Site icon Vistara News

Job Alert: ಭಾರತೀಯ ನೌಕಾಪಡೆಯಲ್ಲಿದೆ ಭರ್ಜರಿ ಉದ್ಯೋಗಾವಕಾಶ; ಏಪ್ರಿಲ್‌ 30ರೊಳಗೆ ಅರ್ಜಿ ಸಲ್ಲಿಸಿ

Job Alert

Indian Merchant Navy

ನವದೆಹಲಿ: ನೀವು ಭಾರತೀಯ ನೌಕಾಪಡೆಯಲ್ಲಿ ಕೆಲಸ ನಿರ್ವಹಿಸಬೇಕೆಂಬ ಗುರಿ ಹೊಂದಿದ್ದೀರಾ? ಹಾಗಾದರೆ ಇಲ್ಲಿದೆ ಗುಡ್‌ನ್ಯೂಸ್‌. ಭಾರತೀಯ ನೌಕಾಪಡೆ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (Indian Merchant Navy Recruitment 2024). ಡೆಕ್ ರೇಟಿಂಗ್, ಎಂಜಿನ್ ರೇಟಿಂಗ್, ಸೀಮನ್, ಎಲೆಕ್ಟ್ರಿಷಿಯನ್, ವೆಲ್ಡರ್ / ಹೆಲ್ಪರ್, ಮೆಸ್ ಬಾಯ್ಸ್‌, ಕುಕ್ ಸೇರಿದಂತೆ ಬರೋಬ್ಬರಿ 4,000 ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. 10ನೇ ತರಗತಿ ತೇರ್ಗಡೆಯಾದವರೂ ಅರ್ಜಿ ಸಲ್ಲಿಸಲು ಅರ್ಹರು. ಗಮನಿಸಿ ಪುರುಷ ಅಭ್ಯರ್ಥಿಗಳಿ ಮಾತ್ರ ಈ ಹುದ್ದೆಗೆ ಅರ್ಜಿ ಸಲ್ಲಿಸಬೇಕು. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆಗೆ ಕೊನೆಯ ದಿನ ಏಪ್ರಿಲ್‌ 30 (Job Alert).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಹುದ್ದೆವಯೋಮಿತಿವಿದ್ಯಾರ್ಹತೆ
ಡಕ್‌ ರೇಟಿಂಗ್‌17.5-25‌ ವರ್ಷ12ನೇ ತರಗತಿ ಪಾಸ್‌
ಎಂಜಿನ್‌ ರೇಟಿಂಗ್‌17.5-25‌ ವರ್ಷ10ನೇ ತರಗತಿ ಪಾಸ್‌
ಸೀಮ್ಯಾನ್‌17.5-25‌ ವರ್ಷ10ನೇ ತರಗತಿ ಪಾಸ್‌
ಎಲೆಕ್ಟ್ರೀಷಿಯನ್‌17.5-27 ವರ್ಷ10ನೇ ತರಗತಿ ಪಾಸ್‌ + ಐಟಿಐ ಎಲೆಕ್ಟ್ರೀಷಿಯನ್‌
ವೆಲ್ಡರ್ / ಹೆಲ್ಪರ್‌17.5-27 ವರ್ಷ10ನೇ ತರಗತಿ ಪಾಸ್‌ + ಐಟಿಐ
ಮೆಸ್‌ ಬಾಯ್‌17.5-27 ವರ್ಷ10ನೇ ತರಗತಿ ಪಾಸ್‌
ಕುಕ್‌17.5-27 ವರ್ಷ10ನೇ ತರಗತಿ ಪಾಸ್‌

ಡಕ್‌ ರೇಟಿಂಗ್‌ – 721, ಎಂಜಿನ್‌ ರೇಟಿಂಗ್‌ – 236, ಸೀಮ್ಯಾನ್‌ – 1,432, ಎಲೆಕ್ಟ್ರೀಷಿಯನ್‌ – 408,
ವೆಲ್ಡರ್‌ / ಹೆಲ್ಪರ್‌ – 78, ಮೆಸ್‌ ಬಾಯ್‌ – 922, ಕುಕ್‌ – 203 ಹುದ್ದೆಗಳಿವೆ.

ಅರ್ಜಿ ಶುಲ್ಕ ಮತ್ತು ಆಯ್ಕೆ ವಿಧಾನ

ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 100 ರೂ. ಪಾವತಿಸಬೇಕು. ಇದಕ್ಕಾಗಿ ಆನ್‌ಲೈನ್‌ ಪಾವತಿ ವಿಧಾನವನ್ನು ಬಳಸಬೇಕು ಎಂದು ಅಧಿಸೂಚನೆ ತಿಳಿಸಿದೆ. ಲಿಖಿತ ಪರೀಕ್ಷೆ, ದಾಖಲೆಗಳ ಪರಿಶೀಲನೆ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.

ಪರೀಕ್ಷೆ ವಿಧಾನ

ಒಟ್ಟು 100 ಅಂಕಗಳಿಗೆ ಪರೀಕ್ಷೆ ನಡೆಯಲಿದೆ. ಇದರಲ್ಲಿ ಜನರಲ್‌ ಅವರ್‌ನೆಸ್‌, ಸೈನ್ಸ್‌ ನಾಲೆಡ್ಜ್‌, ಇಂಗ್ಲಿಷ್‌ ನಾಲೆಡ್ಜ್‌, ಅಪ್ಟಿಟ್ಯೂಡ್‌ & ರೀಸನಿಂಗ್‌ ವಿಷಯಗಳಿಗೆ ಸಂಬಂಧಿಸಿದ ತಲಾ 25 ಅಂಕಗಳ ಪ್ರಶ್ನೆಗಳಿರುತ್ತವೆ. ಪರೀಕ್ಷೆಯ ಕಾಲಾವಧಿ 2 ಗಂಟೆ. ಪರೀಕ್ಷೆ ಇಂಗ್ಲಿಷ್‌ ಮತ್ತು ಹಿಂದಿಯಲ್ಲಿ ನಡೆಯಲಿದೆ. ಯಾವುದೇ ತಪ್ಪು ಉತ್ತರಗಳಿಗೆ ನೆಗೆಟಿವ್‌ ಅಂಕಗಳಿಲ್ಲ ಎಂದು ಪ್ರಕಟಣೆ ತಿಳಿಸಿದೆ. ಪರೀಕ್ಷೆ ಮೇಯಲ್ಲಿ ನಡೆಯಲಿದೆ.

Indian Merchant Navy Recruitment 2024 ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

ಇದನ್ನೂ ಓದಿ: Job Alert: ಗುಪ್ತಚರ ಇಲಾಖೆಯಲ್ಲಿದೆ 660 ಹುದ್ದೆಗಳು; ಎಸ್ಸೆಸ್ಸೆಲ್ಸಿ ತೇರ್ಗಡೆಯಾದವರೂ ಅರ್ಜಿ ಸಲ್ಲಿಸಿ

Exit mobile version