Viral News : ಒಂದು ಕನ್ನಡಕದ ಬಾಕ್ಸ್‌ನಿಂದ ಬಯಲಾಯ್ತು ಎರಡೆರೆಡು ಕೊಲೆ ಪ್ರಕರಣ! - Vistara News

ವೈರಲ್ ನ್ಯೂಸ್

Viral News : ಒಂದು ಕನ್ನಡಕದ ಬಾಕ್ಸ್‌ನಿಂದ ಬಯಲಾಯ್ತು ಎರಡೆರೆಡು ಕೊಲೆ ಪ್ರಕರಣ!

ಕನ್ನಡಕದ ಬಾಕ್ಸ್‌ನಿಂದಾಗಿ ಎರಡು ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿರುವ ವಿಶೇಷ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ. ಈ ವಿಚಾರ ಎಲ್ಲೆಡೆ ವೈರಲ್‌ (Viral News) ಆಗಿದೆ.

VISTARANEWS.COM


on

spectacle case led Navi Mumbai police to crack two murder cases
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬೈ: ಜುಲೈ 10ರಂದು ಮಹಾರಾಷ್ಟ್ರದ ನವಿ ಮುಂಬೈನ ಪೊಲೀಸರಿಗೆ ಫೋನ್‌ ಕರೆಯೊಂದು ಬಂದಿದೆ. ಅದರಲ್ಲಿ ಉರಾನ್ ತಾಲೂಕಿನ ಪಿರ್ಕಾನ್-ಸರ್ದೇಗಾಂವ್ ರಸ್ತೆಯಲ್ಲಿ ಮಹಿಳೆಯ ಶವವೊಂದು ಬಿದ್ದಿರುವುದಾಗಿ ದಾರಿಹೋಕರು ಪೊಲೀಸರಿಗೆ ತಿಳಿಸಿದ್ದು, ಪೊಲೀಸರು ತಕ್ಷಣ ಸ್ಥಳಕ್ಕೆ ಬಂದಿದ್ದಾರೆ. ಆದರೆ ಮಹಿಳೆಯ ಶವದ ಬಳಿ ಯಾವೊಂದು ಸಾಕ್ಷಿಯೂ ಪೊಲೀಸರಿಗೆ ಸಿಕ್ಕಿರಲಿಲ್ಲ. ಅಲ್ಲಿ ಸಿಕ್ಕ ಒಂದೇ ಒಂದು ಕನ್ನಡಕದ ಬಾಕ್ಸ್‌ನಿಂದಾಗಿ ಪೊಲೀಸರು ಎರಡು ಕೊಲೆ ಪ್ರಕರಣಗಳನ್ನು ಬೇಧಿಸಿದ್ದಾರೆ. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ (Viral News) ಆಗಿದೆ.

ರಸ್ತೆ ಬದಿ ಇದ್ದ ಶವದ ಮೇಲಿದ್ದ ಎಲ್ಲ ಆಭರಣವನ್ನು ಕೊಲೆಗಾರ ಕೊಂಡೊಯ್ದಿದ್ದ. ಎರಡು ಬುಲೆಟ್‌ ಅನ್ನು ತಲೆಗೆ ಹೊಡೆದಿದ್ದರೂ, ಮತ್ತೆ ಶವದ ಕುತ್ತಿಗೆಯನ್ನೂ ಕೊಯ್ದಿದ್ದ. ಶವದ ಬಳಿ ಯಾವುದೇ ಸಾಕ್ಷಿಗಳನ್ನು ಉಳಿಸದಂತೆ ಎಲ್ಲವನ್ನೂ ಹೊತ್ತೊಯ್ದಿದ್ದ. ಎಲ್ಲ ಕಡೆ ಸೂಕ್ಷ್ಮವಾಗಿ ಪರಿಶೀಲನೆ ಮಾಡಿದ ಪೊಲೀಸರಿಗೆ ಅಲ್ಲಿ ಒಂದು ಕನ್ನಡಕದ ಬಾಕ್ಸ್‌ ಸಿಕ್ಕಿದೆ. ಆ ಬಾಕ್ಸ್‌ನಲ್ಲಿ ಡೊಂಬಿವಲಿಯ ಕನ್ನಡಕದ ಅಂಗಡಿಯೊಂದರ ಮಾಹಿತಿ ಸಿಕ್ಕಿದ್ದು, ಪೊಲೀಸರು ಸೀದಾ ಅಲ್ಲಿಗೆ ಹೋಗಿದ್ದಾರೆ. ಅಲ್ಲಿ ಶವದ ಫೋಟೋ ತೋರಿಸಿದಾಗ ಅಂಗಡಿಯವರು ಆ ಮಹಿಳೆ ತಮಗೆ ಗೊತ್ತೆಂದು ಹೇಳಿದ್ದಾರೆ. ಆ ಮಹಿಳೆಯ ಹೆಸರು ಭಾರತಿ ಎಂದೂ ಆಕೆ ತಮ್ಮ ಗ್ರಾಹಕರೆಂದು ಅವರು ತಿಳಿಸಿದ್ದಾರೆ. ಅಂಗಡಿಯಲ್ಲಿ ಪೊಲೀಸರು ಆಕೆಯ ವಿಳಾಸ ಮತ್ತು ಫೋನ್‌ ನಂಬರ್‌ ಅನ್ನು ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: Viral Video : ಎಲ್ಲರ ಎದುರೇ ಯುವತಿಯ ಕೆನ್ನೆಗೆ ಬಾರಿಸಿದ ಸರ್ಕಾರಿ ಅಧಿಕಾರಿ!
ಅಲ್ಲಿಂದ ಡೊಂಬಿವಲಿಯ ಭಾರತಿ ಮನೆಗೆ ಹೋಗಿ ಆಕೆಯ ಅಕ್ಕ ಪಕ್ಕದ ಮನೆಯವರನ್ನು ವಿಚಾರಣೆ ಮಾಡಲಾಗಿದೆ. ಭಾರತಿ ಆಲಿಬಗ್‌ನ ಪೊಯ್ನಾಡಿನಲ್ಲಿರುವ ತನ್ನ ಮಗಳು ಪ್ರೀತಿಯ ಮನೆಗೆ ಹೋಗುವುದಾಗಿ ಹೇಳಿ ಹೋಗಿದ್ದಾಗಿ ಪಕ್ಕದ ಮನೆಯವರು ತಿಳಿಸಿದ್ದಾರೆ. ಹಾಗೆಯೇ ಆಕೆಯನ್ನು ಕರೆದುಕೊಂಡು ಹೋಗಲು ಆಕೆಯ ಅಳಿಯ ಮಯುರೇಶ್‌ ಅಜೀತ್‌ ಗಂಭೀರ್‌ ಬಂದಿದ್ದಾಗಿಯೂ ಅವರು ತಿಳಿಸಿದ್ದಾರೆ.

