ಬೆಂಗಳೂರು: ಅಲಹಾಬಾದ್‌ನ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ(IIIT) ಸಂಸ್ಥೆಯ ವಿದ್ಯಾರ್ಥಿನಿ ಯುಕ್ತಾ ಗೋಪಾಲನಿ (Yukta Gopalani) ಅವರು ಅಟ್ಲಾಷಿಯನ್ ಸಾಫ್ಟ್‌ವೇರ್ ಕಂಪನಿಯಲ್ಲಿ (Atlassian – Software Company) ವಾರ್ಷಿಕ 82.5 ಲಕ್ಷ ರೂ. ವೇತನ ಪಡೆಯುವ ಮೂಲಕ ದಾಖಲೆ ಬರೆದಿದ್ದಾರೆ. ಸಾಮಾನ್ಯವಾಗಿ ಐಐಟಿ(IIT), ಐಐಎಂ(IIM) ಮತ್ತು ಎನ್‌ಐಟಿಯಂಥ(NIT) ಸಂಸ್ಥೆಗಳಲ್ಲಿ ಓದಿರುವ ವಿದ್ಯಾರ್ಥಿಗಳು ಗರಿಷ್ಠ ಮೊತ್ತದ ವೇತನವನ್ನು ಪಡೆಯುವುದನ್ನು ಕೇಳಿದ್ದೇವೆ. ಆದರೆ, ಐಐಐಟಿಯ ವಿದ್ಯಾರ್ಥಿಯೊಬ್ಬರು ದಾಖಲೆಯ ವೇತನಕ್ಕೆ ಉದ್ಯೋಗ ಪಡೆದಿರುವುದು ದಾಖಲೆಗೆ ಕಾರಣವಾಗಿದೆ. ಒಂದು ವರ್ಷದ ಹಿಂದೆ ಉದ್ಯೋಗ ಪಡೆದಿದ್ದರೂ, ಆ ಸುದ್ದಿ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ(IT Job).
ಯುಕ್ತಾ ಗೋಪಾಲನಿ ಅವರು ಅಲಹಾಬಾದ್‌ನ ಐಐಐಟಿ ಸಂಸ್ಥೆಯಲ್ಲಿ ಐಟಿಯಲ್ಲಿ ಬಿಟೆಕ್ ಮಾಡಿದ್ದಾರೆ ಮತ್ತು ಪ್ರಸ್ತುತ ಕರ್ನಾಟಕದ ಬೆಂಗಳೂರಿನ ಅಟ್ಲಾಸಿಯನ್ ಕಚೇರಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರು ಜುಲೈ 2023 ರಲ್ಲಿ ಕಂಪನಿಗೆ ಸೇರಿದ್ದಾರೆ. “ಎಲ್ಲರಿಗೂ ನಮಸ್ಕಾರ, ನಾನು ಅಟ್ಲಾಸಿಯನ್ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಸೇರಿಕೊಂಡಿದ್ದೇನೆ ಎಂದು ಹಂಚಿಕೊಳ್ಳಲು ನನಗೆ ತುಂಬಾ ಸಂತೋಷವಾಗಿದೆ. ಇಲ್ಲಿ ಎಕ್ಸ್‌ಪ್ಲೋರ್ ಮಾಡಲು ಮತ್ತು ಇನ್ನಷ್ಟು ತಿಳಿದುಕೊಳ್ಳಲು ಎದುರುನೋಡುತ್ತಿದ್ದೇನೆ ” ಯುಕ್ತಾ ಗೋಪಾಲನಿ ಅವರ ತಮ್ಮ ಲಿಂಕ್ಡ್‌ಇನ್ ಪುಟದಲ್ಲಿ ಬರೆದುಕೊಂಡಿದ್ದಾರೆ.
