Site icon Vistara News

HCL Techbee Workshop: ಜು.27ರಂದು ರಾಮನಗರದಲ್ಲಿ ಉನ್ನತ ಶಿಕ್ಷಣ, ಉದ್ಯೋಗ ಕಾರ್ಯಾಗಾರ

HCL Techbee Workshop

ರಾಮನಗರ: ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ, ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಎಚ್‌ಸಿಎಲ್‌ ಟೆಕ್ ಸಹಯೋಗದಲ್ಲಿ ಆರಂಭಿಕ ವೃತ್ತಿ ಜೀವನದ ಕಾರ್ಯಕ್ರಮವಾದ ಎಚ್‌ಸಿಎಲ್‌ ಟೆಕ್‌ಬೀ (HCL TechBee) ಯೋಜನೆಗೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು (education news) ಜುಲೈ 27 ರಂದು ಬೆಳಗ್ಗೆ 9.30 ಗಂಟೆಗೆ ನಗರದ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಉನ್ನತ ಶಿಕ್ಷಣ, ಉದ್ಯೋಗ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.

2021-22ನೇ ಸಾಲಿನಲ್ಲಿ ಮತ್ತು 2022-23ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಿ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ 12 ತಿಂಗಳು ತರಬೇತಿ ಇರುತ್ತದೆ. ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಆಧಾರ್ ಕಾರ್ಡ್, ದ್ವಿತೀಯ ಪಿಯುಸಿ ಅಂಕಪಟ್ಟಿಗಳ ಜೆರಾಕ್ಸ್ ಪ್ರತಿಗಳೊಂದಿಗೆ ನಿಗದಿತ ದಿನದಂದು ನಡೆಯುವ ಕಾರ್ಯಾಗಾರಕ್ಕೆ ಹಾಜರಾಗಬೇಕು. ಆಸಕ್ತ ಅಭ್ಯರ್ಥಿಗಳು ಎಚ್‌ಸಿಎಲ್‌ ಎಕ್‌ಬೀ ವೆಬ್‌ಸೈಟ್‌ ಮೂಲಕ ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ 6362143514, 8722790340, 9845454471 ಸಂಪರ್ಕಿಸಬಹುದು.

ಜು.28ರಂದು ಮೈಸೂರು, ಆ.1 ರಂದು ಚಿತ್ರದುರ್ಗದಲ್ಲಿ ಕಾರ್ಯಾಗಾರ

ಎಚ್‌ಸಿಎಲ್‌ ಟೆಕ್‌ಬೀ ಉನ್ನತ ಶಿಕ್ಷಣ, ಉದ್ಯೋಗ ಕಾರ್ಯಾಗಾರವು ಜುಲೈ 28ರಂದು ಮೈಸೂರು ಹಾಗೂ ಆಗಸ್ಟ್‌ 1ರಂದು ಚಿತ್ರದುರ್ಗದಲ್ಲೂ ನಡೆಯಲಿದೆ.

ಜು.28ರಂದು ಮೈಸೂರಿನ ಲಕ್ಷ್ಮೀ ವಿಲಾಸ್‌ ರಸ್ತೆಯ ಮಹಾರಾಣಿ ಸರ್ಕಾರಿ ಪಿಯು ಕಾಲೇಜು ಆವರಣದಲ್ಲಿ ಕಾರ್ಯಾಗಾರ ನಡೆಯಲಿದೆ. ಅದೇ ರೀತಿ ಆ.1ರಂದು ಚಿತ್ರದುರ್ಗದ ಕೋಟೆ ಎದುರಿನ ಮಹಾರಾಣಿ ಪಿಯು ಕಾಲೇಜು ಆವರಣದಲ್ಲಿ ಉನ್ನತ ಶಿಕ್ಷಣ, ಉದ್ಯೋಗ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.

ಇದನ್ನೂ ಓದಿ | IBPS Clerk Recruitment 2023 : ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ 4,045 ಕ್ಲರ್ಕ್‌ ಹುದ್ದೆ; ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

Exit mobile version