ಮಯುರೇಶ್‌ ಹಾಗೂ ಆತನ ಮೂವರು ಸ್ನೇಹಿತರ ಮೇಲೆ ಪೊಲೀಸರಿಗೆ ಅನುಮಾನ ಬಂದಿದ್ದು, ಅವರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾರಂಭಿಸಿದ್ದಾರೆ. ಆಗ ಮಯುರೇಶ್‌ ತನ್ನ ಅತ್ತೆಯನ್ನು ತಾನೇ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಅತ್ತೆ ತನ್ನ ಮಗಳನ್ನು ನೋಡಬೇಕೆಂದು ಪದೇಪದೆ ಹಠ ಮಾಡುತ್ತಿದ್ದರಿಂದಾಗಿ ಆಕೆಯನ್ನು ಕೊಲೆ ಮಾಡಿ, ರಸ್ತೆ ಬದಿ ಹೆಣವನ್ನು ಎಸೆದಿದ್ದಾಗಿ ಆತ ತಿಳಿಸಿದ್ದಾನೆ.

ಇದನ್ನೂ ಓದಿ: Viral Video : ವಂದೇ ಭಾರತ್‌ ರೈಲಿನ ಶೌಚಾಲಯದಲ್ಲಿ ಬೀಡಿಯ ಹೊಗೆ; ನಿಂತೇ ಹೋಯ್ತು ರೈಲು!
ಆಗ ಪೊಲೀಸರಿಗೆ ಮತ್ತೊಂದು ಅನುಮಾನ ಶುರುವಾಗಿದೆ. ಮಗಳನ್ನು ಭೇಟಿ ಮಾಡುವುದಕ್ಕೆ ಯಾಕಾಗಿ ಆತ ಅನುಮತಿ ಕೊಡುತ್ತಿರಲಿಲ್ಲ ಎಂದು ಆತನನ್ನು ಪ್ರಶ್ನಿಸಲಾಗಿದೆ. ಆಗ ಆತ ಪ್ರೀತಿಯನ್ನು 2022ರ ಆಗಸ್ಟ್‌ನಲ್ಲೇ ಲಾಡ್ಜ್‌ ಒಂದರಲ್ಲಿ ಕೊಲೆ ಮಾಡಿ ಹೆಣವನ್ನು ಬೇರೆಡೆ ಎಸೆದಿದ್ದಾಗಿ ಹೇಳಿದ್ದಾನೆ. ಆ ವಿಚಾರ ಯಾರಿಗೂ ಗೊತ್ತಿರಲಿಲ್ಲವಾದ್ದರಿಂದ ಭಾರತಿಗೆ ಪ್ರೀತಿಯನ್ನು ಭೇಟಿ ಮಾಡಿಸಲು ತನ್ನಿಂದ ಸಾಧ್ಯವಾಗಿರಲಿಲ್ಲ ಎಂದು ತಿಳಿಸಿದ್ದಾನೆ.

ಪ್ರೀತಿಯ ಕೊಲೆಗೆ ಕಾರಣ ಕೇಳಿದಾಗ ಆತ ಪ್ರೀತಿ ಕೈಗೆ ಈ ಹಿಂದೆ 9 ಲಕ್ಷ ರೂ. ಹಣ ಕೊಟ್ಟಿದ್ದಾಗಿ ತಿಳಿಸಿದ್ದಾನೆ. ಪ್ರೀತಿ ತನ್ನ ಎರಡನೇ ಹೆಂಡತಿಯಾಗಿದ್ದು, ಬೇರೊಂದು ಕೊಲೆ ಪ್ರಕರಣದಲ್ಲಿ ಆತ 2014ರಲ್ಲಿ ಜೈಲಿಗೆ ಹೋಗಿದ್ದಾನೆ 2022ರಲ್ಲಿ ಜೈಲಿನಿಂದ ಹೊರಬಂದ ಆತ ಪ್ರೀತಿ ಬಳಿ ಹಣ ವಾಪಸು ಕೊಡಲು ಕೇಳಿದ್ದಾನೆ. ಅದಕ್ಕೆ ಆಕೆ ಒಪ್ಪದ ಕಾರಣ ಆಕೆಯ ಕೊಲೆಯನ್ನು ಮಾಡಿದ್ದಾಗಿ ಹೇಳಿಕೊಂಡಿದ್ದಾನೆ.

45 ವರ್ಷದ ಮಯುರೇಶ್‌ ಈ ಹಿಂದೆ ಸೇನೆಯಲ್ಲಿ ಸೇವೆ ಸಲ್ಲಿಸಿದ್ದು, ಅಲ್ಲಿಂದ ಮರಳಿ ಬಂದ ಮೇಲೆ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಎರಡೆರೆಡು ಕೊಲೆ ಮಾಡಿರುವ ಮಯುರೇಶ್‌ ವಿರುದ್ಧ ಇದೀಗ ಮತ್ತೆ ಕೊಲೆ ಪ್ರಕರಣ ದಾಖಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

KSRTC Bus : ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ

KSRTC Bus : ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಎಂಜಲು ಉಗುಳುವ ಬರದಲ್ಲಿ ಕಿಟಿಕಿಯ ಸಣ್ಣ ಸಂದಿಯೊಳಗೆ ತಲೆ ಹಾಕಿ ಪರದಾಡಿದ ಘಟನೆ ನಡೆದಿದೆ. ಮತ್ತೊಂದು ಕಡೆ ಕೆಎಸ್‌ಆರ್‌ಟಿಸಿ ಬಸ್‌ ಸಿಬ್ಬಂದಿ ಸೈಡ್‌ ಬಿಡಲಿಲ್ಲ ಎಂದು ಪ್ರವಾಸಿಗರು ಹಲ್ಲೆ ನಡೆಸಿದ್ದಾರೆ.

VISTARANEWS.COM


on

By

KSRTC BUS Woman locks in window of KSRTC bus after going to spit
Koo

ಬೆಂಗಳೂರು/ಉಡುಪಿ: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ (KSRTC Bus) ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ತಲೆಯು ಲಾಕ್‌ ಆದ ಘಟನೆ ನಡೆದಿದೆ. ಕಿಟಿಕಿಯಲ್ಲಿ ತಲೆ ಸಿಕ್ಕಿಸಿಕೊಂಡ ಪರಿಣಾಮ ಮಹಿಳೆ ಕೆಲಕಾಲ ಪರದಾಡಬೇಕಾಯಿತು.

ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಎಂಜಲು ಉಗುಳಲು ಬಸ್‌ನ ಕಿಟಿಕಿಯ ಸಣ್ಣ ಸಂದಿಯೊಳಗೆ ತಲೆಯನ್ನು ಹೊರಹಾಕಿದ್ದರು. ಹೀಗೆ ಹೊರ ಹಾಕಿದ ತಲೆಯು ವಾಪಸ್‌ ಹಿಂದಕ್ಕೆ ಬಾರದೇ ಅಲ್ಲೆ ಲಾಕ್‌ ಆಗಿತ್ತು. ಕಾರಣ ಕಿಟಕಿಯ ಸಣ್ಣ ಜಾಗಕ್ಕೆ ನುಗ್ಗಿದ ಪರಿಣಾಮ ಅರ್ಧ ಗಂಟೆಗೂ ಹೆಚ್ಚು ಕಾಲ ತಲೆ ಲಾಕ್ ಆಗಿತ್ತು.

ಈ ವೇಳೆ ಮಹಿಳೆಯ ಪರದಾಟ ಹಾಗೂ ಕೂಗಾಟ ಕಂಡು ಸಹ ಪ್ರಯಾಣಿಕರು ಸಹಾಯಕ್ಕೆ ಧಾವಿಸಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಬಳಿಕ ಮಹಿಳೆ ತಲೆ ಲಾಕ್‌ ಆಗಿರುವುದು ಗಮನಕ್ಕೆ ಬಂದಾಕ್ಷಣ ಕೆಎಸ್‌ಆರ್‌ಟಿಸಿ ಬಸ್ಸಿನ ಚಾಲಕ ಹಾಗೂ ನಿರ್ವಾಹಕರು ಬಸ್ ನಿಲ್ಲಿಸಿದ್ದಾರೆ. ಬಳಿಕ 15 ನಿಮಿಷಗಳ ಕಾರ್ಯಾಚರಣೆ ಮಾಡಿ, ಜಾಗರೂಕತೆಯಿಂದ ಮಹಿಳೆಯ ತಲೆಯನ್ನು ಕಿಟಿಕಿಯಿಂದ ಬಿಡಿಸಿ, ರಕ್ಷಿಸಿದ್ದಾರೆ.

ಇತ್ತ ಮಹಿಳೆಯು ಬದುಕಿತು ಬಡ ಜೀವ ಎಂಬಂತೆ ತಲೆಯನ್ನು ಒಳಗೆ ಎಳೆದುಕೊಂಡಿದ್ದಾರೆ. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಹಿಳೆಗೆ ಯಾಕ್ ಬೇಕಿತ್ತು ಈ ಅವಾಂತರ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: Road Accident : ಮೈಸೂರು- ಬೆಂಗಳೂರಲ್ಲಿ ಮೂವರ ಪ್ರಾಣ ಕಸಿದ ಮೂರು ಪ್ರತ್ಯೇಕ ಅಪಘಾತ

ಉಡುಪಿಯಲ್ಲಿ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮೇಲೆ ಹಲ್ಲೆ

ಕೆಎಸ್‌ಆರ್‌ಟಿಸಿ ಬಸ್ ಸಿಬ್ಬಂದಿಯ ಮೇಲೆ ಪ್ರವಾಸಿಗರು ಹಲ್ಲೆ ನಡೆಸಿದ್ದಾರೆ. ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಆಗುಂಬೆ ಘಾಟಿಯಲ್ಲಿ ಘಟನೆ ನಡೆದಿದೆ. ಕೆಎಸ್‌ಆರ್‌ಟಿಸಿ ಬಸ್‌ ಆಗುಂಬೆಯಿಂದ ಹೆಬ್ರಿಗೆ ಹೊರಟಿತ್ತು. ಈ ವೇಳೆ ಬಸ್ ಹಿಂದೆ ಇದ್ದ ಪ್ರವಾಸಿಗರ ಕಾರಿಗೆ ಸೈಡ್ ನೀಡಲಿಲ್ಲ ಎನ್ನುವ ಆರೋಪವಿದೆ. ಹೀಗಾಗಿ ಗಾಟಿಯ ಮಧ್ಯೆ ಬಸ್‌ಗೆ ಅಡ್ಡಹಾಕಿ ನಿರ್ವಾಹಕ ಮತ್ತು ಚಾಲಕನಿಗೆ ಪ್ರವಾಸಿಗರು ಹಲ್ಲೆ ನಡೆಸಿದ್ದಾರೆ. ಈ ಗಲಾಟೆಯಿಂದಾಗಿ ಘಾಟಿಯಲ್ಲಿ ಕೆಲವು ಹೊತ್ತು ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕ್ರೀಡೆ

RCB vs CSK: ನಾಳಿನ ಪಂದ್ಯಕ್ಕೆ ಮಳೆ ಬಾರದಂತೆ ಕೃಷ್ಣ ನಾಮ ಜಪಿಸಿದ ಆರ್​ಸಿಬಿ ಆಟಗಾರರು; ವಿಡಿಯೊ ವೈರಲ್​

RCB vs CSK: ಹವಾಮಾನ ಇಲಾಖೆ ಪಂದ್ಯ ನಡೆಯುವ ಶನಿವಾರದಂದು ಶೇ.70ರಷ್ಟು ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಆರ್​ಸಿಬಿ(RCB vs CSK) ಆಟಗಾರರು ಪಂದ್ಯದ ವೇಳೆ ಮಳೆ ಬಾರದಂತೆ ಕೃಷ್ಣ ನಾಮ ಜಪಿಸಿದ ವಿಡಿಯೊವೊಂದು ಭಾರೀ ವೈರಲ್​(viral video) ಆಗಿದೆ.

VISTARANEWS.COM


on

RCB vs CSK
Koo

ಬೆಂಗಳೂರು: ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್​(Chennai Super Kings) ವಿರುದ್ಧ ನಾಳೆ ನಡೆಯುವ ಮಹತ್ವದ ಪಂದ್ಯದಲ್ಲಿ ಆರ್​ಸಿಬಿ(Royal Challengers Bengaluru) ಕಣಕ್ಕಿಳಿಯಲು ಸಜ್ಜಾಗಿ ನಿಂತಿದ್ದರೂ ಕೂಡ ಪಂದ್ಯಕ್ಕೆ ಮಳೆ ಅನುವು ಮಾಡಿಕೊಡುವುದು ಬಹುತೇಖ ಅನುಮಾನ ಎನ್ನುವಂತಿದೆ. ಶುಕ್ರವಾರವೇ ಬೆಂಗಳೂರಿನಲ್ಲಿ ಭಾರೀ ಮಳೆಯಾಗಿದೆ. ಇದೀಗ ಆರ್​ಸಿಬಿ(RCB vs CSK) ಆಟಗಾರರು ಪಂದ್ಯದ ವೇಳೆ ಮಳೆ ಬಾರದಂತೆ ಕೃಷ್ಣ ನಾಮ ಜಪಿಸಿದ ವಿಡಿಯೊವೊಂದು ಭಾರೀ ವೈರಲ್​(viral video) ಆಗಿದೆ.

