ಬೆಂಗಳೂರು: ಕೇಂದ್ರ ಕೈಗಾರಿಕಾ ಭದ್ರತಾ ಪಡೆ (Central Industrial Security Force -CISF) ಇಲಾಖಾ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಹುದ್ದೆ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ (CISF LDCE ASI Recruitment 2024). ಒಟ್ಟು 836 ಹುದ್ದೆಗಳು ಖಾಲಿ ಹುದ್ದೆಗಳಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ಕೊನೆಯ ದಿನ ಫೆಬ್ರವರಿ 20 (Job Alert).
ಹುದ್ದೆಗಳ ವಿವರ
ಕಾನ್‌ಸ್ಟೇಬಲ್ / ಜಿಡಿ ಮತ್ತು ಕಾನ್‌ಸ್ಟೇಬಲ್ / ಟಿಎಂ ಅಥವಾ ಐದು ವರ್ಷಗಳ ಸಂಯೋಜಿತ ನಿಯಮಿತ ಸೇವೆಯನ್ನು ಹೆಡ್ ಕಾನ್‌ಸ್ಟೇಬಲ್ / ಜಿಡಿ, ಕಾನ್‌ಸ್ಟೇಬಲ್ / ಜಿಡಿ ಮತ್ತು ಗ್ರೇಡ್‌ನಲ್ಲಿ ಮೂಲ ತರಬೇತಿಯ ಅನುಭವ ಹೊಂದಿರುವವರು ಅಥವಾ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿಯನ್ನು ಹೊಂದಿರುವ ಅಭ್ಯರ್ಥಿಯು ಸಿಐಎಸ್‌ಎಫ್ ಸಹಾಯಕ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ 2024ರ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಸಾಮಾನ್ಯ ವಿಭಾಗದ ಅಭ್ಯರ್ಥಿಗಳಿಗೆ 649, ಎಸ್‌ಸಿ ಅಭ್ಯರ್ಥಿಗಳಿಗೆ 125 ಮತ್ತು ಎಸ್‌ಟಿ ವಿಭಾಗದ ಅಭ್ಯರ್ಥಿಗಳಿಗೆ 62 ಹುದ್ದೆಗಳಿವೆ.
ವಯೋಮಿತಿ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 35 ವರ್ಷ ಮೀರಬಾರದು. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ವಿನಾಯಿತಿ ಇದೆ. ಗಮನಿಸಿ ಒಬಿಸಿ ಅಭ್ಯರ್ಥಿಗಳ ವಯೋಮಿತಿಯಲ್ಲಿ ಸಡಿಲಿಕೆ ಇಲ್ಲ.
ಆಯ್ಕೆ ವಿಧಾನ
ವಿವಿಧ ಹಂತಗಳಲ್ಲಿ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ:
- ಮೊದಲ ಹಂತದಲ್ಲಿ ಅಭ್ಯರ್ಥಿಗಳ ಹಿನ್ನೆಲೆಯನ್ನು ಪರಿಶೀಲಿಸಲಾಗುತ್ತದೆ. ಅವರು ಉತ್ತಮ ಸೇವಾ ದಾಖಲೆ ಮತ್ತು ಶಿಸ್ತುಬದ್ಧ ಜೀವನ ಹೊಂದಿರಬೇಕು.
- ಎರಡನೇ ಹಂತದಲ್ಲಿ ಪರೀಕ್ಷೆ ಆಯೋಜಿಸಲಾಗುತ್ತದೆ. ಸಾಮಾನ್ಯ ಬುದ್ಧಿಮತ್ತೆ, ತಾರ್ಕಿಕ ಶಕ್ತಿ, ಸಾಮಾನ್ಯ ಅರಿವು, ವೃತ್ತಿಪರ ಜ್ಞಾನ, ಸಂಖ್ಯಾತ್ಮಕ ಸಾಮರ್ಥ್ಯ ಮತ್ತು ಸಂವಹನ ಕೌಶಲ್ಯಗಳಂತಹ ವಿಷಯಗಳಲ್ಲಿ ವಿವಿಧ ಬಹು ಆಯ್ಕೆಯ ಪ್ರಶ್ನೆಗಳನ್ನು ಒಳಗೊಂಡ ಲಿಖಿತ ಪರೀಕ್ಷೆ ಇದಾಗಿದೆ.
- ಮೂರನೇ ಹಂತದಲ್ಲಿ ಅಭ್ಯರ್ಥಿಗಳ ದೈಹಿಕ ಮಾನದಂಡ ಪರೀಕ್ಷೆ ನಡೆಸಲಾಗುತ್ತದೆ.
- ನಾಲ್ಕನೇ ಹಂತ ಪುರುಷ ಮತ್ತು ಮಹಿಳಾ ಸ್ಪರ್ಧಿಗಳಿಗೆ ನಿರ್ದಿಷ್ಟ ಮಾನದಂಡಗಳನ್ನು ಒಳಗೊಂಡ ಓಟದ ಸ್ಪರ್ಧೆ ಏರ್ಪಡಿಸಲಾಗುತ್ತದೆ.
- ಐದು ಮತ್ತು ಕೊನೆಯ ಹಂತದಲ್ಲಿ ಅಭ್ಯರ್ಥಿಗಳ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ.
ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ.
ಅರ್ಜಿ ಸಲ್ಲಿಸುವ ವಿಧಾನ
- ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
- ಲಾಗಿನ್ ಬಟನ್ ಕ್ಲಿಕ್ ಮಾಡಿ New Registration ಆಪ್ಶನ್ ಆಯ್ಕೆ ಮಾಡಿ.
- ನಿಮ್ಮ ವಿವರ, ಮೊಬೈಲ್ ನಂಬರ್ ದಾಖಲಿಸಿ ಹೆಸರು ನೋಂದಾಯಿಸಿ.
- ರಿಜಿಸ್ಟ್ರೇಷನ್ ನಂಬರ್ ಮತ್ತು ಪಾಸ್ವರ್ಡ್ ಉಪಯೋಗಿಸಿ ಲಾಗಿನ್ ಆಗಿ.
- ಹೊಸ ಪೇಜ್ನಲ್ಲಿ CISF Head Constable-2024 ಆಯ್ಕೆ ಮೇಲೆ ಕ್ಲಿಕ್ ಮಾಡಿ.
- ಅರ್ಜಿ ಫಾರಂ ಭರ್ತಿ ಮಾಡಿದ ಬಳಿಕ Save & Preview ಬಟನ್ ಕ್ಲಿಕ್ ಮಾಡಿ.
- ಅಗತ್ಯವಾದ ಡಾಕ್ಯುಮೆಂಟ್ ಅಪ್ಲೋಡ್ ಮಾಡಿ.
- ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಿ, ಅರ್ಜಿ ಫಾರಂ ಸಲ್ಲಿಸಿ ಪ್ರಿಂಟ್ ಔಟ್ ತೆಗೆದಿಡಿ.
ಇದನ್ನೂ ಓದಿ: Job Alert: ದಕ್ಷಿಣ ರೈಲ್ವೆ ವಲಯದಿಂದ 2,860 ಅಪ್ರೆಂಟಿಸ್‌ಗಳ ನೇಮಕಕ್ಕೆ ಅರ್ಜಿ ಆಹ್ವಾನ