ಈ ಮಧ್ಯೆ, ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ ನಯಾ ರಾಯ್‌ಪುರ್‌ನ (IIIT-NR) ಬಿಟೆಕ್ ವಿದ್ಯಾರ್ಥಿನಿ ರಾಶಿ ಬಗ್ಗಾ ಅವರು ಕೆಲವು ವಾರಗಳ ಹಿಂದೆ ವಾರ್ಷಿಕ 85 ಲಕ್ಷ ರೂಪಾಯಿಗಳ ಉದ್ಯೋಗ ಪ್ಯಾಕೇಜ್ ಅನ್ನು ಪಡೆದುಕೊಂಡು ಸುದ್ದಿಯಲ್ಲಿದ್ದರು. ರಾಶಿ ಬಗ್ಗಾ ಅವರ ವಾರ್ಷಿಕ ವೇತನವು ದಾಖಲೆಯಾಗಿದೆ. ಯಾಕೆಂದರೆ, ಅವರು 2023 ರಲ್ಲಿ IIIT-NR ಯಾವುದೇ ವಿದ್ಯಾರ್ಥಿಗೆ ನೀಡಲಾದ ಅತ್ಯಧಿಕ ಪ್ಯಾಕೇಜ್ ಅನ್ನು ಸ್ವೀಕರಿಸಿದ್ದಾರೆ ಎಂದು ಹೇಳಬಹುದು.
ಈ ಸುದ್ದಿಯನ್ನೂ ಓದಿ: ಹೆಚ್ಚು ವೇತನದ ಉದ್ಯೋಗಕ್ಕೆ ರಿಸೈನ್ ಮಾಡಿ, ವೇಟರ್- ಕ್ಲೀನರ್ ಆಗುತ್ತಿದ್ದಾರೆ ಯುವತಿಯರು!; ಯಾಕೆ ಹೀಗೆ?
ತಿಂಗಳ ಹಿಂದೆ 21 ವರ್ಷದ ರಿತಿ ಕುಮಾರಿ ಅವರು ತಮಗೆ ಸರಿ ಎನಿಸಿದ ಕಂಪನಿಯಲ್ಲಿ ಕೆಲಸ ಪಡೆದುಕೊಳ್ಳುವುದಕ್ಕಾಗಿ ಸುಮಾರು 13 ಕಂಪನಿಗಳ ಇಂಟರ್ನಶಿಪ್ ಉದ್ಯೋಗವನ್ನು ನಿರಾಕರಿಸಿದ್ದರು. ಇದರಲ್ಲಿ ಟಿಸಿಎಸ್, ಇನ್ಫೋಸಿಸ್ ಹಾಗೂ ವಿಪ್ರೋಗಳಂತ ದೈತ್ಯ ತಂತ್ರಜ್ಞಾನ ಕಂಪನಿಗಳು ಸೇರಿದ್ದವು. ಯಾವುದೇ ಟೆಕ್ಕಿಗೆ ಟಿಸಿಎಸ್, ಇನ್ಫೋಸಿಸ್ ಮತ್ತು ವಿಪ್ರೋಗಳಲ್ಲಿ ಕೆಲಸ ಮಾಡುವುದು ಕನಸಾಗಿರುತ್ತದೆ. ಆದರೆ, ರಿತಿ ಆ ಕಂಪನಿಗಳ ಉದ್ಯೋಗವನ್ನು ನಿರಾಕರಿಸಿದ್ದಳು. ಅಂತಿಮವಾಗಿ ಆಕೆ, ಬೆಂಗಳೂರಿನಲ್ಲಿ ವಾಲ್ಮಾರ್ಟ್‌ನಲ್ಲಿ ಉದ್ಯೋಗಕ್ಕೆ ಸೇರಿದ್ದಳು. ಇತರ ಕಂಪನಿಗಳಿಗೆ ಹೋಲಿಸಿದರೆ, ಸಂಬಳ ಕಡಿಮೆ ಇದ್ದರೂ ತನ್ನ ತೃಪ್ತಿಗಾಗಿ ತನಗಿಷ್ಟವಾದ ಕಂಪನಿ ಉದ್ಯೋಗಪಡೆದುಕೊಂಡು ಸುದ್ದಿಯಾಗಿದ್ದಳು.