Site icon Vistara News

Job Alert: ಉದ್ಯೋಗ ಹುಡುಕುತ್ತಿದ್ದೀರಾ? ಇಲ್ಲಿದೆ ಗುಡ್‌ನ್ಯೂಸ್‌; ಏರ್‌ ಟ್ರಾನ್ಸ್‌ಪೋರ್ಟ್‌ ಸರ್ವೀಸ್ ಹುದ್ದೆಯ ಸಂದರ್ಶನಕ್ಕೆ ನೇರ ಹಾಜರಾಗಿ

Job Alert

Job Alert

ನವದೆಹಲಿ: ಉತ್ತಮ ಉದ್ಯೋಗಕ್ಕಾಗಿ ಹುಡುಕಾಡುತ್ತಿದ್ದೀರಾ? ಹಾಗಾದರೆ ಇಲ್ಲಿದೆ ಗುಡ್‌ನ್ಯೂಸ್‌. ಏರ್‌ ಇಂಡಿಯಾ ಏರ್‌ ಟ್ರಾನ್ಸ್‌ಪೋರ್ಟ್‌ ಸರ್ವೀಸ್ ಲಿಮಿಟೆಡ್‌ (Air India Air Transport Services Limited) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಹ್ಯಾಂಡಿ ಮ್ಯಾನ್‌, ಹ್ಯಾಂಡಿ ವುಮೆನ್, ಯುಟಿಲಿಟಿ ಏಜೆಂಟ್ ಕಮ್ ರ‍್ಯಾಂಪ್‌ ಡ್ರೈವರ್ ಸೇರಿ 422 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ (AIATSL Recruitment 2024) ಎಂದು ಪ್ರಕಟಣೆ ತಿಳಿಸಿದೆ. ಉದ್ಯೋಗದ ಸ್ಥಳ: ಚೆನ್ನೈ ಇಂಟರ್‌ ನ್ಯಾಷನಲ್‌ ಏರ್‌ಪೋರ್ಟ್‌. ಆಸಕ್ತರು ಅರ್ಜಿ ಸಲ್ಲಿಸಬೇಕಾಗಿಲ್ಲ, ಪರೀಕ್ಷೆ ಬರೆಯಬೇಕಾಗಿಲ್ಲ. ನೇರವಾಗಿ ಸಂದರ್ಶನಕ್ಕೆ ಹಾಜರಾಗಬಹುದು (Job Alert).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಯುಟಿಲಿಟಿ ಏಜೆಂಟ್ ಕಮ್ ರ‍್ಯಾಂಪ್‌ ಡ್ರೈವರ್: 130, ಹ್ಯಾಂಡಿ ಮ್ಯಾನ್ / ಹ್ಯಾಂಡಿ ವುಮೆನ್: 292 ಹುದ್ದೆಗಳಿವೆ. ಯುಟಿಲಿಟಿ ಏಜೆಂಟ್ ಕಮ್ ರ‍್ಯಾಂಪ್‌ ಡ್ರೈವರ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಎಸ್ಸೆಸ್ಸೆಲ್ಸಿ ಪಾಸ್ ಜತೆಗೆ, ಹೆವಿ ಮೋಟಾರ್ ವೆಹಿಕಲ್ ಚಾಲನ ಪರವಾನಗಿ ಹೊಂದಿರಬೇಕು. ಹ್ಯಾಂಡಿ ಮ್ಯಾನ್ / ಹ್ಯಾಂಡಿ ವುಮೆನ್ ಹುದ್ದೆಗೆ ಬೇಕಾದ ಅರ್ಹತೆ ಎಂದರೆ ಎಸ್ಸೆಸ್ಸೆಲ್ಸಿ ಪಾಸ್ ಜತೆಗೆ ಇಂಗ್ಲಿಷ್ ಭಾಷೆ ಓದಲು, ಬರೆಯಲು ಬರಬೇಕು. ಸ್ಥಳೀಯ ಭಾಷೆ ಮತ್ತು ಹಿಂದಿ ಮಾತನಾಡಲು ಗೊತ್ತಿರಬೇಕು.

ವಯೋಮಿತಿ ಮತ್ತು ಆಯ್ಕೆ ವಿಧಾನ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವರಿಷ್ಠ ವಯೋಮಿತಿ 28 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷಗಳ ರಿಯಾಯಿತಿ ಇದೆ. ಆಸಕ್ತರು ನೇರ ಸಂದರ್ಶನಕ್ಕೆ ಈ ಕೆಳಗಿನ ವಿಳಾಸಕ್ಕೆ ಹಾಜರಾಗಬೇಕು.

Office of the HRD Department,
AI Unity Complex, Pallavaram Cantonment, Chennai – 600 043.
Land Mark: Near Taj Catering.

ದಿನಾಂಕ: ಯುಟಿಲಿಟಿ ಏಜೆಂಟ್ ಕಮ್ ರ‍್ಯಾಂಪ್‌ ಡ್ರೈವರ್: ಮೇ 2 (ಬೆಳಿಗ್ಗೆ 9-12).

ಹ್ಯಾಂಡಿ ಮ್ಯಾನ್ / ಹ್ಯಾಂಡಿ ವುಮೆನ್: ಮೇ 4 (ಬೆಳಿಗ್ಗೆ 9-12).

