ವಾಷಿಂಗ್ಟನ್: ಎರಡು ಬಾರಿ ಕೊನೆಯ ಕ್ಷಣದಲ್ಲಿ ಉಡಾವಣೆ ಮುಂದೂಡಲಾದರೂ, ಹಲವು ಬಾರಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡರೂ ವಿಶ್ವದ ಮೊದಲ 3ಡಿ ಪ್ರಿಂಟೆಡ್ ತಂತ್ರಜ್ಞಾನದ ರಾಕೆಟ್ (3D Printed Rocket) ಉಡಾವಣೆ ಮಿಷನ್ ವಿಫಲವಾಗಿದೆ. ರಾಕೆಟ್‌ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದರೂ, ಅದು ನಿಗದಿತ ಕಕ್ಷೆ ಸೇರುವಲ್ಲಿ ವಿಫಲವಾಗಿದೆ.
ಅಮೆರಿಕದ ಫ್ಲೊರಿಡಾದಲ್ಲಿರುವ ಕೇಪ್ ಕ್ಯಾನವೆರಲ್‌ನ ಸ್ಪೇಸ್ ಫೋರ್ಸ್ ಸ್ಟೇಷನ್‌ನಿಂದ ಜಗತ್ತಿನ ಮೊದಲ 3ಡಿ ಪ್ರಿಂಟೆಡ್ ರಾಕೆಟ್ ‘ಟೆರಾನ್ 1’ಅನ್ನು ಸ್ಥಳೀಯ ಕಾಲಮಾನ ರಾತ್ರಿ 11.25ಕ್ಕೆ ಉಡಾವಣೆ ಮಾಡಲಾಯಿತು. ಉಡಾವಣೆ ಮಾಡಲಾದ ಮೂರು ನಿಮಿಷದಲ್ಲಿಯೇ ಅದು ಕಕ್ಷೆ ಸೇರುವಲ್ಲಿ ವಿಫಲವಾಯಿತು.
ಇಲ್ಲಿದೆ ರಾಕೆಟ್ ಉಡಾವಣೆಯ ವಿಡಿಯೊ
ಕ್ಯಾಲಿಫೋರ್ನಿಯಾ ಮೂಲದ ರಿಲೇಟಿವಿಟಿ ಸ್ಪೇಸ್ ಎಂಬ ಸ್ಟಾರ್ಟಪ್ ಕಂಪನಿಯು ಸಂಪೂರ್ಣ ಖಾಸಗಿಯಾಗಿ ರಾಕೆಟ್‌ಅನ್ನು ನಿರ್ಮಿಸಿತ್ತು. ಇದು 110 ಅಡಿ ಎತ್ತರ ಹಾಗೂ 7.5 ಅಡಿ ಅಗಲ ಹೊಂದಿತ್ತು. ರಾಕೆಟ್‌ನ ಶೇ.85ರಷ್ಟು ಭಾಗಗಳನ್ನು 3ಡಿ ಮೆಟಲ್ ಭಾಗಗಳಿಂದ ನಿರ್ಮಿಸಲಾಗಿತ್ತು. ಬಾಹ್ಯಾಕಾಶ ಕ್ಷೇತ್ರದಲ್ಲಿ 3ಡಿ ತಂತ್ರಜ್ಞಾನದ ಬಳಕೆ ದೃಷ್ಟಿಯಿಂದ ಇದರ ಉಡಾವಣೆಯು ಪ್ರಮುಖವಾಗಿತ್ತು.
ರಿಲೇಟಿವಿಟಿ ಸ್ಪೇಸ್ ಟ್ವೀಟ್
ಎರಡು ಬಾರಿ ಉಡಾವಣೆ ರದ್ದಾಗಿತ್ತು
ಹೆಚ್ಚಿನ ಮಹತ್ವಾಕಾಂಕ್ಷೆಯಿಂದ 3ಡಿ ಪ್ರಿಂಟೆಡ್ ರಾಕೆಟ್‌ಅನ್ನು ನಿರ್ಮಿಸಿದ ಕಾರಣ ಇದಕ್ಕೂ ಮೊದಲು ಉಡಾವಣೆಗೂ ಮೊದಲು ಎರಡು ಬಾರಿ ದೋಷ ಕಾಣಿಸಿಕೊಂಡ ಕಾರಣ ಉಡಾವಣೆಯನ್ನು ಕೊನೆಯ ಕ್ಷಣದಲ್ಲಿ ರದ್ದುಗೊಳಿಸಲಾಗಿತ್ತು. ಮಾರ್ಚ್ 8ರಂದು ಪ್ರಾಪೆಲ್ಲಂಟ್ ತಾಪಮಾನ ಸಮಸ್ಯೆಗಳಿಂದಾಗಿ ಉಡಾವಣೆಯನ್ನು ರದ್ದುಗೊಳಿಸಿದ್ದರೆ, ಮಾರ್ಚ್ 11ರಂದು ಇಂಧನ ಒತ್ತಡ ಸಮಸ್ಯೆಯಿಂದಾಗಿ ರದ್ದುಗೊಳಿಸಲಾಗಿತ್ತು.
ಇದನ್ನೂ ಓದಿ: 3D Printed rocket : ವಿಶ್ವದ ಮೊದಲ 3ಡಿ ಪ್ರಿಂಟಿಂಗ್ ತಂತ್ರಜ್ಞಾನದ ರಾಕೆಟ್ ಉಡಾವಣೆ ಕೊನೆಯ ಕ್ಷಣದಲ್ಲಿ ರದ್ದು