Site icon Vistara News

ಅಗ್ನಿಪಥ್‌ಗೆ ಭರ್ಜರಿ ಡಿಮಾಂಡ್‌, ವಾಯುಪಡೆಯ 3,000 ಹುದ್ದೆಗಳಿಗೆ 3 ದಿನಗಳಲ್ಲಿ 56,960 ಅರ್ಜಿ ಸ್ವೀಕಾರ

airforce

ನವದೆಹಲಿ: ಆರಂಭದಲ್ಲಿ ತೀವ್ರ ಹಿಂಸಾತ್ಮಕ ಪ್ರತಿಭಟನೆಗೆ ಸಾಕ್ಷಿಯಾಗಿದ್ದ ಸೇನೆಯ ಹೊಸ ನೇಮಕಾತಿ ಯೋಜನೆ ಅಗ್ನಿಪಥ್‌ಗೆ ಇದೀಗ ಭರ್ಜರಿ ಬೇಡಿಕೆ ವ್ಯಕ್ತವಾಗಿದೆ.

ಭಾರತೀಯ ವಾಯಪಡೆ ಅಗ್ನಿಪಥ್‌ ಯೋಜನೆಯ ಅಡಿಯಲ್ಲಿ ೩,೦೦೦ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಶುರು ಮಾಡಿದೆ. ಈ ೩ ಸಾವಿರ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದ ಮೂರೇ ದಿನಗಳಲ್ಲಿ ಬರೊಬ್ಬರಿ ೫೬,೯೬೦ ಅರ್ಜಿಗಳು ಸಲ್ಲಿಕೆಯಾಗಿವೆ. ಈ ಬಗ್ಗೆ ವಾಯುಪಡೆ ಟ್ವೀಟ್‌ ಮಾಡಿದೆ.

ಇದರೊಂದಿಗೆ ಅಗ್ನಿಪಥ್‌ ಯೋಜನೆಗೆ ಉದ್ಯೋಗಾಕಾಂಕ್ಷಿಗಳಿಂದ ಭರ್ಜರಿ ಸ್ಪಂದನೆ ಲಭಿಸಿದಂತಾಗಿದೆ. ಕೆಲ ರಾಜ್ಯಗಳಲ್ಲಿ ಯೋಜನೆ ವಿರುದ್ಧ ಹಿಂಸಾಚಾರ ನಡೆದಿದ್ದರೂ, ಉದ್ಯೋಗಾಕಾಂಕ್ಷಿಗಳು ಯೋಜನೆಯ ಪರ ಇರುವುದನ್ನು ಈ ಜನಸ್ಪಂದನೆ ಬಿಂಬಿಸಿದೆ.

ವಾಯಪಡೆಗೆ ಈ ವರ್ಷ ೩,೦೦೦ ಅಗ್ನಿವೀರರನ್ನು ನೇಮಿಸಲಾಗುತ್ತಿದ್ದು, ನೇಮಕಾತಿ ಪ್ರಕ್ರಿಯೆ ಜುಲೈ ೫ಕ್ಕೆ ಮುಕ್ತಾಯವಾಗಲಿದೆ. ಎರಡು ಹಂತಗಳಲ್ಲಿ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಯ ಬಳಿಕ, ಡಿಸೆಂಬರ್‌ ೩೦ರಿಂದ ತರಬೇತಿ ಶುರುವಾಗಲಿದೆ.

Exit mobile version