Site icon Vistara News

Job Alert: ಎಚ್‌ಎಎಲ್‌ನಲ್ಲಿದೆ ಉದ್ಯೋಗಾವಕಾಶ; ಡಿಪ್ಲೋಮಾ ಪಾಸಾದವರು ಅಪ್ಲೈ ಮಾಡಿ

Job Alert

Job Alert

ಬೆಂಗಳೂರು: ಒಂದೊಳ್ಳೆ ಉದ್ಯೋಗದ ಹುಡುಕಾಟದಲ್ಲಿದ್ದೀರಾ? ಹಾಗಾದರೆ ಇಲ್ಲಿದೆ ಗುಡ್‌ನ್ಯೂಸ್‌. ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (Hindustan Aeronautics Limited)ನಲ್ಲಿ ಖಾಲಿ ಇರುವ 116 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ (HAL Recruitment 2024). ಟೆಕ್ನಿಶಿಯನ್ ಹುದ್ದೆ ಇದಾಗಿದ್ದು, ತಾತ್ಕಾಲಿಕ ಅವಧಿಗೆ ನೇಮಿಸಿಕೊಳ್ಳಲಾಗುತ್ತದೆ. ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್‌ ವಿಷಯಗಳಲ್ಲಿ ಡಿಪ್ಲೋಮಾ ಪಾಸಾದವರು ಅರ್ಜಿ ಸಲ್ಲಿಸಬಹು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಜೂನ್‌ 20 (Job Alert).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಮೆಕ್ಯಾನಿಕಲ್ 64 ಹುದ್ದೆ, ವಿದ್ಯಾರ್ಹತೆ: ಡಿಪ್ಲೋಮಾ ಇನ್‌ ಎಂಜಿನಿಯರಿಂಗ್‌ ಇನ್‌ ಮೆಕ್ಯಾನಿಕಲ್‌ / ಪ್ರೊಡಕ್ಷನ್‌.
ಎಲೆಕ್ಟ್ರಿಕಲ್ 44 ಹುದ್ದೆ, ವಿದ್ಯಾರ್ಹತೆ: ಡಿಪ್ಲೋಮಾ ಇನ್‌ ಎಂಜಿನಿಯರಿಂಗ್‌ ಇನ್‌ ಎಲೆಕ್ಟ್ರಿಕಲ್‌ / ಎಲೆಕ್ಟ್ರಿಕಲ್‌ & ಎಲೆಕ್ಟ್ರಾನಿಕ್ಸ್‌.
ಎಲೆಕ್ಟ್ರಾನಿಕ್ಸ್‌ 8 ಹುದ್ದೆ, ವಿದ್ಯಾರ್ಹತೆ: ಡಿಪ್ಲೋಮಾ ಇನ್‌ ಎಂಜಿನಿಯರಿಂಗ್‌ ಇನ್‌ ಎಲೆಕ್ಟ್ರಾನಿಕ್ಸ್‌ / ಎಲೆಕ್ಟ್ರಿಕಲ್‌ & ಎಲೆಕ್ಟ್ರಾನಿಕ್ಸ್‌ / ಎಲೆಕ್ಟ್ರಾನಿಕ್ಸ್‌ & ಕಮ್ಯುನಿಕೇಷನ್‌ / ಎಲೆಕ್ಟ್ರಾನಿಕ್ಸ್‌ & ಟೆಲಿಕಮ್ಯುನಿಕೇಷನ್‌.

ವಯೋಮಿತಿ

ಅರ್ಜಿ ಸಲ್ಲಿಸುವವರ ಗರಿಷ್ಠ ವಯಸ್ಸು 28 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ-ಎನ್‌ಸಿಎಸ್‌ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ, ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ 10 ವರ್ಷಗಳ ರಿಯಾಯಿತಿ ಇದೆ.

ಆಯ್ಕೆ ವಿಧಾನ

ಲಿಖಿತ ಪರೀಕ್ಷೆ, ದಾಖಲಾತಿ ಪರಿಶೀಲನೆ, ವೈದ್ಯಕೀಯ ಪರೀಕ್ಷೆಗಳ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಜುಲೈ 7ರಂದು ಲಿಖಿತ ಪರೀಕ್ಷೆ ನಡೆಯಲಿದೆ. ಆಯ್ಕೆಯಾದವರಿಗೆ ಬೆಂಗಳೂರು (ಕರ್ನಾಟಕ), ಜೋಧಪುರ (ರಾಜಸ್ಥಾನ), ನಾಗತಲಾವ್ (ರಾಜಸ್ಥಾನ), ಭುವನೇಶ್ವರ್ (ಒಡಿಸ್ಸಾ), ಪೋರ್‌ಬಂದರ್‌ (ಗುಜರಾತ್), ರತ್ನಗಿರಿ (ಮಹಾರಾಷ್ಟ್ರ), ಶಿಕ್ರಾ-ಮುಂಬೈ (ಮಹಾರಾಷ್ಟ್ರ), ಕೊಚ್ಚಿ (ಕೇರಳ), ಪುದುಚೇರಿ, ಪರುಂಡು-ರಾಮೇಶ್ವರಂ, ಚೆನ್ನೈ, ಸೂಲೂರು (ತಮಿಳುನಾಡು), ದೇಗಾ ವೈಜಾಗ್, ತೇಜ್ಪುರ್ (ಅಸ್ಸಾಂ), ಮಿಸ್ಸಮರಿ (ಅಸ್ಸಾಂ), ದಿಂಜನ್ (ಅಸ್ಸಾಂ), ಲಿಕಾಬಲಿ (ಅಸ್ಸಾಂ), ಉಧಂಪುರ (ಜಮ್ಮು ಮತ್ತು ಕಾಶ್ಮೀರ), ಲೇಹ್, ಭಟಿಂಡಾ (ಪಂಜಾಬ್), ಮಾಮುನ್ (ಪಂಜಾಬ್), ಹಲ್ದ್ವಾನಿ (ಉತ್ತರಖಂಡ), ಟಿಬ್ರಿ (ಪಂಜಾಬ್) ಪೈಕಿ ಒಂದು ಕಡೆ ಪೋಸ್ಟಿಂಗ್‌ ನೀಡಲಾಗುತ್ತದೆ.

HAL Recruitment 2024 ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

ಇದನ್ನು ಗಮನಿಸಿ

ಇದನ್ನೂ ಓದಿ: Job Alert: ಇಂದಿರಾ ಗಾಂಧಿ ಸೆಂಟರ್ ಫಾರ್ ಅಟಾಮಿಕ್ ರಿಸರ್ಚ್‌ನಲ್ಲಿದೆ ಉದ್ಯೋಗಾವಕಾಶ; ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ

Exit mobile version