ಬೆಂಗಳೂರು, ಕರ್ನಾಟಕ: ಭಾರತದ ಸ್ವದೇಶಿ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ ಕಾರ್ಟ್ (Flipkart) ತನ್ನ ಬಹುನಿರೀಕ್ಷಿತ ದಿ ಬಿಗ್ ಬಿಲಿಯನ್ ಡೇಸ್ (The Big Billion Days – TBBD) ನ 10 ನೇ ಆವೃತ್ತಿಗೆ ಸಜ್ಜಾಗಿದೆ. ಹಬ್ಬದ ಋತು ಆರಂಭವಾಗಿದ್ದು, ಈ ಸಂದರ್ಭದಲ್ಲಿ ಗ್ರಾಹಕರ ಬೇಡಿಕೆಗಳನ್ನು ತ್ವರಿತವಾಗಿ ಪೂರೈಸುವ ನಿಟ್ಟಿನಲ್ಲಿ ಫ್ಲಿಪ್‌ಕಾರ್ಟ್ ದೇಶಾದ್ಯಂತ ಪೂರೈಕೆ ಜಾಲದಲ್ಲಿ ಲಕ್ಷಾಂತರ ಸಂದರ್ಭೋಚಿತ ಉದ್ಯೋಗಗಳನ್ನು (Employment Creation) ಸೃಷ್ಟಿ ಮಾಡುತ್ತಿದೆ.
ಪೂರೈಕೆ ಜಾಲದ ಶ್ರೇಷ್ಠತೆಯ ಅಡಿಪಾಯವನ್ನು ಹೊಂದಿರುವ ಫ್ಲಿಪ್ ಕಾರ್ಟ್ ತನ್ನ ವೈವಿಧ್ಯಮಯ ಮತ್ತು ವ್ಯಾಪಕ ಕಾರ್ಯಪಡೆಯನ್ನು ಹೊಂದಿದೆ. ಈ ಹಬ್ಬದ ಋತುವಿಗೆ ಮುಂಚಿತವಾಗಿ ಫ್ಲಿಪ್ ಕಾರ್ಟ್ ತನ್ನ ಪೂರೈಕೆ ಜಾಲವನ್ನು ನಿರ್ವಹಣೆ ಮಾಡುವ ಕೇಂದ್ರಗಳು, ವಿಂಗಡಣೆ ಕೇಂದ್ರಗಳು ಮತ್ತು ವಿತರಣಾ ಕೇಂದ್ರಗಳು ಸೇರಿದಂತೆ ವಿವಿಧೆಡೆ 1,00,000 ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮೂಲಕ ಜಾಲವನ್ನು ಮತ್ತಷ್ಟು ಸದೃಢಪಡಿಸಿಕೊಳ್ಳಲಿದೆ. ಈ ಮೂಲಕ ಸ್ಥಳೀಯ ಕಿರಾಣ ವಿತರಣಾ ಪಾಲುದಾರರು, ವಿಕಲಾಂಗ ವ್ಯಕ್ತಿಗಳು, ಮಹಿಳೆಯರು ಮತ್ತು ಇತರರಿಗೆ ಈ ಸಂದರ್ಭೋಚಿತ ಉದ್ಯೋಗಾವಕಾಶಗಳು ದೊರೆಯಲಿದ್ದು, ಅನನ್ಯವಾದ ಪೂರೈಕೆ ಜಾಲದ ಪ್ರತಿಭೆಗಳಿಗೆ ಅವಕಾಶ ಲಭ್ಯವಾಗಲಿದೆ. ಈ ವರ್ಷ ಫ್ಲಿಪ್ ಕಾರ್ಟ್ ತನ್ನ ಪೂರೈಕೆ ಜಾಲವನ್ನು ಕಟ್ಟಕಡೆಯ ವಿತರಣಾ ಹಬ್ ಗಳು ಮತ್ತು ದೊಡ್ಡ ಮಟ್ಟದ ಫುಲ್ ಫಿಲ್ಮೆಂಟ್ ಕೇಂದ್ರಗಳನ್ನು ಹೆಚ್ಚಿಸಿಕೊಳ್ಳುವ ಮೂಲಕ 3 ನೇ ಶ್ರೇಣಿಯ ನಗರಗಳು ಮತ್ತು ಅದರಾಚೆಗಿನ ಪ್ರದೇಶಗಳಲ್ಲಿ ತನ್ನ ವ್ಯಾಪ್ತಿಯನ್ನು ಬಲಪಡಿಸಿದೆ. ಉತ್ತರ ಪ್ರದೇಶ, ಗುಜರಾತ್, ಬಿಹಾರ, ಪಂಜಾಬ್, ರಾಜಸ್ಥಾನ, ತೆಲಂಗಾಣ ಮತ್ತು ಇನ್ನೂ ಹಲವು ರಾಜ್ಯಗಳಾದ್ಯಂತ 19 ಲಕ್ಷ ಚದರಡಿಗಳಷ್ಟು ಹೆಚ್ಚು ಜಾಗವನ್ನು ತನ್ನ ಜಾಲಕ್ಕೆ ಸೇರ್ಪಡೆ ಮಾಡಿಕೊಂಡಿದೆ.
