ಪ್ಯಾರಿಸ್: ವಿಶ್ವದ ಹಿರಿಯ ವ್ಯಕ್ತಿ ಎನಿಸಿದ್ದ (World’s Oldest Person), ಫ್ರಾನ್ಸ್‌ನ ಲುಸೈಲ್ ರ‍್ಯಾಂಡನ್ (Lucile Randon) ಅವರು 118ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಟೌಲನ್‌ನಲ್ಲಿರುವ ತಮ್ಮ ನಿವಾಸದಲ್ಲಿ ಅವರು ಮಂಗಳವಾರ ಮೃತಪಟ್ಟಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ನಿದ್ದೆ ಮಾಡುತ್ತಿದ್ದಾಗಲೇ ಅಸುನೀಗಿದ್ದಾರೆ.
ಸಿಸ್ಟರ್ ಆ್ಯಂಡ್ರೆ ಎಂದೇ ಖ್ಯಾತಿಯಾಗಿದ್ದ ಲುಸೈಲ್ ರ‍್ಯಾಂಡನ್ ಅವರು ಆ್ಯಲೆಸ್ ಪಟ್ಟಣದಲ್ಲಿ 1904ರ ಫೆಬ್ರವರಿ 11ರಂದು ಜನಿಸಿದ್ದರು. 2021ರಲ್ಲಿ ಅವರಿಗೆ ಕೊರೊನಾ ದೃಢಪಟ್ಟಿದ್ದರೂ ಸೋಂಕನ್ನು ಗೆದ್ದು ಫ್ರಾನ್ಸ್‌ನಾದ್ಯಂತ ಸುದ್ದಿಯಾಗಿದ್ದರು. ಮುಂದಿನ ತಿಂಗಳು ಅವರು 119ನೇ ವಯಸ್ಸಿಗೆ ಕಾಲಿಡುವವರಿದ್ದರು. ಜನ್ಮದಿನಕ್ಕೂ ಕೆಲವೇ ದಿನಗಳ ಮೊದಲೇ ಆ್ಯಂಡ್ರೆ ಮೃತಪಟ್ಟಿದ್ದಾರೆ. ಇವರ ನಿಧನಕ್ಕೆ ಫ್ರಾನ್ಸ್ ಗಣ್ಯರು ಸಂತಾಪ ಸೂಚಿಸಿದ್ದಾರೆ.
ದೀರ್ಘಾಯುಷ್ಯದ ಗುಟ್ಟೇನು?
ವೃತ್ತಿಯಿಂದ ನರ್ಸ್ ಆಗಿದ್ದ ಲುಸೈಲ್ ರ‍್ಯಾಂಡನ್ ಅವರ ಆಹಾರ ಪದ್ಧತಿಯೇ ಅವರ ದೀರ್ಘಾಯುಷ್ಯದ ಗುಟ್ಟು ಎಂದು ತಿಳಿದುಬಂದಿದೆ. ಕಡಿಮೆ ಪ್ರಮಾಣದ ಊಟ, ತಿಂಡಿ ಸೇವಿಸುವುದು, ಪೌಷ್ಟಿಕ ಆಹಾರಕ್ಕೆ ಆದ್ಯತೆ ನೀಡುವುದು, ಲವಲವಿಕೆಯಿಂದ ಇರುವುದೇ ಅವರ ಆರೋಗ್ಯದ ಗುಟ್ಟು ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ | Evelyn Sharma | ಬಾಲಿವುಡ್ ನಟಿ ಎವೆಲಿನ್ ಬೇಬಿ ಬಂಪ್ ಫೋಟೊ ವೈರಲ್