ನವದೆಹಲಿ: ಪ್ರತಿಭಾವಂತರ ಪ್ರಯತ್ನಕ್ಕೆ ಫಲ ಸಿಕ್ಕೇ ಸಿಗುತ್ತದೆ ಎಂಬುದಕ್ಕೆ ಮತ್ತೊಂದು ಉದಾಹರಣೆ ದೊರೆತಿದೆ. ಪಾಟ್ನಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (NIT Patna) ವಿದ್ಯಾರ್ಥಿ ಅಭಿಷೇಕ್ ಕುಮಾರ್ (Abhishek Kumar) ಅವರು ದಾಖಲೆಯ ವಾರ್ಷಿಕ ಸಂಬಳದೊಂದಿಗೆ ಅಮೆಜಾನ್ (Amazon) ಕಂಪನಿಗೆ ಆಯ್ಕೆಯಾಗಿದ್ದಾರೆ. ಕಂಪನಿಯು ಅವರಿಗೆ ವರ್ಷಕ್ಕೆ 1.8 ಕೋಟಿ ರೂ. ಪ್ಯಾಕೇಜ್ (Job offer) ನೀಡಿದೆ. ಹಾಗೆ ನೋಡಿದರೆ, ಎನ್ಐಟಿ ಸಂಸ್ಥೆಯಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಸಂಬಳದ ಪ್ಯಾಕೇಜ್‌ಗೆ ಆಯ್ಕೆಯಾಗಿರುವುದು ಇದೇ ಮೊದಲು. ಇದರೊಂದಿಗೆ ಅಭಿಷೇಕ್ ಅವರು ದಾಖಲೆ ಬರೆದಿದ್ದಾರೆ.
ಝಾಝಾ ಮೂಲದ ಅಭಿಷೇಕ್ ಕುಮಾರ್ ಅವರು ಕಂಪ್ಯೂಟರ್ ಸೈನ್ಸ್ ಓದುತ್ತಿದ್ದಾರೆ. ಅಭಿಷೇಕ್ ಕುಮಾರ್ ಅವರು ಕಂಪ್ಯೂಟರ್ ಸೈನ್ಸ್ ಓದಿದ್ದಾರೆ. 2021 ಡಿಸೆಂಬರ್ 13ರಂದು ಕೋಡಿಂಗ್ ಪರೀಕ್ಷೆ ಬರೆದಿದ್ದ ಅಭಿಷೇಕ್ ಕುಮಾರ್ ಅವರಿಗೆ ಅಮೆಜಾನ್ ಕಂಪನಿಯು 2022 ಏಪ್ರಿಲ್ 21ರಂದು ಆಯ್ಕೆಯಾಗಿದ್ದಾರೆಂದು ತಿಳಿಸಿತ್ತು. ಇದಕ್ಕೂ ಮೊದಲು ಏಪ್ರಿಲ್ 13ರಂದು ಅವರು ಮತ್ತೊಂದು ಸುತ್ತಿನ ಸಂದರ್ಶನ ಕೂಡ ಎದುರಿಸಿದ್ದರು. ಜರ್ಮನಿ ಮತ್ತು ಐರ್ಲೆಂಡ್‌ನ ಎಕ್ಸ್‌ಪರ್ಟ್ಸ್ ಅಭಿಷೇಕ್ ಅವರನ್ನು ಸಂದರ್ಶಿಸಿದ್ದರು. ಅಭಿಷೇಕ್ ಅವರು ತಮ್ಮ ಬ್ಲಾಕ್‌ಚೈನ್ ಪ್ರಸ್ತಾವನೆಯಿಂದ ಸಂದರ್ಶಕರು ಬಹಳಷ್ಟು ಪ್ರಭಾವಗೊಂಡಿದ್ದರು ಎನ್ನಲಾಗಿದೆ.
