Site icon Vistara News

IBPS Result: ಐಬಿಪಿಎಸ್ ಕ್ಲರ್ಕ್ ಮುಖ್ಯ ಪರೀಕ್ಷೆಯ ಫಲಿತಾಂಶ ಪ್ರಕಟ; ಹೀಗೆ ಪರಿಶೀಲಿಸಿ

IBPS Result

IBPS Result

ಬೆಂಗಳೂರು: ಬ್ಯಾಂಕ್‌ ಉದ್ಯೋಗ (Bank job) ಆಕಾಂಕ್ಷಿಗಳು ಬಹು ಸಮಯಗಳಿಂದ ನಿರೀಕ್ಷಿಸುತ್ತಿದ್ದ ದಿನ ಬಂದೇ ಬಿಟ್ಟಿದೆ. ಇನ್‌ಸ್ಟಿಟ್ಯೂಟ್‌ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್‌ (Institute of Banking Personnel Selection) ಕ್ಲರ್ಕ್ ಪರೀಕ್ಷೆಯ ಅಂತಿಮ ಫಲಿತಾಂಶವನ್ನು ಇಂದು (ಏಪ್ರಿಲ್ 1) ಬಿಡುಗಡೆ ಮಾಡಿದೆ (IBPS Result). ಈ ಐಬಿಪಿಎಸ್ ಕ್ಲರ್ಕ್ ಮುಖ್ಯ ಪರೀಕ್ಷೆ (Main examination) 2024ರ ಫಲಿತಾಂಶವನ್ನು ಬಿಪಿಎಸ್‌ನ ಅಧಿಕೃತ ವೆಬ್‌ಸೈಟ್‌ ಮೂಲಕ ಪರಿಶೀಲಿಸಬಹುದು. ಫಲಿತಾಂಶವು ಏಪ್ರಿಲ್ 1ರಿಂದ ಏಪ್ರಿಲ್ 30ರವರೆಗೆ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯ ಎಂದು ಪ್ರಕಟಣೆ ತಿಳಿಸಿದೆ.

ಐಬಿಪಿಎಸ್ ಕ್ಲರ್ಕ್ ಪರೀಕ್ಷೆಯ ಮೂಲಕ ಸುಮಾರು 4,045 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಈ ಹುದ್ದೆಗಳ ನೇಮಕಾತಿಗಾಗಿ, 2023ರ ಜುಲೈ 1ರಿಂದ ಜುಲೈ 28ರವರೆಗೆ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಕೋರಲಾಗಿತ್ತು. ಐಬಿಪಿಎಸ್ ಕ್ಲರ್ಕ್ ಮುಖ್ಯ ಪರೀಕ್ಷೆಯನ್ನು ದೇಶಾದ್ಯಂತ 2023ರ ಅಕ್ಟೋಬರ್ 7ರಂದು ನಡೆಸಲಾಗಿತ್ತು.

ಐಬಿಪಿಎಸ್ ಕ್ಲರ್ಕ್ ಮುಖ್ಯ ಪರೀಕ್ಷೆ ಫಲಿತಾಂಶ ಹೀಗೆ ವೀಕ್ಷಿಸಿ

ಐಬಿಪಿಎಸ್‌ ಪಿಒ, ಎಸ್‌ಒ ಹುದ್ದೆಗಳ ಪರೀಕ್ಷೆಯ ಫಲಿತಾಂಶವೂ ಪ್ರಕಟ

ಐಬಿಪಿಎಸ್‌ ಪಿಒ (Probationary Officer) ಮತ್ತು ಎಸ್‌ಒ (Specialist Officer) ಪರೀಕ್ಷೆ, ಸಂದರ್ಶನದ ಫಲಿತಾಂಶವನ್ನೂ ಏಪ್ರಿಲ್‌ 1ರಂದು ಪ್ರಕಟಿಸಲಾಗಿದೆ. ಸ್ಪೆಷಲಿಸ್ಟ್ ಆಫೀಸರ್ ಮತ್ತು ಪ್ರೊಬೇಷನರಿ ಆಫೀಸರ್ ಹುದ್ದೆಗಳಿಗೆ ಆನ್‌ಲೈನ್‌ ಮುಖ್ಯ ಪರೀಕ್ಷೆ ಬರೆದವರು ಮತ್ತು ಸಂದರ್ಶನಕ್ಕೆ ಹಾಜರಾದ ಅಭ್ಯರ್ಥಿಗಳು ibps.in. ವೆಬ್‌ಸೈಟ್‌ನಲ್ಲಿ ಫಲಿತಾಂಶಗಳನ್ನು ವೀಕ್ಷಿಸಬಹುದು.

ಫಲಿತಾಂಶ ವೀಕ್ಷಿಸಲು ಹೀಗೆ ಮಾಡಿ

ಐಬಿಪಿಎಸ್‌ ಪಿಒ ಪರೀಕ್ಷೆಯನ್ನು 2023ರ ನವೆಂಬರ್‌ 3ರಂದು ದೇಶಾದ್ಯಂತ ಇರುವ ವಿವಿಧ ಕೇಂದ್ರಗಳಲ್ಲಿ ನಡೆಸಲಾಗಿತ್ತು. ಸಂದರ್ಶನವನ್ನು ಜನವರಿ / ಫೆಬ್ರವರಿಯಲ್ಲಿ ಆಯೋಜಿಸಲಾಗಿತ್ತು. ಐಬಿಪಿಎಸ್‌ ಎಸ್‌ಒ ಲಿಖಿತ ಪರೀಕ್ಷೆಯನ್ನು ಜನವರಿ 28ರಂದು ನಡೆಸಲಾಗಿತ್ತು. ಫೆಬ್ರವರಿ / ಮಾರ್ಚ್‌ನಲ್ಲಿ ಸಂದರ್ಶನ ಆಯೋಜಿಸಲಾಗಿತ್ತು.

ಇದನ್ನೂ ಓದಿ: Prelims Result: ಎಸ್‌ಬಿಐ ನೇಮಕ ಪೂರ್ವಭಾವಿ ಪರೀಕ್ಷೆ ಫಲಿತಾಂಶ ಪ್ರಕಟ; ಹೀಗೆ ಪರಿಶೀಲಿಸಿ

Exit mobile version