ಹವಾಮಾನ ಇಲಾಖೆ ಪಂದ್ಯ ನಡೆಯುವ ಶನಿವಾರದಂದು ಶೇ.70ರಷ್ಟು ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಪ್ಲೇ ಆಫ್​ ಪ್ರವೇಶ ಪಡೆಯಬೇಕಿದ್ದರೆ ಆರ್​ಸಿಬಿಗೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯ ಪಂದ್ಯ ರದ್ದಾದರೆ ಟೂರ್ನಿಯಿಂದ ಅಧಿಕೃತವಾಗಿ ಹೊರಬೀಳಲಿದೆ. ಹೇಗಾದರೂ ಪಂದ್ಯದ ದಿನ ಮಳೆ ಬಾರದಿರಲಿ ಎಂದು ಆರ್​ಸಿಬಿ ಆಟಗಾರರು ಡ್ರೆಸಿಂಗ್​ ರೋಮ್​ನಲ್ಲಿ ಹರೇ ರಾಮ ಹರೇ ರಾಮ, ರಾಮ ರಾಮ ಹರೇ ಹರೇ, ಹರೇ ಕೃಷ್ಣ ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ ಎಂದು ಕೃಷ್ಣ ನಾಮ ಜಪಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಅಸಲಿಗೆ ಆರ್​ಸಿಬಿ ಆಟಗಾರರು ಮಳೆ ಬಾರದಂತೆ ಕೃಷ್ಣ ನಾಮ ಜಪಿಸಿಲ್ಲ. ಬದಲಾಗಿ ನೆಟ್ಟಿಗರು ಈ ವಿಡಿಯೊವನ್ನು ಎಡಿಟ್​ ಮಾಡಿ ವೈರಲ್​ ಮಾಡಿದ್ದಾರೆ. ಪ್ರತಿ ಪಂದ್ಯ ಗೆದ್ದಾಗ ಆರ್​ಸಿಬಿ ಡ್ರೆಸ್ಸಿಂಗ್​ ರೂಮ್​ನಲ್ಲಿ ಸಂಭ್ರಮಿಸುತ್ತಾರೆ. ಈ ವಿಡಿಯೊಗೆ ಕೃಷ್ಣ ನಾಮ ಜಪವನ್ನು ಮತ್ತು ಹವಾಮಾನ ಇಲಾಖೆಯ ವರದಿಯ ಫೋಟೊವನ್ನು ಎಡಿಟ್​​ ಮಾಡಲಾಗಿದೆ.

ಇದನ್ನೂ ಓದಿ RCB vs CSK: ಅದೇ ದಿನ, ಅದೇ ವಾರ, ಮಳೆ ಭೀತಿ; ಇದೆಂಥಾ ಕಾಕತಾಳೀಯ! ಆರ್​ಸಿಬಿಗೆ ಇದು ಅದೃಷ್ಟವಾ?

1. ಪಂದ್ಯದ ಸಮಯದಲ್ಲಿ ಬೆಂಗಳೂರಿನಲ್ಲಿ ಭಾರೀ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿದೆ. ಒಂದೊಮ್ಮೆ ಪಂದ್ಯ ಮಳೆಯಿಂದ ರದ್ದಾದರೆ ಉಭಯ ತಂಡಗಳಿಗೂ ತಲಾ ಒಂದೊಂದು ಅಂಕ ನೀಡಲಾಗುತ್ತದೆ.

2. ಆರ್​ಸಿಬಿ-ಸಿಎಸ್​ಕೆ​ ನಡುವಣ ಪಂದ್ಯದ ಅಂತಿಮ 5 ಓವರ್​ಗಳ ಪಂದ್ಯದ ಆಯೋಜನೆಗೆ ಕಟ್ ಆಫ್ ಟೈಮ್ 10:56 PM. ಈ ವೇಳೆಗೆ ಪಂದ್ಯ ಆಯೋಜಿಸುವಂತಹ ಪರಿಸ್ಥಿತಿ ಇರದಿದ್ದರೆ ಪಂದ್ಯವನ್ನು ರದ್ದು ಎಂದು ನಿರ್ಧರಿಸಲಾಗುತ್ತದೆ.

3. ಒಂದು ವೇಳೆ ಮಳೆ ಬಂದು, ಉದಾಹರಣೆಗೆ ನಿಗದಿತ 10 ಓವರ್​ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ತಂಡ 10 ಓವರ್ ಆಡಿ, 2ನೇ ಇನಿಂಗ್ಸ್​ನಲ್ಲಿ ಬ್ಯಾಟಿಂಗ್ ಮಾಡಿದ ತಂಡ 5 ಓವರ್​ಗಳನ್ನು ಪೂರ್ತಿಗೊಳಿಸಿದರೆ ಮಾತ್ರ ಆಗ ಡಕ್​ವರ್ತ್ ಲೂಯಿಸ್ ನಿಯಮ ಅನ್ವಯವಾಗುತ್ತದೆ.

4. ಪಂದ್ಯ ಆರಂಭಗೊಂಡ ಬಳಿಕ ಮಳೆ ಬಂದರೆ ಡಕ್​ವರ್ತ್ ಲೂಯಿಸ್ ನಿಯಮದ ಪ್ರಕಾರ ಓವರ್ ಕಡಿತದೊಂದಿಗೆ ಟಾರ್ಗೆಟ್ ನೀಡಲಾಗುತ್ತದೆ. ಈ ಮೂಲಕ ಪಂದ್ಯವನ್ನು ಪೂರ್ಣಗೊಳಿಸಲಾಗುತ್ತದೆ.

5. ಒಂದೊಮ್ಮೆ ಮಳೆಯಿಂದಾಗಿ ಪಂದ್ಯ ರದ್ದಾದರೆ ಚೆನ್ನೈ ತಂಡ ಅಧಿಕೃತವಾಗಿ ಪ್ಲೇಆಫ್​ಗೆ ಎಂಟ್ರಿ ಕೊಡಲಿದೆ. ಏಕೆಂದರೆ ಈಗಾಗಲೇ ಚೆನ್ನೈ 14 ಅಂಕಗಳನ್ನು ಹೊಂದಿದ್ದು ಪಂದ್ಯ ರದ್ದಾದ ಕಾರಣ ಸಿಗುವ ಒಂದು ಅಂಕದಿಂದ ಒಟ್ಟು ಅಂಕ 15ಕ್ಕೇ ಏರಿಕೆಯಾಗುತ್ತದೆ. ಇನ್ನುಳಿದ ಯಾವುದೇ ತಂಡಕ್ಕೂ ಈ ಮೊತ್ತವನ್ನು ಮೀರಲು ಸಾಧ್ಯವಾಗುವುದಿಲ್ಲ. ಹೀಗಾಗಿ ಚೆನ್ನೈಗೆ ಮಳೆ ವರದಾನವಾಗಲಿದೆ. ಆರ್​ಸಿಬಿ ತಂಡವು 13 ಅಂಕಗಳೊಂದಿಗೆ ಐಪಿಎಲ್​ನಿಂದ ಹೊರಬೀಳಲಿದೆ.