ಕೊನೆಯ ಗ್ರಾಹಕನಿಗೂ ಆನಂದದಾಯಕ ಅನುಭವವನ್ನು ನೀಡುವ ನಿಟ್ಟಿನಲ್ಲಿ ಫ್ಲಿಪ್ ಕಾರ್ಟ್ ಪೂರೈಕೆ ಜಾಲಕ್ಕೆ ಸೇರಿಕೊಳ್ಳುವ ಹೊಸ ಉದ್ಯೋಗಿಗಳಿಗೆ ತನ್ನ ತರಬೇತಿ ಕಾರ್ಯಕ್ರಮಗಳ ಮೂಲಕ ವಿಶೇಷವಾದ ಕೌಶಲ್ಯಗಳನ್ನು ಕಲಿಸಿಕೊಡಲಿದೆ. ಇದು ಸ್ಥಳೀಯ ಉದ್ಯೋಗ ಮತ್ತು ಆರ್ಥಿಕತೆಯನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಲು ನೆರವಾಗುತ್ತದೆ. ಹೀಗೆ ನೇಮಕಗೊಳ್ಳುವ ಸಿಬ್ಬಂದಿ ಪೂರೈಕೆ ಜಾಲದಲ್ಲಿ ತಮಗೆ ನಿಗದಿಪಡಿಸಿದ ಕಾರ್ಯಗಳನ್ನು ನಿಭಾಯಿಸಲು ಸೂಕ್ತವಾದ ತರಬೇತಿ ಪಡೆಯುತ್ತಾರೆ ಮತ್ತು ಹ್ಯಾಂಡ್-ಹೆಲ್ಡ್ ಸಾಧನಗಳು, ಪಿಒಎಸ್ ಯಂತ್ರಗಳು, ಸ್ಕ್ಯಾನರ್ ಗಳು, ವಿವಿಧ ಮೊಬೈಲ್ ಅಪ್ಲಿಕೇಶನ್ ಗಳನ್ನು ನಿರ್ವಹಣೆ ಮಾಡುವುದು ಹಾಗೂ ಇನ್ನಿತರೆ ಕಾರ್ಯಗಳನ್ನು ಕೈಗೊಳ್ಳುವ ಬಗ್ಗೆ ತರಬೇತಿಯನ್ನು ನೀಡಲಾಗುತ್ತದೆ. ಇದರ ಪರಿಣಾಮ, ಈ ಸಿಬ್ಬಂದಿ ಭವಿಷ್ಯದಲ್ಲಿ ತಂತ್ರಜ್ಞಾನ ಚಾಲಿತ ಪೂರೈಕೆ ಜಾಲಗಳು, ಆಹಾರ ತಂತ್ರಜ್ಞಾನ ಮತ್ತು ಇತರ ಸಂಬಂಧಿತ ಉದ್ಯಮಗಳಲ್ಲಿ ಕೆಲಸ ಮಾಡಲು ಸಿದ್ಧಗೊಳ್ಳುತ್ತಾರೆ.
