Site icon Vistara News

World’s Newest Countries: ಇವು ವಿಶ್ವದ 10 ಹೊಸ ರಾಷ್ಟ್ರಗಳು! ಏನು ಈ ರಾಷ್ಟ್ರಗಳ ವಿಶೇಷ?

World's Newest Countries

ಕಳೆದ ಎರಡು ದಶಕಗಳಲ್ಲಿ ವಿಶ್ವದಲ್ಲಿ ಹತ್ತು ಹೊಸ ರಾಷ್ಟ್ರಗಳು (World’s Newest Countries) ರೂಪುಗೊಂಡಿದ್ದು, ಇದರಲ್ಲಿ ದಕ್ಷಿಣ ಸುಡಾನ್ (South Sudan) ಇತ್ತೀಚೆಗೆಷ್ಟೇ ಹುಟ್ಟಿಕೊಂಡಿದೆ. ಸಾಕಷ್ಟು ಸವಾಲುಗಳನ್ನು ಎದುರಿಸಿ ರೂಪುಗೊಂಡಿರುವ ಈ ಹೊಸ ರಾಷ್ಟ್ರಗಳು ಅನೇಕ ಅವಕಾಶಗಳನ್ನೂ ಸೃಷ್ಟಿಸಿದೆ.

ದಕ್ಷಿಣ ಸೂಡಾನ್ ಇದೀಗ ವಿಶ್ವದ ಹೊಸ ದೇಶಗಳ ಪಟ್ಟಿಯಲ್ಲಿದೆ. 2011ರ ಜುಲೈ 9ರಂದು ಸ್ವತಂತ್ರಗೊಂಡ (gained independence) ದಕ್ಷಿಣ ಸುಡಾನ್ ಈಗ ವಿಶ್ವದಲ್ಲಿ ಅಸ್ತಿತ್ವದಲ್ಲಿರುವ ಹೊಸ ದೇಶವಾಗಿದೆ. ಇದರೊಂದಿಗೆ ಹೊಸ ದೇಶಗಳ ಪಟ್ಟಿಯಲ್ಲಿ ಕೊಸೊವೊ (Kosovo), ಮಾಂಟೆನೆಗ್ರೊ (Montenegro), ಸೆರ್ಬಿಯಾ (Serbia), ಪೂರ್ವ ಟಿಮೋರ್ (East Timor) , ಪಲಾವ್ (Palau), ಎರಿಟ್ರಿಯಾ (Eritrea), ಜೆಕ್ ರಿಪಬ್ಲಿಕ್ (Czech Republic), ಸ್ಲೋವಾಕಿಯಾ (Slovakia) ಮತ್ತು ಕ್ರೊಯೇಷಿಯಾ (Croatia) ಕೂಡ ಸೇರ್ಪಡೆಯಾಗಿದೆ.

ಸಮಯದೊಂದಿಗೆ ಜಾಗತಿಕವಾಗಿಯೂ ಹಲವಾರು ಬದಲಾವಣೆಗಳು ಆಗುತ್ತಲೇ ಇರುತ್ತದೆ. ಪ್ರಸ್ತುತ ಜಗತ್ತಿನಲ್ಲಿ 195 ದೇಶಗಳಿವೆ. ಇವುಗಳಲ್ಲಿ ಕೆಲವು ಸಾಕಷ್ಟು ಹಳೆಯವು ಮತ್ತು ಕೆಲವು ಸಾಕಷ್ಟು ಹೊಸದು. ಇದರಲ್ಲಿ ಹತ್ತು ರಾಷ್ಟ್ರಗಳು ಕಳೆದ ಎರಡು ದಶಕಗಳಲ್ಲಿ ಸ್ಥಾಪನೆಯಾಗಿರುವುದು.

ಇತ್ತೀಚಿಗೆ ಸ್ಥಾಪನೆಯಾಗಿರುವ ಪ್ರಪಂಚದ ಹೊಸ ಅಥವಾ ಕಿರಿಯ ರಾಷ್ಟ್ರಗಳು ಅನನ್ಯ ಸವಾಲುಗಳನ್ನು ಎದುರಿಸುತ್ತಿರುವ ನಡುವೆ ಇಲ್ಲಿ ಸಾಕಷ್ಟು ಅವಕಾಶಗಳೂ ಎದ್ದು ಕಾಣುತ್ತಿವೆ. ದಶಕಗಳ ಸಂಘರ್ಷದಿಂದ ಹುಟ್ಟಿದ ದಕ್ಷಿಣ ಸುಡಾನ್‌ನಿಂದ ಹಿಡಿದು ಕೊಸೊವೊ ಅಂತಾರಾಷ್ಟ್ರೀಯ ಮನ್ನಣೆಯ ಹಾದಿಯನ್ನು ಪಡೆಯುವವರೆಗೆ ಪ್ರತಿಯೊಂದು ದೇಶಗಳು ವಿಶಿಷ್ಟವಾದ ಇತಿಹಾಸವನ್ನು ಹೊಂದಿವೆ.