ಆಯ್ಕೆಯಾದವರನ್ನು 3 ವರ್ಷಗಳ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗುತ್ತದೆ. ಬಳಿಕ ಅವರ ಕಾರ್ಯ ಕ್ಷಮತೆಯ ಆಧಾರದಲ್ಲಿ ಉದ್ಯೋಗದ ಅವಧಿಯನ್ನು ಮುಂದುವರಿಸಲಾಗುತ್ತದೆ. ಯುಟಿಲಿಟಿ ಏಜೆಂಟ್ ಕಮ್ ರ‍್ಯಾಂಪ್‌ ಡ್ರೈವರ್ ಹುದ್ದೆಗೆ ಆಯ್ಕೆಯಾಗುವವರು ಟ್ರ್ಯಾಕ್ಟರ್, ಬಸ್ ಮತ್ತು ಗ್ರೌಂಡ್ ಸರ್ವಿಸ್ ಉಪಕರಣಗಳಂತಹ ಭಾರೀ ವಾಹನಗಳನ್ನು ಚಲಾಯಿಸಬೇಕಾಗುತ್ತದೆ. ಹ್ಯಾಂಡಿ ಮ್ಯಾನ್ / ಹ್ಯಾಂಡಿ ವುಮೆನ್ ಹುದ್ದೆಗೆ ಆಯ್ಕೆಯಾಗುವವರು ವಿಮಾನ ನಿಲ್ದಾಣದಲ್ಲಿ ಬ್ಯಾಗೇಜ್ / ಸರಕು ಲೋಡ್ ಮಾಡುವುದು ಮತ್ತು ಕ್ಯಾಬಿನ್‌ನಿಂದ ಅನ್‌ಲೋಡ್‌ ಮಾಡುವುದು, ವಿಮಾನವನ್ನು ಸ್ವಚ್ಛಗೊಳಿಸುವುದು, ಕಾರ್ಯಾಗಾರದಲ್ಲಿ ತಂತ್ರಜ್ಞರಿಗೆ ನೆರವಾಗುವುದು, ವ್ಹೀಲ್ ಚೇರ್ ಶುಚಿಗೊಳಿಸುವುದು ಮುಂತಾದ ಕಾರ್ಯಗಳು ನಿರ್ವಹಿಸಬೇಕಾಗುತ್ತದೆ.

ಸಂದರ್ಶನಕ್ಕೆ ಹಾಜರಾಗುವುದು ಹೇಗೆ?

ಅರ್ಹತಾ ಮಾನದಂಡಗಳನ್ನು ಪೂರೈಸುವ ಅರ್ಜಿದಾರರು ಅಧಿಸೂಚನೆಯೊಂದಿಗೆ ನೀಡಲಾದ ಅರ್ಜಿ ನಮೂನೆಯನ್ನು ಸರಿಯಾಗಿ ಭರ್ತಿ ಮಾಡಿದ ಅಗತ್ಯ ಪ್ರಮಾಣ ಪತ್ರಗಳು / ಪ್ರಮಾಣಪತ್ರಗಳ ಪ್ರತಿಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು. ಜತೆಗೆ ಸಾಮಾನ್ಯ, ಒಬಿಸಿ ವಿಭಾಗದ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 500 ರೂಪಾಯಿಯನ್ನು “AI AIRPORT SERVICES LIMITEDʼʼ ಈ ಹೆಸರಿಗೆ ಡಿಮ್ಯಾಂಡ್‌ ಡ್ರಾಫ್ಟ್‌ ಮಾಡಬೇಕು. ಡಿಮ್ಯಾಂಡ್‌ ಡ್ರಾಫ್ಟ್‌ ಹಿಂಭಾಗದಲ್ಲಿ ನಿಮ್ಮ ಪೂರ್ತಿ ಹೆಸರು, ಮೊಬೈಲ್‌ ನಂಬರ್‌ ಬರೆಯುವುದನ್ನು ಮರೆಯಬೇಡಿ. ಗಮನಿಸಿ, ಮಾಜಿ ಯೋಧರು, ಎಸ್‌ಸಿ / ಎಸ್‌ಟಿ ವಿಭಾಗದವರಿಗೆ ಅರ್ಜಿ ಶುಲ್ಕವಿಲ್ಲ.

ವೇತನ

ಯುಟಿಲಿಟಿ ಏಜೆಂಟ್ ಕಮ್ ರ‍್ಯಾಂಪ್‌ ಡ್ರೈವರ್: 24,960 ರೂ., ಹ್ಯಾಂಡಿಮ್ಯಾನ್ / ಹ್ಯಾಂಡಿ ವುಮೆನ್: 22,530 ರೂ. ಮಾಸಿಕ ವೇತನ ಲಭ್ಯ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಇದನ್ನೂ ಓದಿ: Job Alert: ನವೋದಯ ವಿದ್ಯಾಲಯ ಸಮಿತಿಯಿಂದ 1,377 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; 10ನೇ ತರಗತಿ ಪಾಸಾದವರೂ ಅಪ್ಲೈ ಮಾಡಿ

Exit mobile version