ಫ್ಲಿಪ್ ಕಾರ್ಟ್ ಗ್ರೂಪ್ ನ ಹಿರಿಯ ಉಪಾಧ್ಯಕ್ಷ ಮತ್ತು ಸಪ್ಲೈ ಚೇನ್, ಕಸ್ಟಮರ್ ಎಕ್ಸ್ ಪೀರಿಯನ್ಸ್, ರೀಕಾಮರ್ಸ್ ವಿಭಾಗದ ಮುಖ್ಯಸ್ಥರಾದ ಹೇಮಂತ್ ಬದ್ರಿ ಅವರು ಮಾತನಾಡಿ, “ಟಿಬಿಬಿಡಿ ಪ್ರಮಾಣವು ಭಾರತಕ್ಕೆ ನಾವೀನ್ಯತೆ ಮತ್ತು ಪರಿಸರ ವ್ಯವಸ್ಥೆಯ ಮೇಲೆ ಉತ್ತಮ ಪರಿಣಾಮವನ್ನು ಬೀರುತ್ತದೆ. ಇದು ಲಕ್ಷಾಂತರ ಹೊಸ ಗ್ರಾಹಕರು ಇ-ಕಾಮರ್ಸ್ ನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು ಅದರ ಅನುಭವವನ್ನು ಪಡೆಯಲು ಅವಕಾಶ ಮಾಡಿಕೊಡುತ್ತದೆ. ಈ ಹೊಸ ಗ್ರಾಹಕರಲ್ಲಿ ಅನೇಕರು ಟಿಬಿಬಿಡಿಯಲ್ಲೇ ಮೊದಲ ಇ-ಕಾಮರ್ಸ್ ಶಾಪಿಂಗ್ ಅನುಭವವನ್ನು ಪಡೆಯುತ್ತಾರೆ. ಟಿಬಿಬಿಡಿ ಸಂದರ್ಭದಲ್ಲಿ ಮೂಡಿಬರುವ ಸಂಕೀರ್ಣತೆ ಮತ್ತು ಪ್ರಮಾಣವು ನಮಗೆ ಸಾಮರ್ಥ್ಯ, ಸಂಗ್ರಹಣೆ, ನಿಯೋಜನೆ, ವಿಂಗಡಣೆ, ಪ್ಯಾಕೇಜಿಂಗ್, ಮಾನವ ಸಂಪನ್ಮೂಲಗಳು, ತರಬೇತಿ, ವಿತರಣೆ ಮತ್ತು ಸಂಪೂರ್ಣ ಪೂರೈಕೆ ಜಾಲಗಳನ್ನು ಮಾಪನ ಮಾಡುವ ಅಗತ್ಯವಿರುತ್ತದೆ. ಇಲ್ಲಿ ಹೊರಹೊಮ್ಮುವ ಫಲಿತಾಂಶವು ಅಭೂತಪೂರ್ವವಾಗಿರುತ್ತದೆ. ಈ ವರ್ಷ, ನಾವು ನಮ್ಮ ಪೂರೈಕೆ ಜಾಲದಲ್ಲಿ ಒಂದು ಲಕ್ಷಕ್ಕೂ ಅಧಿಕ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದ್ದೇವೆ ಮತ್ತು ನಾವು ದೇಶಾದ್ಯಂತ ನಮ್ಮ ಹೆಜ್ಜೆಗುರುತನ್ನು ಮತ್ತಷ್ಟು ಬಲಪಡಿಸುವ ಮೂಲಕ ಗ್ರಾಹಕರಿಗೆ ಉನ್ನತ ಮಟ್ಟದ ಶಾಪಿಂಗ್ ಅನುಭವವನ್ನು ನೀಡಲು ಅಗತ್ಯವಾದ ಕೌಶಲ್ಯ ಉಪಕ್ರಮಗಳಲ್ಲಿ ಹೂಡಿಕೆ ಮಾಡುತ್ತಿದ್ದೇವೆ. ಈ ವರ್ಷ ಶೇ.40 ಕ್ಕೂ ಹೆಚ್ಚು ಶಿಪ್ ಮೆಂಟ್ ಗಳನ್ನು ನಮ್ಮ ಕಿರಾಣ ವಿತರಣಾ ಕಾರ್ಯಕ್ರಮದ ಮೂಲಕ ವಿತರಣೆ ಮಾಡಲು ಯೋಜನೆ ರೂಪಿಸಿದ್ದೇವೆ. ಪ್ರತಿ ವರ್ಷ ನಾವು ನಮ್ಮ ಪೂರೈಕೆ ಜಾಲದ ಸಾಮರ್ಥ್ಯವನ್ನು