ಹೆಚ್ಚು ವೇತನದ ಉದ್ಯೋಗಕ್ಕೆ ರಿಸೈನ್ ಮಾಡಿ, ವೇಟರ್​- ಕ್ಲೀನರ್​ ಆಗುತ್ತಿದ್ದಾರೆ ಯುವತಿಯರು!; ಯಾಕೆ ಹೀಗೆ? - Vistara News

ವಿದೇಶ

ಹೆಚ್ಚು ವೇತನದ ಉದ್ಯೋಗಕ್ಕೆ ರಿಸೈನ್ ಮಾಡಿ, ವೇಟರ್​- ಕ್ಲೀನರ್​ ಆಗುತ್ತಿದ್ದಾರೆ ಯುವತಿಯರು!; ಯಾಕೆ ಹೀಗೆ?

ದೊಡ್ಡದೊಡ್ಡ ಉದ್ಯೋಗ ಬಿಟ್ಟು, ಸಣ್ಣಪುಟ್ಟ ಕೆಲಸ ಹಿಡಿದವರು, ತಮ್ಮ ಖುಷಿಯನ್ನು, ಹೊಸ ಸ್ವರೂಪದ ಕೆಲಸದ ಅನುಭವವನ್ನು ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್​ನಲ್ಲಿ My First Physical Work Experience ಎಂಬ ಹ್ಯಾಷ್​ಟ್ಯಾಗ್​​ನಡಿ ಬರೆದುಕೊಳ್ಳುತ್ತಿದ್ದಾರೆ.

VISTARANEWS.COM


on

Chinese Youth Leaving their high Salary jobs and working As waiters
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ದುಡಿಮೆ ಮಾಡುವುದೇ ದುಡ್ಡಿಗಾಗಿ. ಅದರಲ್ಲೂ ಈಗಿನ ಬೆಲೆ ಏರಿಕೆ ಕಾಲದಲ್ಲಿ ಒಳ್ಳೆ ಸಂಬಳದ ಕೆಲಸ ಹಿಡಿಯಲು ಪ್ರತಿಯೊಬ್ಬರೂ ಪ್ರಯತ್ನ ಮಾಡುತ್ತಾರೆ. ಎಷ್ಟು ವೇತನ ಇದ್ದರೂ ಸಾಕಾಗೋದಿಲ್ಲ ಎಂದೇ ಅನ್ನಿಸುತ್ತಿರುವ ಹೊತ್ತಲ್ಲೇ ಚೀನಾದಲ್ಲಿ ಯುವಜನತೆ (Chinese Youth), ತಮ್ಮ ಒಳ್ಳೊಳ್ಳೆ ಸಂಬಳದ ಉದ್ಯೋಗಗಳನ್ನು ಬಿಟ್ಟು, ಹೋಟೆಲ್​​ಗಳಲ್ಲಿ ವೇಟರ್​, ಕ್ಯಾಶಿಯರ್​, ಕ್ಲೀನರ್​ ಆಗಿ ಸೇರಿಕೊಳ್ಳುತ್ತಿದ್ದಾರಂತೆ. ಹೆಚ್ಚಿನ ವೇತನ ಸಿಗುವ ಉದ್ಯೋಗ ಬಿಟ್ಟು, ಹೋಟೆಲ್ ವೇಟರ್​, ಕ್ಯಾಶಿಯರ್​ ಆಗುತ್ತಿರುವವರ ಬಳಿ ‘ಯಾಕೆ’ ಹೀಗೆ ಎಂದು ಪ್ರಶ್ನೆ ಮಾಡಿದ್ದಾರೆ. ‘ನೆಮ್ಮದಿ’ಗಾಗಿ ಎಂಬ ಉತ್ತರ ಕೊಡುತ್ತಿದ್ದಾರೆ. ಅಷ್ಟೇ ಅಲ್ಲ, ಈಗ ನಾವು ಮಾಡುತ್ತಿರುವ ಕೆಲಸದಲ್ಲಿ ನಮಗೆ ತೃಪ್ತಿ-ಸಂತೋಷ ಇದೆ ಎನ್ನುತ್ತಿದ್ದಾರೆ ಎಂದು ಕೆಲವು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಹೀಗೆ ದೊಡ್ಡದೊಡ್ಡ ಉದ್ಯೋಗ ಬಿಟ್ಟು, ಸಣ್ಣಪುಟ್ಟ ಕೆಲಸ ಹಿಡಿದವರು, ತಮ್ಮ ಖುಷಿಯನ್ನು, ಹೊಸ ಸ್ವರೂಪದ ಕೆಲಸದ ಅನುಭವವನ್ನು ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್​ನಲ್ಲಿ My First Physical Work Experience ಎಂಬ ಹ್ಯಾಷ್​ಟ್ಯಾಗ್​​ನಡಿ ಬರೆದುಕೊಳ್ಳುತ್ತಿದ್ದಾರೆ. ಚೀನಾದಲ್ಲಿ ಇನ್​ಸ್ಟಾಗ್ರಾಂ ಬದಲಿಗೆ ಬಳಸುವ ಸೋಷಿಯಲ್ ಮೀಡಿಯಾ Xiangshuದಲ್ಲಿ ಈಗ ಇಂಥ ಪೋಸ್ಟ್​ಗಳೇ ಜಾಸ್ತಿಯಾಗುತ್ತಿವೆ. ಈ ಹ್ಯಾಷ್​ಟ್ಯಾಗ್​ ಸಿಕ್ಕಾಪಟೆ ಟ್ರೆಂಡ್ ಆಗಿದೆ. ಇದರಡಿ ಪೋಸ್ಟ್​ ಆದ ಒಟ್ಟು ವಿಡಿಯೊಗಳಿಗೆ 30 ಮಿಲಿಯನ್​ಗೂ ಅಧಿಕ ವೀವ್ಸ್​ ಬಂದಿದೆ ಎಂದು ಚೀನಾ ಮಾಧ್ಯಮಗಳು ಕೂಡ ವರದಿ ಮಾಡಿವೆ.