Continue Reading

ವೈರಲ್ ನ್ಯೂಸ್

Viral Video: ಅಳುತ್ತಾ ವಿದಾಯ ಹೇಳಿದ್ದೇಕೆ ಪಾಕಿಸ್ತಾನದ ಅತ್ಯಂತ ಕಿರಿಯ ಯೂಟ್ಯೂಬರ್?

ಪಾಕಿಸ್ತಾನದ ಕಿರಿಯ ಯೂಟ್ಯೂಬರ್ ಮೊಹಮ್ಮದ್ ಶಿರಾಜ್ ಇನ್ನು ತಾವು ಯಾವುದೇ ವಿಡಿಯೋವನ್ನು (Viral Video) ಸಾಮಾಜಿಕ ಜಾಲತಾಣದಲ್ಲಿ ಹಾಕುವುದಿಲ್ಲ ಎಂಬುದಾಗಿ ತಮ್ಮ ಕೊನೆಯ ವ್ಲಾಗ್ ನಲ್ಲಿ ಹೇಳಿಕೊಂಡಿದ್ದಾರೆ. ಅವರು ಈ ರೀತಿ ಹೇಳಿರುವುದು ಯಾಕೆ ಗೊತ್ತೇ? ಈ ವರದಿ ಓದಿ.

VISTARANEWS.COM


on

By

Viral Video
Koo

ಪಾಕಿಸ್ತಾನದ ಅತ್ಯಂತ ಕಿರಿಯ ಯೂಟ್ಯೂಬರ್ (Pakistan’s youngest YouTuber) ಮೊಹಮ್ಮದ್ ಶಿರಾಜ್ (Mohammad Shiraz) ತನ್ನ ಕೊನೆಯ ವ್ಲಾಗ್ (last vlog) ಅನ್ನು ಮೇ 15ರಂದು ಸಾಮಾಜಿಕ ಜಾಲತಾಣದಲ್ಲಿ (Viral Video) ಹಂಚಿಕೊಂಡಿದ್ದು, ತಮ್ಮ ಅಭಿಮಾನಿಗಳು, ಅನುಯಾಯಿಗಳಿಗೆ ಭಾವನಾತ್ಮಕವಾಗಿ ವಿದಾಯ ( goodbye) ಹೇಳಿದ್ದಾಳೆ. ಸುಮಾರು 11 ನಿಮಿಷಗಳ ವಿಡಿಯೋದಲ್ಲಿ ಆಕೆ ಅಳುತ್ತಾ ತಮ್ಮ ಅಭಿಮಾನಿಗಳಿಗೆ ಸಂದೇಶವನ್ನು ನೀಡಿದ್ದಾಳೆ.

ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಿರುವ 11 ನಿಮಿಷಗಳ ವಿಡಿಯೋದಲ್ಲಿ ಶಿರಾಜ್ ವ್ಲಾಗ್ ಮಾಡುವ ಬದಲು ಈ ಸಮಯದಲ್ಲಿ ತನ್ನ ಅಧ್ಯಯನದ ಮೇಲೆ ಗಮನ ಹರಿಸಬೇಕೆಂದು ತಂದೆ ಬಯಸುತ್ತಾರೆ ಎಂದು ಹೇಳಿದ್ದಾಳೆ.

ತನ್ನ ಚಿಕ್ಕ ಸಹೋದರಿ ಮುಸ್ಕಾನ್ ಜೊತೆಗೆ ವೀಕ್ಷಕರನ್ನು ಸ್ವಾಗತಿಸಿದ ಶಿರಾಜ್, “ಮೇಂ ಆಜ್ ಸೆ ವ್ಲೋಗ್ ನಹೀ ಬನೌಂಗಾ. ಮೇರೆ ಅಬ್ಬು ನೆ ಬೋಲಾ ಹೈ ಆಪ್ ಕುಚ್ ದಿನ್ ಪಧೈ ಕರೋ ಔರ್ ವಿಡಿಯೋ ನಹೀ ಬನಾವೋ. ಲೇಕಿನ್, ಮುಝೆ ವ್ಲೋಗ್ ಬನಾನೇ ಕಾ ಬೋಹತ್ ಶೌಖ್ ಹೈ. ಇಸ್ಲಿಯೇ, ಆಜ್ ಮೇರಾ ಆಕ್ರಿ ವ್ಲಾಗ್ ಹೈ ಎಂದು ಹೇಳಿದಳು. ಅಂದರೆ ನಾನು ಇನ್ನು ಮುಂದೆ ವ್ಲಾಗ್‌ಗಳನ್ನು ಮಾಡುವುದಿಲ್ಲ. ನನ್ನ ತಂದೆ ನನ್ನನ್ನು ಅಧ್ಯಯನಕ್ಕೆ ಹೆಚ್ಚಿನ ಗಮನ ಕೊಡಲು ಹೇಳಿದ್ದಾರೆ. ಸದ್ಯಕ್ಕೆ ವಿಡಿಯೋಗಳನ್ನು ಮಾಡಬೇಡಿ ಎಂದಿದ್ದಾಳೆ.


ನಾನು ವ್ಲಾಗ್‌ಗಳನ್ನು ಮಾಡಲು ಇಷ್ಟಪಡುತ್ತೇನೆ. ಆದರೆ ಇದು ನನ್ನ ಕೊನೆಯ ವ್ಲಾಗ್. ನಾನು ಏನು ಮಾಡಲಿ? ಎಂದು ಅಳುತ್ತಾ, ಕಣ್ಣೀರು ಒರೆಸುತ್ತಾ ಶಿರಾಜ್ ತಮ್ಮ ವಿಡಿಯೋದಲ್ಲಿ ಹೇಳಿಕೊಂಡಿದ್ದಾಳೆ.

ಸ್ವಲ್ಪ ಸಮಯದ ಅನಂತರ ಅವರು ಮುಸ್ಕಾನ್‌ಳೊಂದಿಗೆ ತಮ್ಮ ಹಳ್ಳಿಯಲ್ಲಿ ಅಡ್ಡಾಡಿದ್ದಾಳೆ ಮತ್ತು ವೀಕ್ಷಕರಿಗೆ ಅವರ ನೆಚ್ಚಿನ ತಾಣಗಳಲ್ಲಿ ಒಂದಾದ ಸ್ವಲ್ಪ ಸ್ಟ್ರೀಮ್ ಅನ್ನು ತೋರಿಸಿದ್ದಾಳೆ.