ಅಭಿಷೇಕ್ ಕುಮಾರ್ ಅವರಿಗಿಂತ ಮೊದಲು ಎನ್‌ಐಟಿ ಪಾಟ್ನಾದ ಅದಿತಿ ತಿವಾರಿ ಅವರು ಫೇಸ್‌ಬುಕ್‌ನಿಂದ ಅತಿದೊಡ್ಡ ವೇತನ ಪ್ಯಾಕೇಜ್ ಪಡೆದುಕೊಂಡಿದ್ದರು. ಅದಿತಿ ಅವರನ್ನು ಫೇಸ್‌ಬುಕ್ 1.6 ಕೋಟಿ ರೂ. ನೀಡಿ ನೇಮಕ ಮಾಡಿಕೊಂಡಿತ್ತು. ಅವರು ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ಸ್ ಎಂಜಿನಿಯರಿಂಗ್ (ECE) ವಿದ್ಯಾರ್ಥಿನಿಯಾಗಿದ್ದರು. ಫೇಸ್‌ಬುಕ್‌ನಲ್ಲಿ ಫ್ರಂಟ್ ಎಂಡ್ ಇಂಜಿನಿಯರ್ ಆಗಿ ಕೆಲಸ ಮಾಡಲು ಆಯ್ಕೆಯಾಗಿದ್ದರು. ದರು. ಅದಿತಿ ತಿವಾರಿ ಅವರ ತಾಯಿ ಶಿಕ್ಷಕಿಯಾಗಿದ್ದರೆ, ತಂದೆ ಟಾಟಾ ಸ್ಟೀಲ್‌ನಲ್ಲಿ ಕೆಲಸ ಮಾಡುತ್ತಾರೆ. ಅದಿತಿ ತಿವಾರಿಗಿಂತಲೂ ಮೊದಲು ಪಾಟ್ನಾದ ಸಂಪ್ರೀತಿ ಯಾದವ್ ಅವರನ್ನು ಗೂಗಲ್ ವರ್ಷಕ್ಕೆ 1.11 ಕೋಟಿ ರೂ. ಪ್ಯಾಕೇಜ್‌ನೊಂದಿಗೆ ನೇಮಕ ಮಾಡಿಕೊಂಡಿತ್ತು.
ಈ ಸುದ್ದಿಯನ್ನೂ ಓದಿ: Video | ಆನ್ಲೈನ್ನಲ್ಲಿ ಬಂದ ಜಾಬ್ ಆಫರ್ ನಕಲಿಯೋ? ಅಸಲಿಯೋ?-ಪತ್ತೆ ಹಚ್ಚುವ 5 ವಿಧಾನ ತಿಳಿಸಿದ ಕೇಂದ್ರ ಸರ್ಕಾರ
ಪಾಟ್ನಾ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಓದುತ್ತಿರುವ ಬಹಳಷ್ಟು ವಿದ್ಯಾರ್ಥಿಗಳು ಒಳ್ಳೆಯ ಸಂಬಳಕ್ಕೆ ಆಯ್ಕೆಯಾಗುವ ಇತಿಹಾಸವನ್ನು ಹೊಂದಿದ್ದಾರೆ. ಐಐಐಟಿ-ಲಕ್ನೋ ವಿದ್ಯಾರ್ಥಿ ಅಭಿಜಿತ್ ದ್ವಿವೇದಿ ಅವರು 1.2 ರೂ. ವಾರ್ಷಿಕ ಸಂಬಳದೊಂದಿಗೆ ಅಮೆಜಾನ್ ಕಂಪನಿಗೆ ಆಯ್ಕೆಯಾಗಿದ್ದರು. ಈ ಎಲ್ಲ ವಿದ್ಯಾರ್ಥಿಗಳ ಉದಾಹರಣೆಗಳು ಪ್ರತಿಭಾವಂತರಿಗೆ ಎಲ್ಲಡೆ ಮನ್ನಣೆ ದೊರೆಯುತ್ತದೆ ಎಂಬುದನ್ನು ಸಾಬೀತುಪಡಿಸುತ್ತದೆ.
ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.