ಅದರಲ್ಲೂ ಹೀಗೆ ಒಳ್ಳೆ ವೇತನದ ಜಾಬ್​ ಬಿಟ್ಟು, ಹೋಟೆಲ್​ನಲ್ಲಿ ವೇಟರ್​ ಆಗಿ, ಕ್ಯಾಶಿಯರ್ ಆಗಿ ಸೇರಿಕೊಳ್ಳುತ್ತಿರುವವರಲ್ಲಿ ಮಹಿಳೆಯರೇ ಹೆಚ್ಚಿದ್ದಾರೆ. ಕೆಲವರಂತೂ ಚಿಕ್ಕ ಬಂಡವಾಳದಲ್ಲಿ ತರಕಾರಿ-ಹಣ್ಣು ಮಾರಾಟ ಮಾಡುತ್ತಿದ್ದಾರೆ. ಪುಟ್ಟ ಉಪಾಹಾರ ಗೃಹಗಳನ್ನು ಶುರು ಮಾಡಿದ್ದಾರಂತೆ. ಈ ಬಗ್ಗೆ 25ವರ್ಷದ ಯುವತಿಯೊಬ್ಬಳು ತನ್ನ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾಳೆ. ‘ನಾನು ಒಳ್ಳೆ ಕಂಪನಿಯಲ್ಲಿ ಉದ್ಯೋಗದಲ್ಲಿದ್ದೆ. ವೇತನವೂ ಚೆನ್ನಾಗಿಯೇ ಇತ್ತು. ಆದರೆ ದಿನಕ್ಕೆ ಲೆಕ್ಕವಿಲ್ಲದಷ್ಟು ಇಮೇಲ್​ಗಳು, ಸಂದರ್ಶನಗಳು, ಪಿಪಿಟಿಗಳು ನನ್ನ ನೆಮ್ಮದಿಯನ್ನೇ ಕೆಡಿಸಿತ್ತು. ಒತ್ತಡವೇ ಜಾಸ್ತಿಯಾಗುತ್ತಿತ್ತು. ಇದೀಗ ಆ ಉದ್ಯೋಗ ಬಿಟ್ಟು, ಪುಟ್ಟದಾದ ರೆಸ್ಟೋರೆಂಟ್​ನಲ್ಲಿ ಸರ್ವರ್ ಆಗಿದ್ದೇನೆ, ಖುಷಿಯಾಗಿದ್ದೇನೆ’ ಎಂದು ಬರೆದುಕೊಂಡಿದ್ದಾಳೆ.

ಇದನ್ನೂ ಓದಿ: Hydropower Project: ಚೀನಾ ಗಡಿಯಲ್ಲಿ ಭಾರೀ ವೆಚ್ಚದ ಮೆಗಾ ಹೈಡ್ರೋಪವರ್ ಪ್ರಾಜೆಕ್ಟ್! 213 ಶತಕೋಟಿ ರೂ. ವೆಚ್ಚ

ಹಾಗೇ ಇನ್ನೊಬ್ಬಳು ಪೋಸ್ಟ್ ಹಾಕಿ ‘ನಾನು ಟಿಕ್​ಟಾಕ್​​ನ ಮಾತೃಸಂಸ್ಥೆ ಬೈಟ್​ ಡ್ಯಾನ್ಸ್​​ನಲ್ಲಿ ಇದ್ದೆ. ಆದರೀಗ ಅದನ್ನು ಬಿಟ್ಟು ಒಂದು ಉಪಾಹಾರಗೃಹ ಶುರು ಮಾಡಿಕೊಂಡಿದ್ದೇನೆ. ಅಲ್ಲಿ ನಾನು ಸ್ವತಃ ಅಡುಗೆ ಮಾಡುತ್ತೇನೆ. ನಾನೀಗ ಮಾಡುತ್ತಿರುವ ಕೆಲಸದಲ್ಲಿ ದೈಹಿಕ ಶ್ರಮ ಇದೆ. ಇಡೀ ದೇಹಕ್ಕೆ ಸುಸ್ತಾಗುತ್ತದೆ. ಆದರೆ ಮನಸಿಗೆ ತುಂಬ ನೆಮ್ಮದಿ ಇದೆ’ ಎಂದು ಹೇಳಿಕೊಂಡಿದ್ದಾಳೆ. ಹೀಗೆ ಚೀನಾದ ಹಲವರ ಪೋಸ್ಟ್​ಗಳು ವೈರಲ್ ಆಗುತ್ತಿವೆ. ಒಟ್ನಲ್ಲಿ ಚೀನಾ ಯುವಜನರು ಕಡಿಮೆ ಸಂಬಳವಾದರೂ, ಸರಿ ಮನಸಿಗೆ ತೃಪ್ತಿ ಬೇಕು..ಒತ್ತಡದಿಂದ ಮುಕ್ತಿ ಬೇಕು ಎನ್ನುತ್ತಿದ್ದಾರೆ.!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿದೇಶ

Pakistan: ಪಾಕಿಸ್ತಾನಕ್ಕೂ ಕಾಲಿಟ್ಟ ಯೋಗ; ಅಧಿಕೃತವಾಗಿ ತರಗತಿ ಆರಂಭ

Pakistan: ಪಾಕಿಸ್ತಾನದ ಕ್ಯಾಪಿಟಲ್‌ ಡೆವಲಪ್‌ಮೆಂಟ್‌ ಪ್ರಾಧಿಕಾರ(CDA) ತನ್ನ ಫೇಸ್‌ಬುಕ್‌ ಪೇಜ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದು, ಇಸ್ಲಾಮಾಬಾದ್‌ನ ಎಫ್-9 ಪಾರ್ಕ್‌ನಲ್ಲಿ ಉಚಿತ ಯೋಗ ತರಗತಿಗಳ ಜಾಹೀರಾತು ನೀಡಲಾಗಿದೆ. ಆರೋಗ್ಯ ಮತ್ತು ಕ್ಷೇಮಕ್ಕಾಗಿ ಅನೇಕರು ಈಗಾಗಲೇ ಈ ಉಚಿತ ಯೋಗ ತರಗತಿಗೆ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಸಿಡಿಎ ತಿಳಿಸಿದೆ.

VISTARANEWS.COM


on

Pakistan
Koo

ಇಸ್ಲಾಮಾಬಾದ್‌: ಪ್ರಧಾನಿ ನರೇಂದ್ರ ಮೋದಿ(Narendra Modi) ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ದೇಶ ವಿದೇಶಗಳಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ(International Yoga Day)ಯನ್ನು ಆಚರಿಸಲಾಗುತ್ತಿದೆ. ಭಾರತದ ಮೂಲವಿರುವ ಈ ಯೋಗ (Yoga) ಪರಂಪರೆ ಪ್ರಪಂಚದ ಮೂಲೆ ಮೂಲೆಗೂ ಪಸರಿಸಿ ಪ್ರತಿವರ್ಷ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಗುತ್ತಿದೆ. ಇದೀಗ ಭಾರತದ ಈ ಯೋಗ ಪರಂಪರೆ ನೆರೆಯ ರಾಷ್ಟ್ರ ಪಾಕಿಸ್ತಾನ(Pakistan)ಕ್ಕೂ ಕಾಲಿಟ್ಟಿದೆ. ಭಾರತೀಯ ಯೋಗ ಪದ್ಧತಿಗೆ ಮನಸೋತಿರುವ ಪಾಕಿಸ್ತಾನ ಅದನ್ನು ಅಧಿಕೃತವಾಗಿ ಅಳವಡಿಸಿಕೊಳ್ಳಲು ಮುಂದಾಗಿದೆ. ಹೀಗಾಗಿ ಅಲ್ಲಲ್ಲಿ ಉಚಿತ ಯೋಗ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ.

