ನವದೆಹಲಿ: ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (Ministry of Electronics and Information Technology) ಅಡಿಯಲ್ಲಿ ಕಾರ್ಯ ನಿರ್ವಹಿಸುವ ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಅಡ್ವಾನ್ಸ್‌ಡ್ ಕಂಪ್ಯೂಟಿಂಗ್ (Centre for Development of Advanced Computing) ಸಂಸ್ಥೆ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (CDAC Recruitment 2024). ಪ್ರಾಜೆಕ್ಟ್ ಎಂಜಿನಿಯರ್, ಪ್ರಾಜೆಕ್ಟ್ ಮ್ಯಾನೇಜರ್ ಸೇರಿದಂತೆ ಬರೋಬ್ಬರಿ 325 ಹುದ್ದೆಗಳು ಖಾಲಿ ಇವೆ. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ಕೊನೆಯ ದಿನ ಫೆಬ್ರವರಿ 20 (Job Alert).
ಹುದ್ದೆಗಳ ವಿವರ
ಪ್ರಾಜೆಕ್ಟ್ ಅಸೋಸಿಯೇಟ್ / ಜ್ಯೂನಿಯರ್ ಫೀಲ್ಡ್ ಅಪ್ಲಿಕೇಷನ್ ಎಂಜಿನಿಯರ್-45, ಪ್ರಾಜೆಕ್ಟ್ ಎಂಜಿನಿಯರ್ / ಫೀಲ್ಡ್ ಅಪ್ಲಿಕೇಷನ್ ಎಂಜಿನಿಯರ್ (ಅನುಭವ ಹೊಂದಿರುವವರು)-75, ಪ್ರಾಜೆಕ್ಟ್ ಎಂಜಿನಿಯರ್ / ಫೀಲ್ಡ್ ಅಪ್ಲಿಕೇಷನ್ ಎಂಜಿನಿಯರ್ (ಫ್ರೆಶರ್ಸ್)-75, ಪ್ರಾಜೆಕ್ಟ್ ಮ್ಯಾನೇಜರ್ – 15, ಪ್ರಾಜೆಕ್ಟ್ ಆಫೀಸರ್ (ISEA)-3, ಪ್ರಾಜೆಕ್ಟ್ ಆಫೀಸರ್ (ಫೈನಾನ್ಸ್)- 1, ಪ್ರಾಜೆಕ್ಟ್ ಆಫೀಸರ್ (ಔಟ್‌ರಿಚ್ & ಪ್ಲೇಸ್‌ಮೆಂಟ್)-1, ಪ್ರಾಜೆಕ್ಟ್ ಸಪೋರ್ಟ್ ಸ್ಟಾಫ್ (ಹಾಸ್ಪಿಟಾಲಿಟಿ)- 1, ಪ್ರಾಜೆಕ್ಟ್ ಸಪೋರ್ಟ್ ಸ್ಟಾಫ್ (ಎಚ್‌ಆರ್‌ಡಿ)- 1, ಪ್ರಾಜೆಕ್ಟ್ ಸಪೋರ್ಟ್ ಸ್ಟಾಫ್ (ಲಾಜಿಸ್ಟಿಕ್ಸ್ & ಇನ್‌ವೆಸ್ಟರಿ)-1, ಪ್ರಾಜೆಕ್ಟ್ ಸಪೋರ್ಟ್ ಸ್ಟಾಫ್ (ಅಡ್ಮಿನ್)-2, ಪ್ರಾಜೆಕ್ಟ್ ಸಪೋರ್ಟ್ ಸ್ಟಾಫ್ (ಫೈನಾನ್ಸ್)-4, ಪ್ರಾಜೆಕ್ಟ್ ಟೆಕ್ನಿಶಿಯನ್-1, ಸೀನಿಯರ್ ಪ್ರಾಜೆಕ್ಟ್ ಎಂಜಿನಿಯರ್-100 ಹುದ್ದೆಗಳಿವೆ.
