ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆ (Karnataka State Police- KSP) ಫೆಬ್ರವರಿ 25ರಂದು 1,137 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಡೆಸಲಿದೆ (Karnataka Civil Police Constable recruitment). ಈ ಹಿನ್ನೆಲೆಯಲ್ಲಿ ಪರೀಕ್ಷೆಯ ಪ್ರವೇಶ ಪತ್ರ (Admit cards) ಬಿಡುಗಡೆ ಮಾಡಲಾಗಿದೆ (Job Alert).
ಪೊಲೀಸ್ ಕಾನ್ಸ್‌ಟೇಬಲ್ (ಸಿವಿಲ್) (ಪುರುಷ, ಮಹಿಳಾ ಮತ್ತು ತೃತೀಯ ಲಿಂಗ) ಹಾಗೂ ಸೇವಾನಿರತ ಮತ್ತು ಬ್ಯಾಕ್‌ಲಾಗ್ 1,137 ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವವರು ಇಲಾಖೆಯ ಪೋರ್ಟಲ್‌ನಲ್ಲಿ ಲಾಗಿನ್ ಆಗುವ ಮೂಲಕ ತಮ್ಮ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಪ್ರವೇಶ ಪತ್ರ ಡೌನ್‌ಲೋಡ್ ಮಾಡುವ ವಿಧಾನ
- ಸಿವಿಲ್ ಪಿಸಿ ನೇಮಕ ಪೋರ್ಟಲ್ ವಿಳಾಸ https://cpc1137.ksp-recruitment.in/ಕ್ಕೆ ಭೇಟಿ ನೀಡಿ.
- ‘My Application’ ಆಯ್ಕೆಯನ್ನು ಕ್ಲಿಕ್ ಮಾಡಿ.
- ನಂತರ ತೆರೆಯುವ ಪುಟದಲ್ಲಿ ಅಪ್ಲಿಕೇಶನ್ ನಂಬರ್, ಜನ್ಮ ದಿನಾಂಕದ ಮಾಹಿತಿ ನೀಡಿ ಲಾಗಿನ್ ಆಗಿ.
- ಪ್ರವೇಶ ಪತ್ರ ಡೌನ್‌ಲೋಡ್ ಆಯ್ಕೆ ಮೇಲೆ ಕ್ಲಿಕ್ ಮಾಡಿ.
- ಡೌನ್‌ಲೋಡ್ ಆದ ನಂತರ ಪ್ರಿಂಟ್ ತೆಗೆದುಕೊಳ್ಳಿ. ಅಥವಾ
ಪ್ರವೇಶ ಪತ್ರ ಡೌನ್‌ಲೋಡ್‌ಗೆ ಇಲ್ಲಿ ಕ್ಲಿಕ್ ಮಾಡಿ.
ಇದನ್ನು ಗಮನಿಸಿ
ಅಭ್ಯರ್ಥಿಗಳು ಪ್ರವೇಶ ಪತ್ರದ ಜತೆಗೆ ಅಧಿಕೃತ ಸರ್ಕಾರಿ ಗುರುತಿನ ಚೀಟಿಯನ್ನು ಹಾಜರುಪಡಿಸುವುದು ಕಡ್ಡಾಯ. ಇದಕ್ಕಾಗಿ ಪಾಸ್‌ಪೋರ್ಟ್, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸನ್ಸ್, ಆಧಾರ್ ಕಾರ್ಡ್, ಸರ್ವಿಸ್ ಐಡಿ ಕಾರ್ಡ್, ಫೋಟೊ ಇರುವ ಬ್ಯಾಂಕ್ ಪಾಸ್ ಬುಕ್, ಫೋಟೊ ಇರುವ ಜಾತಿ ಪ್ರಮಾಣ ಪತ್ರ, ಮಾಜಿ ಸೈನಿಕರಾಗಿದ್ದರೆ ಪೆನ್‌ಷನ್ ಬುಕ್ / ಪೆನ್‌ಷನ್ ಪೇಮೆಂಟ್ ಆರ್ಡರ್, ಫೋಟೊ ಇರುವ ಜಾಬ್ ಕಾರ್ಡ್ ಪೈಕಿ ಯಾವುದಾದರೂ ಒಂದನ್ನು ಒಯ್ಯಬಹುದು.