ಪಾಕಿಸ್ತಾನದ ಕ್ಯಾಪಿಟಲ್‌ ಡೆವಲಪ್‌ಮೆಂಟ್‌ ಪ್ರಾಧಿಕಾರ(CDA) ತನ್ನ ಫೇಸ್‌ಬುಕ್‌ ಪೇಜ್‌ನಲ್ಲಿ ಈ ಬಗ್ಗೆ ಪೋಸ್ಟ್‌ವೊಂದನ್ನು ಮಾಡಿದ್ದು, ಇಸ್ಲಾಮಾಬಾದ್‌ನ ಎಫ್-9 ಪಾರ್ಕ್‌ನಲ್ಲಿ ಉಚಿತ ಯೋಗ ತರಗತಿಗಳ ಜಾಹೀರಾತು ನೀಡಲಾಗಿದೆ. ಆರೋಗ್ಯ ಮತ್ತು ಕ್ಷೇಮಕ್ಕಾಗಿ ಅನೇಕರು ಈಗಾಗಲೇ ಈ ಉಚಿತ ಯೋಗ ತರಗತಿಗೆ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಸಿಡಿಎ ತಿಳಿಸಿದೆ. ಈಗಿರುವ ಮಾಹಿತಿಯ ಪ್ರಕಾರ, ಪಾಕಿಸ್ತಾನದಲ್ಲಿ ಅಧಿಕೃತವಾಗಿ ಯೋಗ ತರಬೇತಿ ನೀಡುವುದಿಲ್ಲ. ಹಾಗಾಗಿ CDA ಜಾಹೀರಾತು ಹೆಚ್ಚು ಗಮನ ಸೆಳೆದಿದೆ. ಅನೇಕ ಜನ ಯೋಗಾಭ್ಯಾಸ ಮಾಡುತ್ತಿರುವ ಫೊಟೋವೊಂದನ್ನು ಹಂಚಿಕೊಂಡಿರುವ CDA, ಅನೇಕರು ಈಗಾಗಲೇ ತರಗತಿಗಳೊಗೆ ಸೇರ್ಪಡೆಯಾಗಿದ್ದಾರೆ. ಆರೋಗ್ಯಕ್ಕಾಗಿ ಈ ನಡೆ ಎಂದು ಪೋಸ್ಟ್‌ ಮಾಡಿದ್ದಾರೆ.

ಯೋಗದ ಮೂಲ ಭಾರತವಾಗಿರುವುದರಿಂದ ಪಾಕಿಸ್ತಾನದಲ್ಲಿ ಅನೇಕ ಸಂಸ್ಥೆಗಳು ಯೋಗಾಭ್ಯಾಸಕ್ಕೆ ವಿರೋಧ ವ್ಯಕ್ತಪಡಿಸುತ್ತಿದೆ. ಅದಾಗ್ಯೂ ಕೆಲವು ಜನರು ತಮ್ಮ ಮನೆಯಲ್ಲೇ ಯೋಗ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳುತ್ತಿದ್ದಾರೆ. ಇದೀಗ ಬಹಿರಂಗವಾಗಿ ಯೋಗ ತರಗತಿಗಳು ಆರಂಭವಾಗಿರುವುದನ್ನು ಅನೇಕರು ಸ್ವಾಗತಿಸಿದ್ದಾರೆ. ಅದೂ ಅಲ್ಲದೇ ತರಗತಿಗೆ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು CDA ಕ್ರಮವನ್ನು ಖಂಡಿಸಿದ್ದಾರೆ.

ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಕರಡು ಪ್ರಸ್ತಾವನೆಯನ್ನು 2014 ಡಿಸೆಂಬರ್‌ನಲ್ಲಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ, ಭಾರತದ ಖಾಯಂ ಪ್ರತಿನಿಧಿಯಾಗಿರುವ ಅಶೋಕ್‌ ಕುಮಾರ್ ಮಂಡಿಸಿದ್ದರು. ವಿಶ್ವಸಂಸ್ಥೆಗೆ ಇದು ಐತಿಹಾಸಿಕ ಕ್ಷಣವಾಗಿದ್ದು, ಅದರ ಸದಸ್ಯ ರಾಷ್ಟ್ರಗಳು ಅಭೂತಪೂರ್ವ ಬೆಂಬಲ ಸೂಚಿಸಿದ್ದರು. ವಿಶ್ವ ಸಂಸ್ಥೆಯ 193 ರಾಷ್ಟ್ರಗಳ ಪೈಕಿ 177 ದೇಶಗಳು ಅನುಮೋದನೆಯನ್ನು ನೀಡಿದ್ದವು.

ಇದನ್ನೂ ಓದಿ:Prajwal Revanna Case: ವಿದೇಶದಿಂದ ಮಧ್ಯಾಹ್ನ 3 ಗಂಟೆಗೆ ಪ್ರಜ್ವಲ್‌ ರೇವಣ್ಣ ಆಗಮನ? ಬಂದ ಕೂಡಲೇ ಅರೆಸ್ಟ್!

2015 ಜೂನ್ 21ರಂದು ಚೊಚ್ಚಲ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಆಯುಶ್ ಸಚಿವಾಲಯದ ನೇತೃತ್ವದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ರಾಜಪಥದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಹಾಗೂ 84 ರಾಷ್ಟ್ರಗಳ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, 21 ಯೋಗ ಆಸನಗಳನ್ನು ಅಭ್ಯಾಸಿಸಲಾಯಿತು. ಯೋಗವು 6,000 ವರ್ಷಕ್ಕೂ ಹಳೆಯದಾದ ಭೌತಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿದೆ. ಪ್ರತಿವರ್ಷ ಯೊಗದ ದಿನಾಚರಣೆಯು ಯೋಗ, ಧ್ಯಾನ, ಸಭೆಗಳು ಚರ್ಚೆಗಳು, ಸಾಂಸ್ಕೃತಿಕ ಪ್ರದರ್ಶನಗಳು ಇತ್ಯಾದಿಗಳನ್ನು ಅಭ್ಯಸಿಸುವುದರ ಮೂಲಕ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಯೋಗ ದಿನವನ್ನು ಆಚರಿಸಲಾಗುತ್ತದೆ.

Continue Reading

ಕರ್ನಾಟಕ

Prajwal Revanna Case: ಜರ್ಮನಿ ಆಯ್ತು, ದುಬೈ ಬಿಟ್ಟಾಯ್ತು; ಮತ್ತೊಂದು ದೇಶಕ್ಕೆ ಹಾರಿದ ಪ್ರಜ್ವಲ್‌ ರೇವಣ್ಣ!

