Site icon Vistara News

Worlds Oldest Office Worker: ನಿವೃತ್ತಿ ಬಗ್ಗೆ ಇನ್ನೂ ಯೋಚನೆಯನ್ನೇ ಮಾಡಿಲ್ಲವಂತೆ 94ರ ಈ ಅಜ್ಜಿ!

Worlds Oldest Office Worker

40-50 ವರ್ಷವಾದರೆ ಸಾಕು ನಾವು ಕೆಲಸದಿಂದ ನಿವೃತ್ತಿ (retirement) ಪಡೆದು ಯಾವಾಗ ಮನೆಯಲ್ಲಿ ವಿಶ್ರಾಂತಿಯಲ್ಲಿ ಕಾಲ ಕಳೆಯುವುದು ಎಂದು ಯೋಚಿಸುತ್ತೇವೆ. ಆದರೆ ಈಕೆ ಮಾತ್ರ ವಯಸ್ಸು 94 ಆದರೂ ಇನ್ನೂ ನಿವೃತ್ತಿಯ ಬಗ್ಗೆ ಯೋಚಿಸಿಯೇ (Worlds Oldest Office Worker) ಇಲ್ಲವಂತೆ. ಯುವಕರನ್ನೂ ನಾಚಿಸುವಂತೆ ಈಗಲೂ ಬೆಳಗ್ಗಿನಿಂದ ಸಂಜೆಯವರೆಗೆ ಕಂಪೆನಿಯಲ್ಲಿ ಓಡಾಡುತ್ತಾಳೆ, ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿ ಮನೆಗೆ ತೆರಳುತ್ತಾಳೆ.

ಜಪಾನಿನ (japan) ಯಸುಕೊ ತಮಾಕಿ (Yasuko Tamaki) ಅವರ ವಯಸ್ಸಿಗ 94. ಎರಡನೇ ವಿಶ್ವ ಯುದ್ಧದ (2nd world war) ಸಮಯದಿಂದಲೂ ಕೆಲಸ ಮಾಡುತ್ತಿರುವ ಇವರನ್ನು ಜಪಾನಿನ ಕೆಲಸದ ಪ್ರತಿಭೆ ಎಂದು ಕರೆಯಲಾಗುತ್ತದೆ.

1930ರ ಮೇ 15ರಂದು ಜನಿಸಿರುವ ತಮಾಕಿ 1956ರಿಂದ ಒಸಾಕಾದ ನಿಶಿ ವಾರ್ಡ್‌ನಲ್ಲಿರುವ ಸನ್‌ಕೋ ಇಂಡಸ್ಟ್ರೀಸ್ ನಲ್ಲಿ ಸರಿಸುಮಾರು 68 ವರ್ಷಗಳಿಂದ ಕೆಲಸ ಮಾಡುತ್ತಿರುವ ಇವರು ಈಗ ವಿಶ್ವದ ಅತ್ಯಂತ ಹಿರಿಯ ಉದ್ಯೋಗಿಯಾಗಿ ದಾಖಲೆ ಬರೆದಿದ್ದರೆ. ಅಲ್ಲದೇ ಕಂಪೆನಿಯಲ್ಲಿ ಅವರ ಸುದೀರ್ಘ ಸೇವೆಗಾಗಿ ಅವರು ಈಗ ಹಳೆಯ ಕಚೇರಿ ವ್ಯವಸ್ಥಾಪಕರಾಗಿ ಗುರುತಿಸಲ್ಪಟ್ಟಿದ್ದಾರೆ.


ಕಂಪೆನಿಯ ಅಧ್ಯಕ್ಷರೂ ತಮಾಕಿ ಅವರಿಗಿಂತ 12 ವರ್ಷ ಕಿರಿಯರಾಗಿದ್ದಾರೆ. ವಾರದಲ್ಲಿ 5 ದಿನಗಳ ಕಾಲ ಕೆಲಸ ಮಾಡುವ ಇವರು ಪ್ರತಿದಿನ ಬೆಳಗ್ಗೆ 9 ಗಂಟೆಗೆ ಪ್ರಾರಂಭಿಸಿ ಸಂಜೆ 5 ಗಂಟೆಗೆ ಮುಗಿಸುತ್ತಾರೆ.
ಕಂಪ್ಯೂಟರ್ ಕೆಲಸದಲ್ಲಿ ಪರಿಣತಿ ಪಡೆದಿರುವ ಇವರು ಯುವಕರಿಗಿಂತ ವೇಗವಾಗಿ ಕಂಪ್ಯೂಟರ್ ನಲ್ಲಿ ಕೆಲಸವನ್ನು ಮಾಡಿ ಮುಗಿಸುತ್ತಾರೆ.

ತಮಾಕಿ ಅವರಿಗೆ ತಮ್ಮ ಮೇಜಿನ ಬಳಿಯೇ ಸಾಯಬೇಕು ಎನ್ನುವ ಇಚ್ಛೆ ಇದೆ ಎನ್ನುತ್ತಾರೆ ಕಂಪೆನಿಯ ವ್ಯವಹಾರಗಳ ವಿಭಾಗದ ಮುಖ್ಯಸ್ಥ ಹಿರೋಹಿಕೊ ಸಾಟೊ ಹೇಳಿದರು.

