ನವ ದೆಹಲಿ: ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್ಒ ಜೂನ್ 2023ರಲ್ಲಿ ಒಟ್ಟು 17.89 ಲಕ್ಷ ಸದಸ್ಯರನ್ನು ನೋಂದಾಯಿಸಿಕೊಂಡಿದೆ ಎಂದು ಕಾರ್ಮಿಕ ಸಚಿವಾಲಯ ಹೇಳಿಕೆ ನೀಡಿದೆ. 3,491 ಸಂಸ್ಥೆಗಳು ತಮ್ಮ ಮೊದಲ ಇಸಿಆರ್ ಅನ್ನು ಜೂನ್ ತಿಂಗಳಲ್ಲಿ ಕಳುಹಿಸುವ ಮೂಲಕ ತಮ್ಮ ಉದ್ಯೋಗಿಗಳಿಗೆ ಇಪಿಎಫ್ಒನ ಸಾಮಾಜಿಕ ಭದ್ರತೆಯನ್ನು ಕಲ್ಪಿಸಿವೆ ಎಂದು ಕಾರ್ಮಿಕ ಸಚಿವಾಲಯ ತಿಳಿಸಿದೆ.
ವೇತನದಾರರ ಅಂಕಿ ಅಂಶದ ಮಾಸಿಕ ಹೋಲಿಕೆಯು 2023ರ ಮೇ ತಿಂಗಳಿಗೆ ಹೋಲಿಸಿದರೆ ಸುಮಾರು 9.71 ಪ್ರತಿಶತದಷ್ಟು ಹೆಚ್ಚಳ ಕಂಡು ಬಂದಿದೆ. ಅದೇ ರೀತಿ ಒಟ್ಟಾರೆ ಸೇರ್ಪಡೆಯೂ ಆಗಸ್ಟ್ 2022 ರಿಂದ ಕಳೆದ 11 ತಿಂಗಳಲ್ಲಿ ಅತಿ ಹೆಚ್ಚು ಸಂಖ್ಯೆಯ ದಾಖಲೆಯನ್ನು ಸೃಷ್ಟಿಸಿದೆ.
ಜೂನ್ 2023 ರಲ್ಲಿ ಸುಮಾರು 10.14 ಲಕ್ಷ ಹೊಸ (ಮೊದಲ ಬಾರಿಗೆ) ಸದಸ್ಯರು ನೋಂದಾಯಿಸಿಕೊಂಡಿದ್ದಾರೆ ಎಂದು ಡೇಟಾ ಸೂಚಿಸುತ್ತದೆ. ಇದು ಆಗಸ್ಟ್ 2022ರ ನಂತರದ ಗರಿಷ್ಠ ಪ್ರಮಾಣವಾಗಿದೆ. ಹೊಸದಾಗಿ ಸೇರ್ಪಡೆಗೊಂಡ ಸದಸ್ಯರಲ್ಲಿ, 18-25 ವರ್ಷ ವಯಸ್ಸಿನವರು. ಈ ವಯಸ್ಸಿನ ಹೊಸ ಸದಸ್ಯರ ಶೇಕಡಾ 57.87 ರಷ್ಟಿದೆ. ಇದು ಯುವಕರ ದಾಖಲಾತಿಯಲ್ಲಿ ಹೆಚ್ಚುತ್ತಿರುವುದನ್ನು ಖಚಿತಪಡಿಸಿದೆ. ಅವರೆಲ್ಲರೂ ಮೊದಲ ಬಾರಿಗೆ ಉದ್ಯೋ ಪಡೆದವರಾಗಿದ್ದು. ದೇಶದ ಸಂಘಟಿತ ವಲಯಕ್ಕೆ ಸೇರುತ್ತಾರೆ ಎಂದು ಸಚಿವಾಲಯ ಹೇಳಿದೆ.