Prajwal Revanna Case: ಅಶ್ಲೀಲ ವಿಡಿಯೊಗಳು ವೈರಲ್‌ ಆಗುತ್ತಲೇ ಜರ್ಮನಿಗೆ ತೆರಳಿದ್ದ ಪ್ರಜ್ವಲ್‌ ರೇವಣ್ಣ ಬಳಿಕ ದುಬೈಗೆ ತೆರಳಿದ್ದಾರೆ ಎನ್ನಲಾಗಿತ್ತು. ಈಗ ಮತ್ತೊಂದು ದೇಶಕ್ಕೆ ಹಾರಿರುವ ಪ್ರಜ್ವಲ್‌ ರೇವಣ್ಣ, ಹಂಗೇರಿಯ ಬುಡಾಪೆಸ್ಟ್‌ನಲ್ಲಿ ತಂಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆದಾಗ್ಯೂ, ಹಾಸನ ಸಂಸದನ ವಿರುದ್ಧ ಬ್ಲ್ಯೂ ಕಾರ್ನರ್‌ ನೋಟಿಸ್‌ ಹೊರಡಿಸಬೇಕು ಎಂದು ಸಿಬಿಐಗೆ ಎಸ್‌ಐಟಿ ಅಧಿಕಾರಿಗಳು ಮನವಿ ಮಾಡಿದ್ದಾರೆ.

VISTARANEWS.COM


on

HD Revanna
Koo

ಬೆಂಗಳೂರು: ಅಶ್ಲೀಲ ವಿಡಿಯೊ, ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿರುವ ಹಾಸನ ಜೆಡಿಎಸ್‌ ಸಂಸದ (Hassan JDS MP) ಪ್ರಜ್ವಲ್‌ ರೇವಣ್ಣ (Prajwal Revanna Case) ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಹಾರಾಟ ಮುಂದುವರಿಸಿದ್ದಾರೆ. ಅಶ್ಲೀಲ ವಿಡಿಯೊಗಳು ವೈರಲ್‌ ಆಗುತ್ತಲೇ ಜರ್ಮನಿಗೆ ತೆರಳಿದ್ದ ಪ್ರಜ್ವಲ್‌ ರೇವಣ್ಣ ಬಳಿಕ ದುಬೈಗೆ ತೆರಳಿದ್ದಾರೆ ಎನ್ನಲಾಗಿತ್ತು. ಈಗ ಮತ್ತೊಂದು ದೇಶಕ್ಕೆ ಹಾರಿರುವ ಪ್ರಜ್ವಲ್‌ ರೇವಣ್ಣ, ಹಂಗೇರಿಯ ಬುಡಾಪೆಸ್ಟ್‌ನಲ್ಲಿ ತಂಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಪ್ರಜ್ವಲ್‌ ರೇವಣ್ಣ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು, ಪಾಸ್‌ಪೋರ್ಟ್‌ ಎಂಟ್ರಿ ಮಾಹಿತಿಯ ಮೇರೆಗೆ ಒಂದಷ್ಟು ಸುಳಿವು ಪತ್ತೆಹಚ್ಚಿದ್ದಾರೆ. ಪಾಸ್‌ಪೋರ್ಟ್‌ ಎಂಟ್ರಿ ಆಧಾರದ ಮೇಲೆ ಪ್ರಜ್ವಲ್‌ ರೇವಣ್ಣ ಬುಡಾಫೆಸ್ಟ್‌ನಲ್ಲಿ ತಲೆಮರೆಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಪ್ರಜ್ವಲ್‌ ರೇವಣ್ಣ ಪತ್ತೆಗೆ ಕಸರತ್ತು ನಡೆಸುತ್ತಿರುವ ಎಸ್‌ಐಟಿ ಅಧಿಕಾರಗಳು, ಬ್ಲ್ಯೂ ಕಾರ್ನರ್‌ ನೋಟಿಸ್‌ ಹೊರಡಿಸಬೇಕು ಎಂದು ಸಿಬಿಐಗೆ ಮನವಿ ಕೂಡ ಮಾಡಿದ್ದಾರೆ.

ಆರೋಪಿಯ ಚಲನವಲನಗಳ ಬಗ್ಗೆ ಮಾಹಿತಿಯನ್ನು ಕಲೆ ಹಾಕಲು ಬ್ಲ್ಯೂ ಕಾರ್ನರ್ ನೋಟೀಸ್‌ ಜಾರಿಗೊಳಿಸಲಾಗುತ್ತದೆ. ಆರೋಪಿ ಬಗ್ಗೆ ಸುಳಿವು ಸಿಕ್ಕ ಬಳಿಕ ಆ ಮಾಹಿತಿಯನ್ನು ಸಿಐಡಿಗೆ ಸಿಬಿಐ ನೀಡಲಿದೆ. ಮತ್ತೆ ಇದನ್ನು ಆಧರಿಸಿ ಕೋರ್ಟ್‌ಗೆ ಮಾಹಿತಿ ‌ನೀಡಿ ರೆಡ್ ಕಾರ್ನರ್ ನೊಟೀಸ್ ಜಾರಿ ಮಾಡಲು ಎಸ್ಐಟಿ ಮನವಿ ಮಾಡಬೇಕಿದೆ. ಸಿಬಿಐ, ಇಂಟರ್‌ಫೋಲ್‌ಗೆ ಮನವಿ ಮಾಡಿ ರೆಡ್ ಕಾರ್ನರ್ ನೊಟೀಸ್ ಪಡೆಯಲಿದೆ.

ಅಜ್ಞಾತ ಸ್ಥಳದಲ್ಲಿ ರೇವಣ್ಣ

ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣದಲ್ಲಿ ರೇವಣ್ಣಗೆ ಎಸ್ಐಟಿ ಮೂರು ನೋಟಿಸ್ ಹಾಗೂ ಕೊನೆಗೆ ಲುಕೌಟ್ ನೋಟಿಸ್ ಜಾರಿ ಮಾಡಿದ್ದು, ರೇವಣ್ಣ ಅವರು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ರೇವಣ್ಣ ಅವರು ವಿದೇಶಕ್ಕೆ ಹಾರಬಹುದು ಎಂಬ ಮುಂದಾಲೋಚನೆಯಿಂದ ಲುಕೌಟ್‌ ನೋಟೀಸ್‌ ಜಾರಿ ಮಾಡಲಾಗಿದ್ದು, ಈಗ ಅವರು ಯಾವುದೇ ಏರ್‌ಪೋರ್ಟ್‌ ಮೂಲಕ ಹಾದು ಹೋಗಲು ಸಾಧ್ಯವಿಲ್ಲದಾಗಿದೆ.