ಬುಟ್ಟಿಗಳನ್ನು ಮಾಡುತ್ತಿದ್ದ ಒಬ್ಬ ವ್ಯಕ್ತಿಯನ್ನು ಭೇಟಿಯಾದ ಶಿರಾಜ್ ಈಗ ಸ್ವಲ್ಪ ಸಮಯದವರೆಗೆ ವಿಡಿಯೋಗಳನ್ನು ಪೋಸ್ಟ್ ಮಾಡುವುದಿಲ್ಲ ಎಂದು ಮತ್ತೊಮ್ಮೆ ಹೇಳಿದ್ದಾಳೆ. ಏಕೆ ಎಂದು ಕೇಳಿದಾಗ ಶಿರಾಜ್ ಕಾರಣವನ್ನು ವಿವರಿಸಿದ್ದಾಳೆ. ಆದರೆ ಆ ವ್ಯಕ್ತಿ ವ್ಲಾಗ್‌ಗಳನ್ನು ರಚಿಸಲು ಸ್ವಲ್ಪ ಸಮಯವನ್ನು ಮೀಸಲಿಡುವಂತೆ ಸಲಹೆ ನೀಡಿದ್ದಾನೆ.

ಸ್ವಲ್ಪ ಅಸಮಾಧಾನಗೊಂಡ ಶಿರಾಜ್, ಅನಂತರ ಅವರ ಎಲ್ಲಾ ಪ್ರೀತಿಗಾಗಿ ತನ್ನ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದಳು. ವ್ಲಾಗ್ ಮಾಡಲು ಅವಕಾಶ ನೀಡುವಂತೆ ಅವರ ತಂದೆಗೆ ವಿನಂತಿಸುವಂತೆ ಕೇಳಿಕೊಂಡಳು.
ಮೈ ಲಾಸ್ಟ್ ವ್ಲಾಗ್. ಎಮೋಷನಲ್ ಗುಡ್ ಬೈ ಎಂಬ ಶೀರ್ಷಿಕೆಯಡಿ ಯುಟ್ಯೂಬ್‌ನಲ್ಲಿ ಪೋಸ್ಟ್ ಮಾಡಲಾದ ಶಿರಾಜ್ ಅವರ ವಿಡಿಯೋ ಸಾಕಷ್ಟು ವೈರಲ್ ಆಗಿದೆ.

ಇದನ್ನೂ ಓದಿ: Virat Kohli: ಮಗಳು ವಮಿಕಾ ಕೂಡ ಕ್ರಿಕೆಟ್​ ಪ್ರಿಯೆ; ಬ್ಯಾಟಿಂಗ್​ ಅಚ್ಚುಮೆಚ್ಚು ಎಂದ ಕೊಹ್ಲಿ​

‘ಶಿರಾಜಿ ವಿಲೇಜ್ ವ್ಲಾಗ್ಸ್’ ಎಂಬುದು ಅವರ ಯೂಟ್ಯೂಬ್ ಚಾನೆಲ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಯ ಹೆಸರು. ಇದರಲ್ಲಿ ಅವರು ತಮ್ಮ ಕುಟುಂಬ ಜೀವನ ಮತ್ತು ದೈನಂದಿನ ಅನುಭವಗಳ ಸಾರವನ್ನು ಸೆರೆ ಹಿಡಿಯುವ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಾಳೆ. ಶಿರಾಜ್ 1.56 ಮಿಲಿಯನ್ ಚಂದಾದಾರರನ್ನು ಹೊಂದಿದೆ ಯೂಟ್ಯೂಬ್ ಮತ್ತು ಇನ್ ಸ್ಟಾ ಗ್ರಾಮ್ ನಲ್ಲಿ 2 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾಳೆ.

ಆರು ವರ್ಷದ ಮೊಹಮ್ಮದ್ ಶಿರಾಜ್ ಗಿಲ್ಗಿಟ್-ಬಾಲ್ಟಿಸ್ತಾನ್‌ನ ಖಪ್ಲು ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಕಳೆದ ಮಾರ್ಚ್ ನಲ್ಲಿ ಅವರು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ಭೇಟಿಯಾಗಿದ್ದಳು.

Continue Reading

ಕ್ರೀಡೆ

Virat Kohli: ಮಗಳು ವಮಿಕಾ ಕೂಡ ಕ್ರಿಕೆಟ್​ ಪ್ರಿಯೆ; ಬ್ಯಾಟಿಂಗ್​ ಅಚ್ಚುಮೆಚ್ಚು ಎಂದ ಕೊಹ್ಲಿ​

Virat Kohli: ದಾನೀಶ್ ಸೇಠ್ ಅವರು ಸಂದರ್ಶನದ ವೇಳೆ ಕೊಹ್ಲಿ ಜತೆ ಹಲವು ತರ್ಲೆ ಪ್ರಶ್ನೆಗಳನ್ನು ಕೇಳಿದ್ದಾರೆ. ಇದೇ ವೇಳೆ ನ್ಯಾಗ್ಸ್ ಒಂದು ಐಪಿಎಲ್​ಗೆ ಇನ್ನೊಂದು ಡಬ್ಲ್ಯುಪಿಎಲ್​ಗೆ ಎಂದು ಹೇಳುವ ಮೂಲಕ ಕೊಹ್ಲಿಯ ಕಾಲೆಳೆದಿದ್ದಾರೆ.

VISTARANEWS.COM


on

Virat Kohli
Koo

ಬೆಂಗಳೂರು: ಆರ್​ಸಿಬಿ(RCB) ತಂಡ ನಾಳೆ ನಡೆಯುವ 17ನೇ ಆವೃತ್ತಿಯ ಐಪಿಎಲ್​ನಲ್ಲಿ(IPL 2024) ತನ್ನ ಕೊನೆಯಲೀಗ್​ ಪಂದ್ಯವನ್ನು ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಆಡಲಿದೆ. ಈ ಪಂದ್ಯಕ್ಕೂ ಮುನ್ನ ಆರ್​ಸಿಬಿಯ ಇನ್‌ಸೈಡರ್ ​ಮಿಸ್ಟರ್, ನ್ಯಾಗ್ಸ್(mr nags) ಖಾತಿಯ ದಾನೀಶ್ ಸೇಠ್(danish sait) ಅವರು ವಿರಾಟ್​ ಕೊಹ್ಲಿ(Virat Kohli) ಜತೆಗೆ ಸಂದರ್ಶನವೊಂದನ್ನು ಮಾಡಿದ್ದಾರೆ. ಈ ಸಂದರ್ಶನದಲ್ಲಿ ಕೊಹ್ಲಿ ತಮ್ಮ ಮಗಳು ವಮಿಕಾ(vamika) ಕೂಡ ಕ್ರಿಕೆಟ್​ ಪ್ರಿಯೆ ಎಂಬ ವಿಚಾರವನ್ನು ತಿಳಿಸಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ.

