Site icon Vistara News

Salary package | ಐಐಟಿ ವಿದ್ಯಾರ್ಥಿಗೆ 4 ಕೋಟಿ ರೂ. ವೇತನ ಘೋಷಿಸಿದ ಜಾನೆ ಸ್ಟ್ರೀಟ್

IIT

ನವ ದೆಹಲಿ: ಭಾರತದ ಉನ್ನತ ತಂತ್ರಜ್ಞಾನ ಶಿಕ್ಷಣ ಸಂಸ್ಥೆಗಳಾದ ಐಐಟಿಗಳಲ್ಲಿ (Indian Institutes of Technology) ಈ ವರ್ಷದ ಕೊನೆಯ ಹಂತದ ಪ್ಲೇಸ್‌ಮೆಂಟ್‌ ಪ್ರಕ್ರಿಯೆ ಆರಂಭವಾಗಿದೆ. ಟ್ರೇಡಿಂಗ್‌ ಕಂಪನಿ ಜಾನೆ ಸ್ಟ್ರೀಟ್‌, ಮೊಟ್ಟ ಮೊದಲ ಬಾರಿಗೆ 4 ಕೋಟಿ ರೂ.ಗಳ ವೇತನ ಪ್ಯಾಕೇಜ್‌ ( Salary package ) ಅನ್ನು ಪ್ರಕಟಿಸಿದೆ.

ದಿಲ್ಲಿ, ಬಾಂಬೆ ಮತ್ತು ಕಾನ್ಪುರದ ಐಐಟಿಗಳಲ್ಲಿ ಕನಿಷ್ಠ ಮೂವರು ವಿದ್ಯಾರ್ಥಿಗಳನ್ನು ಜಾನೆ ಸ್ಟ್ರೀಟ್‌, ಸಂದರ್ಶನದ ಮೊದಲ ದಿನ ನೇಮಕ ಮಾಡಿಕೊಳ್ಳುತ್ತಿದೆ. ಇವರು 4 ಕೋಟಿ ರೂ. ವೇತನ ಪಡೆಯಲಿದ್ದಾರೆ. ಈ ವರ್ಷ ಒಟ್ಟಾರೆಯಾಗಿ ನೇಮಕಾತಿ ಮಂದಗತಿಯಲ್ಲಿ ಇತ್ತು.

ಜಾಗತಿಕ ಆರ್ಥಿಕ ಹಿಂಜರಿತದ ಭೀತಿ, ತಂತ್ರಜ್ಞಾನ ವಲಯದಲ್ಲಿ ಉದ್ಯೋಗ ಕಡಿತದ ನಿರೀಕ್ಷೆ ನಕಾರಾತ್ಮಕ ಪ್ರಭಾವ ಬೀರಿತ್ತು. ಹೀಗಿದ್ದರೂ, ಕೊನೆಯ ಹಂತದ ಪ್ಲೇಸ್‌ಮೆಂಟ್‌ ಸೀಸನ್‌, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ, ಚೇತರಿಸಿದೆ.

ಕಳೆದ ವಷ ಉಬರ್‌ ಕಂಪನಿ ಗರಿಷ್ಠ 2.16 ಕೋಟಿ ರೂ. ವೇತನ ಘೋಷಿಸಿತ್ತು. ಈ ವರ್ಷ ಐಐಟಿ ರೂರ್ಕೆಯಲ್ಲಿ ವಿದ್ಯಾರ್ಥಿಗಳಿಗೆ 1.06 ಕೋಟಿ ರೂ.ಗಳ ಆಫರ್‌ ಲಭಿಸಿತ್ತು. ಐಐಟಿ ಮದ್ರಾಸ್‌ನಲ್ಲಿ 25 ವಿದ್ಯಾರ್ಥಿಗಳಿಗೆ 1 ಕೋಟಿ ರೂ.ಗಿಂತ ಹೆಚ್ಚಿನ ವೇತನ ಆಫರ್‌ ಸಿಕ್ಕಿದೆ.

Exit mobile version