ವಿದೇಶದಲ್ಲಿದ್ದುಕೊಂಡು ಲೈಂಗಿಕ ಹಗರಣ ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿರುವ ಪ್ರಜ್ವಲ್ ರೇವಣ್ಣ ವಿರುದ್ಧ ರೆಡ್ ಕಾರ್ನರ್ ನೊಟೀಸ್ ಜಾರಿ ಮಾಡಲು ಎಸ್‌ಐಟಿ (SIT) ಸಿದ್ಧತೆ ನಡೆಸಿದೆ ಎನ್ನಲಾಗಿದ್ದು, ಇನ್ನೊಂದೆಡೆ ಭವಾನಿ ರೇವಣ್ಣ ಅವರಿಗೂ ವಿಚಾರಣೆಗೆ ಎಸ್‌ಐಟಿ ಬುಲಾವ್‌ ನೀಡಿದೆ. ಸದ್ಯ ರೇವಣ್ಣ ವಿರುದ್ಧ ತನಿಖೆಗೆ ಒಳಗಾಗಬೇಕಾದ ಗಂಭೀರ ಆರೋಪವಿದೆ. ಮೈಸೂರಿನಲ್ಲಿ ಸಂತ್ರಸ್ತೆಯ ಪುತ್ರ ರೇವಣ್ಣ ವಿರುದ್ಧ ಕಿಡ್ನಾಪ್ ಪ್ರಕರಣ ದಾಖಲು ಮಾಡಿದ್ದಾರೆ. ಹೀಗಾಗಿ ರೇವಣ್ಣಗೆ ಎಸ್ಐಟಿ ಮುಂದೆ ಹಾಜರಾಗಲು ನೋಟಿಸ್ ನೀಡಲಾಗಿದೆ. ಆದರೆ ಕಳೆದ ಎರಡು ದಿನಗಳಿಂದ ರೇವಣ್ಣ ನಾಪತ್ತೆಯಾಗಿದ್ದಾರೆ. ಅವರು ಅತ್ತ ಎಚ್.ಡಿ ದೇವೇಗೌಡರ ನಿವಾಸದಲ್ಲಿಯಾಗಲೀ, ಈತ್ತ ಬಸವನಗುಡಿಯ ತಮ್ಮ ನಿವಾಸದಲ್ಲಿಯಾಗಲೀ, ಹಾಸನದ ಎರಡು ನಿವಾಸಗಳಲ್ಲಾಗಲೀ ಇಲ್ಲ.

ಇದನ್ನೂ ಓದಿ: Prajwal Revanna Case: ವಿದೇಶದಿಂದ ಪ್ರಜ್ವಲ್‌ ರೇವಣ್ಣ ಎಳೆತರಲು ರೆಡ್‌ ಕಾರ್ನರ್‌ ನೋಟಿಸ್?‌ ಭವಾನಿ ರೇವಣ್ಣಗೂ ವಿಚಾರಣೆಗೆ ಬುಲಾವ್

Continue Reading

ಪ್ರಮುಖ ಸುದ್ದಿ

International Firefighters Day 2024: ಇಂದು ಅಂತಾರಾಷ್ಟ್ರೀಯ ಅಗ್ನಿಶಾಮಕ ದಿನ; ಜೀವ ರಕ್ಷಕರಿಗೊಂದು ಸಲಾಂ

ಜನ ಸಮುದಾಯವನ್ನು ರಕ್ಷಿಸಲು ತಮ್ಮ ಪ್ರಾಣವನ್ನು ಪಣಕ್ಕಿಡುವ ಅಗ್ನಿ ಶಾಮಕದಳದ ವೀರರನ್ನು ಗೌರವಿಸಲು ಇಂದು ವಿಶ್ವದಾದ್ಯಂತ ಅಂತಾರಾಷ್ಟ್ರೀಯ ಅಗ್ನಿಶಾಮಕ ದಿನವನ್ನು (International Firefighters Day 2024) ಆಚರಿಸಲಾಗುತ್ತಿದೆ. ಈ ದಿನದ ಹಿನ್ನೆಲೆಯ ವಿವರ ಇಲ್ಲಿದೆ.

VISTARANEWS.COM


on

By

International Firefighters Day 2024
Koo

ಪ್ರಾಕೃತಿಕ ವಿಕೋಪವಾಗಿರಬಹುದು (Natural disaster) ಅಥವಾ ಯಾವುದಾದರೂ ದುರಂತ (Tragedy) ಉಂಟಾಗಿರಬಹುದು ಇಂತಹ ವಿವಿಧ ಸಂದರ್ಭದಲ್ಲಿ ಕಷ್ಟಕ್ಕೆ ಸಿಲುಕಿರುವ ಜನ ಸಾಮಾನ್ಯರನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ಪಣಕ್ಕೆ ಇಡುವವರು ಅಗ್ನಿ ಶಾಮಕದಳದ ಸಿಬ್ಬಂದಿ. ಇವರನ್ನು ಗೌರವಿಸುವ ಸಲುವಾಗಿ ಪ್ರತಿ ವರ್ಷ ಮೇ 4ರಂದು ಅಂತಾರಾಷ್ಟ್ರೀಯ ಅಗ್ನಿ ಶಾಮಕ ದಿನವನ್ನು (International Firefighters Day 2024) ಆಚರಿಸಲಾಗುತ್ತದೆ.

Firefighters

ಜನ ಸಮುದಾಯವನ್ನು ರಕ್ಷಿಸಲು ತಮ್ಮ ಪ್ರಾಣವನ್ನು ಪಣಕ್ಕಿಡುವ ಅಗ್ನಿ ಶಾಮಕದಳದ ವೀರರನ್ನು ಗೌರವಿಸಲು ಇಂದು ವಿಶ್ವದಾದ್ಯಂತ ಅಂತಾರಾಷ್ಟ್ರೀಯ ಅಗ್ನಿಶಾಮಕ ದಿನವನ್ನು ಆಚರಿಸಲಾಗುತ್ತಿದೆ. ಇವರು ಜನ ಸಮುದಾಯಗಳನ್ನು ರಕ್ಷಿಸುವ ಜೊತೆಗೆ ವಿವಿಧ ಪರಿಸ್ಥಿತಿಗಳಲ್ಲಿ ಅಪಾಯಕ್ಕೆ ಸಿಲುಕಿರುವವರ ಜೀವಗಳನ್ನು ಉಳಿಸುವ ಕೆಲಸವನ್ನೂ ನಿರ್ವಹಿಸುತ್ತಾರೆ. ಅಗ್ನಿಶಾಮಕ ದಳದವರ ತ್ಯಾಗವನ್ನು ಗುರುತಿಸಲು ಮತ್ತು ಪ್ರಶಂಸಿಸಲು ಈ ಒಂದು ದಿನ ಖಂಡಿತ ಸಾಕಾಗಲಾರದು. ಆದರೂ ಅವರ ತ್ಯಾಗ, ಪರಿಶ್ರಮವನ್ನು ನೆನಪಿಸುವ ಈ ಒಂದು ದಿನ ಅತ್ಯಂತ ಮಹತ್ವದ್ದು ಎಂದರೆ ತಪ್ಪಾಗಲಾರದು. ಅಂತಾರಾಷ್ಟ್ರೀಯ ಅಗ್ನಿಶಾಮಕ ದಳದ ದಿನವು (International Firefighters Day) ಇತರರನ್ನು ರಕ್ಷಿಸಲು ತಮ್ಮ ಪ್ರಾಣವನ್ನು ಕಳೆದುಕೊಂಡ ಅಗ್ನಿಶಾಮಕರನ್ನು ನೆನಪಿನ ದಿನವಾಗಿಯೂ ಆಚರಿಸಲಾಗುತ್ತದೆ.

