Site icon Vistara News

Job Alert: ಭಾರತ್ ಡೈನಾಮಿಕ್ಸ್‌ ಲಿಮಿಟೆಡ್‌ನ 361 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

bdl

bdl

ಬೆಂಗಳೂರು: ಭಾರತ್ ಡೈನಾಮಿಕ್ಸ್‌ ಲಿಮಿಟೆಡ್ (Bharat Dynamics Limited) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಪ್ರಾಜೆಕ್ಟ್‌ ಎಂಜಿನಿಯರ್, ಪ್ರಾಜೆಕ್ಟ್‌ ಆಫೀಸರ್, ಪ್ರಾಜೆಕ್ಟ್‌ ಡಿಪ್ಲೊಮಾ ಅಸಿಸ್ಟಂಟ್, ಪ್ರಾಜೆಕ್ಟ್‌ ಅಸಿಸ್ಟಂಟ್, ಪ್ರಾಜೆಕ್ಟ್‌ ಟ್ರೇಡ್‌ ಅಸಿಸ್ಟಂಟ್ ಸೇರಿ ಸುಮಾರು 361 ಹುದ್ದೆಗಳು ಖಾಲಿ ಇವೆ (BDL Recruitment 2024). ಪದವಿ, ಡಿಪ್ಲೋಮಾ ಪಾಸ್‌ ಆದವರು ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನ ಫೆಬ್ರವರಿ 14 (Job Alert).

ಹುದ್ದೆಗಳ ವಿವರ

ಪ್ರಾಜೆಕ್ಟ್‌ ಇಂಜಿನಿಯರ್‌ / ಆಫೀಸರ್: 136, ಪ್ರಾಜೆಕ್ಟ್‌ ಡಿಪ್ಲೋಮಾ ಅಸಿಸ್ಟಂಟ್ / ಅಸಿಸ್ಟಂಟ್: 142, ಪ್ರಾಜೆಕ್ಟ್‌ ಟ್ರೇಡ್‌ ಅಸಿಸ್ಟಂಟ್‌/ ಆಫೀಸರ್ ಅಸಿಸ್ಟಂಟ್: 83 ಹುದ್ದೆಗಳಿವೆ.

ವಿದ್ಯಾರ್ಹತೆ

ಪ್ರಾಜೆಕ್ಟ್‌ ಇಂಜಿನಿಯರ್‌ / ಆಫೀಸರ್: ಸಿಎ / ಐಸಿಡಬ್ಲ್ಯುಎ / ಬಿಇ / ಬಿ.ಟೆಕ್/ ಎಂ.ಟೆಕ್ / ಎಂಬಿಎ / ಎಂಇ / ಬಿಎಸ್ಸಿ / ಡಿಪ್ಲೊಮ/ ಸ್ನಾತಕೋತ್ತರ ಪದವಿ ಪಾಸ್.
ಪ್ರಾಜೆಕ್ಟ್‌ ಡಿಪ್ಲೊಮಾ ಅಸಿಸ್ಟಂಟ್ / ಪ್ರಾಜೆಕ್ಟ್‌ ಅಸಿಸ್ಟಂಟ್: ಸಿಎ/ ಐಸಿಡಬ್ಲ್ಯುಎ / ಡಿಪ್ಲೋಮಾ / ಪದವಿ ಪಾಸ್‌.
ಪ್ರಾಜೆಕ್ಟ್‌ ಟ್ರೇಡ್‌ ಅಸಿಸ್ಟಂಟ್‌/ ಪ್ರಾಜೆಕ್ಟ್‌ ಆಫೀಸ್‌ ಅಸಿಸ್ಟಂಟ್: ಐಟಿಐ / ಡಿಪ್ಲೋಮಾ (ಸಂಬಂಧಿತ ವಿಭಾಗದಲ್ಲಿ)

ವಯೋಮಿತಿ ಮತ್ತು ಆಯ್ಕೆ ವಿಧಾನ

ಅರ್ಜಿ ಸಲ್ಲಿಸುವವರ ಗರಿಷ್ಠ ವಯಸ್ಸು 28 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಇದೆ. ಎಸ್‌ಸಿ / ಎಸ್‌ಟಿ, ಪಿಡಬ್ಲ್ಯುಬಿಡಿ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ವಿಭಾಗಕ್ಕೆ 3 ವರ್ಷಗಳ ಸಡಿಲಿಕೆ ಅನ್ವಯವಾಗುತ್ತದೆ. ಸಂದರ್ಶನ ಮತ್ತು ಡಾಕ್ಯುಮೆಂಟ್‌ ಪರಿಶೀಲನೆಯ ಬಳಿಕ ಆಯ್ಕೆ ನಡೆಯಲಿದೆ.

ಅರ್ಜಿ ಶುಲ್ಕ ಮತ್ತು ಮಾಸಿಕ ವೇತನ

ಎಸ್‌ಸಿ / ಎಸ್‌ಟಿ / ಪಿಡಬ್ಲ್ಯುಬಿಡಿ / ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ. ಉಳಿದ ವಿಭಾಗದ ಅಭ್ಯರ್ಥಿಗಳು ಪ್ರಾಜೆಕ್ಟ್‌ ಎಂಜಿನಿಯರ್‌ / ಪ್ರಾಜೆಕ್ಟ್‌ ಆಫೀಸರ್‌ ಹುದ್ದೆಗೆ 300 ರೂ. ಮತ್ತು ಪ್ರಾಜೆಕ್ಟ್‌ ಡಿಪ್ಲೋಮಾ ಅಸಿಸ್ಟಂಟ್‌ / ಪ್ರಾಜೆಕ್ಟ್‌ ಟ್ರೇಡ್‌ ಅಸಿಸ್ಟಂಟ್‌ / ಪ್ರಾಜೆಕ್ಟ್‌ ಅಸಿಸ್ಟಂಟ್‌ / ಪ್ರಾಜೆಕ್ಟ್‌ ಆಫೀಸ್‌ ಅಸಿಸ್ಟಂಟ್‌ ಹುದ್ದೆಗಳಿಗೆ 200 ರೂ. ಅರ್ಜಿ ಶುಲ್ಕವನ್ನು ಪಾವತಿಸಬೇಕು. ಇದಕ್ಕಾಗಿ ನೆಟ್‌ ಬ್ಯಾಂಕಿಂಗ್‌, ಡೆಬಿಟ್‌ / ಕ್ರೆಡಿಟ್‌ / ಯುಪಿಐ ಪಾವತಿಯನ್ನು ಬಳಸಬಹುದು. ಫೆಬ್ರವರಿ 17ರಿಂದ ಸಂದರ್ಶನ ನಡೆಯಲಿದೆ. ಆಯ್ಕೆಯಾದವರಿಗೆ 23,000 ರೂ.- 39,000 ರೂ. ಮಸಿಕ ವೇತನ ದೊರೆಯಲಿದೆ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

ಇದನ್ನೂ ಓದಿ: Job Alert: ನಿಮ್ಹಾನ್ಸ್‌ನ ಖಾಲಿ ಹುದ್ದೆ ಭರ್ತಿಗೆ ನೇರ ಸಂದರ್ಶನ; ಎಲ್ಲಿ, ಯಾವಾಗ? ಇಲ್ಲಿದೆ ಸಂಪೂರ್ಣ ವಿವರ

Exit mobile version