ನವ ದೆಹಲಿ: ದೇಶದಲ್ಲಿ ಗೇಮಿಂಗ್ ಇಂಡಸ್ಟ್ರಿ 2022-23ರಲ್ಲಿ 1 ಲಕ್ಷ ಹೊಸ ಉದ್ಯೋಗಗಳನ್ನು (Gaming Industry jobs) ಸೃಷ್ಟಿಸಬಹುದು ಎಂದು ಟೀಮ್‌ಲೀಸ್ ಡಿಜಿಟಲ್ ತನ್ನ ವರದಿಯಲ್ಲಿ ತಿಳಿಸಿದೆ.
ಟೀಮ್‌ಲೀಸ್ ತನ್ನ Gaming: Tomorrow’s Blockbuster ವರದಿಯಲ್ಲಿ ಗೇಮಿಂಗ್, ಪ್ರೋಗ್ರಾಮಿಂಗ್, ಟೆಸ್ಟಿಂಗ್, ಆನಿಮೇಶನ್, ಡಿಸೈನ್ ವಲಯದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಇವೆ ಎಂದು ತಿಳಿಸಿದೆ.
ಪ್ರಸ್ತುತ ಈ ವಲಯ ನೇರವಾಗಿ 50,000 ಮಂದಿಗೆ ಉದ್ಯೋಗ ನೀಡಿದೆ. ಇದರಲ್ಲಿ 30% ಮಂದಿ ಪ್ರೋಗ್ರಾಮರ್ಸ್ ಮತ್ತು ಡೆವಲಪರ್ಸ್ ಆಗಿದ್ದಾರೆ. ಮುಂದಿನ ವರ್ಷ ಗೇಮ್ ಡೆವಲಪರ್ಸ್, ಯುನಿಟಿ ಡೆವಲಪರ್ಸ್, ಟೆಸ್ಟಿಂಗ್, ಎಂಜಿನಿಯರಿಂಗ್, ಕ್ಯೂಎ ಲೀಡ್, ಮೋಶನ್ ಗ್ರಾಫಿಕ್ ಡಿಸೈನ್, ವರ್ಚುವಲ್ ರಿಯಾಲಿಟಿ ಡಿಸೈನ್, ಕಂಟೆಂಟ್ ರೈಟಿಂಗ್, ವೆಬ್ ಅನಾಲಿಸಿಸ್ ಇತ್ಯಾದಿ ವಿಭಾಗಗಳಲ್ಲಿ ಉದ್ಯೋಗಗಳು ಸೃಷ್ಟಿಯಾಗಲಿದೆ ಎಂದು ವರದಿ ತಿಳಿಸಿದೆ.
ಸಂಬಳ ಎಷ್ಟು?
ಗೇಮಿಂಗ್ ಇಂಡಸ್ಟ್ರಿಯಲ್ಲಿ ಗೇಮ್ ಪ್ರೊಡ್ಯೂಸರ್ಸ್‌ಗೆ (Game producers) ವಾರ್ಷಿಕ 10 ಲಕ್ಷ ರೂ. ವೇತನ ಲಭಿಸಲಿದೆ. ಗೇಮ್ ಡಿಸೈನರ್‌ಗಳಿಗೆ ವಾರ್ಷಿಕ 6.5 ಲಕ್ಷ ರೂ, ಸಾಫ್ಟ್‌ವೇರ್ ಎಂಜಿನಿಯರ್‌ಗಳಿಎ ವಾರ್ಷಿಕ 5.5 ಲಕ್ಷ ರೂ, ಗೇಮ್ ಡೆವಲಪರ್‌ಗಳಿಗೆ ವಾರ್ಷಿಕ 5.25 ಲಕ್ಷ ರೂ, ಕ್ಯೂಎ ಟೆಸ್ಟರ್‌ಗಳಿಗೆ ವಾರ್ಷಿಕ 5.11 ಲಕ್ಷ ರೂ. ವೇತನ ಇದೆ.
ಗೇಮಿಂಗ್ ಇಂಡಸ್ಟ್ರಿಯಲ್ಲಿ ಬಳಕೆದಾರರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದೆ. ಇಲ್ಲಿ ವೈವಿಧ್ಯಮಯವಾದ ಉದ್ಯೋಗಗಳು ಸೃಷ್ಟಿಯಾಗುತ್ತಿದೆ ಎಂದು ಟೀಮ್‌ಲೀಸ್ ವರದಿ ತಿಳಿಸಿದೆ.