ಇದನ್ನೂ ಓದಿ: Tourism Students Conclave : ಪ್ರವಾಸೋದ್ಯಮ ಶಿಕ್ಷಣದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಹೆಚ್ಚಳ
ವೇತನದಾರರ ಅಂಕಿಅಂಶಗಳ ಪ್ರಕಾರ, ಸರಿಸುಮಾರು 12.65 ಲಕ್ಷ ಸದಸ್ಯರು ನಿರ್ಗಮಿಸಿದ್ದಾರೆ. ಆದರೆ ಅವರು ಮರಳಿ ನೋಂದಣಿ ಮಾಡಿಕೊಂಡಿದ್ದಾರೆ. ಈ ಸದಸ್ಯರು ತಮ್ಮ ಉದ್ಯೋಗವನ್ನು ಬದಲಾಯಿಸಿದ್ದರು ಮತ್ತು ಇಪಿಎಫ್ಒ ಅಡಿಯಲ್ಲಿ ಬರುವ ಸಂಸ್ಥೆಗಳಿಗೆ ಮತ್ತೆ ಸೇರಿಕೊಂಡಿದ್ದಾರೆ. ಅವರೆಲ್ಲರೂ ತಮ್ಮ ಡೆಪಾಸಿಟ್ಗಳನ್ನು ವರ್ಗಾಯಿಸಿಕೊಂಡಿದ್ದಾರೆ. ಇದರಿಂದಾಗಿ ಅವರ ಸಾಮಾಜಿಕ ಭದ್ರತಾ ರಕ್ಷಣೆ ವಿಸ್ತರಣೆಗೊಂಡಿದೆ ಎಂಬುದಾಗಿ ಇಲಾಖೆ ಹೇಳಿದೆ.
2.81 ಲಕ್ಷ ಮಹಿಳೆಯರು
ವೇತನದಾರರ ಡೇಟಾದ ಪ್ರಕಾರ ಲಿಂಗವಾರು ವಿಶ್ಲೇಷಣೆಯು ಜೂನ್ ತಿಂಗಳಲ್ಲಿ ಸೇರ್ಪಡೆಗೊಂಡ ಒಟ್ಟು 10.14 ಲಕ್ಷ ಹೊಸ ಸದಸ್ಯರಲ್ಲಿ, ಸುಮಾರು 2.81 ಲಕ್ಷ ಮಹಿಳಾ ಸದಸ್ಯರು. ಅವರೆಲ್ಲರೂ ಮೊದಲ ಬಾರಿಗೆ ಇಪಿಎಫ್ಒಗೆ ಸೇರಿಕೊಂಡವರು. ಸಂಘಟಿತ ಕಾರ್ಯಪಡೆಗೆ ಸೇರುವ ಮಹಿಳಾ ಸದಸ್ಯರ ಶೇಕಡಾವಾರು ಕಳೆದ 11 ತಿಂಗಳಲ್ಲಿ ಅತ್ಯಧಿಕವಾಗಿದೆ ಎಂದು ಅಂಕಿ ಅಂಶಗಳು ಬಹಿರಂಗಪಡಿಸಿದೆ. ಜೂನ್ ತಿಂಗಳಲ್ಲಿ ಒಟ್ಟು ಮಹಿಳಾ ಸದಸ್ಯರ ಸೇರ್ಪಡೆ ಸುಮಾರು 3.93 ಲಕ್ಷವಾಗಿದ್ದು, ಇದು ಆಗಸ್ಟ್ 2022 ರ ನಂತರದ ಗರಿಷ್ಠವಾಗಿದೆ.
ಕರ್ನಾಟಕ್ಕೆ ಮೂರನೇ ಸ್ಥಾನ
ರಾಜ್ಯವಾರು ವಿಶ್ಲೇಷಣೆ ಪ್ರಕಾರ ಒಟ್ಟು ಸೇರ್ಪಡೆಯಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನವಿದೆ. ಮಹಾರಾಷ್ಟ್ರ, ತಮಿಳುನಾಡು ಮೊದಲ ಸ್ಥಾನ ಪಡೆದಿದೆ. ಗುಜರಾತ್ ಮತ್ತು ಹರಿಯಾಣ 5 ರಾಜ್ಯಗಳಲ್ಲಿ ಪಟ್ಟಿಯ ನಂತರದ ಎರಡು ರಾಜ್ಯಗಳು. ಈ ರಾಜ್ಯಗಳು ಒಟ್ಟು ಸದಸ್ಯರ ಸೇರ್ಪಡೆಯ ಶೇಕಡಾ 60.40 ರಷ್ಟು ಪಾಲು ಪಡೆದುಕೊಂಡಿದೆ. ಎಲ್ಲಾ ರಾಜ್ಯಗಳ ಪೈಕಿ ಮಹಾರಾಷ್ಟ್ರವು ಜೂನ್ ತಿಂಗಳಲ್ಲಿ ಶೇಕಡಾ 20.54 ರಷ್ಟು ಸದಸ್ಯರನ್ನು ಸೇರಿಸಿಕೊಂಡಿದೆ.