ಅಭ್ಯರ್ಥಿಗಳ ಗಮನಕ್ಕೆ
- ಪ್ರವೇಶ ಪತ್ರ ಯಾರಿಗೂ ಪೋಸ್ಟ್ ಮೂಲಕ ಕಳುಹಿಸಲಾಗುವುದಿಲ್ಲ. ವೆಬ್ಸೈಟ್ನಿಂದಲೇ ಡೌನ್‌ಲೋಡ್ ಮಾಡಬೇಕು.
- ಸಂಪೂರ್ಣ ಪ್ರವೇಶ ಪತ್ರವನ್ನು ಓದಲು ಮರೆಯದಿರಿ. ಯಾವುದೇ ವ್ಯತ್ಯಾಸ ಕಂಡುಬಂದಲ್ಲಿ ಅದನ್ನು ಆದಷ್ಟು ಬೇಗ ಪ್ರಾಧಿಕಾರದ ಗಮನಕ್ಕೆ ತನ್ನಿ.
- ಪ್ರವೇಶ ಪತ್ರದಲ್ಲಿ ತಿಳಿಸಿದ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿ.
- ಅಭ್ಯರ್ಥಿಗಳು ಪ್ರವೇಶ ಪತ್ರದ ಪ್ರತಿ ಮತ್ತು ಮೂಲ ದಾಖಲೆಗಳನ್ನು ಹಾಜರು ಪಡಿಸುವುದು ಕಡ್ಡಾಯ.
- ಸಮಯಕ್ಕೆ ಸರಿಯಾಗಿ ಪರೀಕ್ಷೆ ಆರಂಭವಾಗಲಿದೆ. ಹೀಗಾಗಿ ಪರೀಕ್ಷೆಯ ಸ್ಥಳಕ್ಕೆ ಕನಿಷ್ಠ 1 ಗಂಟೆ ಮೊದಲು ಹಾಜರಾಗಿ. ಇದರಿಂದ ಕೊನೆಯ ಕ್ಷಣದ ಗೊಂದಲದಿಂದ ಪಾರಾಗಬಹುದು.
- ಪರೀಕ್ಷೆ ಪೂರ್ಣಗೊಳ್ಳುವ ಮೊದಲೇ ಹಾಲ್ನಿಂದ ತೆರಳಲು ಅವಕಾಶವಿಲ್ಲ.
- ನೇಮಕಾತಿ ಪ್ರಕ್ರಿಯೆ ಮುಗಿಯುವವರೆಗೆ ಅಭ್ಯರ್ಥಿಗಳು ಹಾಲ್ ಟಿಕೆಟ್ ಅನ್ನು ಉಳಿಸಿಕೊಳ್ಳಬೇಕು.
- ಕಡ್ಡಾಯವಾಗಿ ನಿಯಮ ಮತ್ತು ವಸ್ತ್ರ ಸಂಹಿತೆಯನ್ನು ಪಾಲಿಸಬೇಕು.
- ಪ್ರತಿ ಸರಿಯುತ್ತರಕ್ಕೆ 1 ಅಂಕ ನೀಡಲಾಗುತ್ತದೆ ಮತ್ತು ತಪ್ಪು ಉತ್ತರಕ್ಕೆ 0.25 ಅಂಕ ಕಳೆಯಲಾಗುತ್ತದೆ. ಹೀಗಾಗಿ ಎಚ್ಚರಿಕೆಯಿಂದ ಪರೀಕ್ಷೆ ಬರೆಯಿರಿ.
ಇದನ್ನೂ ಓದಿ: Job Alert: ಭಾರತೀಯ ನೌಕಾ ಪಡೆಯಲ್ಲಿದೆ ಉದ್ಯೋಗಾವಕಾಶ; ಇಂದೇ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ
100 ಅಂಕಗಳ ಈ ಆಫ್‌ಲೈನ್ ಪರೀಕ್ಷೆ ಎಂಸಿಕ್ಯು (Multiple Choice Questions) ಮಾದರಿಯಲ್ಲಿ ನಡೆಯಲಿದೆ. 1.30 ಗಂಟೆ ಪರೀಕ್ಷೆಯ ಅವಧಿ. ಪ್ರಶ್ನೆ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಇರಲಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