ನವದೆಹಲಿ: ಭಾರತೀಯ ವಾಯುಪಡೆ (Indian Air Force)ಯಲ್ಲಿ ಕಾರ್ಯ ನಿರ್ವಹಿಸಬೇಕು ಎನ್ನುವ ಕನಸು ಬಹುತೇಕರಲ್ಲಿರುತ್ತದೆ. ಇದೀಗ ಅಂತಹ ಕನಸು ನನಸಾಗುವ ಸಮಯ ಬಂದಿದೆ. 304 ಹುದ್ದೆಗಳನ್ನು ಭರ್ತಿ ಮಾಡಲು ಇಂಡಿಯನ್ ಏರ್ ಫೋರ್ಸ್ ಅರ್ಜಿ ಆಹ್ವಾನಿಸಿದೆ (Indian Air Force Recruitment 2024). ದ್ವಿತೀಯ ಪಿಯುಸಿ ಹಾಗೂ ಪದವಿ ಪಾಸಾದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಜೂನ್ 28 (Job Alert).
ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ
ಫ್ಲೈಯಿಂಗ್: 29, ಗ್ರೌಂಡ್ ಡ್ಯೂಟಿ (ಟೆಕ್ನಿಕಲ್): 156, ಗ್ರೌಂಡ್ ಡ್ಯೂಟಿ (ನಾನ್ ಟೆಕ್ನಿಕಲ್): 119 ಮತ್ತು ಫ್ಲೈಯಿಂಗ್: ಎನ್‌ಸಿಸಿ ಸ್ಪೆಷಲ್ ಎಂಟ್ರಿ ಸ್ಕೀಮ್ ಅಡಿಯಲ್ಲಿ ಶೇ. 10ರಷ್ಟು ಹುದ್ದೆಗಳಿವೆ.
ಫ್ಲೈಯಿಂಗ್ ಬ್ರ್ಯಾಂಚ್ ಹುದ್ದೆಗಳಿಗೆ: ಭೌತಶಾಸ್ತ್ರ, ಗಣಿತ ವಿಷಯಗಳೊಂದಿಗೆ 12ನೇ ಕ್ಲಾಸ್ ತೇರ್ಡೆಯಾಗಿರಬೇಕು.
ಗ್ರೌಂಡ್ ಡ್ಯೂಟಿ (ನಾನ್ ಟೆಕ್ನಿಕಲ್) ಹುದ್ದೆಗಳಿಗೆ: ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು.
ಗ್ರೌಂಡ್ ಡ್ಯೂಟಿ (ಟೆಕ್ನಿಕಲ್) ಬ್ರ್ಯಾಂಚ್ ಹುದ್ದೆಗಳಿಗೆ: ಭೌತಶಾಸ್ತ್ರ, ಗಣಿತ ವಿಷಯಗಳೊಂದಿಗೆ 12ನೇ ಕ್ಲಾಸ್ ಓದಿ, ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು.
ವಯೋಮಿತಿ
ಏರ್ ಫೋರ್ಸ್ ಕಾಮನ್ ಅಡ್ಮಿಷನ್ ಟೆಸ್ಟ್ (Air Force Common Admission Test)ಗೆ ಅರ್ಜಿ ಸಲ್ಲಿಸುವ ಮುನ್ನ ವಯೋಮಿತಿಯನ್ನು ಗಮನಿಸಿ. ಫ್ಲೈಯಿಂಗ್ ಬ್ರ್ಯಾಂಚ್‌ಗೆ ಅರ್ಜಿ ಸಲ್ಲಿಸುವವರ ಕನಿಷ್ಠ ವಯಸ್ಸು 20 ವರ್ಷ ಮತ್ತು ಗರಿಷ್ಠ ವಯಸ್ಸು 24 ವರ್ಷ. ಗ್ರೌಂಡ್ ಡ್ಯೂಟಿ (ಟೆಕ್ನಿಕಲ್ / ನಾನ್ ಟೆಕ್ನಿಕಲ್) ಹುದ್ದೆಗೆ ಅರ್ಜಿ ಸಲ್ಲಿಸುವವರ ಕನಿಷ್ಠ ವರ್ಷ 20 ವರ್ಷ ಮತ್ತು ಗರಿಷ್ಠ ವಯಸ್ಸು 26 ವರ್ಷ.
ಅರ್ಜಿ ಶುಲ್ಕ
ಎಎಫ್‌ಸಿಎಟಿ ಪ್ರವೇಶ ಶುಲ್ಕ 550 ರೂ. ಇನ್ನು ಎನ್‌ಸಿಸಿ ಸ್ಪೆಷಲ್ ಎಂಟ್ರಿ ಅಭ್ಯರ್ಥಿಗಳು ಶುಲ್ಕ ಪಾವತಿಸಬೇಕಾಗಿಲ್ಲ.
ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು. ಇದಕ್ಕಾಗಿ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ಇ-ಚಲನ್ ಬಳಸಬಹುದು.
ಆಯ್ಕೆ ವಿಧಾನ
ಲಿಖಿತ ಪರೀಕ್ಷೆ, ಸಂದರ್ಶನ, ವೈದ್ಯಕೀಯ ಪರೀಕ್ಷೆಗಳ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಲಿಖಿತ ಪರೀಕ್ಷೆ ಒಟ್ಟು 300 ಅಂಕಗಳಿಗೆ ನಡೆಯಲಿದೆ. 100 ಪ್ರಶ್ನೆಗಳು ಇರಲಿದ್ದು, ಎರಡು ಗಂಟೆ ಅವಧಿಯನ್ನು ಹೊಂದಿದೆ. ಲಿಖಿತ ಪರೀಕ್ಷೆ ಜನರಲ್ ಅವರ್ನೆಸ್, ವರ್ಬಲ್ ಎಬಿಲಿಟಿ, ನ್ಯುಮೆರಿಕಲ್ ಎಬಿಲಿಟಿ ಮತ್ತು ರೀಸನಿಂಗ್ & ಮಿಲಿಟರಿ ಅಪ್ಟಿಟ್ಯೂಡ್ ಟೆಸ್ಟ್ ಅನ್ನು ಒಳಗೊಂಡಿದೆ.
Indian Air Force Recruitment 2024 ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ.
ಅರ್ಜಿ ಸಲ್ಲಿಸುವ ವಿಧಾನ
- ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
- ಹೆಸರು, ಅಗತ್ಯ ಮಾಹಿತಿಗಳನ್ನು ನೀಡಿ ಹೆಸರು ನೋಂದಾಯಿಸಿ.
- ನಂತರ ತೆರೆದುಕೊಳ್ಳುವ ಹೊಸ ಪುಟದಲ್ಲಿರುವ ಅರ್ಜಿ ನಮೂನೆಯನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ Sumbit ಬಟನ್ ಕ್ಲಿಕ್ ಮಾಡಿ.
ಇದನ್ನೂ ಓದಿ: Job Alert: ಯುಪಿಎಸ್‌ಸಿಯಿಂದ 312 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ; ಆನ್‌ಲೈನ್ ಮೂಲಕ ಅಪ್ಲೈ ಮಾಡಿ