ದಕ್ಷಿಣ ಸುಡಾನ್

2011ರ ಜುಲೈ 9ರಂದು ಸ್ವಾತಂತ್ರ್ಯ ಪಡೆದ ದಕ್ಷಿಣ ಸುಡಾನ್ ಈ ಮೂಲಕ ದಶಕಗಳ ಅಂತರ್ಯುದ್ಧದಕ್ಕೆ ಅಂತ್ಯವನ್ನು ಹಾಡಿತ್ತು. ವೈವಿಧ್ಯಮಯ ಜನಾಂಗೀಯ ಗುಂಪುಗಳಿಗೆ ಮತ್ತು ರಾಜಕೀಯ ಸ್ಥಿರತೆಯ ಹೋರಾಟಗಳಿಗೆ ಈ ರಾಷ್ಟ್ರ ಹೆಸರುವಾಸಿಯಾಗಿದೆ.


ಕೊಸೊವೊ

2008ರ ಫೆಬ್ರವರಿ 17ರಂದು ಸೆರ್ಬಿಯಾದಿಂದ ಕೊಸೊವೊ ಸ್ವಾತಂತ್ರ್ಯವನ್ನು ಘೋಷಿಸಿತು. ಅನೇಕ ದೇಶಗಳಿಂದ ಗುರುತಿಸಲ್ಪಟ್ಟಿದ್ದರೂ ಅಂತಾರಾಷ್ಟ್ರೀಯ ಮನ್ನಣೆ ಪಡೆಯುವಲ್ಲಿ ಸವಾಲುಗಳನ್ನು ಎದುರಿಸುತ್ತಿದೆ.


ಮಾಂಟೆನೆಗ್ರೊ

2006ರ ಜೂನ್ 3ರಂದು ಜನಾಭಿಪ್ರಾಯ ಸಂಗ್ರಹಣೆಯ ಅನಂತರ ಮಾಂಟೆನೆಗ್ರೊ ಸ್ಟೇಟ್ ಯೂನಿಯನ್ ಆಫ್ ಸರ್ಬಿಯಾ ಮತ್ತು ಮಾಂಟೆನೆಗ್ರೊದಿಂದ ಸ್ವಾತಂತ್ರ್ಯವನ್ನು ಘೋಷಿಸಿತು. ಇದು ಆಡ್ರಿಯಾಟಿಕ್ ಕರಾವಳಿಗಳಿಗೆ ಹೆಸರುವಾಸಿಯಾಗಿದೆ ಮತ್ತು ಯುರೋಪಿಯನ್ ಯೂನಿಯನ್ ಸದಸ್ಯತ್ವಕ್ಕಾಗಿ ಅಭ್ಯರ್ಥಿಯಾಗಿದೆ.


ಸೆರ್ಬಿಯಾ

ಸೆರ್ಬಿಯಾ ಮತ್ತು ಮಾಂಟೆನೆಗ್ರೊ ರಾಜ್ಯ ಒಕ್ಕೂಟದ ವಿಸರ್ಜನೆಯ ಅನಂತರ ಸೆರ್ಬಿಯಾ 2006ರ ಜೂನ್ 5ರಂದು ಸ್ವಾತಂತ್ರ್ಯವನ್ನು ಘೋಷಿಸಿತು. ಇದು ಆರ್ಥಿಕ ಸುಧಾರಣೆಗಳು ಮತ್ತು ಯುರೋಪಿಯನ್ ಏಕೀಕರಣದ ಮೇಲೆ ಕೇಂದ್ರೀಕರಿಸಿದೆ.


ಪೂರ್ವ ಟಿಮೋರ್

2002ರ ಮೇ 20ರಂದು ರೂಪುಗೊಂಡ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಟಿಮೋರ್- ಲೆಸ್ಟೆ, ಆಗ್ನೇಯ ಏಷ್ಯಾದ ಒಂದು ಸುಂದರವಾದ ದ್ವೀಪ ರಾಷ್ಟ್ರವಾಗಿದೆ.


