Site icon Vistara News

ವಿಸ್ತಾರ PF Info| ಪಿಎಫ್‌ನ 1.59 ಲಕ್ಷ ಕೋಟಿ ರೂ. ಷೇರು ಹೂಡಿಕೆಯ ಮೌಲ್ಯ 2.26 ಲಕ್ಷ ಕೋಟಿ ರೂ.ಗೆ ಏರಿಕೆ

epfo

ನವ ದೆಹಲಿ: ಉದ್ಯೋಗಿಗಳ ನಿವೃತ್ತಿನಿಧಿ ಮಂಡಳಿ ಎಪಿಎಫ್‌ಒ, (ವಿಸ್ತಾರ PF Info) ೨೦೨೨ರ ಮಾರ್ಚ್‌ ತನಕ ಎಕ್ಸ್‌ಚೇಂಜ್‌ ಟ್ರೇಡೆಡ್‌ ಫಂಡ್‌ಗಳಲ್ಲಿ (Exchange Traded Funds-ETF) ಹೂಡಿಕೆ ಮಾಡಿರುವ ೧,೫೯,೨೯೯ ಕೋಟಿ ರೂ.ಗಳ ಹೂಡಿಕೆಯ ಮೌಲ್ಯ ಈಗ ೨,೨೬,೯೧೯ ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಸಂಸತ್ತಿಗೆ ಸೋಮವಾರ ತಿಳಿಸಲಾಯಿತು. ಅಂದರೆ ಹೂಡಿಕೆಯ ಮೌಲ್ಯದಲ್ಲಿ ೬೭ ಸಾವಿರ ಕೋಟಿ ರೂ. ಹೆಚ್ಚಳವಾಗಿದೆ.

ಇಪಿಎಫ್‌ಒ ಕಳೆದ ೨೦೧೫ರಿಂದ ಇಟಿಎಫ್‌ಗಳಲ್ಲಿ ಹೂಡಿಕೆ ಮಾಡುತ್ತಿದೆ. ಇಟಿಎಫ್‌ಗಳ ಮೂಲಕ ಇಪಿಎಫ್‌ಒ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತದೆ. ಆರಂಭದಲ್ಲಿ ೫% ಹೆಚ್ಚುವರಿ ನಿಧಿಯನ್ನು ಹೂಡಿಕೆ ಮಾಡಲು ನಿರ್ಧರಿಸಲಾಗಿತ್ತು. ೨೦೧೬-೧೭ರಲ್ಲಿ ೧೦% ಮತ್ತು ೨೦೧೭-೧೮ರಿಂದ ೧೫%ಕ್ಕೆ ಏರಿಸಲಾಗಿದೆ.

ಈ ಬಗ್ಗೆ ಕಾರ್ಮಿಕ ಇಲಾಖೆಯ ಸಹಾಯಕ ಸಚಿವ ರಾಮೇಶ್ವರ ತೇಲಿ ಅವರು ಲೋಕಸಭೆಯಲ್ಲಿ ವಿವರಣೆ ನೀಡಿದರು. ಇಪಿಎಫ್‌ಒ ಕಳೆದ ಏಪ್ರಿಲ್-ಜೂನ್‌ ಅವಧಿಯಲ್ಲಿ ೧೨,೧೯೯ ಕೋಟಿ ರೂ.ಗಳನ್ನು ಇಟಿಎಫ್‌ನಲ್ಲಿ ಹೂಡಿಕೆ ಮಾಡಿತ್ತು.

ಷೇರು ಪೇಟೆಯಲ್ಲಿ ಪಿಎಫ್‌ ಹೂಡಿಕೆ 1,59,299 ಕೋಟಿ ರೂ
ಈಗಿನ ಮೌಲ್ಯ 2,26,919 ಕೋಟಿ ರೂ.
ಏರಿಕೆ 67,620 ಕೋಟಿ ರೂ.
Exit mobile version