Firefighters extinguishing an industrial fire

ಯಾವಾಗ ?

ಅಂತಾರಾಷ್ಟ್ರೀಯ ಅಗ್ನಿಶಾಮಕ ದಿನವನ್ನು ಮೇ 4 (international firefighters day may 4)ರಂದು ಪ್ರತಿ ವರ್ಷ ಆಚರಿಸಲಾಗುತ್ತದೆ. ಈ ದಿನವನ್ನು ಅಗ್ನಿಶಾಮಕ ದಳದ ಪೋಷಕ ಸಂತ ಸೇಂಟ್ ಫ್ಲೋರಿಯನ್ ಅವರ ಸ್ಮರಣಾರ್ಥ ಆಚರಿಸಲಾಗುತ್ತಿದೆ. ಸೇಂಟ್ ಫ್ಲೋರಿಯನ್ ಅನ್ನು ರೋಮನ್ ಸಾಮ್ರಾಜ್ಯದಲ್ಲಿ ಅಗ್ನಿಶಾಮಕ ದಳದ ಮೊದಲ ಕಮಾಂಡರ್ ಎಂದು ಪರಿಗಣಿಸಲಾಗಿದೆ. ಅವರು ಪ್ರಾಚೀನ ರೋಮನ್ ನಗರವಾದ ನೊರಿಕಮ್ ನಲ್ಲಿ ಅಗ್ನಿಶಾಮಕ ಘಟಕದ ನಾಯಕರಾಗಿದ್ದರು.

Two firefighters go through the fire

ದಿನದ ಇತಿಹಾಸ

ಆಸ್ಟ್ರೇಲಿಯಾದಲ್ಲಿ ನಡೆದ ದುರಂತ ಘಟನೆಯ ಬಳಿಕ ಅಗ್ನಿ ಶಾಮಕ ದಿನವನ್ನು ಆಚರಿಸಲಾಯಿತು. 1998ರ ಡಿಸೆಂಬರ್ 2ರಂದು ವಿಕ್ಟೋರಿಯಾದ ಲಿಂಟನ್‌ನಲ್ಲಿ ಭೀಕರ ಕಾಡ್ಗಿಚ್ಚು ಉಂಟಾಗಿತ್ತು. ಈ ಸಂದರ್ಭದಲ್ಲಿ ಐವರು ಅಗ್ನಿಶಾಮಕ ದಳದವರು ಪ್ರಾಣ ಕಳೆದುಕೊಂಡರು. ಗೀಲಾಂಗ್ ಪಶ್ಚಿಮ ಅಗ್ನಿಶಾಮಕ ದಳದ ಸದಸ್ಯರಾಗಿದ್ದ ಗ್ಯಾರಿ ವ್ರೆಡೆವೆಲ್ಡ್ಟ್, ಕ್ರಿಸ್ಟೋಫರ್ ಇವಾನ್ಸ್, ಸ್ಟುವರ್ಟ್ ಡೇವಿಡ್ಸನ್, ಜೇಸನ್ ಥಾಮಸ್ ಮತ್ತು ಮ್ಯಾಥ್ಯೂ ಆರ್ಮ್ ಸ್ಟ್ರಾಂಗ್ ಅವರು ಈ ದುರ್ಘಟನೆಯಲ್ಲಿ ಸಾವನ್ನಪ್ಪಿದ್ದರು. ಬಳಿಕ ಘಟನೆಯ ಮಹತ್ವವನ್ನು ತಿಳಿಸಲು ಅಂತಿಮವಾಗಿ ಅಂತಾರಾಷ್ಟ್ರೀಯ ಅಗ್ನಿಶಾಮಕ ದಿನದ ಆಚರಣೆಯ ಪ್ರಸ್ತಾಪಕ್ಕೆ ಕಾರಣವಾಯಿತು. ಆಸ್ಟ್ರೇಲಿಯನ್ ಅಗ್ನಿಶಾಮಕ ದಳದ ಜೆಜೆ ಎಡ್ಮಂಡ್ಸನ್ ಅವರು ಅಗ್ನಿಶಾಮಕ ದಳದವರಿಗೆ ಮೀಸಲಾದ ದಿನವನ್ನು ಸ್ಥಾಪಿಸುವ ಉಪಕ್ರಮದ ನೇತೃತ್ವ ವಹಿಸಿದ್ದರು. ಎಡ್ಮಂಡ್ಸನ್ 1999 ರ ಹೊಸ ವರ್ಷದ ನಿರ್ಣಯದಂತೆ “ಎಲ್ಲಾ ಅಗ್ನಿಶಾಮಕ ದಳದವರಿಗೆ ಬೆಂಬಲ ಮತ್ತು ಗೌರವದ ಅಂತಾರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ದಿನವನ್ನು ಆಯೋಜಿಸಲು ಮತ್ತು ಇದನ್ನು ವಿಶ್ವಾದ್ಯಂತ ಸಂಘಟಿಸಬಹುದಾದ ದಿನಾಂಕವನ್ನು ಆಯೋಜಿಸಲು ನಿರ್ಧರಿಸಿದರು.

ಇದನ್ನೂ ಓದಿ: Sunita Williams: ಸುನೀತಾ ವಿಲಿಯಮ್ಸ್‌ 3ನೇ ಬಾರಿಗೆ ಬಾಹ್ಯಾಕಾಶಕ್ಕೆ ತೆರಳಲು ಸಜ್ಜು

ಕೆಂಪು ಮತ್ತು ನೀಲಿ ರಿಬ್ಬನ್

ಕೆಂಪು ಮತ್ತು ನೀಲಿ ರಿಬ್ಬನ್ ಸಾಮಾನ್ಯವಾಗಿ ಅಗ್ನಿಶಾಮಕ ದಳದವರನ್ನು ಗೌರವಿಸುವ ಸಂಕೇತವಾಗಿದೆ. IFFD ಯೊಂದಿಗೆ ಸಂಬಂಧ ಹೊಂದಿರುವ ಈ ರಿಬ್ಬನ್ ಅನ್ನು ಸಾಮಾನ್ಯವಾಗಿ ಸೇವೆ ಮತ್ತು ರಕ್ಷಿಸುವ ಅಗ್ನಿಶಾಮಕರಿಗೆ ಬೆಂಬಲ ಮತ್ತು ಮೆಚ್ಚುಗೆಯ ಸಂಕೇತವಾಗಿ ಧರಿಸಲು ನೀಡಲಾಗುತ್ತದೆ.
ಅಗ್ನಿಶಾಮಕ ದಳದವರು ಹೆಚ್ಚಾಗಿ ಎದುರಿಸುವ ಎರಡು ಅಂಶಗಳನ್ನು ಬಣ್ಣಗಳು ಸಂಕೇತಿಸುತ್ತವೆ. ಬೆಂಕಿಗೆ ಕೆಂಪು ಮತ್ತು ನೀರಿಗೆ ನೀಲಿ.