ಕಂಪೆನಿಯಲ್ಲಿ ಸುದೀರ್ಘ ವೃತ್ತಿಜೀವನವನ್ನು ನಡೆಸಿರುವ ತಮಾಕಿ ಪ್ರಸ್ತುತ ಹೊಸ ಉದ್ಯೋಗಿಗಳಿಗೆ ತರಬೇತಿ ನೀಡುತ್ತಾರೆ, ಕಂಪೆನಿಯ ಸಾಮಾನ್ಯ ವ್ಯವಹಾರಗಳ ವಿಭಾಗದಲ್ಲಿ ಲೆಕ್ಕಪತ್ರ ನಿರ್ವಹಣೆ ಮತ್ತು ಇತರ ಕ್ಲೆರಿಕಲ್ ಕಾರ್ಯವಿಧಾನಗಳನ್ನು ನಡೆಸುತ್ತಾರೆ. ಕಂಪೆನಿಯಲ್ಲಿ ಈಗ 430 ಕ್ಕೂ ಹೆಚ್ಚು ಉದ್ಯೋಗಿಗಳಿದ್ದು, ತಮಾಕಿ ಅವರು 1956 ರಲ್ಲಿ ವೃತ್ತಿ ಪ್ರಾರಂಭಿಸಿದಾಗ ಕೇವಲ 20 ಮಂದಿಯಷ್ಟೇ ಇದ್ದರು. ಕಂಪೆನಿಯ ಸಂಪೂರ್ಣ ಬೆಳವಣಿಗೆಯನ್ನು ಅವರು ವೀಕ್ಷಿಸಿದ್ದಾರೆ.

40ನೇ ವಯಸ್ಸಿನಲ್ಲಿ ತಮಾಕಿ ಅವರು ವಿಭಾಗದ ಮುಖ್ಯಸ್ಥರಾದರು. ನಿವೃತ್ತಿಯ ವಯಸ್ಸನ್ನು ದಾಟಿದ ಮೇಲೂ ಅವರು ನಿವೃತ್ತಿಯಾಗುವ ಯಾವುದೇ ಯೋಜನೆಯನ್ನು ಹೊಂದಿಲ್ಲ. ಅವರು ತಮ್ಮ ಕೌಶಲವನ್ನು ಬೆಳೆಸಿಕೊಳ್ಳಲು ತರಬೇತಿಯನ್ನು ಪಡೆಯುತ್ತಲೇ ಇರುತ್ತಾರೆ. 67 ನೇ ವಯಸ್ಸಿನಲ್ಲಿ ಕಂಪ್ಯೂಟರ್ ಕಲಿತಿರುವ ಅವರು, 70 ನೇ ವಯಸ್ಸಿನಲ್ಲಿ ಸ್ಕೀ ರೆಸಾರ್ಟ್‌ಗೆ ಹೋಗಿದ್ದರು. 86 ನೇ ವಯಸ್ಸಿನಲ್ಲಿ ತಮ್ಮ ಶಿಕ್ಷಣವನ್ನು ಮುಂದುವರಿಸುವ ನಿರ್ಧಾರ ಕೈಗೊಂಡರು.


ಅಧಿಕೃತ ನಿವೃತ್ತಿ ವಯಸ್ಸು ಎಂದರೆ ಏನೂ ಅಲ್ಲ ಎನ್ನುವ ತಮಾಕಿ, ನನಗೆ ಭವಿಷ್ಯವಿದೆ. ನಾಳೆಗಾಗಿ ನಾನು ವರ್ತಮಾನದಲ್ಲಿ ಬಲವಾಗಿ ಬದುಕುತ್ತೇನೆ ಎನ್ನುತ್ತಾರೆ.


ಗಿನ್ನೆಸ್ ದಾಖಲೆ

90 ನೇ ವಯಸ್ಸಿನಲ್ಲಿ ವಿವಿಧ ಸಾಮಾಜಿಕ ಮಾಧ್ಯಮದ ಮೂಲಕ ಹೆಚ್ಚು ಪ್ರಚಾರ ಪಡೆದ ಅವರನ್ನು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ ಸಂಸ್ಥೆಯು ಗುರುತಿಸಿದೆ. ವಿಶ್ವದ ಅತ್ಯಂತ ಹಳೆಯ ಸಾಮಾನ್ಯ ವ್ಯವಹಾರಗಳ ವಿಭಾಗದ ಉದ್ಯೋಗಿ ಎಂಬ ಪ್ರಮಾಣಪತ್ರವನ್ನು ನೀಡಿ ಗೌರವಿಸಿದೆ.

ಇದನ್ನೂ ಓದಿ: Indian origin family killed: ಟೆಕ್ಸಾಸ್‌ನಲ್ಲಿ ಭೀಕರ ಅಪಘಾತ; ಭಾರತೀಯ ಮೂಲದ ದಂಪತಿ, ಮಗಳು ದುರ್ಮರಣ

ಜೀವನದಲ್ಲಿ ಮದುವೆಯನ್ನೇ ಆಗದ ತಮಾಕಿ ಕಂಪೆನಿಯನ್ನೇ ತನ್ನ ಸಂಗಾತಿಯನ್ನಾಗಿ ಮಾಡಿಕೊಂಡಿದ್ದಾರೆ. ಈ ವಿಶ್ವದಲ್ಲಿ ನಾನೊಬ್ಬನೇ ಎಷ್ಟು ದೂರ ನಡೆಯಲು ಸಾಧ್ಯವೋ ಎಂಬುದನ್ನು ನೋಡಲು ಶ್ರಮಿಸುತ್ತೇನೆ ಎನ್ನುತ್ತಾರೆ ತಮಾಕಿ.

Exit mobile version