ಬೆಂಗಳೂರು: ಬ್ಯಾಂಕ್‌ನಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಕನಸು ಕಾಣುತ್ತಿರುವವರಿಗೆ ಇಲ್ಲಿದೆ ಗುಡ್ ನ್ಯೂಸ್. ಬ್ಯಾಂಕ್ ಆಫ್ ಬರೋಡಾ (Bank of Baroda) ತನ್ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (BOB Recruitment 2023). 250 ಹುದ್ದೆಗಳಿಗೆ ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಸೀನಿಯರ್ ಮ್ಯಾನೇಜರ್ ಹುದ್ದೆ ಇದಾಗಿದ್ದು, ಡಿಸೆಂಬರ್ 26ರೊಳಗೆ ಅರ್ಜಿ ಸಲ್ಲಿಸಬೇಕು (Job Alert).
ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ
ವಿಭಾಗವಾರು ಎಸ್‌ಸಿ-37, ಎಸ್‌ಟಿ-18, ಒಬಿಸಿ-67, ಇಡಬ್ಲ್ಯುಎಸ್-25 ಮತ್ತು ಯುಆರ್ (ಅನ್ ರಿಸರ್ವಡ್)-103 ಹುದ್ದೆಗಳಿವೆ. ಸೀನಿಯರ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಎಲ್ಲ ಸೆಮಿಸ್ಟರ್ / ವರ್ಷಗಳಲ್ಲಿ ಕನಿಷ್ಠ 60% ಅಂಕಗಳೊಂದಿಗೆ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು ಮತ್ತು 8 ವರ್ಷಗಳ ಅನುಭವ ಹೊಂದಿರಬೇಕು ಅಥವಾ ಸ್ನಾತಕೋತ್ತರ ಪದವಿ / ಎಂಬಿಎ (ಮಾರ್ಕೆಟಿಂಗ್ ಮತ್ತು ಫೈನಾನ್ಸ್) ಓದಿರಬೇಕು ಮತ್ತು 6 ವರ್ಷಗಳ ಕೆಲಸದ ಅನುಭವ ಹೊಂದಿರಬೇಕು.
ವಯೋಮಿತಿ
ಅರ್ಜಿ ಸಲ್ಲಿಸುವವರ ವಯಸ್ಸು ಕನಿಷ್ಠ 28 ವರ್ಷ ಮತ್ತು ಗರಿಷ್ಠ 37 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಇದೆ. ಎಸ್‌ಸಿ / ಎಸ್‌ಟಿ / ಮಾಜಿ ಯೋಧರಿಗೆ 5 ವರ್ಷ, ಒಬಿಸಿ 3 ವರ್ಷ, ಪಿಡಬ್ಲ್ಯುಡಿ 10 ವರ್ಷ, ಪಿಡಬ್ಲ್ಯುಡಿ-ಒಬಿಸಿ 13 ವರ್ಷ, ಪಿಡಬ್ಲ್ಯುಡಿ-ಎಸ್‌ಸಿ / ಎಸ್‌ಟಿ 15 ವರ್ಷಗಳ ಸಡಿಲಿಕೆ ಲಭ್ಯ.
ಅರ್ಜಿ ಶುಲ್ಕ
ಪಿಡಬ್ಲ್ಯುಡಿ / ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 100 ರೂ. ಪಾವತಿಸಬೇಕು. ಸಾಮಾನ್ಯ / ಒಬಿಸಿ/ ಇಡಬ್ಲ್ಯುಎಸ್ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 600 ರೂ. ಇದನ್ನು ಆನ್‌ಲೈನ್ ಮೂಲಕ ಪಾವತಿಸುವುದು ಕಡ್ಡಾಯ. ಇದಕ್ಕಾಗಿ ಡೆಬಿಡ್ / ಕ್ರೆಡಿಟ್ ಕಾರ್ಡ್, ಇಂಟರ್‌ನೆಟ್ ಬ್ಯಾಂಕಿಂಗ್, ಮೊಬೈಲ್ ವ್ಯಾಲೆಟ್ ಇತ್ಯಾದಿ ಬಳಸಬಹುದು.
ಆಯ್ಕೆ ವಿಧಾನ ಮತ್ತು ವೇತನ
ಆನ್‌ಲೈನ್ ಪರೀಕ್ಷೆ, ಸೈಕೋಮೆಟ್ರಿಕ್ ಪರೀಕ್ಷೆ, ಗುಂಪು ಚರ್ಚೆ / ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆಯ್ಕೆಯಾದವರಿಗೆ 63,840 ರೂ.-78,230 ರೂ. ಮಾಸಿಕ ವೇತನ ಲಭಿಸಲಿದೆ.
ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Job Alert: ಪದವೀಧರರಿಗೆ ಗುಡ್‌ನ್ಯೂಸ್; ಗೃಹ ಸಚಿವಾಲಯದ 995 ಹುದ್ದೆಗಳಿಗೆ ಅರ್ಜಿ ಆಹ್ವಾನ
ಅರ್ಜಿ ಸಲ್ಲಿಸುವ ವಿಧಾನ
- ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
- Careers >Current Opportunities > Apply Now ಆಯ್ಕೆ ಮೇಲೆ ಕ್ಲಿಕ್ ಮಾಡಿ
- ಇಮೇಲ್ ಐಡಿ ಮತ್ತು ಫೋನ್ ನಂಬರ್ ಬಳಸಿ ಹೆಸರು ನೋಂದಾಯಿಸಿ
- ರಿಜಿಸ್ಟ್ರೇಷನ್ ನಂಬರ್ ಮತ್ತು ಪಾಸ್ವರ್ಡ್ ಬಳಸಿ ಲಾಗಿನ್ ಆಗಿ
- ಸರಿಯಾದ ಮಾಹಿತಿ ನೀಡಿ ಅಪ್ಲಿಕೇಷನ್ ಫಾರಂ ಭರ್ತಿ ಮಾಡಿ
- ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಿ
- ಗಮನಿಸಿ, ಅರ್ಜಿಯೊಂದಿಗೆ ನಿಮ್ಮ ಬಯೋಡಾಟಾವನ್ನು ಅಪ್ಲೋಡ್ ಮಾಡುವುದು ಕಡ್ಡಾಯ
- ಫೋಟೊ, ಸಹಿ, ಅಗತ್ಯವಾದ ಡಾಕ್ಯುಮೆಂಟ್ ಅಪ್ಲೋಡ್ ಮಾಡಿ
- SUBMIT ಬಟನ್ ಕ್ಲಿಕ್ ಮಾಡಿ
- ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್ ಫಾರಂ ಪ್ರಿಂಟ್ ಔಟ್ ತೆಗೆದಿಡಿ
ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ ವಿಳಾಸ https://www.bankofbaroda.in/ಕ್ಕೆ ಬೇಟಿ ನೀಡಿ.