ವಿಸ್ತರಣೆ ಮಾಡುವುದನ್ನು ಮುಂದುವರಿಸಿದ್ದು, ನಮ್ಮ ಪಾಲುದಾರರ ಬೆಳವಣಿಗೆಯನ್ನು ಹೆಚ್ಚಿಸುವುದಲ್ಲದೇ ಭಾರತದ ದೂರದ ಮೂಲೆಗಳಲ್ಲಿಯೂ ನಮ್ಮ ವೈವಿಧ್ಯಮಯ ಉತ್ಪನ್ನಗಳ ವಿತರಣಾ ಜಾಲವನ್ನು ವಿಸ್ತರಿಸುವ ಮೂಲಕ ಪಾಲುದಾರರ ಕೊಡುಗೆಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿದ್ದೇವೆ’’ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ: Flipkart | ಉತ್ತರಪ್ರದೇಶದ ಉನ್ನಾವೊದಲ್ಲಿ ಫ್ಲಿಪ್‌ಕಾರ್ಟ್‌ನ ಅತಿ ದೊಡ್ಡ ದಿನಸಿ ದಾಸ್ತಾನು ಕೇಂದ್ರ
ಕಿರಾಣ ವಿತರಣಾ ಪಾಲುದಾರರು, ಮಾರಾಟಗಾರರು, ಎಂಎಸ್ಎಂಇಗಳು, ಕುಶಲಕರ್ಮಿಗಳು/ನೇಕಾರರು, ವೇರ್ ಹೌಸ್ ಗಳ ಸಿಬ್ಬಂದಿ ಮತ್ತು ಇನ್ನೂ ಅನೇಕರು ಇರುವ ಇಡೀ ಜಾಲದ ಹೆಚ್ಚುತ್ತಿರುವ ಬೆಳವಣಿಗೆಗೆ ಹಬ್ಬದ ಋತು ಮತ್ತು ದಿ ಬಿಗ್ ಬಿಲಿಯನ್ ಡೇಸ್ ಪ್ರಮುಖ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ದೇಶವ್ಯಾಪಿ ಹೆಚ್ಚಿದ ಸಾಗಣೆ ವಿತರಣೆಗಳ ಲಾಭವನ್ನು ಪಡೆಯಲು ಮತ್ತು ಅವರ ಆದಾಯವನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಲು ಹಾಗೂ ಪೂರೈಕೆ ಜಾಲದ ಚೌಕಟ್ಟಿನೊಳಗೆ ಆರ್ಥಿಕ ಪ್ರಗತಿಯನ್ನು ಸಾಧಿಸಲು ಅನುವು ಮಾಡಿಕೊಡುತ್ತದೆ. ತನ್ನ ಪೂರೈಕೆ ಜಾಲದ ಸದೃಢತೆಯನ್ನು ಹೆಚ್ಚಿಸಿಕೊಳ್ಳುವ ಮೂಲಕ ಫ್ಲಿಪ್ ಕಾರ್ಟ್ ತನ್ನ ವಾರ್ಷಿಕ ಪ್ರಮುಖ ಕಾರ್ಯಕ್ರಮವಾದ 10 ನೇ ಆವೃತ್ತಿಯು ಇ-ಕಾಮರ್ಸ್ ಲ್ಯಾಂಡ್ ಸ್ಕೇಪ್ ನಾದ್ಯಂತ ಪ್ರತಿಧ್ವನಿಸುವಂತೆ ಮಾಡುವುದು ಮತ್ತು ಹಲವಾರು ವ್ಯಕ್ತಿಗಳ ಜೀವನ ಮಟ್ಟ ಸುಧಾರಣೆ ಮೇಲೆ ಪ್ರಭಾವ ಬೀರಲು ಸಿದ್ಧವಾಗಿದೆ.
ವಾಣಿಜ್ಯದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.