ದಾನೀಶ್ ಸೇಠ್ ಅವರು ಸಂದರ್ಶನದ ವೇಳೆ ಕೊಹ್ಲಿ ಜತೆ ಹಲವು ತರ್ಲೆ ಪ್ರಶ್ನೆಗಳನ್ನು ಕೇಳಿದ್ದಾರೆ. ಇದೇ ವೇಳೆ ಪಾಪು ಹೇಗಿದೆ ಎಂದು ಕೇಳಿದಾಗ ಪಾಪು ಅದು ಯಾರು ಎಂದು ಕೊಹ್ಲಿ ಮರು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ನ್ಯಾಗ್ಸ್ ಅಕಾಯ್​ ಎಂದು ಹೇಳಿದ್ದಾರೆ. ಹೋ.. ಮಗನಾ ಆರೋಗ್ಯವಾಗಿದ್ದಾನೆ ಎಂದು ಹೇಳುತ್ತಾರೆ. ಇದೇ ವೇಳೆ ನ್ಯಾಗ್ಸ್ ಒಂದು ಐಪಿಎಲ್​ಗೆ ಇನ್ನೊಂದು ಡಬ್ಲ್ಯುಪಿಎಲ್​ಗೆ ಎಂದು ಕೊಹ್ಲಿಯ ಕಾಲೆಳೆದಿದ್ದಾರೆ. ಈ ಮಾತು ಕೇಳಿದ ಕೊಹ್ಲಿ ಅರೇ ಏನು ಹೇಳುತ್ತಿದ್ದಿಯಾ ಮಾರಾಯ ಎಂದು ಹಿಂದಿಯಲ್ಲಿ ಹೇಳುವ ಮೂಲಕ ನಗಾಡಿದ್ದಾರೆ.

ಇದೇ ವೇಳೆ ತನ್ನ ಮಗಳಿಗೂ ಕ್ರಿಕೆಟ್​ ಎಂದರೆ ಅಚ್ಚು ಮೆಚ್ಚು ಅವಳು ಈಗಲೇ ಬ್ಯಾಟಿಂಗ್​ ಮಾಡುತ್ತಾ ಆಡುತ್ತಿದ್ದಾಳೆ. ಆದರೆ ಮುಂದಿನ ದಿನಗಳಲ್ಲಿ ಏನಾಗುತ್ತದೆಯೋ ತಿಳಿದಿಲ್ಲ ಎಂದು ಕೊಹ್ಲಿ ಹೇಳಿದ್ದಾರೆ. ಅವರ ಈ ಮಾತನ್ನು ಗಮನಿಸುವಾಗ ಮಗಳಿಗೆ ಯಾವ ಕ್ಷೇತ್ರದಲ್ಲಿಯೂ ಮುಂದುವರಿಯುವ ಸಂಪೂರ್ಣ ಸ್ವಾತಂತ್ರ್ಯ ಕೊಹ್ಲಿ ನೀಡಲಿದ್ದಾರೆ ಎನ್ನುವುದು ಅರ್ಥವಾಗುತ್ತದೆ. ಅಪ್ಪನಂತೆ ಮಗಳು ಕೂಡ ಭಾರತ ಮಹಿಳಾ ಕ್ರಿಕೆಟ್​ನಲ್ಲಿ ಸಾಧನೆ ಮಾಡಲಿ ಎಂದು ಕೊಹ್ಲಿಯ ಅಭಿಮಾನಿಗಳು ಹಾರೈಸಲಾರಂಭಿಸಿದ್ದಾರೆ.

ಇದನ್ನೂ ಓದಿ IPL Ticket Scam: ಆನ್​ಲೈನ್​ ಟಿಕೆಟ್​ ಖರೀದಿಸಲು ಹೋಗಿ 3 ಲಕ್ಷ ರೂ ಕಳೆದುಕೊಂಡ ಆರ್​ಸಿಬಿ ಅಭಿಮಾನಿ

ಕೊಹ್ಲಿ ತಮ್ಮ ನಿವೃತ್ತಿ(Virat Kohli restaurant) ವಿಚಾರದ ಬಗ್ಗೆ ಮಾತನಾಡಿದ್ದು, ಒಬ್ಬ ಕ್ರೀಡಾಪಟುವಾದ ಮೇಲೆ ಇಂದಲ್ಲ ನಾಳೆ, ತಮ್ಮ ವೃತ್ತಿಜೀವನದ ಅಂತಿಮ ದಿನಾಂಕವನ್ನು ನೋಡಲೇಬೇಕಿದೆ ಎಂದು ಹೇಳಿದ್ದಾರೆ. ಇದು  ಅವರ ಅಭಿಮಾನಿಗಳಿಗೆ ಭಾರೀ ಆತಂಕ ಉಂಟುಮಾಡುವಂತೆ ಮಾಡಿದೆ. 

ಸಂದರ್ಶನವೊಂದರಲ್ಲಿ ಕೊಹ್ಲಿಗೆ ಸಕ್ಸಸ್​​ ಹಿಂದೆ ಯಾಕಿಷ್ಟು ಹಸಿವಿನಿಂದ ಓಡುತ್ತಿದ್ದೀರಿ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಕೊಹ್ಲಿ, ಒಬ್ಬ ಕ್ರೀಡಾಪಟು ಇಂದಲ್ಲ ನಾಳೆ ತಮ್ಮ ವೃತ್ತಿಜೀವನದ ಅಂತಿಮ ದಿನಾಂಕವನ್ನು ನೋಡಲೇಬೇಕಿದೆ. ಆದ್ದರಿಂದಲೇ ನಾನು ಈ ರೀತಿ ಹೆಚ್ಚು ಶ್ರಮವಹಿಸಿ, ಮಿತಿಮೀರಿ ಕೆಲಸ ಮಾಡುತ್ತಿದ್ದೇನೆ. ನೀವೃತ್ತಿಯ ಬಳಿಕ ನಾನು ಸಾಧನೆ ಮಾಡದರ ಕುರಿತು ಚಿಂತಿಸ ಬಾರದು. ಅಂತಹ ಪರಿಸ್ಥಿತಿ ನನಗೆ ಬರಬಾರದು ಎಂದರೆ, ಇಂದು ಅದ್ಭುತ ಆಟ ಆಡಲೇಬೇಕಿದೆ’ ಎಂದು ಹೇಳಿದರು.

