ ಎದುರಿಸಿದ್ದ ಮೂರನೇ ಕಿಂಗ್ ಚಾರ್ಲ್ಸ್ ಅವರ ಸಹೋದರ ಹಾಗೂ ಪ್ರಿನ್ಸ್ ಹ್ಯಾರಿ ಚಿಕ್ಕಪ್ಪ ಆಂಡ್ರೋ ಅವರಿಗೆ ಇದೇ ರೀತಿಯ ನಿರ್ಬಂಧ ಹೇರಲಾಗಿದೆ. ಆದರೂ ಪ್ರಿನ್ಸ್ ಆಂಡ್ರೋ ಅವರು, ರಾಯಲ್ ನೇವಿಯಲ್ಲಿ ಸೇವೆ ಸಲ್ಲಿಸಿದ್ದಾರೆ. 1982ರಲ್ಲಿ ಅವರು ಫಾಲ್ಕ್‌ಲ್ಯಾಂಡ್‌ ಯುದ್ಧದಲ್ಲಿ ಪಾಲ್ಗೊಂಡಿದ್ದರು. ಹಾಗಾಗಿ, ವೆಸ್ಟ್‌ಮಿನಿಸ್ಟರ್‌ನಲ್ಲಿ ನಡೆಯುವ ಅಂತಿಮ ಸಂಸ್ಕಾರ ವಿಧಿ ವಿಧಾನಗಳ ವೇಳೆ ಅವರು ತಮ್ಮ ಸೇನಾ ಸಮವಸ್ತ್ರವನ್ನು ಧರಿಸಬಹುದಾಗಿದೆ ಎಂದು ಬಕಿಂಗ್ ಹ್ಯಾಮ್ ಪ್ಯಾಲೇಸ್ ವಕ್ತಾರರು ತಿಳಿಸಿದ್ದಾರೆಂದು ಮಾಧ್ಯಮಗಳು ವರದಿ ಮಾಡಿವೆ.

ಪ್ರಿನ್ಸ್ ಹ್ಯಾರಿ ಅವರು ದಶಕಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರೂ ಆಂಡ್ರೋ ಅವರಿಗೆ ದೊರೆತ ಭಾಗ್ಯ ಅವರಿಗೆ ದೊರೆತಿಲ್ಲ. ರಾಯಲ್ ಫ್ಯಾಮಿಲಿಯ ಯಾವುದೇ ಕಾರ್ಯಕ್ರಮದ ವೇಳೆಯೂ ಪ್ರಿನ್ಸ್ ಹ್ಯಾರಿ ಅವರು ಸೇನಾ ಸಮವಸ್ತ್ರವನ್ನು ತೊಡುವಂತಿಲ್ಲ, ಸೇನಾ ಸಮವಸ್ತ್ರದ ಮೂಲಕವೇ ರಾಯಲ್ ಫ್ಯಾಮಿಲಿಯ ಯಾವ ಸದಸ್ಯರು ರಾಯಲ್ ಫ್ಯಾಮಿಲಿಯ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದಾರೆ ಮತ್ತು ಇಲ್ಲ ಎಂಬುದು ತಿಳಿಯಬಹುದಾಗಿದೆ.

ಇದನ್ನೂ ಓದಿ | Britain Royal Family | ಬ್ರಿಟನ್ ರಾಯಲ್ ಫ್ಯಾಮಿಲಿಯ ಸ್ಟೋರಿಗಳು ಸಖತ್ ಇಂಟರೆಸ್ಟಿಂಗ್‌!

Exit mobile version