Site icon Vistara News

Birth On Plane | ಗರ್ಭಿಣಿ ಎಂಬುದೂ ಗೊತ್ತಿರದ ಮಹಿಳೆ ಹಾರುತ್ತಿದ್ದ ವಿಮಾನದಲ್ಲೇ ಮಗುವಿಗೆ ಜನ್ಮವಿತ್ತಳು!

Woman Gives Birth On Plane

ಕ್ವಿಟೊ: ಹೆಣ್ಣುಮಗಳೊಬ್ಬಳಿಗೆ ತಾನು ಗರ್ಭಿಣಿ ಎಂಬುದು ಗೊತ್ತಾದ ಕೂಡಲೇ ಆಕೆಯ ದಿನಚರಿ, ಉಲ್ಲಾಸ, ದೇಹದಲ್ಲಾಗುವ ಬದಲಾವಣೆ, ಹೊಟ್ಟೆಯಲ್ಲಿಯೇ ಮಗು ಮೆಲ್ಲಗೆ ಒದೆಯುವ ಸುಖ ಅನುಭವಿಸುತ್ತಾಳೆ. ಮಣ್ಣು, ಮಾವು ತಿನ್ನಬೇಕು ಎಂಬಿತ್ಯಾದಿ ಬಯಕೆಗಳು ಹೆಚ್ಚಾಗುತ್ತವೆ. ಆದರೆ, ಅಚ್ಚರಿಯಲ್ಲೇ ಅಚ್ಚರಿ ಎಂಬಂತೆ, ತಾನು ಗರ್ಭಿಣಿ ಎಂಬುದನ್ನೇ ಗೊತ್ತಿರದ ಮಹಿಳೆಯೊಬ್ಬರು ಹಾರುವ ವಿಮಾನದಲ್ಲೇ ಗಂಡು ಮಗುವಿಗೆ (Birth On Plane) ಜನ್ಮ ನೀಡಿದ್ದಾರೆ.

ಹೌದು, ಕಳೆದ ವಾರ ತಮಾರಾ ಎಂಬ ಮಹಿಳೆಯು ಈಕ್ವೆಡಾರ್‌ನಿಂದ ತಮ್ಮ ದೇಶ ಸ್ಪೇನ್‌ಗೆ ತೆರಳಲು ಕೆಎಲ್‌ಎಂ ರಾಯಲ್‌ ಡಚ್‌ ವಿಮಾನ ಹತ್ತಿದ್ದಾರೆ. ಮಾರ್ಗದ ಮಧ್ಯೆ ನೆದರ್ಲೆಂಡ್ಸ್‌ನಲ್ಲಿ ಸ್ಟಾಪ್‌ ಇದ್ದು, ವಿಮಾನ ಲ್ಯಾಂಡ್‌ ಆಗಲು ಇನ್ನೇನು ಕೆಲವೇ ಗಂಟೆ ಬಾಕಿ ಇದೆ ಎನ್ನುವಾಗಲೇ ತಮಾರಾ ಅವರಿಗೆ ಹೊಟ್ಟೆನೋವು ಕಾಣಿಸಿಕೊಂಡಿದೆ. ಕೂಡಲೇ ಅವರು ಶೌಚಾಲಯಕ್ಕೆ ತೆರಳಿದ್ದು, ಅಲ್ಲಿಯೇ ಹೆರಿಯಾಗಿದೆ.

ತಮಾರಾ ಅವರು ಮಗುವಿಗೆ ಜನ್ಮ ನೀಡಿರುವುದು ತಿಳಿಯುತ್ತಲೇ ಗಗನಸಖಿಯರು ವಿಮಾನದಲ್ಲಿ ವೈದ್ಯರಿರುವ ಕುರಿತು ಪರಿಶೀಲಿಸಿದ್ದಾರೆ. ಅದೃಷ್ಟವಶಾತ್‌, ವಿಮಾನದಲ್ಲಿ ಇಬ್ಬರು ವೈದ್ಯರು ಹಾಗೂ ಒಬ್ಬ ನರ್ಸ್‌ ಇದ್ದು, ಅವರು ಆರೈಕೆ ಮಾಡಿದ್ದಾರೆ. ಸದ್ಯ ಮಗು ಹಾಗೂ ತಾಯಿ ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಮಹಿಳೆಗೆ ತಾನು ಗರ್ಭವತಿ ಎಂಬ ವಿಷಯ ಗೊತ್ತಿರದೆ ಇರಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಮೂಡಿದೆ.

ಇದನ್ನೂ ಓದಿ | Rain News | ಮಳೆಯಿಂದ ಉಕ್ಕಿದ ನದಿ: ದಡದಲ್ಲೇ ಮಗುವಿನ ಜನನ

Exit mobile version