ಪಲಾವ್

1994ರ ಅಕ್ಟೋಬರ್ 1ರಂದು ಪಲಾವ್ ರಾಷ್ಟ್ರ ಕಾಂಪ್ಯಾಕ್ಟ್ ಆಫ್ ಫ್ರೀ ಅಸೋಸಿಯೇಷನ್ ​​ಅಡಿಯಲ್ಲಿ ಯುನೈಟೆಡ್ ಸ್ಟೇಟ್ಸ್ ನಿಂದ ಸ್ವತಂತ್ರವಾಯಿತು. ಇದು ಸಮುದ್ರದ ಜೀವವೈವಿಧ್ಯತೆ ಮತ್ತು ಪರಿಸರ ಸಂರಕ್ಷಣೆಯಲ್ಲಿನ ಪ್ರಯತ್ನಗಳಿಗೆ ಹೆಸರುವಾಸಿಯಾಗಿದೆ.


ಎರಿಟ್ರಿಯಾ

ಸುದೀರ್ಘ ಸ್ವಾತಂತ್ರ್ಯ ಹೋರಾಟದ ಅನಂತರ 1993ರ ಮೇ 24ರಂದು ಎರಿಟ್ರಿಯಾ ಇಥಿಯೋಪಿಯಾದಿಂದ ಸ್ವಾತಂತ್ರ್ಯ ಪಡೆಯಿತು. ಇದು ಆಡಳಿತ, ಮಾನವ ಹಕ್ಕುಗಳು ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಸವಾಲುಗಳನ್ನು ಎದುರಿಸುತ್ತಿದೆ.


ಜೆಕ್ ಗಣರಾಜ್ಯ

ಜೆಕೊಸ್ಲೊವಾಕಿಯಾದ ಶಾಂತಿಯುತ ವಿಸರ್ಜನೆಯ ಅನಂತರ 1993ರ ಜನವರಿ 1ರಂದು ಜೆಕ್ ರಿಪಬ್ಲಿಕ್ ಅಥವಾ ಜೆಕಿಯಾ ಸ್ವತಂತ್ರ ರಾಷ್ಟ್ರವಾಗಿ ಹೊರಹೊಮ್ಮಿತು. ಪ್ರಾಗ್ ಅದರ ರಾಜಧಾನಿ. ಇದು ವಾಸ್ತುಶಿಲ್ಪದ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ.

ಇದನ್ನೂ ಓದಿ: Sam Pitroda: ಸಾಗರೋತ್ತರ ಕಾಂಗ್ರೆಸ್‌ ಅಧ್ಯಕ್ಷರಾಗಿ ಸ್ಯಾಮ್‌ ಪಿತ್ರೋಡಾ ಮತ್ತೆ ನೇಮಕ; ದಕ್ಷಿಣ ಭಾರತೀಯರನ್ನು ಆಫ್ರಿಕನ್ನರಿಗೆ ಹೋಲಿಸಿದ್ದ ನಾಯಕ


ಸ್ಲೋವಾಕಿಯಾ

ಜೆಕೊಸ್ಲೊವಾಕಿಯಾದ ಇತರ ಅರ್ಧಭಾಗವಾದ ಸ್ಲೋವಾಕಿಯಾ ಕೂಡ 1993ರ ಜನವರಿ 1ರಂದು ಸ್ವಾತಂತ್ರ್ಯವನ್ನು ಗಳಿಸಿತು. ಜೆಕ್ ಗಣರಾಜ್ಯದೊಂದಿಗೆ ಪ್ರತ್ಯೇಕ ರಾಷ್ಟ್ರವಾಯಿತು.


ಕ್ರೊಯೇಷಿಯಾ

ಕ್ರೊಯೇಷಿಯಾ ಗಣರಾಜ್ಯವು 1991ರ ಜೂನ್ 25ರಂದು ಸ್ವಾತಂತ್ರ್ಯವನ್ನು ಘೋಷಿಸಿತು. ಕ್ರೊಯೇಷಿಯಾ ಯುರೋಪ್‌ನಲ್ಲಿ ರೋಮಾಂಚಕ ಪ್ರವಾಸಿ ತಾಣವಾಗಿ ಹೆಚ್ಚು ಜನಪ್ರಿಯವಾಗುತ್ತಿದೆ.

Exit mobile version