Site icon Vistara News

IT Company Layoffs : ಅಮೆರಿಕದಲ್ಲಿ 80,000 ಭಾರತೀಯ ಟೆಕ್ಕಿಗಳಿಗೆ ಈಗ ನಿರುದ್ಯೋಗ: ಕಳವಳಕಾರಿ ವರದಿ ಬಹಿರಂಗ

IT Layoff

ವಾಷಿಂಗ್ಟನ್:‌ ಅಮೆರಿಕದಲ್ಲಿ ಗೂಗಲ್‌, ಮೈಕ್ರೊಸಾಫ್ಟ್‌ ಮತ್ತು ಅಮೆಜಾನ್‌ನಂಥ ಕಂಪನಿಗಳಲ್ಲಿ ಸಾಮೂಹಿಕ ಉದ್ಯೋಗ ಕಡಿತದ ಪರಿಣಾಮ ಸುಮಾರು 80,000 ಭಾರತೀಯ ಮೂಲದ ಟೆಕ್ಕಿಗಳು (IT Company Layoffs) ಇದೀಗ ಉದ್ಯೋಗ ಕಳೆದುಕೊಂಡಿದ್ದಾರೆ. ಎಚ್‌-1 ಬಿ ಮತ್ತು ಎಲ್‌ 1 ವೀಸಾ ಅಡಿಯಲ್ಲಿ ಮುಂದುವರಿಯಲು ಸಾಧ್ಯವಾಗದೆ ಅತಂತ್ರ ಸ್ಥಿತಿಯಲ್ಲಿ ಅವರು ದಿನಗಳನ್ನು ದೂಡುವಂತಾಗಿದೆ ಎಂಬ ಕಳವಳಕಾರಿ ಸಂಗತಿ ಬಯಲಾಗಿದೆ.

ವಾಷಿಂಗ್ಟನ್‌ ಪೋಸ್ಟ್‌ ಈ ಕಳವಳಕಾರಿ ವರದಿಯನ್ನು ಪ್ರಕಟಿಸಿದ್ದು, 2 ಲಕ್ಷಕ್ಕೂ ಹೆಚ್ಚು ಟೆಕ್ಕಿಗಳು ಈಗ ಉದ್ಯೋಗ ಕಳೆದುಕೊಂಡಿದ್ದಾರೆ. ಅವರಲ್ಲಿ 40% ಮಂದಿ ಭಾರತೀಯರು ಎಂದಿದೆ.

ಎಚ್‌ -1 ಬಿ ವೀಸಾ ಅಡಿಯಲ್ಲಿ ಅಮೆರಿಕದ ಕಂಪನಿಗಳು ವಿಶೇಷ ಕೌಶಲ ಇರುವ ಹಾಗೂ ವೃತ್ತಿಪರ ವಿದೇಶಿಯರನ್ನು ನೇಮಕ ಮಾಡಿಕೊಳ್ಳಬಹುದು. ಈ ಯೋಜನೆಯಡಿಯಲ್ಲಿ ಲಕ್ಷಾಂತರ ಭಾರತೀಯ ಟೆಕ್ಕಿಗಳು ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದಾರೆ.

ಆದರೆ ಉದ್ಯೋಗ ಕಳೆದುಕೊಂಡಿರುವ ಭಾರತೀಯ ಟೆಕ್ಕಿಗಳು ಹೊಸ ಉದ್ಯೋಗ ಕಂಡುಕೊಳ್ಳದಿದ್ದರೆ, ಭವಿಷ್ಯದ ದಿನಗಳಲ್ಲಿ ಎಚ್‌ ೧ ಬಿ ವೀಸಾ ಅಡಿಯಲ್ಲಿ ಉಳಿದುಕೊಳ್ಳಲು ಸಾಧ್ಯವಾಗದು. ಈ ಹಿನ್ನೆಲೆಯಲ್ಲಿ ಗ್ಲೋಬಲ್‌ ಇಂಡಿಯನ್‌ ಟೆಕ್ನಾಲಜಿ ಪ್ರೊಫೆಷನಲ್ಸ್‌ ಅಸೋಸಿಯೇಶನ್‌ (GITPRO) ಉದ್ಯೋಗಾಕಾಂಕ್ಷಿ ಭಾರತೀಯ ಟೆಕ್ಕಿಗಳ ನೆರವಿಗೆ ಮುಂದೆ ಬಂದಿದೆ. ಎಚ್-‌1ಬಿ ಅಡಿಯಲ್ಲಿ ಇರುವವರು ಉದ್ಯೋಗ ಕಳೆದುಕೊಂಡರೆ 60 ದಿನಗಳೊಳಗೆ ಹೊಸ ಉದ್ಯೋಗ ಕಂಡುಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ಮುಂದಿನ 10 ದಿನಗಳಲ್ಲಿ ವೀಸಾ ಮುಕ್ತಾಯವಾಗಲಿದ್ದು, ದೇಶ ಬಿಡಬೇಕಾಗುತ್ತದೆ. ಆದರೆ ಕುಟುಂಬದ ಮಕ್ಕಳ ಶಿಕ್ಷಣದ ಮೇಲೆ ಇದು ಪ್ರಭಾವ ಬೀರಬಹುದು.

Exit mobile version