Site icon Vistara News

ಬಾಯ್​ಫ್ರೆಂಡ್​ಗೆ ಕರೆ ಮಾಡಿದಾಗ ಉತ್ತರಿಸಿದ್ದು ಇನ್ನೊಬ್ಬಳು ಮಹಿಳೆ; ಯುವತಿಯ ಅಸೂಯೆ ಮನೆಯನ್ನೇ ಸುಟ್ಟಿತು

Woman sets Fire on her Lover House In Texas

ಕೆಲವು ಪ್ರೇಮಿಗಳು ಸೈಕೋಗಳಂತೆ ವರ್ತಿಸುವುದು ಹೊಸದಲ್ಲ. ಹಾಗೇ, ಯುಎಸ್​​ನ ಟೆಕ್ಸಾಸ್​​ನಲ್ಲಿ 23 ವರ್ಷದ ಯುವತಿಯೊಬ್ಬಳು ಅದೇ ರೀತಿ ವರ್ತಿಸಿದ್ದಾಳೆ. ತಡರಾತ್ರಿ ತನ್ನ ಪ್ರಿಯಕರನ ಮನೆಗೆ ನುಗ್ಗಿ, ಹಲವು ಅಮೂಲ್ಯ ವಸ್ತುಗಳನ್ನು ಕದ್ದ ಬಳಿಕ, ಅವನ ಮನೆಗೆ ಬೆಂಕಿ ಹಚ್ಚಿದ್ದಾಳೆ. ಈಕೆ ಹೆಸರು ಸೆನೈಡಾ ಮೇರಿ ಸೋಟೋ ಎಂದಾಗಿದ್ದು, ಆಕೆಯನ್ನೀಗ ಬೆಕ್ಸಾರ್​ ಕೌಂಟಿ ಪೊಲೀಸರು ಬಂಧಿಸಿದ್ದಾರೆ.

ಸೋಟೋ ತನ್ನ ಬಾಯ್​ಫ್ರೆಂಡ್​​ಗೆ ವಿಡಿಯೊ ಕಾಲ್​ ಮಾಡಿದ್ದಾಳೆ. ಆಗ ಇನ್ನೊಬ್ಬಳು ಮಹಿಳೆ ಅದನ್ನು ರಿಸೀವ್​ ಮಾಡಿ, ಉತ್ತರಿಸಿದ್ದಾಳೆ. ಅಷ್ಟಕ್ಕೇ ಸಿಟ್ಟಾದ ಸೋಟೋ ತನ್ನ ಪ್ರಿಯಕರನ ಮನೆಗೆ ಹೋಗಿ, ಬೆಂಕಿ ಹಚ್ಚಿದ್ದಾಳೆ. ಇದು ಆಕೆಯ ಅಸೂಯೆಯ ಪರಿಣಾಮ. ಆದರೆ ವಾಸ್ತವದಲ್ಲಿ ಸೋಟೋ ಕರೆಗೆ ಉತ್ತರಿಸಿದ್ದು ಆ ಹುಡುಗನ ಸಂಬಂಧಿಯಾಗಿದ್ದರು ಅಷ್ಟೇ, ಅವರಿಬ್ಬರ ಮಧ್ಯೆ ಇನ್ನೇನೂ ಇಲ್ಲ ಎಂಬುದು ಗೊತ್ತಾಗಿದೆ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.

ಸೋಟೋ ತಡರಾತ್ರಿ ಆತನ ಮನೆಗೆ ನುಗ್ಗಿದ್ದಾಳೆ. ಆ ಹೊತ್ತಲ್ಲಿ ಆಕೆಯ ಬಾಯ್​ಫ್ರೆಂಡ್ ಇರಲಿಲ್ಲ. ಮೊದಲು ಬೆಡ್​ರೂಮ್​​ನ ಮಂಚಕ್ಕೆ ಬೆಂಕಿ ಇಟ್ಟಿದ್ದಾಳೆ. ಅದು ಬಳಿಕ ಇಡೀ ಮನೆಗೆ ಆವರಿಸಿ, ಕುರ್ಚಿಗಳೆಲ್ಲ ಸುಟ್ಟುಹೋಗಿವೆ. ಅದನ್ನು ಅವಳು ಹೊರಗೆ ನಿಂತು ವಿಡಿಯೊ ಮಾಡಿಕೊಂಡು, ಆ ವಿಡಿಯೊವನ್ನು ಬಾಯ್​​ಫ್ರೆಂಡ್​ಗೆ ಕಳಿಸಿದ್ದಾಳೆ. ಆತನ ಮನೆಯಲ್ಲಿ ಈಕೆ ಹಚ್ಚಿದ ಬೆಂಕಿಯಿಂದ 50 ಸಾವಿರ ಡಾಲರ್​ಗಳಷ್ಟು ನಷ್ಟವಾಗಿದೆ ಎಂದೂ ಪೊಲೀಸರು ಹೇಳಿದ್ದಾರೆ. ಸದ್ಯ ಅವಳನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Viral News | ನರೇಂದ್ರ ಮೋದಿ ಸುಂದರ ಕಲಾಕೃತಿ ರಚಿಸಿದ ನಟ ಮಯೂರ್‌ ವಕಾನಿ, ಅದ್ಭುತ ಎಂದ ಜನ

Exit mobile version