ಆಸ್ಟ್ರೇಲಿಯಾದ ಪುರಾತನ ತಳಿಯಾದ ಡಿಂಗೋ ನಾಯಿಗಳು ಅಲ್ಲಿನ ಕ್ವೀನ್ಸ್ಲ್ಯಾಂಡ್ನಲ್ಲಿರುವ ಫ್ರೇಸರ್ ದ್ವೀಪಕ್ಕೆ ಲಗ್ಗೆ ಇಡುತ್ತಿವೆ. ಬೀಚ್ನಲ್ಲಿ ಮಲಗಿ ವಿಶ್ರಾಂತಿ ಪಡೆಯುತ್ತಿರುವವರ ಮೇಲೆ ದಾಳಿ ನಡೆಸುತ್ತಿದ್ದು (Dog Attacks Woman), ಅವರಿಗೆ ತಲೆನೋವಾಗಿದೆ . ಕ್ವೀನ್ಸ್ಲ್ಯಾಂಡ್ನ ಫ್ರೇಸರ್ ದ್ವೀಪ ಮತ್ತಿತರ ಬೀಚ್ಗಳಲ್ಲಿ ಮರಳ ಮೇಲೆ ಯುವತಿಯರು ಬಿಕಿನಿ ತೊಟ್ಟು ಮಲಗಿರುತ್ತಾರೆ. ಅಲ್ಲಿ ಪುರುಷರೂ ಕೂಡ ತಮ್ಮ ಸಮಯ ಕಳೆಯಲು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಅವರೆಲ್ಲರ ಮೇಲೆ ನಾಯಿಗಳು ಗುಂಪುಗುಂಪಾಗಿ ಬಂದು ಮುಗಿಬೀಳುತ್ತಿವೆ. ಬಿಕಿನಿ ತೊಟ್ಟು, ಮರಳ ಮೇಲೆ ಮಲಗಿದ್ದ ಯುವತಿಯೊಬ್ಬಳಿಗೆ ನಾಯಿ ಕಚ್ಚಿದ (Dog Attacks Woman In Australia) ವಿಡಿಯೊ ಸಿಕ್ಕಾಪಟೆ ವೈರಲ್ ಆಗಿದೆ. ನಾಯಿ ಆಕೆಯ ಹಿಂಬದಿಗೆ ಬಂದು, ಬಿಕಿನಿಗೇ ಬಾಯಿ ಹಾಕಿದೆ. ಅಲ್ಲೇ ಕಚ್ಚಿದೆ. ಈ ವೇಳೆ ಆಕೆ ನೋವು ತಡೆಯಲಾಗದೆ ಎದ್ದು ಓಡಿದ್ದಾಳೆ.
ಕ್ವೀನ್ಸ್ಲ್ಯಾಂಡ್ ಬೀಚ್ಗಳಿಗೆ ಭೇಟಿ ಕೊಡುವ ಪ್ರವಾಸಿಗರಿಗೆ ಈ ನಾಯಿಗಳು ಆತಂಕ ತಂದೊಡ್ಡಿದ್ದು, ಎಚ್ಚರಿಕೆಯಿಂದ ಇರುವಂತೆ ಕ್ವೀನ್ಸ್ಲ್ಯಾಂಡ್ ಡಿಪಾರ್ಟ್ಮೆಂಟ್ ಆಫ್ ಎನ್ವಿರಾನ್ಮೆಂಟ್ ಆ್ಯಂಡ್ ಸೈನ್ಸ್ ಎಚ್ಚರಿಕೆ ನೀಡಿದೆ. ಹಾಗೇ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವ ಭರವಸೆಯನ್ನೂ ನೀಡಿದೆ. ಯುವತಿಗೆ ನಾಯಿಯೊಂದು ಕಚ್ಚಿದ ಬಳಿಕ, ಸ್ಥಳೀಯರು ಸೇರಿ ಆ ನಾಯಿಯನ್ನು ಅಟ್ಟಿಸಿಕೊಂಡು ಹೋಗಿದ್ದಾರೆ. ವಿಡಿಯೊಕ್ಕೆ 1.5 ಮಿಲಿಯನ್ಗಳಿಗಿಂತಲೂ ಜಾಸ್ತಿ ವೀವ್ಸ್ ಬಂದಿದೆ.
ಇದನ್ನೂ ಓದಿ: Chitra Achar: ಬಿಕಿನಿ ಫೋಟೊ ಹಂಚಿಕೊಂಡ ʻಸಪ್ತ ಸಾಗರದಾಚೆ ಎಲ್ಲೊʼ ನಟಿ ಚೈತ್ರಾ ಆಚಾರ್
ಜೂನ್ 16ರಂದು ಕೂಡ ಇಂಥದ್ದೇ ಒಂದು ಘಟನೆ ಈ ಫ್ರೇಸರ್ ದ್ವೀಪದಲ್ಲಿ ನಡೆದಿತ್ತು. ಬೀಚ್ನಲ್ಲಿ ಇದ್ದ 10ವರ್ಷದ ಹುಡುಗನನ್ನು ನಾಯಿಯೊಂದು ಕಚ್ಚಿದ್ದಲ್ಲದೆ, ಅವನನ್ನು ಎಳೆದುಕೊಂಡು ನೀರಿಗೆ ಒಯ್ದಿತ್ತು. ಅಲ್ಲಿಯೇ ಇದ್ದ ಆ ಹುಡುಗನ 12 ವರ್ಷದ ಅಕ್ಕ ನಾಯಿಯನ್ನು ಅಲ್ಲಿಂದ ಓಡಿಸಿ, ತನ್ನ ತಮ್ಮನನ್ನು ರಕ್ಷಿಸಿಕೊಂಡಿದ್ದಳು. ಆ ಹುಡುಗನ ಭುಜದ ಮೇಲೆ, ಕುತ್ತಿಗೆಯ ಬಳಿ ಗಂಭೀರ ಗಾಯಗಳಾಗಿದ್ದವು. ಡಿಂಗೋ ನಾಯಿಗಳು ಸಹಜವಾಗಿ ಸೌಮ್ಯ ಸ್ವಭಾವದವೇ ಆದರೂ, ಕೆಲವೊಂದು ಸಮಯದಲ್ಲಿ ಜನರ ಮೇಲೆ, ಸಣ್ಣಪುಟ್ಟ ಪ್ರಾಣಿಗಳ ಮೇಲೆ ದಾಳಿ ಮಾಡುತ್ತವೆ ಎನ್ನಲಾಗಿದೆ.
A dingo has been filmed biting a tourist in Australia.
— Sky News (@SkyNews) June 23, 2023
The Queensland Department of Environment and Science has warned of the danger posed by the wild animalshttps://t.co/8xyWy2cBPY pic.twitter.com/ZcUxRvtcon