Continue Reading

ವಿದೇಶ

Nijjar Killing: ನಿಜ್ಜರ್‌ ಹಂತಕರ ಫೊಟೋ ರಿಲೀಸ್‌; ಭಾರತದತ್ತ ಮತ್ತೆ ಬೊಟ್ಟು ಮಾಡಿದ ಕೆನಡಾ

Nijjar Killing: ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಕೊಲೆ ಪ್ರಕರಣದಲ್ಲಿ ನಿನ್ನೆ ಬಂಧನಕ್ಕೊಳಗಾಗಿರುವ ಮೂವರು ಆರೋಪಿಗಳು ಭಾರತೀಯ ಮೂಲದವರು ಎಂಬುದು ಬಯಲಾಗಿದೆ. ರ್ದೀಪ್‌ ಸಿಂಗ್‌ ಹತ್ಯೆಯಲ್ಲಿ ಭಾರತ ಸರ್ಕಾರದ ಕೈವಾಡ ಇದೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್‌ ಅಧಿಕಾರಿ ಡೇವಿಡ್‌ ಟೆಬೌಲ್‌ ಹೇಳಿದ್ದಾರೆ.

VISTARANEWS.COM


on

Nijjar Killling
Koo

ಒಟ್ಟಾವ: ಖಲಿಸ್ತಾನಿ ಉಗ್ರ (Khalistani Terrorist) ಹರ್ದೀಪ್‌ ಸಿಂಗ್‌ ನಿಜ್ಜರ್‌ ಕೊಲೆ(Nijjar Killing) ಪ್ರಕರಣದಲ್ಲಿ ನಿನ್ನೆ ಬಂಧನಕ್ಕೊಳಗಾಗಿರುವ ಮೂವರು ಆರೋಪಿಗಳು ಭಾರತೀಯ ಮೂಲದವರು ಎಂಬುದು ಬಯಲಾಗಿದೆ. ಕಳೆದ ವರ್ಷ ಕೆನಡಾ (Canada) ಬ್ರಿಟೀಷ್‌ ಕೊಲಂಬಿಯಾದಲ್ಲಿ ಹರ್ದೀಪ್‌ ಸಿಂಗ್‌ನನ್ನು ಹತ್ಯೆ ಮಾಡಲಾಗಿತ್ತು. ಇದೀಗ ಮೂವರು ಹಂತಕರನ್ನು ಅರೆಸ್ಟ್‌ ಮಾಡಿರುವ ಕೆನಡಾ ಪೊಲೀಸರು ಬಂಧಿತರನ್ನು ಕರಣ್‌ ಪ್ರಿತ್‌ ಸಿಂಗ್(28) ಕಮಲ್‌ ಪ್ರಿತ್‌ ಸಿಂಗ್‌(22) ಮತ್ತು ಕರಣ್‌ ಬ್ರಾರ್‌(22) ಎಂದು ಗುರುತಿಸಲಾಗಿದೆ. ಅಲ್ಲದೇ ಪೊಲೀಸರು ಮೂವರು ಹಂತಕರ ಫೊಟೋವನ್ನೂ ಕೂಡ ರಿಲೀಸ್‌ ಮಾಡಿದ್ದಾರೆ.

ಅರೋಪಿಗಳ ವಿರುದ್ಧ ಕೊಲೆಗೆ ಸಂಚು ಮತ್ತು ಕೊಲೆ ಪ್ರಕರಣ ದಾಖಲಿಸಲಾಗಿದ್ದು, ಕೋರ್ಟ್‌ಗೆ ಎಲ್ಲಾ ದಾಖಲೆಗಳನ್ನು ಸಲ್ಲಿಸಲಾಗಿದೆ. ಇನ್ನಿ ಬಂಧಿತ ಆರೋಪಿಗಳು ಇದುವರೆಗೆ ಪೊಲೀಸರ ಕ್ರಿಮಿನಲ್‌ ರೆಕಾರ್ಡ್‌ನಲ್ಲಿಲ್ಲದ ವ್ಯಕ್ತಿಗಳಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸಲಾಗುತ್ತದೆ. ಅಲ್ಲದೇ ಹರ್ದೀಪ್‌ ಸಿಂಗ್‌ ಹತ್ಯೆಯಲ್ಲಿ ಭಾರತ ಸರ್ಕಾರದ ಕೈವಾಡ ಇದೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್‌ ಅಧಿಕಾರಿ ಡೇವಿಡ್‌ ಟೆಬೌಲ್‌ ಹೇಳಿದ್ದಾರೆ. ಇನ್ನು ಬಂಧಿತ ಆರೋಪಿಗಳು ನಿಜ್ಜರ್‌ ಹತ್ಯೆ ಸಂದರ್ಭದಲ್ಲಿ ಶೂಟರ್‌, ಚಾಲಕ ಮತ್ತು ಸ್ಪಾಟರ್‌ಗಳಲ್ಲಿ ಕೊಲೆಯಲ್ಲಿ ಭಾಗಿಯಾಗಿದ್ದರು. ನಿನ್ನೆ ಎರಡು ಪ್ರದೇಶಗಳಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಈ ಮೂವರ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮತ್ತೆ ಭಾರತದತ್ತ ಬೊಟ್ಟು ಮಾಡಿದ ಕೆನಾಡ

ನಿಜ್ಜರ್‌ ಹತ್ಯೆ ಪ್ರಕರಣದಲ್ಲಿ ಭಾರತೀಯ ಮೂಲದ ಮೂವರನ್ನು ಅರೆಸ್ಟ್‌ ಮಾಡಿರುವ ಬೆನ್ನಲ್ಲೇ ಕೆನಡಾ ಮತ್ತೆ ಭಾರತದತ್ತ ಬೊಟ್ಟು ಮಾಡಿ ತೋರಿಸಿದೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಕೆನಡಾ ಸಂಸ ಜಗ್ಮಿತ್‌ ಸಿಂಗ್‌, ಪ್ರಕರಣದಲ್ಲಿ ಭಾರತದ ಕೈವಾಡವಿರುವುದು ಸಾಬೀತಾಗಿದೆ. ಕೆನಡಾದಂತಹ ಪೂಜ್ಯನೀಯ ಸ್ಥಳದಲ್ಲಿ ಕೆನಡಾ ಪ್ರಜೆಯನ್ನು ಕೊಲ್ಲಲು ಭಾರತ ಹಂತಕರನ್ನು ನೇಮಿಸಿದೆ ಎಂದು ಆರೋಪಿಸಿದ್ದಾರೆ.

