Site icon Vistara News

Inspiring Story : ಐಐಐಟಿ, ಎನ್‌ಐಟಿಯಲ್ಲಿ ಓದುತ್ತಿದ್ದಾಗಲೇ ಕೋಟಿ ಕೋಟಿಯ ಪ್ಯಾಕೇಜ್‌ ಗಿಟ್ಟಿಸಿಕೊಂಡವರಿವರು!

Inspiring Story

ಬೆಂಗಳೂರು: ಕಾಲೇಜಿನಲ್ಲಿ ಓದುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಉತ್ತಮ ಉದ್ಯೋಗದ ಕನಸಿರುತ್ತದೆ. ತಾವು ಕ್ಯಾಂಪಸ್‌ ಪ್ಲೇಸ್‌ಮೆಂಟ್‌ನಲ್ಲಿ ಸೆಲೆಕ್ಟ್‌ ಆಗಬೇಕು, ದೊಡ್ಡದೊಂದು ಪ್ಯಾಕೇಜ್‌ ತಮಗೆ ಸಿಗಬೇಕು ಎನ್ನುವ ಬಯಕೆ ಅವರಿಗೆ ಇದ್ದೇ ಇರುತ್ತದೆ. ಅಂಥವರಿಗೆ ಸ್ಫೂರ್ತಿಯಾಗುವ (Inspiring Story) ಕೆಲವು ಉದಾಹರಣೆಗಳು ಇಲ್ಲಿವೆ. ಐಐಐಟಿ ಮತ್ತು ಎನ್‌ಐಟಿಯಲ್ಲಿ ಇದ್ದಾಗಲೇ ಕೋಟಿ ರೂ.ನ ಪ್ಯಾಕೇಜ್‌ ಪಡೆದುಕೊಂಡ ಕೆಲವರ ಪರಿಚಯ ಸ್ಫೂರ್ತಿದಾಯಕವಾಗಿದೆ.

ಪಾಲಕ್‌ ಮಿತ್ತಲ್‌

ಪಾಲಕ್ ಮಿತ್ತಲ್

ಐಐಐಟಿ ಅಲಹಾಬಾದ್‌ನಿಂದ ಬಿ.ಟೆಕ್‌ ಪದವಿ ಪಡೆದಿರುವ ಪಾಲಕ್‌ ಮಿತ್ತಲ್‌ ಅವರಿಗೆ ಟೈಟಾನ್‌ ಅಮೆಜಾನ್‌ನಿಂದ ಬರೋಬ್ಬರಿ ವರ್ಷಕ್ಕೆ 1 ಕೋಟಿ ರೂ.ನ ಪ್ಯಾಕೇಜ್‌ ಲಭಿಸಿದೆ. 2022ರ ಆಗಸ್ಟ್‌ನಲ್ಲಿ ಬರ್ಲಿನ್‌ನ ಅಮೆಜಾನ್‌ ಕಚೇರಿಯಲ್ಲಿ ವೆಬ್‌ ಸೇವೆಗಳಿಗೆ ಅವರು ಸಾಫ್ಟ್‌ವೇರ್‌ ಡೆವಲಪರ್‌ ಆಗಿ ಕೆಲಸ ಆರಂಭಿಸಿದ್ದರು. ಪ್ರಸ್ತುತ ಅವರು ಬೆಂಗಳೂರಿನ PhonePe ಕಚೇರಿಯಲ್ಲಿ ಸಾಫ್ಟ್‌ವೇರ್‌ ಡೆವಲಪರ್‌ ಆಗಿ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: Viral News : ಒಂದು ಕನ್ನಡಕದ ಬಾಕ್ಸ್‌ನಿಂದ ಬಯಲಾಯ್ತು ಎರಡೆರೆಡು ಕೊಲೆ ಪ್ರಕರಣ!

ಅನುರಾಗ್‌ ಮಕಾಡೆ

ಅನುರಾಗ್ ಮಕಾಡೆ

ಅನುರಾಗ್‌ ಮಕಾಡೆಗೆ ಅಮೆಜಾನ್‌ ಸಂಸ್ಥೆಯಲ್ಲಿ ಫ್ರಂಟೆಂಡ್‌ ಎಂಜಿನಿಯರ್‌ ಕೆಲಸಕ್ಕೆ ಬರೋಬ್ಬರಿ 1.25 ಕೋಟಿ ರೂ.ನ ಪ್ಯಾಕೇಜ್‌ ಲಭಿಸಿತು. ಅವರು ಅದಕ್ಕೂ ಮೊದಲು ಬೆಂಗಳೂರಿನ ಕ್ಯೂರ್‌ ಫಿಟ್‌ ಸಂಸ್ಥೆಯಲ್ಲಿ ಇಂಟರ್ನಿ ಆಗಿ ನಂತರ ಗುರುಗ್ರಾಮದ ಅಮೆರಿಕನ್‌ ಎಕ್ಸ್‌ಪ್ರೆಸ್‌ನಲ್ಲಿ ವಿಶ್ಲೇಷಕ ಇಂಟರ್ನಿ ಆಗಿ ಕೆಲಸ ಮಾಡಿದ್ದರು. 2022ರ ಸೆಪ್ಟೆಂಬರ್‌ನಲ್ಲಿ ಅವರು ಐರ್ಲೆಂಡ್‌ನ ಡಬ್ಲಿನ್‌ನಲ್ಲಿ ಅಮೆಜಾನ್‌ನೊಂದಿಗೆ ಕೆಲಸ ಆರಂಭಿಸಿದರು.