ವಿದ್ಯಾರ್ಹತೆ, ಅರ್ಜಿ ಶುಲ್ಕ ಮತ್ತು ಆಯ್ಕೆ ವಿಧಾನ
ಹುದ್ದೆಗೆ ಅನುಗುಣವಾಗಿ ಬಿಇ., ಬಿ.ಟೆಕ್, ಎಂಬಿಎ, ಎಂ.ಟೆಕ್, ಎಂಇ ಓದಿದವರು ಅರ್ಜಿ ಸಲ್ಲಿಸಬಹುದು. ಯಾವುದೇ ಅರ್ಜಿ ಶುಲ್ಕ ಇಲ್ಲ. 3 ವರ್ಷಗಳ ಗುತ್ತಿಗೆ ಆಧಾರದಲ್ಲಿ ಈ ನೇಮಕಾತಿ ನಡೆಯಲಿದೆ. ಉದ್ಯೋಗದ ಸ್ಥಳ: ಬೆಂಗಳೂರು ಸೇರಿ ದೇಶಾದ್ಯಂತ. ಡಾಕ್ಯುಮೆಂಟ್ ಪರಿಶೀಲನೆ, ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಸಂದರ್ಶನ, ಲಿಖಿತ ಪರೀಕ್ಷೆಯ ಮಾಹಿತಿಯನ್ನು ಇಮೇಲ್ ಮೂಲಕ ತಿಳಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
CDAC Recruitment 2024ರ ಅಧಿಕೃತ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ.
ಅರ್ಜಿ ಸಲ್ಲಿಸುವ ವಿಧಾನ
- ಸಿಡಿಎಸಿಯ ಅಧಿಕೃತ ವೆಬ್‌ಸೈಟ್ www.cdac.in.ಗೆ ಭೇಟಿ ನೀಡಿ.
- Career ಆಯ್ಕೆಯನ್ನು ಕ್ಲಿಕ್ ಮಾಡಿ ನೀವು ಅರ್ಜಿ ಸಲ್ಲಿಸಲು ಇಚ್ಛಿಸುವ ಹುದ್ದೆಯನ್ನು ಆಯ್ಕೆ ಮಾಡಿ.
- ಅಧಿಕೃತ ಅಧಿಸೂಚನೆ ಡೌನ್ಲೋಡ್ ಮಾಡಿ.
- Apply ಆಯ್ಕೆ ಮೇಲೆ ಕ್ಲಿಕ್ ಮಾಡಿ. ಹೆಸರು, ಮೊಬೈಲ್ ನಂಬರ್, ಇಮೇಲ್ ವಿಳಾಸ ನೀಡಿ ಲಾಗಿನ್ ಆಗಿ.
- ಸೂಕ್ತ ಮಾಹಿತಿ ನೀಡಿ ಅಪ್ಲಿಕೇಷನ್ ಫಾರಂ ಭರ್ತಿ ಮಾಡಿ.
- ಅಗತ್ಯವಾದ ಡಾಕ್ಯುಮೆಂಟ್, ಫೋಟೊವನ್ನು ಸರಿಯಾದ ಗಾತ್ರದಲ್ಲಿ ಅಪ್ಲೋಡ್ ಮಾಡಿ.
- ಒದಗಿಸಿದ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ ಅರ್ಜಿ ಸಲ್ಲಿಸಿ.
- ಭವಿಷ್ಯದ ಅಗತ್ಯಗಳಿಗಾಗಿ ಅರ್ಜಿ ಫಾರಂನ ಪ್ರಿಂಟ್ ಔಟ್ ತೆಗೆದಿಡಿ.
ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ https://www.cdac.in/ಗೆ ಭೇಟಿ ನೀಡಿ.
ಇದನ್ನೂ ಓದಿ: Job Alert: ಎನ್‌ಎಚ್‌ಐಡಿಸಿಎಲ್‌ನಲ್ಲಿದೆ ಉದ್ಯೋಗಾವಕಾಶ; ಪದವಿ ಹೊಂದಿದವರು ಅರ್ಜಿ ಸಲ್ಲಿಸಿ