2023ರ ಜೂನ್‌ 18ರಂದು ಕೆನಡಾದಲ್ಲಿ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಗೀಡಾಗಿದ್ದ. ಇದರ ಹಿಂದೆ ಭಾರತದ ಏಜೆಂಟರ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ಆರೋಪ ಕೂಡ ಮಾಡಿದ್ದರು. ಹೀಗೆ, ಕೆನಡಾವನ್ನು ಭಾರತದ ವಿರುದ್ಧ ಎತ್ತಿಕಟ್ಟಲು ಪಾಕಿಸ್ತಾನದ ಐಎಸ್‌ಐ ಇಂತಹ ಕುತಂತ್ರ ಮಾಡಿದೆ. ಆದರೆ, ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯ ಆರೋಪವನ್ನು ತಿರಸ್ಕರಿಸುವ ಭಾರತ, ಆರೋಪಗಳಿಗೆ ಸಾಕ್ಷ್ಯ ಕೊಡಿ ಎಂದು ತಿರುಗೇಟು ನೀಡಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಈಗ ಭಾರತ ಹಾಗೂ ಕೆನಡಾ ಮಧ್ಯೆ ರಾಜತಾಂತ್ರಿಕ ಬಿಕ್ಕಟ್ಟು ಶುರುವಾಗಿದೆ.

ಇದನ್ನೂ ಓದಿ: Nijjar Killing: ಖಲಿಸ್ತಾನಿ ಉಗ್ರ ನಿಜ್ಜರ್‌ ಹತ್ಯೆಯ ಆರೋಪಿಗಳನ್ನು ಬಂಧಿಸಿದ ಕೆನಡಾ ಪೊಲೀಸರು; ಯಾರಿವರು?

“ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ಕುರಿತು ನಾನು ಭಾರತದ ಜತೆ ಮಾತನಾಡಿದ್ದೇನೆ. ಆದರೆ, ಆತನ ಹತ್ಯೆಯ ಕುರಿತು ಭಾರತಕ್ಕೆ ತುಂಬ ವಾರಗಳ ಹಿಂದೆಯೇ ನಂಬಲರ್ಹ ಆರೋಪಗಳ ಕುರಿತು ಮಾಹಿತಿಯನ್ನು ಒದಗಿಸಲಾಗಿದೆ. ತುಂಬ ಗಂಭೀರವಾದ ವಿಚಾರದ ಕುರಿತು ಭಾರತ ಹಾಗೂ ಕೆನಡಾ ಒಗ್ಗೂಡಿ ಕಾರ್ಯನಿರ್ವಹಿಸುವ ಕುರಿತು ಕೂಡ ಮನವರಿಕೆ ಮಾಡಲಾಗಿದೆ. ಗಂಭೀರ ಹತ್ಯೆಯ ವಿಚಾರದಲ್ಲಿ ಭಾರತವು ನಮ್ಮ ಜತೆ ಕೈಗೂಡಿಸುತ್ತದೆ ಎಂಬ ಆಶಾಭಾವನೆಯಲ್ಲಿ ಇದ್ದೇವೆ” ಎಂದು ಜಸ್ಟಿನ್‌ ಟ್ರುಡೋ ಹೇಳಿದ್ದರು. ಆದರೆ, ಭಾರತ ಮಾತ್ರ ಸರಿಯಾದ ಸಾಕ್ಷ್ಯ ಕೊಡಿ ಎಂದು ಹೇಳಿದೆ.

Continue Reading
Advertisement
Drought Relief
ಕರ್ನಾಟಕ20 mins ago

Drought Relief: ಚುನಾವಣೆ ಖರ್ಚಿಗಾಗಿ ಬರ ಪರಿಹಾರ ತಡೆಹಿಡಿದ ಕಾಂಗ್ರೆಸ್‌ ಸರ್ಕಾರ: ಆರ್‌.ಅಶೋಕ್‌

Prajwal Revanna Case No evidence against me its a conspiracy says HD Revanna
ಕರ್ನಾಟಕ27 mins ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Beef smuggling suspected Hindu activists pelt stones at vehicle
ಯಾದಗಿರಿ46 mins ago

Beef Smuggling: ಗೋಮಾಂಸ ಸಾಗಾಟ ಶಂಕೆ; ಹಿಂದುಪರ ಕಾರ್ಯಕರ್ತರಿಂದ ವಾಹನಕ್ಕೆ ಕಲ್ಲು ತೂರಾಟ

Narendra Modi
ದೇಶ46 mins ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Vijay Namdevrao Wadettiwar
ದೇಶ1 hour ago

ಮುಂಬೈ ದಾಳಿ ಉಗ್ರ ಅಜ್ಮಲ್‌ ಕಸಬ್‌ ನಿರಪರಾಧಿ ಎಂದ ಕಾಂಗ್ರೆಸ್‌ ನಾಯಕ; ಭುಗಿಲೆದ್ದ ವಿವಾದ!

Beer Shortage
ಕರ್ನಾಟಕ1 hour ago

Beer Shortage: ಬೇಸಿಗೆಯಲ್ಲಿ ಮದ್ಯ ಪ್ರಿಯರಿಗೆ ಬ್ಯಾಡ್‌ ನ್ಯೂಸ್; ಇನ್ನೆರಡು ತಿಂಗಳು ಬಿಯರ್‌ ಸಿಗೋದು ಕಷ್ಟ!

Torn Jeans Styling Tips
ಫ್ಯಾಷನ್2 hours ago

Torn Jeans Styling Tips: ಟೊರ್ನ್‌ ಜೀನ್ಸ್‌ ಪ್ಯಾಂಟ್‌ ಪ್ರಿಯರು ನೆನಪಿನಲ್ಲಿಟ್ಟುಕೊಳ್ಳಬೇಕಾದ 5 ಪ್ರಮುಖ ಸಂಗತಿಗಳು

lok sabha Election 2024 Bus Fare Hike
Lok Sabha Election 20242 hours ago

Lok Sabha Election 2024 : ಮತದಾನದ ಹಬ್ಬದಲ್ಲೂ ಲೂಟಿಗೆ ಇಳಿದ ಖಾಸಗಿ ಬಸ್‌! ವೋಟ್‌ ಹಾಕಲು ಬಸ್‌ ಏರುವವರಿಗೆ ಟಿಕೆಟ್ ದುಬಾರಿ!‌

IPL 2024
Latest2 hours ago

IPL 2024 : ಚೆನ್ನೈ ತಂಡದ ಮಾರಕ ಬೌಲರ್ ಮಹೀಶ್​ ಪತಿರಾನಾ​ ಐಪಿಎಲ್​ನಿಂದ ಹೊರಕ್ಕೆ

MI vs SRH
ಕ್ರೀಡೆ2 hours ago

MI vs SRH: ಸನ್ ಸ್ಟ್ರೋಕ್​ನಿಂದ ತಪ್ಪಿಸಿಕೊಂಡೀತೇ ಮುಂಬೈ ಇಂಡಿಯನ್ಸ್​​?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case No evidence against me its a conspiracy says HD Revanna
ಕರ್ನಾಟಕ27 mins ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ46 mins ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ14 hours ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ2 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ2 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ3 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ3 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ4 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ6 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20246 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

ಟ್ರೆಂಡಿಂಗ್‌