Site icon Vistara News

IT Hiring: ಟಿಸಿಎಸ್‌ನಲ್ಲಿ ಫ್ರೆಶರ್‌ಗಳಿಗೆ ಅರ್ಜಿ ಆಹ್ವಾನ, ಅರ್ಜಿ ಸಲ್ಲಿಸುವುದು ಹೇಗೆ? ಯಾವಾಗ ಕೊನೆಯ ದಿನ?

tcs jobs IT hiring

ಹೊಸದಿಲ್ಲಿ: ಭಾರತದ ಅತಿದೊಡ್ಡ ಐಟಿ ಸೇವೆಗಳ (IT services) ಕಂಪನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್ – TCS) ನೂತನ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು (IT Hiring) ಪ್ರಾರಂಭಿಸಿದೆ. ಏಪ್ರಿಲ್ 10ರವರೆಗೆ ಹೊಸ ಉದ್ಯೋಗಗಳಿಗಾಗಿ (Job Openings) ಅರ್ಜಿಗಳನ್ನು ಕರೆಯಲಾಗುತ್ತಿದೆ.

ಇದುವರೆಗಿನ ನೇಮಕಾತಿ ಸ್ಥಗಿತದಿಂದ ಸಂಕಷ್ಟದಲ್ಲಿರುವ ಎಂಜಿನಿಯರಿಂಗ್ ಪದವೀಧರರಿಗೆ ಇದು ಸಿಹಿ ಸುದ್ದಿಯಾಗಿದೆ. ಕಲೆದೆರಡು ವರ್ಷಗಳಲ್ಲಿ ವಿವಿಧ ದೊಡ್ಡ ಐಟಿ ಸಂಸ್ಥೆಗಳು ನೇಮಕಾತಿ ನಿಲ್ಲಿಸಿದ್ದವು.

TCS ಏಪ್ರಿಲ್ 26ರಂದು ಪರೀಕ್ಷೆಗಳನ್ನು ನಡೆಸಲಿದೆ. ಕಂಪನಿಯು 2024ರ BTech, BE, MCA, MSc ಮತ್ತು MS ಬ್ಯಾಚ್‌ನಿಂದ ಏಪ್ರಿಲ್ 10ರವರೆಗೆ ಉದ್ಯೋಗ ಅರ್ಜಿಗಳನ್ನು ಆಹ್ವಾನಿಸುತ್ತಿದೆ ಎಂದು TCS ವೆಬ್‌ಸೈಟ್‌ನ ಇತ್ತೀಚಿನ ಪ್ರಕಟಣೆ ತಿಳಿಸಿದೆ. TCS ಮೂರು ವಿಭಾಗಗಳಲ್ಲಿ- ನಿಂಜಾ, ಡಿಜಿಟಲ್ ಮತ್ತು ಪ್ರೈಮ್- ನೇಮಕಾತಿ ಮಾಡುತ್ತಿದೆ.

ನಿಂಜಾ ವರ್ಗವು ವರ್ಷಕ್ಕೆ 3.36 ಲಕ್ಷ ರೂಪಾಯಿಗಳ, ಡಿಜಿಟಲ್ ಮತ್ತು ಪ್ರೈಮ್ ವಿಭಾಗಗಳು ವಾರ್ಷಿಕವಾಗಿ ಕ್ರಮವಾಗಿ 7 ಲಕ್ಷ ಮತ್ತು 9-11.5 ಲಕ್ಷ ರೂ.ಗಳ ಪ್ಯಾಕೇಜ್‌ ಅನ್ನು ನೀಡಲಿವೆ. ಖಾಲಿ ಇರುವ ಹುದ್ದೆಗಳ ಸಂಖ್ಯೆಯನ್ನು ಟಿಸಿಎಸ್‌ ಬಹಿರಂಗಪಡಿಸಿಲ್ಲ.

ಡಿಸೆಂಬರ್ 2023ರಂದೇ ಸಂಸ್ಥೆ ಹೊಸ ಉದ್ಯೋಗಗಳ ಸೂಚನೆ ನೀಡಿತ್ತು. “ನಾವು ಮುಂದಿನ ವರ್ಷಕ್ಕೆ ನಮ್ಮ ಕ್ಯಾಂಪಸ್ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದೇವೆ. TCSಗೆ ಸೇರಲು ಫ್ರೆಶರ್‌ಗಳಲ್ಲಿ ಪ್ರಚಂಡ ಉತ್ಸಾಹವನ್ನು ಕಾಣುತ್ತಿದೇವೆ” ಎಂದು TCS ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಮಿಲಿಂದ್ ಲಕ್ಕಡ್ ಹೇಳಿದ್ದರು.

