Site icon Vistara News

Job Alert: 506 ಹುದ್ದೆಗಳ ಭರ್ತಿಗೆ ಯುಪಿಎಸ್‌ಸಿಯಿಂದ ಅರ್ಜಿ ಆಹ್ವಾನ; ಮೇ 14ರೊಳಗೆ ಆನ್‌ಲೈನ್‌ನಲ್ಲಿ ಅಪ್ಲೈ ಮಾಡಿ

Job Alert

Job Alert

ನವದೆಹಲಿ: ಯೂನಿಯನ್‌ ಪಬ್ಲಿಕ್‌ ಸರ್ವಿಸ್‌ ಕಮಿಷನ್‌ (UPSC) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (Central Armed Police Forces)ಗಳಲ್ಲಿನ ಅಸಿಸ್ಟಂಟ್‌ ಕಮಾಂಡೆಂಟ್‌ಗಳು (ಎ ಹುದ್ದೆಗಳು) ಹುದ್ದೆ ಇದಾಗಿದೆ. ಬಾರ್ಡರ್‌ ಸೆಕ್ಯುರಿಟಿ ಫೋರ್ಸ್‌ (BSF), ಸೆಂಟ್ರಲ್‌ ರಿಸರ್ವ್‌ ಪೊಲೀಸ್‌ ಫೋರ್ಸ್‌ (CRPF), ಸೆಂಟ್ರಲ್‌ ಇಂಡಸ್ಟ್ರೀಯಲ್‌ ಸೆಕ್ಯುರಿಟಿ ಫೋರ್ಸ್‌ (CISF), ಇಂಡೋ-ಟಿಬೆಟಿಯನ್ ಬಾರ್ಡರ್‌ ಪೋಲೀಸ್‌ (ITBP) ಮತ್ತು ಸಶಸ್ತ್ರ ಸೀಮಾ ಬಲ್‌ (SSB)ಗಳಲ್ಲಿ 506 ಹುದ್ದೆಗಳಿವೆ (UPSC CAPF Recruitment 2024). ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು ಕೊನೆಯ ದಿನ ಮೇ 14 (Job Alert).

ಹುದ್ದೆಗಳ ವಿವರ

ಗಡಿ ಭದ್ರತಾ ಪಡೆ (ಬಿಎಸ್ಎಫ್)-186, ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್‌)- 120, ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್)- 100, ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ)- 58, ಸಶಸ್ತ್ರ ಸೀಮಾ ಬಲ್ (ಎಸ್ಎಸ್‌ಬಿ)- 42 ಹುದ್ದೆಗಳಿವೆ. ಪುರುಷರು ಮತ್ತು ಮಹಿಳೆಯರು ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಹತೆ ಮತ್ತು ವಯೋಮಿತಿ

ಅಭ್ಯರ್ಥಿಗಳು ಅಂಗೀಕೃತ ವಿಶ್ವ ವಿದ್ಯಾನಿಲಯದಿಂದ ಪದವಿ ಪಡೆದಿರಬೇಕು. ಅರ್ಜಿ ಸಲ್ಲಿಕೆಯ ಕನಿಷ್ಠ ವಯಸ್ಸು 20 ವರ್ಷ ಮತ್ತು ಗರಿಷ್ಠ ವಯಸ್ಸು 25 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ, ಕೇಂದ್ರ ಸರ್ಕಾರಿ ನೌಕರ ಅಭ್ಯರ್ಥಿಗಳಿಗೆ 5 ವರ್ಷಗಳ ಸಡಿಲಿಕೆ ಇದೆ.

ಅರ್ಜಿ ಶುಲ್ಕ ಮತ್ತು ಆಯ್ಕೆ ವಿಧಾನ

ಮಹಿಳಾ / ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ. ಉಳಿದ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 200 ರೂ. ಪಾವತಿಸಬೇಕು. ಲಿಖಿತ ಪರೀಕ್ಷೆ, ದೈಹಿಕ ದಕ್ಷತೆ ಪರೀಕ್ಷೆ (Physical Efficiency Test) ಅಥವಾ ದೈಹಿಕ ಮಾಪನ ಪರೀಕ್ಷೆ (Physical Measurement Test), ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಲಿಖಿತ ಪರೀಕ್ಷೆ ಆಗಸ್ಟ್‌ 4ರಂದು ನಡೆಯಲಿದೆ. ಕರ್ನಾಟಕದ ಅಭ್ಯರ್ಥಿಗಳು ಬೆಂಗಳೂರು ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಬಹುದು.

UPSC CAPF Recruitment 2024 ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

ಇದನ್ನೂ ಓದಿ: Job Alert: ಹಟ್ಟಿ ಚಿನ್ನದ ಗಣಿ ಕಂಪೆನಿಯಲ್ಲಿದೆ ಸುವರ್ಣಾವಕಾಶ; 168 ಹುದ್ದೆಗಳಿಗೆ ಐಟಿಐ, ಡಿಪ್ಲೋಮಾ ಪಾಸಾದವರು ಅಪ್ಲೈ ಮಾಡಿ

Exit mobile version