ಪ್ರಥಮ್‌ ಪ್ರಕಾಶ್‌ ಗುಪ್ತಾ

ಪ್ರಥಮ್ ಪ್ರಕಾಶ್ ಗುಪ್ತಾ

ಐಐಐಟಿ ಅಲಹಾಬಾದ್‌ನ ಎಂ.ಟೆಕ್‌ ಪದವೀಧರರಾಗಿರುವ ಪ್ರಥಮ್‌ ಪ್ರಕಾಶ್‌ ಗುಪ್ತಾ ಗೂಗಲ್‌ ಸಂಸ್ಥೆಯಿಂದಲೇ ಕೆಲಸ ಗಿಟ್ಟಿಸಿಕೊಂಡವರು. 2022ರಲ್ಲಿ ಅವರಿಗೆ 1.4 ಕೋಟಿ ರೂ. ಪ್ಯಾಕೇಜ್‌ ಕೊಟ್ಟು ಸಂಸ್ಥೆ ಕೆಲಸಕ್ಕೆ ಸೇರಿಸಿಕೊಂಡಿತು. ಸದ್ಯ ಅವರು ಗೂಗಲ್‌ನ ಲಂಡನ್‌ ಶಾಖೆಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಅಗಿ ಕೆಲಸ ಮಾಡುತ್ತಿದ್ದಾರೆ.

ಅಭಿಷೇಕ್‌ ಕುಮಾರ್‌

ಅಭಿಷೇಕ್ ಕುಮಾರ್

ಪಾಟ್ನಾದ ಎನ್‌ಐಟಿಯಲ್ಲಿ ವಿದ್ಯಾಭ್ಯಾಸ ಮಾಡಿರುವ ಅಭಿಷೇಕ್‌ ಕುಮಾರ್‌ ದೊಡ್ಡ ದಾಖಲೆಯನ್ನೇ ನಿರ್ಮಿಸಿದರು. ಅಮೆಜಾನ್‌ ಸಂಸ್ಥೆಯಲ್ಲಿ ಇವರು ಬರೋಬ್ಬರಿ 1.8 ಕೋಟಿ ರೂ. ಪ್ಯಾಕೇಜ್‌ನ ಕೆಲಸಕ್ಕೆ ಸೇರಿಕೊಂಡರು. ಆ ಮೂಲಕ ಎನ್‌ಐಟಿಯಲ್ಲಿ ಅತಿ ಹೆಚ್ಚು ಮೊತ್ತದ ಪ್ಯಾಕೇಜ್‌ ಪಡೆದ ವಿದ್ಯಾರ್ಥಿಯಾಗಿ ಹೊರಹೊಮ್ಮಿದರು. ಬ್ಲ್ಯಾ ಕ್‌ಚೈನ್‌ನಲ್ಲಿ ಪರಿಣಿತರಾಗಿರುವ ಅವರು ಜರ್ಮನಿ ಮತ್ತು ಐರ್ಲೆಂಡ್‌ನಿಂದ ಬಂದಿದ್ದ ತಜ್ಞರನ್ನು ಮೆಚ್ಚಿಸುವಲ್ಲಿ ಯಶಸ್ವಿಯಾಗಿದ್ದರು.

ಇದನ್ನೂ ಓದಿ: Viral Video : ಎಲ್ಲರ ಎದುರೇ ಯುವತಿಯ ಕೆನ್ನೆಗೆ ಬಾರಿಸಿದ ಸರ್ಕಾರಿ ಅಧಿಕಾರಿ!

ಅದಿತಿ ತಿವಾರಿ

ಅದಿತಿ ತಿವಾರಿ

ಸಾಮಾನ್ಯ ವರ್ಗದ ಕುಟುಂಬದರವಾದ ಅದಿತಿ ತಿವಾರಿ ಪಾಟ್ನಾದ ಎನ್‌ಐಟಿಯಲ್ಲಿ ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯುನಿಕೇಷನ್‌ ಪದವಿ ಪಡೆದಿದ್ದಾರೆ. ಅವರು ಫೇಸ್‌ಬುಕ್‌ ಸಂಸ್ಥೆಗೆ ಫ್ರಂಟ್‌ ಎಂಡ್‌ ಎಂಜಿನಿಯರ್‌ ಆಗಿ ಆಯ್ಕೆಯಾದರು. ಅವರಿಗೆ ಸಂಸ್ಥೆ ಬರೋಬ್ಬರಿ 1.6 ಕೋಟಿ ರೂ.ನ ಪ್ಯಾಕೇಜ್‌ ಅನ್ನು ಕೊಟ್ಟಿತು. ಅವರ ತಂದೆ ಟಾಟಾ ಸ್ಟೀಲ್‌ನಲ್ಲಿ ಕೆಲಸ ಮಾಡುತ್ತಿದ್ದರೆ, ತಾಯಿ ಸರ್ಕಾರಿ ಶಾಲೆಯ ಶಿಕ್ಷಕಿಯಾಗಿದ್ದಾರೆ.

Exit mobile version