Site icon Vistara News

Agnipath scheme : ಅಗ್ನಿಪಥ್‌ ಯೋಜನೆಯ ಸಿಂಧುತ್ವ ಎತ್ತಿ ಹಿಡಿದ ದಿಲ್ಲಿ ಹೈಕೋರ್ಟ್, ನ್ಯಾಯಾಲಯ ಹೇಳಿದ್ದೇನು?

Agnipath scheme

Indian Army Releases Admit Card For Agniveer Exam 2023

ನವ ದೆಹಲಿ: ದಿಲ್ಲಿ ಹೈಕೋರ್ಟ್‌ ಅಗ್ನಿಪಥ್‌ ಯೋಜನೆಯ ಸಿಂಧುತ್ವವನ್ನು (Agnipath scheme) ಎತ್ತಿ ಹಿಡಿದಿದೆ. ಸಶಸ್ತ್ರ ಸೇನಾಪಡೆಗಳ ಈ ಅಲ್ಪಾವಧಿಯ ನೇಮಕಾತಿ ಯೋಜನೆಯಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ನ್ಯಾಯಾಲಯ( Delhi High court) ತಿಳಿಸಿದೆ. ಈ ಕುರಿತ ಎಲ್ಲ ಅರ್ಜಿಗಳನ್ನು ವಜಾಗೊಳಿಸಿದೆ. ಮುಖ್ಯನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬರಮಣಿಯಂ ಪ್ರಸಾದ್‌ ಅವರನ್ನು ಒಳಗೊಂಡಿದ್ದ ಪೀಠ ತೀರ್ಪು ನೀಡಿದೆ.

ಅಗ್ನಿಪಥ್‌ ಯೋಜನೆಯನ್ನು ರಾಷ್ಟ್ರೀಯ ಹಿತಾಸಕ್ತಿಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ರಚಿಸಲಾಗಿದೆ ಎಂಬುದನ್ನು ಕೋರ್ಟ್‌ ಪರಿಗಣಿಸಿದೆ. ಇದು ಸಶಸ್ತ್ರಪಡೆಗಳನ್ನು ಬಲಪಡಿಸಲಿದೆ. ಇದರಲ್ಲಿ ಮಧ್ಯಪ್ರವೇಶ ಮಾಡಲು ಯಾವುದೇ ಕಾರಣಗಳಿಲ್ಲ ಎಂದು ಕೋರ್ಟ್‌ ಹೇಳಿದೆ.

ಅಗ್ನಿಪಥ್‌ ಯೋಜನೆಯನ್ನು 2022ರ ಜೂನ್‌ 14ರಂದು ಅನಾವರಣಗೊಳಿಸಲಾಯಿತು. ಯೋಜನೆಯಡಿಯಲ್ಲಿ 17 ಮತ್ತು 21 ವರ್ಷ ವಯೋಮಿತಿಯ ಯುವಜನತೆ 4 ವರ್ಷಗಳ ಅವಧಿಗೆ ನೇಮಕವಾಗಲು ಅರ್ಜಿಸಲ್ಲಿಸಬಹುದು. ಆಯ್ಕೆಯಾದವರನ್ನು ಅಗ್ನಿವೀರರು ಎಂದು ಕರೆಯಲಾಗುತ್ತದೆ. ಅಗ್ನಿಪಥ್‌ ವಿರುದ್ಧ ಹಲವಾರು ಅರ್ಜಿಗಳು ಕೋರ್ಟ್‌ನಲ್ಲಿ ದಾಖಲಾಗಿತ್ತು. ಸುಪ್ರೀಂಕೋರ್ಟ್‌ ಅವುಗಳನ್ನು ದಿಲ್ಲಿ ಹೈಕೋರ್ಟ್‌ಗೆ ವರ್ಗಾಯಿಸಿತ್ತು.

ಅಗ್ನಿಪಥ್‌ ಯೋಜನೆ ವಿರುದ್ಧ ಕಳೆದ ವರ್ಷ ನಾನಾ ರಾಜ್ಯಗಳಲ್ಲಿ ನಡೆದ ಪ್ರತಿಭಟನೆ ಹಿಂಸಾತ್ಮಕವಾಗಿತ್ತು. ಹಲವಾರು ರೈಲುಗಳಿಗೆ ಬೆಂಕಿ ಹಚ್ಚಲಾಗಿತ್ತು. ರೈಲ್ವೆ ನಿಲ್ದಾಣಗಳಿಗೆ ಹಾನಿಯಾಗಿತ್ತು. ಸಾವಿರಾರು ಕೋಟಿ ರೂ. ನಷ್ಟವಾಗಿತ್ತು.

Exit mobile version