‘ನನ್ನ ವೃತ್ತಿ ಜೀವನಕ್ಕೆ ವಿದಾಯ ಹೇಳಿದ ಬಳಿಕ ನನಗೆ ಯಾವುದೇ ವಿಷಾದ ಇರಬಾರದು. ಖಂಡಿತವಾಗಿ ಆ ರೀತಿ ನಾನು ಮಾಡಿಕೊಳ್ಳುವುದಿಲ್ಲ ಎಂದು ನನಗೆ ಖಾತ್ರಿಯಿದೆ. ಒಮ್ಮೆ ನಾನು ಕ್ರಿಕೆಟ್​ನಿಂದ ದೂರ ಸರಿದರೆ ಖಂಡಿತ ಮತ್ತೆ ನೀವು ನನ್ನನ್ನು ನೋಡೋದಿಲ್ಲ. ನಾನು ಆಡುವ ಕೊನೆವರೆಗೂ ನನ್ನಲ್ಲಿರುವ ಬೆಸ್ಟ್​ ಅನ್ನು ನೀಡಲು ಬಯಸುತ್ತೇನೆ. ಅದೊಂದೇ ನನ್ನನ್ನು ಮುಂದಕ್ಕೆ ಕೊಂಡೊಯ್ಯಲು ಸಾಧ್ಯ’ ಎಂದು ಹೇಳುವ ಮೂಲಕ ತಮ್ಮ ನಿವೃತ್ತಿಯ ಬಗೆಗಿನ ಸ್ಪಷ್ಟತೆಯನ್ನು ತಿಳಿಸಿದರು. ಕೊಹ್ಲಿಯ ಈ ಹೇಳಿಕೆ ಕಂಡು ಅವರ ಅಭಿಮಾನಿಗಳು ಆತಂಕಕ್ಕೆ ಒಳಪಟ್ಟಿದ್ದು, ಶೀಘ್ರದಲ್ಲೇ ಕೊಹ್ಲಿ ನಿವೃತ್ತಿ ಹೇಳಲಿದ್ದಾರಾ? ಎಂದು ಚಿಂತೆ ಪಡುವಂತೆ ಮಾಡಿದೆ.

Continue Reading
Advertisement
Uttar Pradesh
ದೇಶ31 seconds ago

Uttar Pradesh: ಉತ್ತರ ಪ್ರದೇಶದಲ್ಲಿ ಲೋಕಸಭೆ ಸಮರ; ನೀವು ತಿಳಿಯಲೇಬೇಕಾದ 5 ಅಂಶಗಳು ಇಲ್ಲಿವೆ

Prajwal Revanna Case
ಕರ್ನಾಟಕ16 mins ago

Prajwal Revanna Case: ಅಶ್ಲೀಲ ವಿಡಿಯೊ ವೈರಲ್ ಕೇಸ್‌; ವಕೀಲ ದೇವರಾಜೇಗೌಡ ಎಸ್‌ಐಟಿ ಕಸ್ಟಡಿಗೆ

theft Case
ಕ್ರೈಂ39 mins ago

Theft Case : ಪೊಲೀಸ್‌ ಬಸ್ಸನ್ನೇ ಕದಿಯಲು ಬಂದ ಕುಡುಕ; ಪೇಡ ಕೇಳಿದವ 15 ಕೆಜಿ ತುಪ್ಪ ಎಗರಿಸಿದ

7 books release programme on May 19 in Bengaluru
ಬೆಂಗಳೂರು47 mins ago

Bengaluru News: ಬೆಂಗಳೂರಿನಲ್ಲಿ ಮೇ 19ರಂದು ವೀರಲೋಕ ಪ್ರಕಾಶನದ 7 ಕೃತಿಗಳ ಲೋಕಾರ್ಪಣೆ

Pension and NAREGA money credited to farmers loans CM Siddaramaiah slams bank
ರಾಜಕೀಯ52 mins ago

CM Siddaramaiah: ಪಿಂಚಣಿ, ನರೇಗಾ ಹಣ ರೈತರ ಸಾಲಕ್ಕೆ ಜಮೆ; ಬ್ಯಾಂಕ್‌ ವಿರುದ್ಧ ಸಿಎಂ ಗರಂ! ಕೂಡಲೇ ನಿಲ್ಲಿಸಲು ಸೂಚನೆ

Canne Film Festival 2024
ಪ್ರಮುಖ ಸುದ್ದಿ55 mins ago

Canne Film Festival 2024: ಕಾನ್‌ ಫಿಲ್ಮ್ ಫೆಸ್ಟಿವಲ್‌ನ ರೆಡ್‌ ಕಾರ್ಪೆಟ್‌ನಲ್ಲಿ ತಾರೆಯರ ಫ್ಯಾಷನ್ ಕಲರವ!

Konkani Book Release
ಕಲೆ/ಸಾಹಿತ್ಯ60 mins ago

Konkani Book Release: ಇಟಾಲಿಯನ್-ಬ್ರಿಟಿಷ್ ಲೇಖಕ ರಚಿಸಿರುವ ಜಿಎಸ್‌ಬಿ ಕೊಂಕಣಿ ಮಾರ್ಗದರ್ಶಿ ಕೃತಿ ಬಿಡುಗಡೆ

MLC Meeting
ರಾಜಕೀಯ1 hour ago

MLC Election: ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣಾ ಪೂರ್ವಸಿದ್ಧತೆ ಸಭೆ; ಬಿಜೆಪಿ ಅಭ್ಯರ್ಥಿ ಅ. ದೇವೇಗೌಡ ಗೆಲುವಿಗೆ ರಣತಂತ್ರ

Arvind Kejriwal
ದೇಶ1 hour ago

Arvind Kejriwal: ಅಬಕಾರಿ ಕೇಸ್‌: ಕೇಜ್ರಿವಾಲ್‌ಗೆ ಬಿಗ್ ಶಾಕ್; ಇ.ಡಿ ಚಾರ್ಜ್‌ಶೀಟ್‌ನಲ್ಲಿ ಇವರೇ ಆರೋಪಿ!

HD Revanna case Hearing in Holenarasipura sexual assault case adjourned to Monday
ಹಾಸನ2 hours ago

HD Revanna Case: ಹೊಳೆನರಸೀಪುರದ ಲೈಂಗಿಕ ದೌರ್ಜನ್ಯ ಕೇಸ್‌ ವಿಚಾರಣೆ ಸೋಮವಾರಕ್ಕೆ ಮುಂದೂಡಿಕೆ; ರೇವಣ್ಣಗೆ ಜೈಲಾ? ಬೇಲಾ?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ13 hours ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ14 hours ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ1 day ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ1 day ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು1 day ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ2 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ3 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ3 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20243 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20243 days ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