“ಉದ್ಯೋಗಿಗಳ ಸಂಖ್ಯೆಯನ್ನು ನಿರ್ದಿಷ್ಟಪಡಿಸುವುದು ಕಷ್ಟ” ಎಂದು ಲಕ್ಕಾಡ್ ಹೇಳಿದ್ದರು. ದೊಡ್ಡ ಪ್ರಮಾಣದಲ್ಲಿ ನೇಮಕಾತಿ ಆಗುವ ಸಂಭವ ಇದೆ. 2023-24ರಲ್ಲಿ ಟಿಸಿಎಸ್‌ 40,000 ಫ್ರೆಶರ್‌ಗಳನ್ನು ನೇಮಿಸಿಕೊಳ್ಳುವ ಗುರಿಯನ್ನು ಹೊಂದಿತ್ತು.

ಏತನ್ಮಧ್ಯೆ, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಶುಕ್ರವಾರ ಅಮೆಜಾನ್ ವೆಬ್ ಸೇವೆಗಳು (AWS) ಜನರೇಟಿವ್ AI (GenAI) ಅನ್ನು ಬಿಡುಗಡೆ ಪಾಲುದಾರನಾಗಿ ಹೊಂದಿದೆ. GenAIನಲ್ಲಿ 350,000ಕ್ಕೂ ಹೆಚ್ಚು ಉದ್ಯೋಗಿಗಳು ಮೂಲಭೂತ ಕೌಶಲ್ಯಗಳ ಬಗ್ಗೆ ತರಬೇತಿ ಪಡೆದಿದ್ದು, TCS ವಿಶ್ವದಲ್ಲೇ ಅತಿ ದೊಡ್ಡ AI ಕಾರ್ಯಪಡೆಗಳಲ್ಲಿ ಒಂದನ್ನು ನಿರ್ಮಿಸಲು ಸಿದ್ಧವಾಗಿದೆ.

TCS ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ?

ಹಂತ 1: TCS NextStep ಪೋರ್ಟಲ್‌ಗೆ ಲಾಗಿನ್ ಮಾಡಿ
ಹಂತ 2: ಡ್ರೈವ್‌ಗಾಗಿ ನೋಂದಾಯಿಸಿ ಮತ್ತು ಅರ್ಜಿ ಸಲ್ಲಿಸಿ
ಸನ್ನಿವೇಶ A: ನೀವು TCS NextStep ಪೋರ್ಟಲ್, ‘IT’ ವರ್ಗದ ಅಡಿಯಲ್ಲಿ ನೋಂದಾಯಿತ ಬಳಕೆದಾರರಾಗಿದ್ದರೆ, ದಯವಿಟ್ಟು ನಿಮ್ಮ TCS ಉಲ್ಲೇಖ ID (CT/ DT ಉಲ್ಲೇಖ ಸಂಖ್ಯೆ) ಒಂದಿಗೆ ಲಾಗಿನ್ ಮಾಡಿ ಮತ್ತು ಅರ್ಜಿ ನಮೂನೆಯನ್ನು ಪೂರ್ಣಗೊಳಿಸಿ. ಸಲ್ಲಿಸಿದ ನಂತರ, ದಯವಿಟ್ಟು Apply For Drive ಮೇಲೆ ಕ್ಲಿಕ್ ಮಾಡಿ.
ಸನ್ನಿವೇಶ B: ನೀವು ಹೊಸ ಬಳಕೆದಾರರಾಗಿದ್ದರೆ, Register Now ಕ್ಲಿಕ್ ಮಾಡಿ. “IT” ವರ್ಗವನ್ನು ಆಯ್ಕೆಮಾಡಿ ಮತ್ತು ನಿಮ್ಮ ವಿವರಗಳನ್ನು ಭರ್ತಿ ಮಾಡಿ. ನಿಮ್ಮ ಅರ್ಜಿ ನಮೂನೆಯನ್ನು ಸಲ್ಲಿಸಿ ಮತ್ತು Apply For Drive ಮೇಲೆ ಕ್ಲಿಕ್ ಮಾಡಿ.

ಇದನ್ನೂ ಓದಿ: Bangalore Water Crisis: “ನೀರು ಕೊಡ್ತೀವಿ, ಪ್ಲೀಸ್‌ ಹೋಗ್ಬೇಡಿ…” ಐಟಿ ಸಂಸ್ಥೆಗಳಿಗೆ ರಾಜ್ಯ ಮನವಿ; ಗಾಳ ಹಾಕಿದ ಕೇರಳ

Exit mobile version