Site icon Vistara News

Airline Shocker: ಹಾರುತ್ತಿದ್ದ ವಿಮಾನದಲ್ಲಿ ಸಿಗರೇಟ್‌ಗಾಗಿ ಮಹಿಳೆ ಹಠ, ಬಟ್ಟೆ ಬಿಚ್ಚಿ ತಿರುಗಾಡಿ ಹುಚ್ಚಾಟ

Russia Airline Shocker

#image_title

ಮಾಸ್ಕೊ: ಅಮೆರಿಕದಿಂದ ಭಾರತಕ್ಕೆ ಆಗಮಿಸುತ್ತಿದ್ದ ಏರ್‌ ಇಂಡಿಯಾ ವಿಮಾನದಲ್ಲಿ ಕುಡಿದ ಮತ್ತಿನಲ್ಲಿ ಮಹಿಳೆಯೊಬ್ಬರ ಮೇಲೆ ಮೂತ್ರ ವಿಸರ್ಜಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕರ್‌ ಮಿಶ್ರಾ ಎಂಬಾತನನ್ನು ಬಂಧಿಸಿದ ಬೆನ್ನಲ್ಲೇ ರಷ್ಯಾದಲ್ಲೂ ಮಹಿಳೆಯೊಬ್ಬರು ಹಾರುತ್ತಿದ್ದ ವಿಮಾನದಲ್ಲಿ ಸಿಗರೇಟ್‌ ಬೇಕು ಎಂದು ಹಠ (Airline Shocker) ಮಾಡುವ ಜತೆಗೆ ಉದ್ಧಟತನ ಮಾಡಿದ್ದಾರೆ.

ಸ್ಟಾವ್ರೋಪೋಲ್‌ನಿಂದ ರಷ್ಯಾ ರಾಜಧಾನಿ ಮಾಸ್ಕೊಗೆ ತೆರಳುತ್ತಿದ್ದ ಏರೋಫ್ಲಾಟ್‌ ವಿಮಾನದಲ್ಲಿ ಅಂಜೆಲಿಕಾ ಮೋಸ್ಕ್‌ವಿಟಿನಾ (49) ಎಂಬ ಮಹಿಳೆಯು ಏಕಾಏಕಿ ಎದ್ದು ಶೌಚಾಲಯದ ಕಡೆಗೆ ಹೋಗಿದ್ದಾರೆ. ನನಗೆ ಸಿಗರೇಟ್‌ ಬೇಕು ಎಂಬುದಾಗಿ ಕೂಗಿದ್ದಾರೆ. ಟಾಪ್‌ಲೆಸ್‌ ಆಗಿ ಅನುಚಿತವಾಗಿ ವರ್ತಿಸುತ್ತಿದ್ದ ಮಹಿಳೆಯನ್ನು ವಿಮಾನದ ಸಿಬ್ಬಂದಿಯು ತಡೆದಿದ್ದಾರೆ.

ಇದನ್ನೂ ಓದಿ: Air India Urination Case: ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ, ಆರೋಪಿ ಶಂಕರ್‌ ಮಿಶ್ರಾಗೆ ಜಾಮೀನು

ಇದರಿಂದ ಇನ್ನಷ್ಟು ಕುಪಿತಗೊಂಡ ಆಕೆ ಕಾಕ್‌ಪಿಟ್‌ ಒಳಗೆ ನುಗ್ಗಲು ಯತ್ನಿಸಿದ್ದಾರೆ. ಹೀಗೆ, ಬಟ್ಟೆ ಬಿಚ್ಚಿಕೊಂಡು ಎಲ್ಲರೆದುರು ಓಡಾಡುವ ಮೂಲಕ ಉಪದ್ವ್ಯಾಪ ಮಾಡಿದ ಮಹಿಳೆಯನ್ನು ವಿಮಾನ ಲ್ಯಾಂಡ್‌ ಆಗುತ್ತಲೇ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಸಿಬ್ಬಂದಿ ತಡೆದರೂ, ನಾನು ಹುಚ್ಚಿ, ಪೈಲಟ್‌ಗಳನ್ನು ನಾನು ನೋಡಬೇಕು ಎಂಬುದಾಗಿ ಕಿರುಚಾಡಿದ್ದಾಳೆ ಎಂದು ವರದಿಯಾಗಿದೆ.

Exit mobile version